Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಮನೆಯಲ್ಲಿ ಈ ವಸ್ತುಗಳು ಇದ್ದರೆ ನೀವು ಶ್ರೀಮಂತರಾಗುವುದು ಗ್ಯಾರಂಟಿ, ನಿಮ್ಮ ಬದುಕನ್ನೇ ಬದಲಾಯಿಸುವ ಶಕ್ತಿ ಇವುಗಳಿಗಿದೆ.!

Posted on November 27, 2023 By Kannada Trend News No Comments on ಮನೆಯಲ್ಲಿ ಈ ವಸ್ತುಗಳು ಇದ್ದರೆ ನೀವು ಶ್ರೀಮಂತರಾಗುವುದು ಗ್ಯಾರಂಟಿ, ನಿಮ್ಮ ಬದುಕನ್ನೇ ಬದಲಾಯಿಸುವ ಶಕ್ತಿ ಇವುಗಳಿಗಿದೆ.!

 

ನಮ್ಮ ಮನೆಯಲ್ಲಿ ನಮಗಷ್ಟೇ ಅಲ್ಲದೆ ಅನೇಕ ವಸ್ತುಗಳಿಗೆ ಜಾಗ ಇದೆ. ಇದರಲ್ಲಿ ಕೆಲವು ನಮ್ಮ ಅನುಕೂಲಕ್ಕೆ ಬೇಕಾಗಿರುವ ವಸ್ತುಗಳು, ಇನ್ನು ಕೆಲವು ನಾವೇ ಇಷ್ಟ ಪಟ್ಟು ತಂದು ಇಡುವ ವಸ್ತುಗಳು. ಇವುಗಳು ಮಾತ್ರವಲ್ಲದೆ ಮನೆ ಎಂದ ಮೇಲೆ ಕೆಲವು ವಸ್ತುಗಳು ಇರಲೇಬೇಕು ಎಂದು ಹಿರಿಯರು ಹೇಳುತ್ತಾರೆ.

ಅದೇ ರೀತಿ ವಾಸ್ತು ಶಾಸ್ತ್ರದಲ್ಲೂ ಕೂಡ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮತ್ತು ಈ ಮೂಲಕ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಮತ್ತು ಇಂತಹ ಸ್ಥಳದಲ್ಲಿ ಆರ್ಥಿಕ ಅಭಿವೃದ್ಧಿಯಾಗಿ ಅಷ್ಟೈಶ್ವರ್ಯಗಳು ಒದಗಿ ಬರುತ್ತದೆ ಎಂದು ಹೇಳಲಾಗುತ್ತದೆ.

ಈ ರೀತಿ ಮನೆಗೆ ಹಣದ ಆಕರ್ಷಣೆ ಉಂಟುಮಾಡುವ ಮತ್ತು ಮನೆಯ ವಾತಾವರಣವನ್ನು ಉತ್ತಮವಾಗಿಸುವ ಆ ಮೂಲಕ ಮನೆಯಲ್ಲಿರುವ ಎಲ್ಲಾ ಸದಸ್ಯರ ಮನಸ್ಸಿನ ಮೇಲೆ ಉತ್ತಮ ಪರಿಣಾಮಗಳನ್ನು ಬೀರುವ ವಸ್ತುಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಈ ವಸ್ತುಗಳು ನಿಮ್ಮ ಮನೆಯಲ್ಲಿ ಇಲ್ಲ ಎಂದರೆ ಇವತ್ತೇ ತಂದು ಇಡಿ. ನಿಮ್ಮ ಜೀವನ ಹೇಗೆ ಬದಲಾಗುತ್ತದೆ ಎಂದು ನೀವೇ ನೋಡಿ.

1. ಮನೆಯ ಮುಖ್ಯದ್ವಾರದಲ್ಲಿ ಗಣಪತಿಯ ವಿಗ್ರಹ ಇಡಬೇಕು ಎಂದು ವಾಸ್ತುಶಿಷ್ಟದಲ್ಲಿ ತಿಳಿಸಲಾಗಿದೆ. ಒಂದು ವೇಳೆ ಸಾಧ್ಯವಾಗದೆ ಇದ್ದರೆ ಮನೆ ಮುಖ್ಯ ದ್ವಾರದ ಮೇಲೆ ಗಣಪತಿಯ ಫೋಟೋ ಆದರೂ ಹಾಕಿ ಯಾಕೆಂದರೆ ಮನೆಗೆ ಪ್ರವೇಶಿಸುವ ಯಾರೇ ಆದರೂ ಮೊದಲು ಈ ಕಣ್ಣುದೃಷ್ಟಿ ಗಣಪತಿಯನ್ನು ನೋಡುವುದರಿಂದ ಆ ರೀತಿ ಬಂದವರಲ್ಲಿ ನೆಗೆಟಿವ್ ಎನರ್ಜಿ ಇದ್ದರೆ.

ಅದನ್ನು ಗಣಪತಿಯು ತಡೆದು ಅದನ್ನು ಒಳ್ಳೆಯ ರೀತಿ ಬದಲಾಯಿಸುತ್ತಾರೆ ಎಂದು ನಂಬಿಕೆ ಮತ್ತು ಮನೆಯ ಸದಸ್ಯರ ಎಲ್ಲ ವಿಘ್ನಗಳನ್ನು ನಿವಾರಿಸುವ ಸಲುವಾಗಿ ಪ್ರಥಮ ಪೂಜೆಗೆ ಅಧಿಪತಿಯಾದ ಗಣೇಶನ ವಿಗ್ರಹ ಅಥವಾ ಫೋಟೋ ಮನೆಯ ಮುಖ್ಯದ್ವಾರದ ಬಳಿ ಇರಬೇಕು.

2. ಶ್ರೀ ಕೃಷ್ಣನಿಗೆ ಬಹಳ ಇಷ್ಟವಾದ ಕೊಳಲು ಪ್ರತಿಯೊಂದು ಮನೆಯಲ್ಲಿ ಕೂಡ ಇರಬೇಕು. ಶ್ರೀಕೃಷ್ಣ ಎಂದರೆ ಕೊಳಲು ಹಾಗೂ ನವಿಲುಗರಿ. ಇವುಗಳು ಇಲ್ಲದೆ ಕೃಷ್ಣನು ಇಲ್ಲ ಮತ್ತು ಕೃಷ್ಣ ಶ್ರೀ ಮಹಾ ವಿಷ್ಣುವಿನ ಅವತಾರವಾಗಿರುವುದರಿಂದ ಮಹಾ ವಿಷ್ಣುವಿಲ್ಲದ ಕಡೆ, ಲಕ್ಷ್ಮಿಯು ಇರಲು ಇಚ್ಚಿಸಲಾರರು.

ಹೀಗಾಗಿ ಪ್ರತಿ ಮನೆಯಲ್ಲಿ ಸಾಮಾನ್ಯವಾಗಿ ನವಿಲುಗರಿ ಇದ್ದೇ ಇರುತ್ತದೆ. ಇದರ ಜೊತೆಗೆ ತಪ್ಪದೆ ಕೊಳಲನ್ನು ಕೂಡ ಇಡಿ ಅದರಲ್ಲೂ ಬೆಳ್ಳಿಯ ಕೊಳಲನ್ನು ಇಡುವುದರಿಂದ ಉತ್ತಮ ಫಲಿತಾಂಶಗಳು ಸಿಗುತ್ತದೆ ಎಂದು ಹೇಳಲಾಗುತ್ತದೆ.

* ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಆಸಕ್ತಿ ಬರಬೇಕು ಎಂದರೆ ಚಿಕ್ಕ ಬಿಳಿ ಬಣ್ಣದ ಕೊಳಲನ್ನು ಇಟ್ಟುಕೊಳ್ಳಿ
* ಹಳದಿ ಬಣ್ಣದ ಕೊಳಲನ್ನು ಮನೆಯಲ್ಲಿ ಇಡುವುದರಿಂದ ಮನೆಯ ಹಣಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ
* ವ್ಯಾಪಾರ ವ್ಯವಹಾರದ ಕಚೇರಿ ಸ್ಥಳಗಳಲ್ಲಿ ಬೆಳ್ಳಿ ಕೊಳಲು ಇಡುವುದರಿಂದ ಹೆಚ್ಚು ಲಾಭವಾಗುತ್ತದೆ.
* ಮನೆಯ ಸದಸ್ಯರ ನಡುವೆ ಮನಸ್ತಾಪಗಳಿದ್ದರೆ ಜೋಡಿ ಕೊಳಲು ತಂದು ಲಿವಿಂಗ್ ಏರಿಯಾದಲ್ಲಿ ಇಡಬೇಕು.

3. ಪ್ರತಿಯೊಂದು ಮನೆಗೂ ದೇವರ ಕೋಣೆ ಇರುವಂತೆ ಪ್ರತಿಯೊಂದು ದೇವರ ಕೋಣೆಯಲ್ಲೂ ಕೂಡ ಶಂಖ ಇರಲೇಬೇಕು ಮತ್ತು ಮನೆಯಲ್ಲಿ ಆಗಾಗ ಶಂಖನಾದ ಮೊಳಗುತ್ತಲೇ ಇರಬೇಕು, ಇದರಿಂದ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮ. ಮನೆಯ ನೆಗೆಟಿವಿಟಿ ಆಚೆ ಹೋಗುವುದರಿಂದ ದನಾಕರ್ಷಣೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ ಆದರೆ ಶಂಖ ತರುವುದಕ್ಕೆ ಹಾಗೂ ಇಡುವುದಕ್ಕೆ ನಿಯಮಗಳಿವೆ.

* ಯಾವಾಗಲೂ ಜೋಡಿ ಶಂಖ ತರಬೇಕು, ಒಂದು ಪೂಜೆ ಮಾಡುವುದಕ್ಕೆ ಬಳಸಬೇಕು ಮತ್ತೊಂದನ್ನು ಊದಲು ಬಳಸಬೇಕು.
* ಪೂಜೆ ಮಾಡುವ ಶಂಖವು ಊದುವ ಶಂಖಕ್ಕಿಂತ ಎತ್ತರದ ಸ್ಥಳದಲ್ಲಿರಬೇಕು. ಊದುವ ಶಂಖವನ್ನು ಬಳಸದೆ ಇದ್ದಾಗ ಗಂಗಾಜಲದಿಂದ ಶುದ್ಧ ಮಾಡಿ ಬಿಳಿ ವಸ್ತ್ರದಲ್ಲಿ ಸುತ್ತಿ ದೇವರ ಕೋಣೆಯಲ್ಲಿಡಬೇಕು.

* ಅಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೂ ಶಂಖವನ್ನು ಬಳಸಬಾರದು. ದೇವರ ಕೋಣೆ ಬಿಟ್ಟು ಯಾವ ಜಾಗದಲ್ಲೂ ಶಂಖ ಇಡಬಾರದು.
* ದೇವರ ಕೋಣೆಯಲ್ಲಿ ಶಿವಲಿಂಗ ಇದ್ದರೆ ಶಿವಲಿಂಗದಿಂದ ದೂರದಲ್ಲಿ ಶಂಖವನ್ನು ಇಡಬೇಕು. ಯಾವುದೇ ಕಾರಣಕ್ಕೂ ಶಂಖದ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಬಾರದು
* ಮನೆಯಲ್ಲಿ ಹೆಚ್ಚು ಶಂಖಗಳು ಇರಬಾರದು ಅದು ಮನೆಗೆ ಅಪಶಕುನ.

4. ಹಣದ ಒಡತಿಯಾದ ಮಹಾಲಕ್ಷ್ಮಿಯ ಜೊತೆ ಸಂಪತ್ತಿನ ಒಡೆಯನಾದ ಕುಬೇರನ ವಿಗ್ರಹ ಕೂಡ ಪ್ರತಿಯೊಂದು ಮನೆಯಲ್ಲಿರಬೇಕು ಅಥವಾ ಫೋಟೋ ಆದರೂ ಇರಬೇಕು. ಪ್ರತಿನಿತ್ಯ ಇದಕ್ಕೆ ಪೂಜೆಯಾಗುತ್ತಿದ್ದರೆ ನಿಮ್ಮ ಮನೆಗೆ ಹಣದ ಹೊಳೆ ಹರಿಯುವುದರಲ್ಲಿ ಅನುಮಾನವಿಲ್ಲ.

5. ಮನೆಯಲ್ಲಿ ಅಕ್ವೇರಿಯಂ ಇಟ್ಟು ಅದರಲ್ಲಿ ಮೀನುಗಳನ್ನು ಸಾಕುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಮನೆಯ ವಾತಾವರಣ ಸಕಾರಾತ್ಮಕವಾಗುತ್ತದೆ ಮತ್ತು ಮನೆಯಲ್ಲಿ ಹಣಕಾಸಿನ ಸಂಸ್ಥೆ ಬರುವುದಿಲ್ಲ ಎಂದು ಹೇಳಲಾಗುತ್ತದೆ ಅದರಲ್ಲೂ ಗೋಲ್ಡನ್ ಡ್ರ್ಯಾಗನ್ ಫಿಶ್ ಇಟ್ಟರೆ ಇನ್ನು ಉತ್ತಮ.

Useful Information
WhatsApp Group Join Now
Telegram Group Join Now

Post navigation

Previous Post: ಈರುಳ್ಳಿ ಇಂದ ಎಷ್ಟೆಲ್ಲಾ ಪ್ರಯೋಜನಗಳಿದೆ ಗೊತ್ತಾ.?, ಇದು ಗೊತ್ತಾದರೆ ಎಷ್ಟೇ ರೇಟ್ ಆದರೂ ಈರುಳ್ಳಿ ಖರೀದಿಸುತ್ತೀರಿ.!
Next Post: BP ಕಂಟ್ರೋಲ್ ಮಾಡುವ 5 ಜ್ಯೂಸ್ ಗಳು, ಜೀವನಶೈಲಿ ಹೀಗಿದ್ದರೆ ಜೀವನಪರ್ಯಂತ BP ಬರುವುದಿಲ್ಲ.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore