ಕೇಂದ್ರ ಸರ್ಕಾರವು (Central government) ದೇಶದ ಜನತೆಗಾಗಿ ಸಾಕಷ್ಟು ಉಳಿತಾಯ ಯೋಜನೆಗಳನ್ನು (Saving Scheme) ಜಾರಿಗೆ ತಂದಿವೆ ಇವುಗಳಲ್ಲಿ ಹಣ ಹೂಡಿಕೆ ಮಾಡಿ ಹಣಕ್ಕೆ ಭದ್ರತೆ ಜೊತೆಗೆ ಒಂದು ಖಚಿತ ಮೊತ್ತದ ಲಾಭವನ್ನು ಕೊಡುವ ಪಡೆದುಕೊಳ್ಳಬಹುದು. ದೇಶದ ನಾಗರಿಕರು ಅಂಚೆ ಕಚೇರಿ (Post office ) ಹಾಗೂ ರಾಷ್ಟ್ರೀಕೃತ ಬ್ಯಾಂಕ್ (Nationalized bank) ಗಳಲ್ಲಿ ಈ ಯೋಜನೆಗಳನ್ನು ಖರೀದಿಸಬಹುದು.
ಇವುಗಳ ಪೈಕಿ ಕಿಸಾನ್ ವಿಕಾಸ್ ಪತ್ರ (Kisan Vikas Pathra) ಮತ್ತು ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (National Saving Certificate) ಎನ್ನುವ ಈ ಎರಡು ಯೋಜನೆಗಳು ಬಹಳ ವಿಶೇಷ.ಯಾಕೆಂದರೆ ಒಂದು ಬಾರಿ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ನೀವು ಅದರ ಡಬಲ್ ಹಣವನ್ನು ಅತಿ ಕಡಿಮೆ ಸಮಯದಲ್ಲಿ ಪಡೆಯಬಹುದು.
ಈ ಎರಡು ಯೋಜನೆಗಳ ಕುರಿತು ಕೆಲವು ಪ್ರಮುಖ ವಿಷಯಗಳನ್ನು ಇಂದು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇದರ ಬಗ್ಗೆ ತಿಳಿದುಕೊಂಡು ನಿಮಗೆ ಅನುಕೂಲಕರವಾದ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿ ಲಾಭ ಪಡೆಯಿರಿ.
● ಪ್ರಸ್ತುತವಾಗಿ KVP ಬಡ್ಡಿದರ 6.9% NSC ಬಡ್ಡಿದರ 6.8%
● ಈ ಎರಡು ಯೋಜನೆಗಳಲ್ಲೂ ಕನಿಷ್ಠ 1000 ರೂ. ಇಂದ ಹೂಡಿಕೆ ಮಾಡಬಹುದು, ಆದರೆ ಈ ಹೂಡಿಕೆಯನ್ನು ನಿಶ್ಚಿತ ಠೇವಣಿ ರೀತಿ ಒಂದೇ ಬಾರಿಗೆ ಮಾಡಬೇಕು. ಗರಿಷ್ಠ ಹೂಡಿಕೆಗೆ ಮಿತಿ ಇರುವುದಿಲ್ಲ.
● KVP ಮೆಚುರಿಟಿ ಅವಧಿ 10 ವರ್ಷ 4 ತಿಂಗಳು, NSC ಮೆಚುರಿಟಿ ಅವಧಿ 5 ವರ್ಷಗಳು.
● ಎರಡು ಯೋಜನೆಯ ಮೇಲೂ ಕೂಡ ಸಾಲ ಸೌಲಭ್ಯ ಲಭ್ಯವಿದೆ.
● ಎರಡು ಯೋಜನೆಗೂ ನಾಮಿನಿ ಫೆಸಿಲಿಟಿ ಕೂಡ ಲಭ್ಯವಿದೆ.
● ಈ ಎರಡು ಯೋಜನೆಗಳನ್ನು ಸದ್ಯಕ್ಕೆ ಅಂಚೆ ಕಛೇರಿಯಲ್ಲಿ ಮಾತ್ರ ಖರೀದಿಸಬಹುದು, ಹಾಗೆಯೇ ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆ ಕಛೇರಿಗೆ ವರ್ಗಾಯಿಸಬಹುದು.
● ಈ ಎರಡು ಯೋಜನೆಯನ್ನು ಕೂಡ ಸಿಂಗಲ್ ಆಗಿ ಅಥವಾ ಜಂಟಿಯಾಗಿ ಅಥವಾ ಮೈನರ್ ವಯಸ್ಸಿನ ಮಕ್ಕಳಿದ್ದರೆ ಅವರ ಹೆಸರಲ್ಲೂ ಕೂಡ ಖರೀದಿಸಬಹುದು.
● ಈ ಎರಡು ಯೋಜನೆಗಳನ್ನು ಖರೀದಿಸುವಾಗ ದಾಖಲೆ ಪತ್ರವಾಗಿ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದು ಹಾಗೂ ಒಂದು ವಿಳಾಸದ ಪುರಾವೆ ಮತ್ತು ಇತ್ತೀಚಿನ ಭಾವಚಿತ್ರ ಹಾಗೂ ನೀವು ಹೂಡಿಕೆ ಮಾಡಲು ಇಷ್ಟಪಡುವ ಮೊತ್ತವನ್ನು ಸಲ್ಲಿಸಬೇಕು.
1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!
● ನಗದು ರೂಪದ ಹಣ ಅಥವಾ ಚೆಕ್ ಕೊಟ್ಟು ಹೂಡಿಕೆ ಮಾಡಬಹುದು.
● ಈ ಎರಡು ಯೋಜನೆಗಳನ್ನು ಖರೀದಿಸುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ.
● KVP ಯೋಜನೆಯಲ್ಲಿ ನೀವು 10,000 ಹೂಡಿಕೆ ಮಾಡಿದರೆ ಅದು ಮೆಚುರಿಟಿ ವೇಳೆ 20,000 ಆಗಿರುತ್ತದೆ, ಅದೇ 10,000 ಹಣವನ್ನು NSC ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರ ಮೆಚುರಿಟಿ ವೇಳೆಗೆ 13,895ರೂ ಸಿಗುತ್ತದೆ.
● KVP ಯೋಜನೆಯಲ್ಲಿ ನೀವೇನಾದರೂ 5 ಲಕ್ಷ ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಅವಧಿ ಆದ 10 ವರ್ಷ, 4 ತಿಂಗಳ ಬಳಿಕ ನಿಮಗೆ 10 ಲಕ್ಷ ಹಣ ಅಂದರೆ ಡಬಲ್ ಹಣ ಬರುತ್ತದೆ. ಆದರೆ ಅದೇ ಹಣವನ್ನು ನೀವು NSC ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಅವಧಿ ಆದ 5 ವರ್ಷಗಳಾದ ಬಳಿಕ 6,94,746 ಸಿಗುತ್ತದೆ.
ಲೇಬರ್ ಕಾರ್ಡ್ ಹೊಸ ವೆಬ್ಸೈಟ್ ಪ್ರಾರಂಭ, ಹೊಸ ವೆಬ್ಸೈಟ್ ನಲ್ಲಿ ರಿಜಿಸ್ಟರ್ ಆಗಿ ಸೇವೆಗಳನ್ನು ಪಡೆಯುವುದು ಹೇಗೆ ನೋಡಿ.!
● ಈ ಎರಡು ಯೋಜನೆಗಳ ಬಗ್ಗೆ ಯಾವುದೇ ಗೊಂದಲಗಳಿದ್ದರೂ ಅದರ ಪರಿಹಾರಕ್ಕಾಗಿ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದಲ್ಲಿರುವ ಅಂಚೆ ಕಛೇರಿಗೆ ಭೇಟಿ ಕೊಡಿ ಅಥವಾ ಅಂಚೆ ಇಲಾಖೆಯ ವೆಬ್ಸೈಟ್ಗೆ ಭೇಟಿ ಕೊಡುವ ಮೂಲಕ ಕೂಡ ಮಾಹಿತಿ ಪಡೆದುಕೊಳ್ಳಬಹುದು.