ನಾವು ಪ್ರತಿನಿತ್ಯ ಕೂಡ ಹೂವನ್ನು ಬಳಸುತ್ತೇವೆ. ದೇವರ ಪೂಜೆಗೆ ಹೂವಿನ ಅಗತ್ಯತೆ ಬಹಳಷ್ಟು ಇದೆ ಆದರೆ ಈ ಹೂವನ್ನು ನಾವು ಪ್ರತಿನಿತ್ಯ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ವಾರದಲ್ಲಿ ಒಮ್ಮೆ ಅಥವಾ ಹತ್ತು ದಿನಗಳಿಗೆ ಒಮ್ಮೆ 15 ದಿನಗಳಿಗೆ ಒಮ್ಮೆ ಮಾರು ಕಟ್ಟೆಯಿಂದ ಖರೀದಿ ಮಾಡಿ ಅದನ್ನು ಮನೆಯಲ್ಲಿ ತಂದಿಟ್ಟುಕೊಂಡು ಅದನ್ನು ಬಳಸುತ್ತಿರುತ್ತೇವೆ.
ಆದರೆ ನಾವು ಮಾರುಕಟ್ಟೆಯಿಂದ ತಂದ ಹೂವನ್ನು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿ ಅದನ್ನು ಇಟ್ಟುಕೊಂಡಿದ್ದೆ ಆದಲ್ಲಿ ಹೂವನ್ನು ಒಂದು ತಿಂಗಳ ತನಕ ಬಾಡದೆ ಇರುವ ಹಾಗೆ ಇಟ್ಟುಕೊಳ್ಳಬಹುದು. ಹಾಗಾದರೆ ಈ ದಿನ ಮಾರುಕಟ್ಟೆಯಿಂದ ತಂದಂತಹ ಹೂವನ್ನು ಹೆಚ್ಚು ದಿನಗಳ ವರೆಗೆ ಹೇಗೆ ಶೇಖರಣೆ ಮಾಡುವುದು.
ನಾವು ಯಾವ ಕೆಲವು ವಿಧಾನಗಳನ್ನು ಅನುಸರಿಸುವುದರ ಮೂಲಕ ಹೂವನ್ನು ಚೆನ್ನಾಗಿ ಇಟ್ಟು ಕೊಳ್ಳಬಹುದು ಅದೇ ರೀತಿಯಾಗಿ ಫ್ರಿಡ್ಜ್ ಇಲ್ಲದೇ ಇದ್ದರೂ ಸಹ ಅದನ್ನು ಹೇಗೆ ಒಂದು ತಿಂಗಳ ತನಕ ಫ್ರೆಶ್ ಆಗಿ ಇರುವ ಹಾಗೆ ಇಟ್ಟುಕೊಳ್ಳು ವುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಹಳೆ ನೈಟಿಯನ್ನು ಈ ರೀತಿಯಾಗಿಯೂ ಬಳಸಬಹುದು.
* ಪ್ರತಿಯೊಬ್ಬರೂ ಕೂಡ ಹೂವನ್ನು ತಂದಂತಹ ಸಂದರ್ಭ ದಲ್ಲಿ ಅದನ್ನು ಪ್ಲಾಸ್ಟಿಕ್ ಕವರ್ ಗೆ ಹಾಕಿ ಅದನ್ನು ಹಾಗೆ ಫ್ರಿಡ್ಜ್ ನಲ್ಲಿ ಇಡುತ್ತಾರೆ ಆದರೆ ಈ ರೀತಿ ಇಡುವುದಕ್ಕೂ ಮುಂಚೆ ಹೂವಿನಲ್ಲಿ ಹಾಗೂ ಆ ಒಂದು ಕವರ್ ನಲ್ಲಿ ಯಾವುದೇ ರೀತಿಯ ನೀರಿನ ಅಂಶ ಇಲ್ಲದೆ ಇರುವ ಹಾಗೆ ನೋಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಹಾಗೆನಾದರೂ ನೀವು ತಂದಂತಹ ಹೂವಿನಲ್ಲಿ ನೀರಿನಂಶ ಇದ್ದರೆ ಆ ಹೂವು ಬೇಗನೆ ಹಾಳಾಗುತ್ತದೆ. ಆದ್ದರಿಂದ ಹೂವನ್ನು ತಂದ ತಕ್ಷಣ ಅದರಲ್ಲಿ ಇರುವಂತಹ ನೀರಿನ ಅಂಶ ಹೋಗುವ ತನಕ ಅದನ್ನು ಒಂದು ಕಾಟನ್ ಬಟ್ಟೆಯ ಮೇಲೆ ಇಟ್ಟು ಆನಂತರ ಅದನ್ನು ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಹಾಕಿ ಅದರ ಒಳಗಡೆ ಸ್ವಲ್ಪ ಅಕ್ಕಿಯನ್ನು ಹಾಕಬೇಕು ಅಕ್ಕಿ ನೀರಿನ ಅಂಶವನ್ನು ಹೀರಿಕೊಳ್ಳುತ್ತದೆ ಆದ್ದರಿಂದ ಈ ವಿಧಾನ ಅನುಸರಿ ಸುವುದು ಉತ್ತಮ.
* ಇನ್ನು ಬಾಕ್ಸ್ ನಲ್ಲಿ ನೀವು ಹೂವನ್ನು ಫ್ರಿಡ್ಜ್ ನಲ್ಲಿ ಶೇಖರಣೆ ಮಾಡುವ ವಿಧಾನ ನೋಡುವುದಾದರೆ ಮೊದಲೇ ಹೇಳಿದಂತೆ ಕವರ್ ನಲ್ಲಿ ನಾವು ಹೂವನ್ನು ಇಟ್ಟು ಅದಕ್ಕೆ ಅಕ್ಕಿಯನ್ನು ಹಾಕಿ ಇಟ್ಟುಕೊಳ್ಳುತ್ತಿದ್ದೆವು ಆದರೆ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ
ಕೆಳಗಡೆ ನ್ಯೂಸ್ ಪೇಪರ್ ಅಥವಾ ಟಿಶ್ಯೂ ಪೇಪರ್ ಅನ್ನು ಹಾಕಿ ಅದರ ಮೇಲೆ ಹೂವನ್ನು ಹಾಕಿ ಒಂದು ಚಮಚ ಅಕ್ಕಿಯನ್ನು ಹಾಕಿ ಅದನ್ನು ಫ್ರಿಜ್ ನಲ್ಲಿ ಇಡುವುದರಿಂದ ಒಂದು ತಿಂಗಳವರೆಗೆ ಇಟ್ಟುಕೊಳ್ಳಬಹುದು. ಇನ್ನು ಫ್ರಿಡ್ಜ್ ಇಲ್ಲದೆ ಇರುವವರು ಹೂವನ್ನು ಹೇಗೆ ಒಂದು ತಿಂಗಳವರೆಗೆ ಇಟ್ಟುಕೊಳ್ಳಬಹುದು ಎಂದು ನೋಡುವುದಾದರೆ.
ಈ ಸುದ್ದಿ ಓದಿ:- ಬಂಗಿನ ಸಮಸ್ಯೆ ಇದ್ದವರು ಈ ಟಿಪ್ಸ್ ಫಾಲೋ ಮಾಡಿ.!
* ಒಂದು ಕಾಟನ್ ಬಟ್ಟೆಯನ್ನು ನೀರಿನಲ್ಲಿ ಅದ್ದಿ ತೆಗೆದುಕೊಳ್ಳಬೇಕು ಆನಂತರ ಅದಕ್ಕೆ ಹೂವನ್ನು ಹಾಕಿ ಅದನ್ನು ಮಡಿಸಿ ಇಟ್ಟುಕೊಳ್ಳಬೇಕು. ಆನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಇಟ್ಟು ಅದರ ಮೇಲೆ ಜಾಲರಿ ಪಾತ್ರೆಯನ್ನು ಇಟ್ಟು ಅದರ ಒಳಗಡೆ ಮೇಲೆ ಕಾಟನ್ ಬಟ್ಟೆಯಲ್ಲಿ ಹೂವನ್ನು ಇಡಬೇಕು ಈ ರೀತಿ ಇಟ್ಟುಕೊಳ್ಳುವುದರಿಂದ ಹತ್ತರಿಂದ ಹದಿನೈದು ದಿನಗಳ ತನಕ ಹೂವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಹೂವು ಹಾಳಾಗುವುದಿಲ್ಲ.