ಎಲ್ಲರಿಗೂ ಗೊತ್ತಿರುವಂತೆ ಗ್ಯಾಸ್ ಸಿಲಿಂಡರ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಲೆ ಇದೆ. ಆದರೆ ಕೆಲವೊಂದಷ್ಟು ಜನ ಇದರ ಬಗ್ಗೆ ಗಮನ ಕೊಡುವುದಿಲ್ಲ ಬದಲಿಗೆ ಗ್ಯಾಸ್ ಸಿಲಿಂಡರ್ ಅನ್ನು ನಾವು ಹೇಗೆ ಕಡಿಮೆ ಪ್ರಮಾಣದಲ್ಲಿ ಅಂದರೆ ಯಾವ ಕೆಲವು ಟಿಪ್ಸ್ ಅನುಸರಿಸುವುದರಿಂದ ಗ್ಯಾಸ್ ಸಿಲಿಂಡರ್ ಅನ್ನು ಹೆಚ್ಚು ದಿನಗಳವರೆಗೆ ಬರುವ ಹಾಗೆ ನೋಡಿಕೊಳ್ಳಬೇಕು ಎಂದು.
ಹಾಗಾದರೆ ಈ ದಿನ ನಾವು ಯಾವ ಕೆಲವು ಟಿಪ್ಸ್ ಗಳನ್ನು ಅನುಸರಿಸುವುದರಿಂದ ಗ್ಯಾಸ್ ಸಿಲಿಂಡರ್ ಅನ್ನು ಬೇಗ ಖಾಲಿಯಾಗದಂತೆ ಹೆಚ್ಚು ದಿನಗಳ ವರೆಗೆ ಉಪಯೋಗಿಸಬಹುದು ಎಂದು ಈ ಕೆಳಗೆ ತಿಳಿಯೋಣ. ಅದಕ್ಕೂ ಮೊದಲು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಕೆಲವೊಂದಷ್ಟು ಪ್ರಮುಖ ವಿಷಯ ಏನೆಂದರೆ.
ಸಾಮಾನ್ಯ ಜನರಿಗೆ ಪ್ರತಿಯೊಂದರ ವಸ್ತುವಿನ ಬೆಲೆಯೂ ಕೂಡ ಹೆಚ್ಚಾಗುತ್ತಿದ್ದಂತೆ ಅವರಿಗೆ ಕಷ್ಟವೂ ಸಹ ಹೆಚ್ಚಾಗುತ್ತದೆ ಎಂದೇ ಹೇಳಬಹುದು. ಏಕೆಂದರೆ ಅವರ ಸಂಪಾದನೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಆದ್ದರಿಂದ ಅವರು ಹೆಚ್ಚಿನ ಪ್ರಮಾಣದ ವಸ್ತುಗಳನ್ನು ಬಳಸುವಂತಹ ಸಂದರ್ಭದಲ್ಲಿ ಅವರು ಪ್ರತಿಯೊಂದರ ಮೇಲೆಯೂ ಕೂಡ ಹೆಚ್ಚಿನ ಗಮನವಹಿಸುತ್ತಾರೆ.
ಆದರೆ ಹಣಕಾಸಿನ ಸಮಸ್ಯೆ ಇಲ್ಲದೆ ಇರುವವರು ಯಾವುದೇ ವಿಚಾರದ ಬಗ್ಗೆಯೂ ಕೂಡ ಹೆಚ್ಚಿನ ಗಮನ ವಹಿಸುವುದಿಲ್ಲ. ಆದರೂ ಕೂಡ ಪ್ರತಿಯೊಬ್ಬರೂ ಕೆಲವೊಂದಷ್ಟು ವಿಚಾರಗಳನ್ನು ತಿಳಿದುಕೊಂಡಿರುವುದು ತುಂಬಾ ಒಳ್ಳೆಯದು. ಅದರಲ್ಲೂ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಗ್ಯಾಸ್ ಸಿಲಿಂಡರ್ ವಿಚಾರ ವನ್ನು ನಾವು ಬಹಳ ಜೋಪಾನವಾಗಿ ಹಾಗೂ ಸುರಕ್ಷಿತವಾಗಿ ಉಪಯೋಗಿಸುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಇಲ್ಲವಾದರೆ ಅದರಿಂದ ಅಪಾಯ ಆಗುವುದು ನಿಶ್ಚಿತ.
ನಾವು ಎಲ್ಲೇ ಹೊರಗಡೆ ಹೋಗಬೇಕಾದರೂ ಗ್ಯಾಸ್ ಸಿಲಿಂಡರ್ ಆಫ್ ಮಾಡಿ ಆನಂತರವೇ ಹೋಗುವುದು ಉತ್ತಮ. ಹಾಗಾದರೆ ನಾವು ಹೇಗೆ ಕಡಿಮೆ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಉಪಯೋಗಿಸ ಬಹುದು ಹಾಗೂ ಹೆಚ್ಚಿಗೆ ಖರ್ಚಾಗದಂತೆ ಹೇಗೆ ನೋಡಿಕೊಳ್ಳುವುದು ಎಂದು ಈ ಕೆಳಗೆ ಒಂದೊಂದಾಗಿ ತಿಳಿಯೋಣ.
* ಯಾವುದೇ ಪಾತ್ರೆಯನ್ನು ನೀವು ಸ್ಟವ್ ಮೇಲೆ ಇಡುವಂತಹ ಸಮಯದಲ್ಲಿ ಅದು ನೀರಿನಿಂದ ಇರಬಾರದು ಅದನ್ನು ಸಂಪೂರ್ಣವಾಗಿ ಒರೆಸಿ ಆನಂತರ ಸ್ಟವ್ ಮೇಲೆ ಇಡುವುದು ಒಳ್ಳೆಯದು ನೀರಿನ ಸಮೇತ ಇಟ್ಟರೆ ಸಂಪೂರ್ಣವಾಗಿ ನೀರು ಒಣಗುವ ತನಕ ಗ್ಯಾಸ್ ಸಿಲಿಂಡರ್ ಸುಮ್ಮನೆ ಖರ್ಚಾಗುತ್ತದೆ ಆದ್ದರಿಂದ ಈ ವಿಧಾನ ಅನುಸರಿಸುವುದು ಮುಖ್ಯ.
* ಅಗಲವಾಗಿರುವಂತಹ ಪಾತ್ರೆ ಹಾಗೂ ಚಿಕ್ಕದಾಗಿರುವಂತಹ ಪಾತ್ರೆಯಲ್ಲಿ ಅಡುಗೆಯನ್ನು ಮಾಡುವುದರಿಂದ ಅಡುಗೆ ಬೇಗನೆ ಆಗುತ್ತದೆ ಹಾಗೂ ಕಡಿಮೆ ಸಿಲಿಂಡರ್ ಖರ್ಚಾಗುತ್ತದೆ. ಅದು ಹೇಗೆ ಎಂದರೆ ಅಗಲವಾಗಿರುವಂತಹ ಪಾತ್ರೆಗೆ ಸ್ಟವ್ ನಲ್ಲಿ ಬರುವಂತಹ ಉರಿಯು ವೇಗವಾಗಿ ಬೀಳುತ್ತದೆ ಇದರಿಂದ ಉರಿ ಆಚೆ ಈಚೆ ಹೋಗುವುದಿಲ್ಲ ನೇರವಾಗಿ ಪಾತ್ರೆಗೆ ಬೀಳುತ್ತದೆ ಇದರಿಂದ ಅಡುಗೆ ಬೇಗ ಆಗುತ್ತದೆ.
* ಹಾಗೂ ಸ್ಟೀಲ್ ಪಾತ್ರೆಗಳಲ್ಲಿ ಅಂದರೆ ಅದರ ಕೆಳಭಾಗದಲ್ಲಿ ಕಾಪರ್ ಇದ್ದರೆ ಅದರಲ್ಲಿ ಹೆಚ್ಚಾಗಿ ಅಡುಗೆ ಮಾಡಲು ಪ್ರಯತ್ನಿಸಿ, ಈ ರೀತಿ ಮಾಡುವುದರಿಂದ ಆ ಪಾತ್ರೆ ಬೇಗನೆ ಬಿಸಿಯಾಗುತ್ತದೆ ಹಾಗೂ ಹೆಚ್ಚಿನ ಸಿಲಿಂಡರ್ ಅವಶ್ಯಕತೆ ಇರುವುದಿಲ್ಲ.
* ಸಾಮಾನ್ಯವಾಗಿ ಹೆಚ್ಚಿನ ಜನ ಅಡುಗೆ ಬೇಗ ಆಗಲಿ ಎಂದು ದೊಡ್ಡ ಬರ್ನಲ್ ನಲ್ಲಿ ಅಡುಗೆ ಮಾಡುತ್ತಿರುತ್ತಾರೆ ಆದರೆ ಅದರಲ್ಲಿ ಹೆಚ್ಚಿನ ಸಿಲಿಂಡರ್ ಕಾಲಿಯಾಗುತ್ತದೆ ಅದೇ ಸಣ್ಣ ಬರ್ನಲ್ ನಲ್ಲಿ ಮಾಡಿದರೆ ಸ್ವಲ್ಪ ನಿಧಾನವಾಗಬಹುದು ಆದರೆ ಕಡಿಮೆ ಗ್ಯಾಸ್ ಖಾಲಿಯಾಗುತ್ತದೆ.