ಅಂಚೆ ಕಚೇರಿಯಲ್ಲಿ ಇರುವ POMIS ಯೋಜನೆ ಬಗ್ಗೆ ಬಹುತೇಕ ಎಲ್ಲರಿಗೂ ತಿಳಿದಿದೆ. ಅದೇ ರೀತಿ ದೇಶದ ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಒಂದಾದ SBI ಬ್ಯಾಂಕ್ ನಲ್ಲೂ ಕೂಡ ಮಾಸಿಕ ಆದಾಯ ಯೋಜನೆ (SBI Monthly Income Scheme) ಜಾರಿಯಲ್ಲಿದೆ. ಒಂದು ನಿಶ್ಚಿತ ಮೊತ್ತದ ಹಣವನ್ನು ಈ ಯೋಜನೆಯಲ್ಲಿ ಠೇವಣಿ ಇಡುವುದರಿಂದ ಪ್ರತಿ ತಿಂಗಳು ಪೆನ್ಷನ್ ಮಾದರಿಯಲ್ಲಿ ನೀವು ಆಯ್ಕೆ ಮಾಡುವ ವರ್ಷಗಳವರೆಗೆ ಆದಾಯವನ್ನು ಪಡೆಯಬಹುದು ಈ ಯೋಜನೆ ಕುರಿತ ನಿಯಮ ಹಾಗೂ ನಿಬಂಧನೆಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಈ ಯೋಜನೆಯ ಮೆಚ್ಯುರಿಟಿ ಅವಧಿ ಆಯ್ಕೆ ಮಾಡಲು 4 ಆಪ್ಷನ್ ಗಳಿವೆ. 3 ವರ್ಷಗಳು, 5 ವರ್ಷಗಳು, 7 ವರ್ಷಗಳು ಹಾಗೂ 10 ವರ್ಷಗಳು. ನೀವು ಎಷ್ಟು ವರ್ಷದ ಅವಧಿಗೆ ಈ ಯೋಜನೆಯನ್ನು ಸೆಲೆಕ್ಟ್ ಮಾಡುತ್ತೀರಾ ಅದರ ಆಧಾರದ ಮೇಲೆ ನಿಮಗೆ ಬಡ್ಡಿದರ ನಿಗದಿ ಆಗುತ್ತದೆ.
● ಹಿರಿಯ ನಾಗರಿಕರಿಗೆ ಹೆಚ್ಚಿನ ವಿನಾಯಿತಿ ಇದ್ದು ಉಳಿದವರಿಗಿಂತ 0.50% ಹೆಚ್ಚು ಬಡ್ಢಿದರ ಸಿಗುತ್ತದೆ.
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಎಷ್ಟೆಲ್ಲ ಫಲ ಸಿಗುತ್ತದೆ ನೋಡಿ.!
● ಅದರ ಪ್ರಕಾರವಾಗಿ ನೋಡುವುದಾದರೆ ನೀವು 3 ವರ್ಷಗಳ ಅವಧಿಗೆ ಈ ಯೋಜನೆ ಖರೀದಿಸುವುದಾದರೆ ಸಾಮಾನ್ಯರು 5.30% ಹಿರಿಯ ನಾಗರಿಕರು 5.80%, 5 ವರ್ಷದ ಅವಧಿಗೆ ಖರೀದಿ ಮಾಡುವುದಾದರೆ ಸಾಮಾನ್ಯ ನಾಗರಿಕರು 5.20% ಹಿರಿಯ ನಾಗರಿಕರು 5.90% ಬಡ್ಡಿದರ ಪಡೆಯಲಿದ್ದಾರೆ. 7 ವರ್ಷಗಳು ಮತ್ತು 10 ವರ್ಷಗಳ ಅವಧಿಯನ್ನು ಆಯ್ದುಕೊಂಡರೂ ಇದೇ ಬಡ್ಡಿ ದರ ನಿಗದಿ ಆಗಿರುತ್ತದೆ.
● ನೀವು ಕನಿಷ್ಠ 25,000 ಹಣವನ್ನಾದರೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಗರಿಷ್ಠ ಯಾವುದೇ ಮಿತಿ ಇಲ್ಲ.
● ಪ್ರೀಮಿಯಂ ಮಾದರಿಯಲ್ಲಿ ಹೂಡಿಕೆ ಮಾಡುವ ಅವಕಾಶ ಇಲ್ಲ ಇದು ಒನ್ ಟೈಮ್ ಡೆಪಾಸಿಟ್ (One time deopsite) ಆಗಿರುತ್ತದೆ.
● SBI ಮಂತ್ಲೀ ಇನ್ಕಮ್ ಸ್ಕೀಮ್ ಹೆಸರೇ ಹೇಳುವಂತೆ ನೀವು ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ನಿಗದಿತವಾಗಿರುವ ಬಡ್ಡಿ ದರದ ಮೇಲೆ ಪ್ರತಿ ತಿಂಗಳು ಕೂಡ ನಿಮಗೆ ಇನ್ಕಮ್ ಬರುತ್ತದೆ.
ಲಕ್ಷಾಂತರ ಜನರ ಜೀವನ ಬದಲಾಗಿದೆ.! ಸುಲಭವಾಗಿ ದುಡ್ಡು ಮಾಡಲು ಇರುವ 6 ನಿಯಮಗಳು.!
● ಈ ಬಡ್ಡಿರೂಪದ ಆದಾಯವನ್ನು ನೀವು ನಿಮ್ಮ SBI ಉಳಿತಾಯ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುವ ಆಪ್ಷನ್ ಸೆಲೆಕ್ಟ್ ಮಾಡಬಹುದು ಅಥವಾ ಮನಿ ಆರ್ಡರ್ ಮೂಲಕ ಹಣ ಪಡೆದುಕೊಳ್ಳುವ ಆಪ್ಷನ್ ಬೇಕಾದರೂ ಸೆಲೆಕ್ಟ್ ಮಾಡಬಹುದು.
● ಈ ಯೋಜನೆ ಅಡಿ ಗಳಿಕೆ ಮಾಡುವ TDS ಅಪ್ಲೈ ಆಗುತ್ತದೆ.
● ಸಾಲ ಸೌಲಭ್ಯದ ವ್ಯವಸ್ಥೆ ಕೂಡ ಇದೆ
● ಪ್ರಿ ಮೆಚ್ಯೂರ್ ವಿತ್ ಡ್ರಾವಲ್ (Pre mature withdrawal) ಅವಕಾಶ ಇದ್ದು ಅಗತ್ಯ ಸಂದರ್ಭದಲ್ಲಿ ಪಡೆದುಕೊಳ್ಳಬಹುದು.
● ನಾಮಿನಿ (Nominee) ಫೆಸಿಲಿಟಿ ಕೂಡ ಲಭ್ಯವಿದ್ದು ಒಂದು ವೇಳೆ ಯೋಜನೆ ಖರೀದಿ ಮಾಡಿದವರು ಮೆಚುರಿಟಿ ಅವಧಿ ಮುಗಿಯುವ ಮುನ್ನ ಮುನ್ನ ಮೃ’ತ ಪಟ್ಟರೆ ವಾರಸುದಾರರಿಗೆ ಕಾನೂನು ಬದ್ಧವಾಗಿ ಸಲ್ಲಬೇಕಾದ ಮೊತ್ತ ಸೇರುತ್ತದೆ.
ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ರೀತಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.!
● ಉದಾಹರಣೆಯೊಂದಿಗೆ ಇದನ್ನು ವಿವರಿಸುವುದಾದರೆ ಈ ಯೋಜನೆಯಲ್ಲಿ ನೀವು 9 ಲಕ್ಷ ಹಣವನ್ನು 5 ವರ್ಷದ ಅವಧಿಗೆ ಹೂಡಿಕೆ ಮಾಡಿದ್ದೀರಾ ಎಂದು ಇಟ್ಟುಕೊಳ್ಳಿ. ಒಂಬತ್ತು ವರ್ಷಗಳಿಗೆ ನಿಮ್ಮ ಹಣಕ್ಕೆ ಅಪ್ಲೈ ಆಗುವ ಬಡ್ಡಿದರದ ಆಧಾರದ ಮೇಲೆ ನಿಮಗೆ ಪ್ರತಿ ತಿಂಗಳು 4950 ರೂಗಳು ಸಿಗಲಿದೆ.
● ಯೋಜನೆ ಖರೀದಿಸುವ ಉದ್ದೇಶವಿದ್ದರೆ ಹೆಚ್ಚಿನ ಮಾಹಿತಿಗಾಗಿ SBI ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮಾಹಿತಿ ಪಡೆಯಿರಿ ಅಥವಾ ಹತ್ತಿರದಲ್ಲಿರುವ SBI ಶಾಖೆಗೂ ಕೂಡ ಭೇಟಿ ಕೊಡಬಹುದು.