ಹೆಣ್ಣು ಮಕ್ಕಳು ಪೂಜೆ ಮಾಡುವಾಗ ತಿಳಿದುಕೊಳ್ಳಲೇಬೇಕಾದ ನಿಯಮಗಳು ಇವು ಸಾಮಾನ್ಯವಾಗಿ ನಾವು ಮತ್ತೊಬ್ಬರ ಬಳಿ ಮಾತನಾಡುವಾಗ ನಾವು ಎಷ್ಟೇ ಪೂಜೆ ಮಾಡಿದರೂ ದೇವರು ನಮ್ಮ ಪೂಜೆಗೆ ತಕ್ಕ ಪ್ರತಿಫಲ ಕೊಡುತ್ತಿಲ್ಲ ನಾವು ಎಷ್ಟೇ ದುಡಿದರೂ ಹಣ ಮನೆಗೆ ಬರುತ್ತದೆ ಹೊರತು ಮನೆಯಲ್ಲಿ ಆ ಹಣ ಉಳಿಯುವುದಿಲ್ಲ.
ಹೀಗೆ ಬಂದು ದುಡ್ಡು ಹಾಗೆ ಖರ್ಚಾಗಿ ಬಿಡುತ್ತದೆ, ಎಷ್ಟೇ ಪೂಜೆ ಮಾಡಿದರು ಕ’ಷ್ಟಗಳು ತಪ್ಪಿಲ್ಲ ಯಾವುದಾದರೂ ಹಣ ಬರುವ ಹೊತ್ತಿಗೆ ಸಮಸ್ಯೆ ಸಿದ್ಧವಾಗಿರುತ್ತದೆ ಬದುಕಿನಲ್ಲಿ ನೆಮ್ಮದಿ ಇಲ್ಲ ಎಂದು ಹೇಳುವುದನ್ನು ಕೇಳಿರುತ್ತೇವೆ. ಈ ರೀತಿ ಯಾಕೆ ಆಗುತ್ತದೆ ಎಂದರೆ ನಾವು ಪೂಜೆ ಮಾಡುವ ವಿಧಾನದಲ್ಲಿ ಗೊತ್ತೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳು ಆಗಬಹುದು ಅದರಿಂದ ಉಂಟಾಗುವ ದೋಷಗಳಿಂದ ಹೀಗಾಗುತ್ತದೆ.
ಈ ಸುದ್ದಿ ಓದಿ:- ಸಂಜೆ ವೇಳೆ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ, ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ.!
ಇದುವರೆಗೂ ನಿಮಗೆ ಈ ವಿಷಯ ತಿಳಿಯದೆ ಇದ್ದರೂ ಇನ್ನು ಮುಂದೆ ಆದರೂ ಇದನ್ನು ತಿಳಿದುಕೊಂಡು ಸರಿಪಡಿಸಿಕೊಳ್ಳಿ. ಹಾಗಾಗಿ ಈ ಲೇಖನದಲ್ಲಿ ಹೆಣ್ಣು ಮಕ್ಕಳಿಗಾಗಿಯೇ ಕೆಲ ಪ್ರಮುಖ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ.
* ನಿಮ್ಮ ಮನೆಗೆ ನೆಗೆಟಿವ್ ಎನರ್ಜಿ ಪ್ರವೇಶ ಆಗಿರಬಹುದು ಅಥವಾ ನಿಮ್ಮ ಮನೆ ಮೇಲೆ ಕೆಟ್ಟ ದೃಷ್ಟಿ ಬಿದ್ದಿರಬಹುದು ಇವುಗಳ ನಿವಾರಣೆಯಾದರೆ ತಾಯಿ ಮಹಾಲಕ್ಷ್ಮಿ ನಿಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸುತ್ತಾರೆ ಇದಕ್ಕಾಗಿ ಒಂದು ಸಣ್ಣ ಆಚರಣೆ ಮಾಡಬೇಕು.
ಅದೇನೆಂದರೆ, ಸಂಜೆ ಸಮಯ ಹೆಣ್ಣು ಮಕ್ಕಳು ಒಂದು ಲೋಟ ಶುದ್ಧವಾದ ನೀರಿಗೆ ಸ್ವಲ್ಪ ಜೀರಿಗೆ ಪುಡಿ ಹಾಕಿ ಅದಕ್ಕೆ ಸ್ವಲ್ಪ ಕಲ್ಲುಪ್ಪು ಸೇರಿಸಿ ಮನೆಯ ಮುಖ್ಯ ದ್ವಾರದ ಹೊಸ್ತಿಲಿನ ಎಡ ಹಾಗೂ ಬಲ ಭಾಗದಲ್ಲಿ ಸಿಂಪಡಿಸಬೇಕು ಹೀಗೆ ಮಾಡಿದರೆ ನಿಮ್ಮ ಎಲ್ಲಾ ದೋಷಗಳು ನರ ದೃಷ್ಟಿ ದೋಷಗಳು ಪರಿಹಾರವಾಗಿ ಸಕಾರಾತ್ಮಕ ವಾತಾವರಣ ಮೂಡುತ್ತದೆ ಒಳ್ಳೆಯದಾಗುತ್ತದೆ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
* ಮನೆಯ ಹೊಸ್ತಿಲಿಗೆ ಅರಿಶಿಣವನ್ನು ಹಚ್ಚಬೇಕು ಇದು ಕೂಡ ಇಂತಹ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹೊಸ್ತಿಲು ತಾಯಿ ಮಹಾಲಕ್ಷ್ಮಿ ಆವಾಸ ಸ್ಥಾನ ಆಗಿರುವುದರಿಂದ ಹೊಸ್ತಿಲನ್ನು ಪ್ರತಿನಿತ್ಯ ಸಾರಿಸಿ ಅರಿಶಿನ ಕುಂಕುಮ ಹಚ್ಚಿ ಹೂವಿನಿಂದ ಅಲಂಕರಿಸಿ ಪೂಜೆ ಮಾಡಬೇಕು ತುಳಸಿ ಗಿಡಕ್ಕೂ ಕೂಡ ಇದೇ ರೀತಿ ಪೂಜೆ ಮಾಡಬೇಕು.
* ಮನೆ ಮುಂದೆ ಹಾಗೂ ತುಳಸಿ ಗಿಡದ ಮುಂದೆ ಹಸುವಿನ ಸೆಗಣಿಯಿಂದ ಸಾರಿಸಿ ರಂಗೋಲಿ ಇಟ್ಟರೆ ಅದು ಕೂಡ ಈ ಮೇಲೆ ತಿಳಿಸಿದಂತಹ ಉತ್ತಮ ಪರಿಣಾಮಗಳನ್ನು ನಿಮ್ಮ ಬದುಕಿಗೆ ತರುತ್ತದೆ
* ವಾರಕ್ಕೆ ಒಮ್ಮೆಯಾದರೂ ತುಿಸಿ ಎಲೆಯನ್ನು ಬಿಡಿಸಿಕೊಂಡು ಅದರಿಂದ ರಸವನ್ನು ಹಿಂಡಿ, ಒಂದು ಲೋಟ ಶುದ್ಧವಾದ ನಿನಗೆ ಆ ರಸ ಮಿಕ್ಸ್ ಮಾಡಿ ಮನೆ ಮೂಲೆ ಮೂಲೆಗೂ ಸಿಂಪಡಿಸಬೇಕು ಆಗ ಮನೆಯಲ್ಲಿ ಯಾವುದೇ ದೋಷಗಳಿದ್ದರೂ ನಿವಾರಣೆಯಾಗಿ ಸುಖ ಶಾಂತಿ ನೆಮ್ಮದಿ ಸಹ ನೆಲೆಸುತ್ತದೆ ಸಂಪತ್ತು ಅಭಿವೃದ್ಧಿಯಾಗುತ್ತದೆ ಕಾರ್ಯಗಳು ನಿರ್ವಿಘ್ನವಾಗಿ ಸಾಗುತ್ತವೆ.
ಈ ಸುದ್ದಿ ಓದಿ:- 2024 ಮಾರ್ಚ್ ತಿಂಗಳ ರಾಶಿ ಫಲ, ಮಿಥುನ ರಾಶಿಯವರು ಸದೃಢರಾಗಲು ಒಂದು ಒಳ್ಳೆಯ ಅವಕಾಶ.!
* ಎಷ್ಟೇ ಪೂಜೆ ಮಾಡಿದರೂ ಪೂಜೆಗೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ಬೇಸರ ಕೊಳ್ಳುವ ಬದಲು ಪೂಜೆ ಮಾಡುವ ವಿಧಾನದಲ್ಲಿ ತಪ್ಪಾಗಿದೆಯೇ ಎಂದು ಆಲೋಚಿಸಿ. ಯಾವಾಗಲೂ ದೇವರ ಪೂಜೆ ಮಾಡಿದ ನಂತರ ಊಟ ಮಾಡಬೇಕು ಮತ್ತು ದೇವರಿಗೆ ದೀಪ ಹಚ್ಚುವಾಗ ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಇರಬೇಕು, ಗಣೇಶನಿಗೆ ತುಳಸಿ ಅರ್ಪಿಸಬಾರದು, ಪೂಜೆಗೆ ಮಾಡುವ ನೈವೇದ್ಯವನ್ನು ಬಹಳ ಮಡಿಯಿಂದ ಮಾಡಬೇಕು ಕಾಟಾಚಾರದ ಬದಲು ಶ್ರದ್ಧಾ ಭಕ್ತಿಯಿಂದ ದೇವರ ಪೂಜೆ ಮಾಡಬೇಕು ಹೀಗೆ ಮಾಡಿದರೆ ಖಂಡಿತ ಪ್ರತಿಫಲ ಸಿಗುತ್ತದೆ.