ವರಮಹಾಲಕ್ಷ್ಮಿ ಎಂದರೆ ಅದೃಷ್ಟವನ್ನು ತರುವ ದೇವತೆ ಎಂದೇ ಅರ್ಥ. ವರಮಹಾಲಕ್ಷ್ಮಿಯ ಕೃಪಾಕಟಾಕ್ಷ ಉಂಟಾದರೆ ಆ ಮನೆ ಏಳಿಗೆ ಆಗುತ್ತದೆ. ಸುಖ ಶಾಂತಿ ನೆಲೆಸುತ್ತದೆ, ಅಷ್ಟೈಶ್ವರ್ಯಗಳು ಕೂಡ ಮನೆಗೆ ಬರುತ್ತದೆ. ಕೈಗೊಳ್ಳುವ ಎಲ್ಲಾ ಕಾರ್ಯಗಳು ಕೂಡ ಜಯವಾಗುತ್ತವೆ ಹಾಗಾಗಿ ಲಕ್ಷ್ಮಿ ಆಶೀರ್ವಾದ ಮುಖ್ಯ ಎನ್ನುವ ಕಾರಣಕ್ಕೆ ತಾಯಿ ವರಮಹಾಲಕ್ಷ್ಮಿಗೆ ಇಷ್ಟವಾಗುವ ವರಮಹಾಲಕ್ಷ್ಮಿ ವ್ರತವನ್ನು ಹಿಂದೂ ಸಂಪ್ರದಾಯವನ್ನು ಅನುಸರಿಸುವ ಗೃಹಿಣಿಯರು ಆಚರಿಸುತ್ತಾರೆ.
ಕೆಲವರು ಈಗಾಗಲೇ ಅವರ ಮನೆಯಲ್ಲಿ ಅಮ್ಮ ಅಥವಾ ಅತ್ತೆ ಈ ವ್ರತವನ್ನು ಆಚರಿಸಿಕೊಂಡು ಬಂದಿರುವ ಕಾರಣ ಅದನ್ನು ನೋಡಿ ತಿಳಿದುಕೊಂಡಿರುತ್ತಾರೆ ಮತ್ತು ಅದನ್ನೇ ಪಾಲಿಸಿಕೊಂಡು ಪದ್ದತಿ ಪ್ರಕಾರವೇ ಪೂಜೆ ಮಾಡುತ್ತಾ ಹೋಗುತ್ತಾರೆ. ಆದರೆ ಅನೇಕ ಮನೆಗಳಲ್ಲಿ ಈ ರೂಢಿ ಇರುವುದಿಲ್ಲ. ಇನ್ನು ಮುಂದೆ ತಾವು ಕೂಡ ವರಮಹಾಲಕ್ಷ್ಮಿಯ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಬೇಕು ತಾವು ಕೂಡ ವರಮಹಾಲಕ್ಷ್ಮಿಯನ್ನು ಮನೆಯಲ್ಲಿ ಕೂರಿಸಿ ಪೂಜೆ ಮಾಡಬೇಕು ಎಂದು ಆಸೆ ಪಡುತ್ತಾರೆ.
ಬೇಗ ಹಾಗೂ ಸುಲಭವಾಗಿ ವರಮಹಾಲಕ್ಷ್ಮಿಗೆ ಸೀರೆಯಿಂದ ಸೀರೆ ಉಡಿಸುವ ಹೊಸ ವಿಧಾನ.!
ಈ ರೀತಿ ಆಸೆ ಪಡುವ ಗೃಹಿಣಿಯರು ಯಾವಾಗ ಬೇಕಾದರೂ ವರಮಹಾಲಕ್ಷ್ಮಿ ಹಬ್ಬ ಮಾಡಲು ಶುರು ಮಾಡಬಹುದು. ಆದರೆ ಶ್ರದ್ಧೆ ನಂಬಿಕೆ ಭಕ್ತಿ ಬೇಕು. ಒಳ್ಳೆಯ ಮನಸ್ಸಿನಿಂದ ಪೂಜೆ ಮಾಡಿ ಭಕ್ತಿಯಿಂದ ಕರೆದರೆ ಖಂಡಿತವಾಗಿಯೂ ಕೂಡ ತಾಯಿಮಹಾಲಕ್ಷ್ಮಿ ನಿಮ್ಮ ಮನೆಗೆ ಬರುತ್ತಾರೆ. ಹಾಗೆ ನಿಮ್ಮ ಜೊತೆಗೆ ಶಾಶ್ವತವಾಗಿ ನೆಲೆಸುತ್ತಾರೆ ಹಾಗಾಗಿ ಅವರಿಗೆ ಇಷ್ಟ ಆಗುವ ರೀತಿ ವರಮಹಾಲಕ್ಷ್ಮಿ ಹಬ್ಬವನ್ನು ಮಾಡಬೇಕು ಎನ್ನುವುದನ್ನು ನಾವು ಇಂದು ಈ ಅಂಕಣದಲ್ಲಿ ತಿಳಿಸಿಕೊಡುತ್ತಿದ್ದೇವೆ.
ವರಮಹಾಲಕ್ಷ್ಮಿ ಹಬ್ಬ ಆಚರಣೆ ಮಾಡುವ ಮುನ್ನ ಮನೆಯನ್ನು ಶುದ್ಧ ಮಾಡುವುದು ಮೊದಲು ಮುಖ್ಯ. ಯಾಕೆಂದರೆ ತಾಯಿ ಮಹಾಲಕ್ಷ್ಮಿಯು ಸ್ವಚ್ಛತೆ ಇರುವ ಕಡೆ ಮಾತ್ರ ನೆಲೆಸುತ್ತಾರೆ. ಹಾಗಾಗಿ ಮೊದಲು ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ವರಮಹಾಲಕ್ಷ್ಮಿ ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಒಳ್ಳೆ ಮುಹೂರ್ತದಲ್ಲಿ ಕಳಶ ಪ್ರತಿಷ್ಠಾಪನೆಯನ್ನು ಮಾಡಿ ನೈವೇದ್ಯ ಮಾಡಿ ಧೂಪ ದೀಪಗಳಿಂದ ಆರಾಧನೆ ಮಾಡಿ ಆಶೀರ್ವಾದಕ್ಕಾಗಿ ಪ್ರಾರ್ಥಿಸಬೇಕು.
ಈ ರೀತಿ ಮಾಡುವಾಗ ಕಳಶಕ್ಕೆ ಯಾವ ರೀತಿ ವಸ್ತುಗಳನ್ನು ಹಾಕಬೇಕು, ನೈವೇದ್ಯಕ್ಕೆ ಏನೆಲ್ಲ ಮಾಡಬೇಕು, ಕಳಶಕ್ಕೆ ಅಲಂಕಾರ ಮಾಡುವುದು ಹೇಗೆ? ಪೂಜೆಗೆ ತಪ್ಪದೆ ಯಾವ ವಸ್ತುಗಳನ್ನು ಬಳಸಲೇಬೇಕು ಎನ್ನುವ ವಿಚಾರಗಳ ಬಗ್ಗೆ ಕೂಡ ಅನೇಕರಿಗೆ ಮಾಹಿತಿ ಇರುವುದಿಲ್ಲ. ವರಮಹಾಲಕ್ಷ್ಮಿ ತಾಯಿಗೆ ಇಷ್ಟವಾಗುವ ಕೆಲವು ವಸ್ತುಗಳು ಇವೆ, ಇವುಗಳನ್ನು ಲಕ್ಷ್ಮಿ ಸ್ವರೂಪ ಎಂದು ಕೂಡ ಕರೆಯಲಾಗುತ್ತದೆ.
ಈ ವಸ್ತುಗಳನ್ನು ತುಂಬಿ ಕಳಶ ಪ್ರತಿಷ್ಠಾಪನೆ ಮಾಡುವುದು ಒಳ್ಳೆಯದು ಹಾಗೆ ಪ್ರತಿಷ್ಠಾಪನೆ ಮಾಡುವ ಜಾಗ, ಯಾವ ರೀತಿ ರಂಗೋಲಿ ಹಾಕಿಕೊಳ್ಳಬೇಕು, ಲಕ್ಷ್ಮೀ ಮುಂದೆ ಎಷ್ಟು ದೀಪಗಳನ್ನು ಬೆಳೆಗಬೇಕು, ಅಲಂಕಾರ ಹೇಗೆ ಮಾಡಬೇಕು, ನೈವೇದ್ಯಕ್ಕೆ ತಾಯಿಗೆ ಇಷ್ಟವಾಗುವ ಯಾವ ಪದಾರ್ಥಗಳನ್ನು ಮಾಡಬೇಕು ಮತ್ತು ಯಾವ ಹಣ್ಣುಗಳನ್ನು ಇಷ್ಟರೇ ತಾಯಿಗೆ ಇಚ್ಛೆಯಾಗುತ್ತದೆ ಮತ್ತು ಕಳಶವನ್ನು ಯಾವಾಗ ಹೆಚ್ಚಿಸಬೇಕು ಎನ್ನುವ ಎಲ್ಲದಕ್ಕೂ ಕೂಡ ಕ್ರಮ ಇದೆ. ಈ ಪೂಜಾ ವಿಧಾನದ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಈ ವೀಡಿಯೋವನ್ನು ಕೊನೆ ತನಕ ನೋಡಿ.