ಮನೆಯಲ್ಲಿ ಯಾವುದೇ ಬಟ್ಟೆ ಕೊಳೆಯಾದರೂ ಕೂಡ ಅದನ್ನು ಒಗೆಯುವುದರ ಮೂಲಕ ನಾವು ಅದನ್ನು ಸ್ವಚ್ಛ ಮಾಡುತ್ತೇವೆ ಆದರೆ ಹಾಸಿಗೆಯನ್ನು ನಾವು ಹೇಗೆ ಸ್ವಚ್ಛ ಮಾಡಬೇಕು ಎಂದು ಆಲೋಚನೆ ಯನ್ನು ಮಾಡುತ್ತಿರುತ್ತೇವೆ. ಹೌದು ಅದರಲ್ಲಂತೂ ಹಾಸಿಗೆ ಮೇಲೆ ಕೊಳೆ ದೂಳು ಏನಾದರೂ ಇದ್ದರೆ ಅದನ್ನು ಯಾವ ಕೆಲವು ವಿಧಾನಗಳನ್ನು ಅನುಸರಿಸಿ ಅದನ್ನು ಸ್ವಚ್ಛ ಮಾಡಬಹುದು ಎಂಬ ಯೋಚನೆಯೇ ಆಗಿರುತ್ತದೆ.
ಆದರೆ ಇನ್ನು ಮುಂದೆ ಇಂತಹ ಯೋಚನೆ ಮಾಡುವ ಅವಶ್ಯಕತೆ ಇರುವುದಿಲ್ಲ. ಈಗ ನಾವು ಹೇಳುವಂತಹ ಈ ಒಂದು ಟಿಪ್ಸ್ ಅನುಸರಿಸಿದರೆ ಸಾಕು ನೀವು ಸುಲಭವಾಗಿ ಹಾಸಿಗೆಯನ್ನು ಕ್ಲೀನ್ ಮಾಡಬಹುದು ಯಾವುದೇ ಪದಾರ್ಥವಾಗಲಿ ಇಂತಿಷ್ಟು ಸಮಯದವರೆಗೆ ಅದು ಸ್ವಚ್ಛವಾಗಿರುತ್ತದೆ. ಆನಂತರ ನಾವು ಅದನ್ನು ಸ್ವಚ್ಛ ಮಾಡಲೇಬೇಕು.
ಅದೇ ರೀತಿಯಾಗಿ ಹಾಸಿಗೆಯನ್ನು ಕೂಡ ನಾವು ಕೆಲವು ದಿನಗಳ ವರೆಗೆ ಉಪಯೋಗಿಸಿ ನಂತರ ಅದನ್ನು ನಾವು ಸ್ವಚ್ಛ ಮಾಡಿಕೊಳ್ಳುತ್ತಿರಬೇಕು. ಹೌದು ಹಾಸಿಗೆಯ ಮೇಲೆ ಧೂಳು ಕಸ ಎಲ್ಲವೂ ಕೂಡ ಬೀಳುವುದ ರಿಂದ ಅದು ಹಾಳಾಗುತ್ತಿರುತ್ತದೆ ಹಾಗೂ ಹೆಚ್ಚು ದಿನಗಳಿಂದ ಉಪಯೋ ಗಿಸುತ್ತಿದ್ದರೆ ಅದು ಕೆಟ್ಟ ವಾಸನೆಯೂ ಸಹ ಬರುತ್ತಿರುತ್ತದೆ. ಆದರೆ ಕೆಲವೊಂದಷ್ಟು ಜನ ಅದನ್ನು ಬಿಸಿಲಿಗೆ ಇಟ್ಟು ಆನಂತರ ತಂದು ಮತ್ತೆ ಉಪಯೋಗಿಸುತ್ತಾರೆ.
ಆದರೆ ಆ ರೀತಿ ಮಾಡುವುದರಿಂದ ಹಾಸಿಗೆಯ ಲ್ಲಿರುವಂತ ಧೂಳು ಹೋಗಬಹುದೇ ಹೊರತು ಅದರಲ್ಲಿ ಇರುವಂತಹ ಕೆಟ್ಟ ವಾಸನೆ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗು ವುದಿಲ್ಲ. ಹಾಗಾದರೆ ಈ ದಿನ ಹಾಸಿಗೆಯನ್ನು ಹೇಗೆ ಸ್ವಚ್ಛ ಮಾಡಬಹುದು ಯಾವ ವಿಧಾನವನ್ನು ಅನುಸರಿಸಿ ಅದನ್ನು ಸ್ವಚ್ಛ ಮಾಡಬಹುದು.
ಪಿತೃ ಪಕ್ಷ ಮಾಡುವಾಗ ಎಚ್ಚರ ವಹಿಸಿ.!
ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಹಾಸಿಗೆ ಮೇಲೆ ಇರುವಂತಹ ಕೊಳೆ ತೆಗೆಯುವುದಕ್ಕೆ ಬೇಕಾಗಿರುವಂತಹ ಪದಾರ್ಥಗಳು ಯಾವುದು ಎಂದರೆ ಒಂದು ಚಮಚ ಅಡುಗೆ ಸೋಡಾ ಹಾಗೂ ಒಂದು ಚಮಚ ಸೋಪ್ ಪೌಡರ್ ಹೌದು ಇವೆರಡು ಪದಾರ್ಥ ಇದ್ದರೆ ಸಾಕು ನಿಮ್ಮ ಹಾಸಿಗೆ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಹಾಗಾದರೆ ಇದನ್ನು ಹೇಗೆ ಉಪಯೋಗಿಸುವುದು ಎಂದು ನೋಡುವುದಾದರೆ. ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಅಡುಗೆ ಸೋಡಾ ಹಾಗೂ ಸೋಪ್ ಪೌಡರ್ ಹಾಕಿ ಚೆನ್ನಾಗಿ ಕರಗುವವರೆಗೆ ಮಿಶ್ರಣ ಮಾಡಿಕೊಳ್ಳ ಬೇಕು. ಆನಂತರ ಒಂದು ಕಾಟನ್ ಬಟ್ಟೆಯನ್ನು ಅದರಲ್ಲಿ ಅಜ್ಜಿ ಚೆನ್ನಾಗಿ ನೀರನ್ನು ಹಿಂಡಬೇಕು.
ಈ ರೀತಿ ನೀರನ್ನು ಅದ್ದಿದ ಬಟ್ಟೆಯನ್ನು ಅಗಲವಾಗಿ ಹಾಕಿ ಅದರ ಮೇಲೆ ಇಡ್ಲಿ ಕುಕ್ಕರ್ ಮುಚ್ಚಳವನ್ನು ಇಟ್ಟು ಬಟ್ಟೆಯನ್ನು ಮೂಲೆ ಸೇರಿಸಿ ನಾಲ್ಕು ಕಡೆ ಕಟ್ಟಿಕೊಳ್ಳಬೇಕು ಆನಂತರ ಅದರ ಮುಚ್ಚುಳವನ್ನು ಹಿಡಿದು ಇಡೀ ಹಾಸಿಗೆಯ ಮೇಲೆ ಒಂದು ಕಡೆಯಿಂದ ಉಜ್ಜಬೇಕು ಹೌದು ಈ ರೀತಿ ಮಾಡುವುದರಿಂದ ಹಾಸಿಗೆಯ ಮೇಲೆ ಇರುವಂತಹ ಧೂಳು ಕೊಳೆ ಎಲ್ಲವೂ ಕೂಡ ಸಂಪೂರ್ಣವಾಗಿ ಬರುತ್ತದೆ.
ಹಾಲಿನಿಂದ ಈ ಉಪಾಯ ಮಾಡಿ 24 ಗಂಟೆಗಳಲ್ಲಿಯೇ ನಿಮ್ಮ ಕೋರಿಕೆ ಈಡೇರುತ್ತೆ.!
ಅದರಲ್ಲಿರುವಂತಹ ಸೋಪ್ ಪೌಡರ್ ಹಾಗೂ ಸೋಡಾ ಹಾಸಿಯಲ್ಲಿರುವಂತಹ ಕೊಳೆ ಯನ್ನು ತೆಗೆದು ಹಾಕುತ್ತದೆ. ಆನಂತರ ಸ್ವಲ್ಪ ಆರಲು ಬಿಟ್ಟರೆ ಹಾಸಿಗೆ ಎಲ್ಲವೂ ಕೂಡ ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ. ಈ ರೀತಿ ಮಾಡುವು ದರಿಂದ ಯಾವುದೇ ರೀತಿಯ ಜಿರಳೆಗಳು ತಿಗಣೆಗಳು ಯಾವುದು ಕೂಡ ಸೇರುವುದಿಲ್ಲ. ವಾರಕ್ಕೆ ಒಮ್ಮೆಯಾದರೂ ಈ ರೀತಿ ಮಾಡುವುದರಿಂದ ಹಾಸಿಗೆ ಸಂಪೂರ್ಣವಾಗಿ ಸ್ವಚ್ಛವಾಗಿಯೇ ಇರುತ್ತದೆ.