ಹೆಣ್ಣು ಮಕ್ಕಳಿಗೆ ಅದರಲ್ಲೂ ವಿವಾಹಿತ ಹೆಣ್ಣು ಮಕ್ಕಳಿಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅನೇಕ ಕಟ್ಟುಪಾಡುಗಳಿವೆ. ಈ ಪದ್ಧತಿಗಳನ್ನು ಆಕೆ ಪಾಲಿಸಿ ನಡೆದುಕೊಂಡಾಗ ಕುಟುಂಬದ ಪರಿಸ್ಥಿತಿ ಉತ್ತಮವಾಗಿರುತ್ತದೆ ಎನ್ನುವುದು ಇದರ ಹಿಂದಿನ ದೃಷ್ಟಿಕೋನ. ಆದ ಕಾರಣ ಹಿರಿಯರು ಪ್ರಶ್ನೆ ಮಾಡದೆ ತಲತಲಾಂತರದಿಂದ ಇವುಗಳನ್ನು ಪಾಲಿಸಿಕೊಂಡು ಬಂದಿದ್ದಾರೆ, ಇತ್ತೀಚಿಗೆ ಇದರ ಹಿಂದೆ ವೈಜ್ಞಾನಿಕ ಕಾರಣಗಳು ಇವೆ ಎನ್ನುವುದು ಕೂಡ ಸಾಬೀತಾಗಿದೆ.
ಆದರೆ ಎಲ್ಲರಿಗೂ ಇದು ಪೂರ್ತಿಯಾಗಿ ತಲುಪಿಲ್ಲ ಕೆಲವರು ಇದನ್ನು ಮೂಢನಂಬಿಕೆ ಎಂದು ನಿರ್ಲಕ್ಷ ಮಾಡಿದರೆ ಚಕಾರವೆತ್ತದೆ ಪಾಲಿಸಿದವರು ನೆಮ್ಮದಿಯಾಗಿದ್ದಾರೆ. ಹಾಗಾಗಿ ಯಾವುದೇ ಖರ್ಚಿಲ್ಲದೆ ಹೆಣ್ಣು ಮಕ್ಕಳು ಪಾಲಿಸಬಹುದಾದ ಇಂತಹ ಸಂಪ್ರದಾಯವನ್ನು ಅಲ್ಲಗಯಳೆಯುವುದರಲ್ಲಿ ಅರ್ಥವಿಲ್ಲ ಎಂದು ಹೇಳುತ್ತಾ ಹೆಣ್ಣುಮಕ್ಕಳು ತಲೆ ಸ್ನಾನ ಮಾಡುವುದರ ಕುರಿತು ಇರುವ ಕೆಲ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಹೆಣ್ಣು ಮಕ್ಕಳು ತಲೆ ಸ್ನಾನ ಮಾಡಿದ ದಿನದಂದು ತಲೆ ಕೂದಲು ಒದ್ದೆ ಇದ್ದರೆ ಹಾಗೆ ಮನೆಯೆಲ್ಲಾ ಓಡಾಡಬಾರದು. ಇದರಿಂದ ಮನೆಯಲ್ಲಿ ನ’ಕಾ’ರಾ’ತ್ಮ’ಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತದೆ.
ಸ್ನಾನ ಮಾಡಿದ ತಕ್ಷಣ ಹಣೆಯಲ್ಲಿ ಕುಂಕುಮ ಇಲ್ಲದೆ ತಲೆ ಕೂದಲನ್ನು ಒಣಗಿಸಿ ಕಟ್ಟದೆ ಕೂದಲು ಬಿಟ್ಟುಕೊಂಡು ಪೂಜೆ ಮಾಡುವುದರಿಂದ ಯಾವುದೇ ಫಲ ಸಿಗುವುದಿಲ್ಲ.
* ಸೋಮವಾರದ ದಿನ ವಿವಾಹಿತ ಮಹಿಳೆಯರು ತಲೆ ಸ್ನಾನ ಮಾಡಿದರೆ ಆಕೆಯ ಹೆಣ್ಣು ಮತ್ತು ಗಂಡು ಮಕ್ಕಳು ಬಹಳ ಕ’ಷ್ಟವನ್ನು ಎದುರಿಸಬೇಕಾಗುತ್ತದೆ, ಅವರು ಬಿಕ್ಕಟಿನ ಪರಿಸ್ಥಿತಿಯಲ್ಲಿ ಬದುಕಬೇಕಾಗುತ್ತದೆ ಅವರಿಗೆ ಆರ್ಥಿಕ ಮುಗ್ಗಟ್ಟುಗಳು ಸಂಭವಿಸುತ್ತವೆ.
* ಮಂಗಳವಾರ ತಲೆ ಸ್ನಾನ ಮಾಡುವುದು ಮಾತ್ರವಲ್ಲದೆ ಕೂದಲು ಕತ್ತರಿಸುವುದು ನಿ’ಷಿ’ದ್ಧವಾಗಿದೆ ಅದರಲ್ಲೂ ಮಂಗಳ ಗ್ರಹದ ಪ್ರಭಾವ ಇರುವವರು ಚಾಚು ತಪ್ಪದೇ ಬಹಳ ಶ್ರದ್ಧೆಯಿಂದ ಇದನ್ನು ಪಾಲಿಸಬೇಕು. ಒಂದು ವೇಳೆ ಇದನ್ನು ಮೀರಿ ಮಂಗಳವಾರ ತಲೆ ಕೂದಲು ಕಟ್ ಮಾಡಿಸುವುದು ತಲೆ ಕೂದಲು ತೊಳೆದುಕೊಳ್ಳುವುದು ಮಾಡಿದರೆ ಮಂಗಳನ ಅವಕೃಪೆಗೆ ಒಳಗಾಗಬೇಕಾಗುತ್ತದೆ
* ಬುಧವಾರದ ದಿನ ಕನ್ಯೆಯರು ತಲೆ ಕೂದಲನ್ನು ತೊಳೆಯಬಾರದು. ಕನ್ಯೆಯರು ಏನಾದರೂ ಬುಧವಾರದ ದಿನದಂದು ತಲೆ ಸ್ನಾನ ಮಾಡಿದರೆ ಅದು ಆಕೆಯ ಸಹೋದರರ ಮೇಲೆ ನೆ’ಗೆ’ಟಿ’ವ್ ಆಗಿ ಪರಿಣಾಮ ಬೀರುತ್ತದೆ ಎಂದು ಶಾಸ್ತ್ರಗಳಲ್ಲಿ ತಿಳಿಸಲಾಗಿದೆ. ಇಂತಹ ಒಂದು ಚಿಕ್ಕ ತಪ್ಪನಿಂದ ಊಹೆಗೂ ಮೀರಿದ ಸಂಕಷ್ಟವನ್ನು ಆಕೆಯ ಸಹೋದರ ಅನುಭವಿಸಬೇಕಾದ ಪರಿಸ್ಥಿತಿ ಬರಬಹುದು.
ನಮ್ಮಲ್ಲಿರುವ ನಂಬಿಕೆಗಳ ಪ್ರಕಾರ ಒಬ್ಬನೇ ಗಂಡು ಮಗನ ತಾಯಿ ಆಗಿರುವವರು ಯಾವುದೇ ಕಾರಣಕ್ಕೂ ಬುಧವಾರದಂದು ತಲೆ ಸ್ನಾನ ಮಾಡಬಾರದು. ಹಾಗೆ ಹೆಣ್ಣು ಮಕ್ಕಳನ್ನು ಪಡೆದಿರುವಂತಹ ತಾಯಿಯರು ಕೂಡ ಬುಧವಾರದಂದು ತಲೆ ಸ್ನಾನ ಮಾಡಬಾರದು. ಹೊಸದಾಗಿ ಮದುವೆ ಆಗಿರುವಂತಹ ವಿವಾಹಿತ ಮಹಿಳೆಯರು ಗಂಡು ಸಂತಾನ ಪಡೆಯಬೇಕು ಎನ್ನುವ ಇಚ್ಛೆ ಇದ್ದರೆ ಬುಧವಾರದಂದು ತಲೆ ಸ್ನಾನ ಮಾಡಬೇಕು.
* ವಿವಾಹಿತ ಮಹಿಳೆಯರು ಗುರುವಾರದಂದು ತಲೆ ಸ್ನಾನ ಮಾಡಿದರೆ ಗಂಡನಿಗೆ ಕ’ಷ್ಟಗಳು ಹೆಚ್ಚಾಗುತ್ತವೆ ಎನ್ನುತ್ತದೆ ಶಾಸ್ತ್ರ. ವಿವಾಹಿತ ಮಹಿಳೆಯರು ಯಾವುದೇ ಕಾರಣಕ್ಕೂ ಮರೆತು ಕೂಡ ಗುರುವಾರದಂದು ತಲೆಕೂದಲು ತೊಳೆದುಕೊಳ್ಳಬಾರದು, ಹಾಗೆ ತಲೆಕೂದಲನ್ನು ಕತ್ತರಿಸಬಾರದು ಮತ್ತು ಉಗುರುಗಳನ್ನು ಕೂಡ ಕತ್ತರಿಸಬಾರದು.
* ಹೆಣ್ಣು ಮಕ್ಕಳು ಭಾನುವಾರ, ಮಂಗಳವಾರ ಹಾಗೂ ಗುರುವಾರ ತಂದು ತಲೆಕೂದಲು ತೊಳೆದುಕೊಳ್ಳುವುದರಿಂದ ಆ ಮನೆಯ ಅದೃಷ್ಟ ಹಾಗೂ ಸಂಪತ್ತು ಕೂಡ ಕರಗುತ್ತದೆ ಹೀಗಾಗಿ ಅಂತಹ ದಿನಗಳಲ್ಲಿ ಯಾವುದೇ ಕಾರಣಕ್ಕೂ ತಲೆ ಸ್ನಾನ ಮಾಡಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿದೆ. ಒಂದು ವೇಳೆ ಅನಿವಾರ್ಯ ಸಂದರ್ಭಗಳಲ್ಲಿ ತಲೆ ಸ್ನಾನ ಮಾಡಲೇಬೇಕಾದ ಪರಿಸ್ಥಿತಿ ಬಂದರೆ ಸ್ಥಾನ ಮಾಡುವ ನೀರಿನ ಒಳಗೆ ಗುಲಾಬಿ ಹೂವಿನ ದಳಗಳನ್ನು ಹಾಕಿ ಸ್ನಾನ ಮಾಡಬೇಕು ಈ ರೀತಿ ಮಾಡುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ.
* ಮಂಗಳವಾರದಂದು ತಲೆ ಸ್ನಾನ ಮಾಡಬೇಕಾದ ಸಂದರ್ಭ ಬಂದರೆ ಹುತ್ತದ ಮಣ್ಣನ್ನು ಸ್ವಲ್ಪ ತೆಗೆದುಕೊಂಡು ತಲೆ ಹಾಗೂ ಮೈಗೆಲ್ಲಾ ಹಚ್ಚಿ ಸ್ನಾನ ಮಾಡುವುದರಿಂದ ಮುಂದೆ ಉಂಟಾಗಬಹುದಾದ ದೋಷಗಳಿಗೆ ನಿವಾರಣೆ ಸಿಗುತ್ತದೆ ಎಂದು ಹೇಳಲಾಗಿದೆ.
* ಒಂದು ವೇಳೆ ಗುರುವಾರ ತಲೆ ಕೂದಲು ತೊಳೆಯಬೇಕಾದ ಸಂದರ್ಭ ಬಂದರೆ ಮಣ್ಣಿನ ಸಮೇತ ಗರಿಕೆ ತೆಗೆದುಕೊಂಡು ಸ್ನಾನ ಮಾಡುವ ನೀರಿಗೆ ಹಾಕಿ ಆ ಮಣ್ಣನ್ನು ಮೆಗೆಲ್ಲಾ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೋಷ ಕಳೆಯುತ್ತದೆ ಎಂದು ಹೇಳಲಾಗಿದೆ.