ಜೀವನದಲ್ಲಿ ಕಷ್ಟಗಳು ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂದು ಊಹಿಸುವುದೇ ಕಷ್ಟ. ಇಂದು ನಾವು ತೆಗೆದುಕೊಂಡ ನಿರ್ಧಾರಗಳು ಇವತ್ತಿನ ಮಟ್ಟಿಗೆ ಸರಿ ಎನ್ನುವ ರೀತಿ ಇದ್ದರೂ ಮುಂದೆ ಒಂದು ದಿನ ಸಮಸ್ಯೆಗಳಾಗಿ ಕಣ್ಣ ಎದುರಿಗೆ ಬರುತ್ತದೆ. ಇದನ್ನು ವಿಧಿಯ ಆಟ ಎಂದು ಒಪ್ಪದೆ ಬೇರೆ ದಾರಿ ಇಲ್ಲ.
ನಮ್ಮ ಹಣೆಯಲ್ಲಿ ಬರೆದಿದ್ದನ್ನು ಹಾಗೂ ನಮ್ಮ ರಾಶಿ ನಕ್ಷತ್ರ ಅನುಸಾರವಾಗಿ ನಡೆಯುವ ಪರಿವರ್ತನೆಗಳನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೂ ಶಾಸ್ತ್ರಗಳಲ್ಲಿ ಎಲ್ಲಾ ಸಮಸ್ಯೆಗಳಿಗೂ ಕೆಲವು ಪರಿಹಾರವನ್ನು ಕೂಡ ಸೂಚಿಸಲಾಗಿದೆ. ಆ ಪ್ರಕಾರವಾಗಿ ಪರಿಹಾರ ಶಾಸ್ತ್ರದಲ್ಲಿ ಆಸ್ತಿ ಸಂಬಂಧಿಸಿದ ಸಮಸ್ಯೆಗಳಿಗೆ ಏನು ತಿಳಿಸಿದ್ದಾರೆ ಎನ್ನುವುದನ್ನು ಈ ಲೇಖನದಲ್ಲಿ ಹಂಚಿಕೊಳ್ಳಲು ಇಚ್ಚಿಸುತ್ತಿದ್ದೇವೆ.
ಇತ್ತೀಚಿನ ದಿನಗಳಲ್ಲಿ ಪರಿಸ್ಥಿತಿ ಹೇಗಾಗಿದೆ ಎಂದರೆ ನೋಡುವುದಕ್ಕೂ ಕೇಳುವುದಕ್ಕೂ ಆಶ್ಚರ್ಯ ಎನಿಸುವಂತೆ ತಂದೆ ಮಕ್ಕಳೇ ಆಸ್ತಿ ವಿಚಾರಕ್ಕಾಗಿ ಕೋರ್ಟು ಕಚೇರಿ ಮೆಟ್ಟಿಲೇರುವಂತೆ ಆಗಿದೆ. ಸಹೋದರ ಸಹೋದರಿಯರು, ಅಣ್ಣ-ತಮ್ಮಂದಿರ ಮಕ್ಕಳು, ಅತ್ತೆ-ಸೊಸೆ, ಗಂಡ-ಹೆಂಡತಿ ಹೇಗೆ ಪ್ರತಿಯೊಬ್ಬರೂ ಕೂಡ ಹಣ ಆಸ್ತಿ ಹಿಂದೆ ಹೊರಟಿದ್ದಾರೆ.
ಕೆಲವೊಮ್ಮೆ ಬೇರೆಯವರಿಂದ ಆಸ್ತಿ ಕಿತ್ತುಕೊಳ್ಳುವುದಕ್ಕಾಗಿ ಈ ಅಸ್ತ್ರ ಬಳಸಿದರೆ ಕೆಲವೊಮ್ಮೆ ಧರ್ಮ ಮಾರ್ಗದಲ್ಲಿ ನಡೆಯುತ್ತಿರುವುದನ್ನು ಸಾಬೀತುಪಡಿಸುವುದಕ್ಕಾಗಿ ಕೋರ್ಟ್ ಮೆಟ್ಟಿಲೇರಬೇಕಾಗುತ್ತದೆ. ನಮ್ಮದಲ್ಲ ತಪ್ಪಿಗೆ ಇಷ್ಟು ಶಿಕ್ಷೆ ಪಡಬೇಕಲ್ಲ ಎನ್ನುವ ದುಃ’ಖವು ಕಾಡದೇ ಇರದು. ಆದರೆ ಇದನ್ನು ಅನುಭವಿಸದೆ ವಿಧಿ ಇಲ್ಲ.
ಯಾಕೆಂದರೆ ನಮ್ಮ ಜಾತಕದಲ್ಲಿ ಮಂಗಳನ ಪ್ರವೇಶ ಆದಾಗ ಇಂತಹ ಪರಿಣಾಮಗಳು ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಭೂಮಿ ಆಸ್ತಿಕ್ಕೆ ಸಂಬಂಧಿಸಿದ ಯೋಗಗಳು ಬರಬೇಕು ಎಂದರು ಅದಕ್ಕೆ ಮಂಗಳನೇ ಕಾರಣ ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಾಜ್ಯ ಅಥವಾ ಕಷ್ಟಗಳಿಗೆ ಸಿಲುಕಬೇಕು ಎಂದರು ಮಂಗಳನು ಕೆಟ್ಟ ಸಮಯದಲ್ಲಿ ರಾಶಿ ಪ್ರವೇಶ ಮಾಡಿರುವುದೇ ಕಾರಣ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಅಲ್ಲದೇ ಒಂದು ತಿಂಗಳು ಮಾತ್ರ ಈ ರೀತಿ ರಾಶಿಯಲ್ಲಿ ಮಂಗಳನ ಸಂಚಾರ ಇರುತ್ತದೆ. ಒಂದೇ ತಿಂಗಳಿಗೆ ಅವರು ಬೇರೊಂದು ಸ್ಥಾನವನ್ನು ಬದಲಾಯಿಸುವುದರಿಂದ ಈ ಸಮಯ ಕಳೆಯುವವರೆಗೂ ತಾಳ್ಮೆಯಿಂದ ಇದ್ದು ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಎಲ್ಲದಕ್ಕೂ ಒಳ್ಳೆಯದು.
ನೀವು ಕೂಡ ಜೀವನದಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ರೀತಿ ನಿಮ್ಮ ಕುಟುಂಬದ ರಕ್ತ ಸಂಬಂಧದ ನಡುವೆ ಹಣ ಆಸ್ತಿ ವಿಷಯದಲ್ಲಿ ಸಮಸ್ಯೆಗೆ ಸಿಲುಕಿದ್ದರೆ ಅಥವಾ ಪರಿಚಯಸ್ಥರು ಬಂಧುಗಳಿಂದ ಹಣ ಆಸ್ತಿ ವಿಚಾರಕ್ಕೆ ನೊಂ’ದು ಹೋಗಿದ್ದರೆ ಮೋ’ಸ ಹೋಗಿದ್ದರೆ ನಿಮ್ಮ ಪಾಲಿನ ಆಸ್ತಿ ನಿಮಗೆ ವಾಪಸ್ ಬರಲು ನಾವು ಹೇಳುವ ಈ ಸರಳ ವಿಧಾನವನ್ನು ಅನುಸರಿಸಿ ಸಾಕು.
ನಿಮ್ಮ ಜಾತಕ ಪರಾಮರ್ಶೆ ಮಾಡಿಸಿ ಮಂಗಳನ ಸ್ಥಾನದ ಬಗ್ಗೆ ಪರಿಶೀಲನೆ ಮಾಡಿಸಿ ನಂತರ ಮಂಗಳನ ಪರಿಹಾರಕ್ಕಾಗಿ ಸೂಚಿಸಲಾಗಿರುವ ಪೂಜೆಗಳನ್ನು ಮಾಡಿ ನವಗ್ರಹಗಳ ಆರಾಧನೆ ಮಾಡುವುದಂತೂ ಎಲ್ಲಕ್ಕಿಂತ ಉತ್ತಮ.
ಯಾಕೆಂದರೆ ನಮ್ಮ ಜೀವನ ನಡೆಯಬೇಕು ಎಂದರೆ ಪಂಚಭೂತಗಳು ಎಷ್ಟು ಮುಖ್ಯವೋ ನವಗ್ರಹಗಳ ಸಂಚಾರ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ ಹಾಗಾಗಿ ಶಾಂತಿಗಾಗಿ ಇಂತಹ ವ್ರತಗಳಲ್ಲಿ ಪಾಲ್ಗೊಂಡು ಸಮಸ್ಯೆಯನ್ನು ಪರಿಹರಿಸಿಕೊಂಡು ಬದುಕಿನಲ್ಲಿ ನೆಮ್ಮದಿ ಹೊಂದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.