ಈಗಿನ ಕಾಲದಲ್ಲಿ ಅನಾರೋಗ್ಯಕ್ಕಿಂತ ಹೆಚ್ಚಾಗಿ ದೇಹದ ಡಿಸ್ ಆರ್ಡರ್ ಗಳೇ ಹೆಚ್ಚು ಎಂದು ಹೇಳಬಹುದು. ಥೈರೆಡ್, BP, ಶುಗರ್ ಈ ರೀತಿ ದೀರ್ಘಕಾಲದವರೆಗೆ ಮೆಡಿಸನ್ ತೆಗೆದುಕೊಳ್ಳಬೇಕಾದ ಸಮಸ್ಯೆಗಳನ್ನು ಕಾಯಿಲೆಗಳು ಎನ್ನುವುದರ ಬದಲು ಡಿಸ್ ಆರ್ಡರ್ ಗಳು ಎಂದು ಹೇಳಬಹುದು. ಇವುಗಳಿಗೆ ನಿರಂತರವಾಗಿ ಮೆಡಿಸನ್ ತೆಗೆದುಕೊಳ್ಳುವುದರಿಂದ ಲಿವರ್ ಹಾಳಾಗುತ್ತದೆ ಆ ಮೂಲಕ ಇನ್ನಷ್ಟು ದೇಹದಲ್ಲಿ ವ್ಯತ್ಯಾಸಗಳು ಉಂಟಾಗುತ್ತವೆ.
ಇದನ್ನು ತಪ್ಪಿಸುವ ಸಲುವಾಗಿ ನ್ಯಾಚುರಲ್ ಆಗಿ ನಾವು ಔಷಧಿ ರಹಿತವಾಗಿ ಸರಿಪಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಯಾವುದೇ ಮೆಡಿಸನ್ ಇಲ್ಲದೆ ಕೇವಲ ಒಂದೇ ತಿಂಗಳಿನಲ್ಲಿ ಉತ್ತಮವಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದರಿಂದ ನೂರಕ್ಕೆ ನೂರರಷ್ಟು ಈ ಕಾಯಿಲೆಯನ್ನು ಗುಣ ಮಾಡಿಕೊಳ್ಳಬಹುದು. ಅದಕ್ಕಾಗಿ ನಿಮ್ಮ ದಿನಚರ್ಯ ಈ ರೀತಿ ಇರಲಿ.
ಬೆಳಗ್ಗೆ ಆದಷ್ಟು ಬೇಗ ಅಂದರೆ ಬ್ರಾಹ್ಮಿ ಮುಹೂರ್ತದಲ್ಲಿ ಸೂರ್ಯೋದಯಕ್ಕಿಂತ ಬೇಗ ಏಳಿ, ಎದ್ದ ಕೂಡಲೇ ನಿತ್ಯ ಕರ್ಮಗಳನ್ನು ಮುಗಿಸಿ ಬೆಚ್ಚಗಿನ ನೀರಿನಲ್ಲಿ ಅರ್ಧ ಹೋಳು ನಿಂಬೆಹಣ್ಣು ಹಾಕಿಕೊಂಡು ಕುಡಿಯಿರಿ. ಇದಾದ ಬಳಿಕ ಮೆಡಿಟೇಶನ್ ಮಾಡಬೇಕು ಮೆಡಿಟೇಶನ್ ಮಾಡಿದಾಗ ನಮ್ಮ ದೇಹದ ಎಲ್ಲಾ ಗ್ರಂಥಿಗಳ ಹಾರ್ಮೋನ್ ಸರ್ವಿಸುವಿಕೆ ಸಲೀಸಾಗಿ ಆಗುತ್ತದೆ.
ಈ ರೀತಿ ಗ್ರಂಥಿಗಳು ಆಕ್ಟಿವೇಟ್ ಆದಾಗ ಆಟೋಮೆಟಿಕ್ ಆಗಿಶದೇಹ ಸರಿಯಾದ ಸ್ಥಿತಿಗೆ ಬರುತ್ತದೆ. ಯೋಗ ಹಾಗೂ ಪ್ರಾಣಾಯಾಮ ಅದರಲ್ಲೂ ಪ್ರಾಣಾಯಾಮದಲ್ಲಿ ಬಸ್ತಿಕ ಪ್ರಾಣಾಯಾಮ, ಕಪಾಲಬಾತಿ ಹಾಗೂ ಅಲೋಮ ವಿಲೋಮವನ್ನು ತಲಾ 40 ರಿಂದ 50 ಬಾರಿ ಮಾಡಿ.
ಬೆಳಗಿನ ಟಿಫನ್ ಮಾಡುವಾಗ ಖಾಲಿ ಹೊಟ್ಟೆಯಲ್ಲಿ ಮೊದಲಿಗೆ ಪ್ರಿ ಬಯೋಟೆಕ್ ತೆಗೆದುಕೊಳ್ಳಬೇಕು ಶುಂಠಿ, ಬೆಳ್ಳುಳ್ಳಿ ಹಾಗೂ ಮೆಂತ್ತೆ ಪ್ರಿ ಬಯೋಟಿಕ್ ಗಳಾಗಿವೆ. ಇದರೊಂದಿಗೆ ಅಗಸೆ ಬೀಜ ಹಾಕಿದ ಮಜ್ಜಿಗೆಯನ್ನು ಕುಡಿಯಬೇಕು. ಬಳಿಕ ಹಸಿವಿದ್ದರೆ ಹಣ್ಣುಗಳ ಸಲಾಡ್ ಸೇವಿಸಬಹುದು ಅದರಲ್ಲೂ ನಾಟಿ ಹಣ್ಣುಗಳ ಸೇವನೆ ಬಹಳ ಉತ್ತಮ ಸಾಧ್ಯವಾದರೆ ಹೊಟ್ಟೆ ತುಂಬ ಇದನ್ನೇ ತಿನ್ನಿ ಆದರೆ ಶುಗರ್ ಇರುವವರು ಬಾಳೆಹಣ್ಣು ಮಾತ್ರ ತಿನ್ನಬಾರದು.
ಇದಾದ ಮೇಲೆ ಅನೇಕರಿಗೆ ಹಸಿವು ಇರುವುದಿಲ್ಲ. ಮಧ್ಯಾಹ್ನದ ಊಟಕ್ಕೂ ಮುನ್ನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿಯಿರಿ. ಮಧ್ಯಾನ್ನದ ಊಟ ಹೇಗಿರಬೇಕು ಎಂದರೆ ತಟ್ಟೆಯಲ್ಲಿ ಅರ್ಧಭಾಗ ಧಾನ್ಯಗಳಾದ ರಾಗಿ ಜೋಳ ಗೋಧಿ ಅಕ್ಕಿ, ಸಿರಿಧಾನ್ಯದಿಂದ ಮಾಡಿದಂತಹ ಆಹಾರ ಪದಾರ್ಥಗಳು ಇರಬೇಕು.
ಆದರೆ ಯಾರು ದೈಹಿಕ ಶ್ರಮ ಉಪಯೋಗಿಸಿ ಕೆಲಸ ಮಾಡುತ್ತಾರೋ ಅವರು ಮಾತ್ರ ಅರ್ಧಕ್ಕಿಂತ ಹೆಚ್ಚು ಭಾಗ ಏಕದಳ ಧಾನ್ಯಗಳಿಂದ ಮಾಡಿದ ಪದಾರ್ಥ ಸೇವಿಸಬೇಕು. ಅವರನ್ನು ಹೊರತುಪಡಿಸಿ ಉಳಿದವರು ಅರ್ಧ ಭಾಗ ಏಕದಳ ಧಾನ್ಯಗಳ ಆಹಾರ ಪದಾರ್ಥ ಉಳಿದ ಭಾಗದಲ್ಲಿ ಸೊಪ್ಪು ತರಕಾರಿ ಮೊಳಕೆ ಕಟ್ಟಿದ ಕಾಳುಗಳು ಹೆಚ್ಚಿನ ಪ್ರಮಾಣದಲ್ಲಿ ಇರಬೇಕು.
ಸಕ್ಕರೆ ಕಾಯಿಲೆ ಇರುವವರು ಏಕದಳ ಧಾನ್ಯಗಳಿಗೆ 25% ಮಾತ್ರ ಜಾಗ ನೀಡಬೇಕು ಸಂಜೆ ಸಮಯ ಸ್ನಾಕ್ಸ್ ಗಾಗಿ ಜಂಕ್ ಫುಡ್ ಗಳನ್ನು ತಿನ್ನುವುದು ಬಿಟ್ಟು ಹಸಿವಿದ್ದರೆ ಮಾತ್ರ ಡ್ರೈ ಫ್ರೂಟ್ಸ್ ಗಳನ್ನು ಸೇವಿಸಬಹುದು. ಆದರೆ ಹಸಿವಿಲ್ಲದೆ ಯಾವುದೇ ಸಮಯದಲ್ಲಿ ಏನನ್ನು ಕೂಡ ಸುಖಾಸುಮ್ಮನೆ ತಿನ್ನಬಾರದು.
ರಾತ್ರಿ ಕೂಡ ಊಟಕ್ಕೂ ಮುನ್ನ ಒಂದು ಲೋಟ ಬೀಟ್ರೂಟ್ ಜ್ಯೂಸ್ ಕುಡಿದು ರಾತ್ರಿ ಸಮಯದಲ್ಲೂ ಕೂಡ ಈ ಮೇಲೆ ತಿಳಿಸಿದ ಆಹಾರ ಪದ್ಧತಿಯನ್ನು ಅನುಸರಿಸುವುದು ಒಳ್ಳೆಯದು ಅದರಲ್ಲೂ ರಾತ್ರಿ ಹೊತ್ತು ಆಹಾರ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿದರೆ ಇನ್ನೂ ಒಳ್ಳೆಯದು.
ಊಟದ ಬದಲು ಬೇಯಿಸಿದ ಜೋಳ ಅಥವಾ ಸಲಾಡ್ ಗಳು ಅಥವಾ ಸೂಪ್ ಇನ್ಯಾವುದೇ ಲೈಟ್ ಫುಡ್ ಗಳನ್ನು ಸೇವಿಸಿದರೆ ಅದು ಉತ್ತಮ. ಆದಷ್ಟು ಸಕ್ಕರೆ ಉಪ್ಪು ಮತ್ತು ಎಣ್ಣೆ ಬಳಕೆಯನ್ನು ಕಡಿಮೆ ಮಾಡಬೇಕು ಹೀಗಿದ್ದಾಗ ನ್ಯಾಚುರಲ್ ಆಗಿ ನೀವು ಸಣ್ಣವಾಗುತ್ತೀರಿ ಮತ್ತು ನಿಮಗಿರುವ ಥೈರಾಯಿಡ್ , BP, ಶುಗರ್, ಡಿಸ್ ಆರ್ಡರ್ ಗಳು ಕಂಟ್ರೋಲ್ ಗೆ ಬರುತ್ತವೆ.