ಹಲ್ಲಿ ಎನ್ನುವುದು ನಮ್ಮ ಹಿಂದುಗಳ ಪಾಲಿಗೆ ಗೋಡೆಯ ಮೇಲೆ ಇರುವ ಜೀವಿ ಮಾತ್ರ ಅಲ್ಲ, ಮನುಷ್ಯನಿಗೆ ಮುಂದೆ ಆಗಬಹುದಾದ ಅಪಾಯಗಳ ಅಥವಾ ಒಳಿತುಗಳ ಸೂಚನೆಯನ್ನು ಮೊದಲೇ ಕೊಟ್ಟು ಶಕುನ ಹೇಳುವ ಪ್ರಾಣಿ ಎಂದೇ ಭಾವಿಸಲಾಗಿದೆ.
ಈಗಲೂ ನಮ್ಮ ಮನೆಯಲ್ಲಿ ಹಿರಿಯರು ಹಲ್ಲಿ ಕಂಡರೆ ಮೈ ಮೇಲೆ ಬೀಳುತ್ತದೆ ಎಂದು ಭ’ಯ ಪಡುತ್ತಾರೆ ಜೊತೆಗೆ ಮಾತನಾಡುವಾಗ ಹಲ್ಲಿ ಲೊಚಗುಟ್ಟುವ ಶಬ್ದ ಕೇಳಿದಾಗ ಅದನ್ನು ಮುಂದುವರಿಸಬೇಕಾ ಬೇಡವ ಎನ್ನುವುದನ್ನು ನಿರ್ಧರಿಸುತ್ತಾರೆ ಎಂದರೆ ನಾವು ಎಷ್ಟು ಅದಕ್ಕೆ ಮಹತ್ವವಾದ ಸ್ಥಾನ ಕೊಟ್ಟಿದ್ದೇವೆ ಎನ್ನುವುದು ಅರ್ಥವಾಗುತ್ತದೆ.
ಯಾವುದಾದರೂ ಶುಭ ಸುದ್ದಿ ಬಗ್ಗೆ ಅಥವಾ ಮುಂದೆ ಮಾಡಬೇಕಾದ ಶುಭ ಕಾರ್ಯಗಳ ಮಧ್ಯೆ ಮಾತನಾಡಿದಾಗ ಹಲ್ಲಿ ಶಬ್ದ ಮಾಡಿದರೆ ಆ ಕಾರ್ಯ ಮಾಡುವುದು ಒಳ್ಳೆಯದು ಎಂದರ್ಥ ಇಷ್ಟು ಮಾತ್ರವಲ್ಲದೆ ಹಲ್ಲಿಯೂ ಯಾರ ಮೈ ಮೇಲೆಯೂ ಸುಮ್ಮನೆ ಬೀಳುವುದಿಲ್ಲ. ಒಂದು ವೇಳೆ ಅಕಸ್ಮಾತ್ ಆಗಿ ನಿಮ್ಮ ಮೈ ಮೇಲೆ ಹಲ್ಲಿ ಬಿದ್ದಿದೆ ಎಂದರೆ ಅದಕ್ಕೂ ಕೂಡ ಒಂದು ಅರ್ಥ ಇರುತ್ತದೆ, ಅದು ಸಹ ಶಕುನ ಎಂದು ಹೇಳಲಾಗುತ್ತದೆ.
ಇದನ್ನು ಎಲ್ಲ ಪಂಚಾಂಗಗಳಲ್ಲೂ ಕೂಡ ತಿಳಿಸಲಾಗಿದ್ದು ಗೌಳಿ ಶಾಸ್ತ್ರದಲ್ಲಿ ಹಲ್ಲಿ ಬಿದ್ದರೆ ಏನು ಶುಭ ಹಾಗು ಅಶುಭ ಫಲಗಳಿವೆ ದೇಹದ ಯಾವ ಭಾಗಕ್ಕೆ ಬಿದ್ದರೆ ಅದು ಯಾವುದರ ಸೂಚನೆ ಮತ್ತು ಹಲ್ಲಿ ಮೈ ಮೇಲೆ ಬಿದ್ದಾಗ ಅದರ ಪರಿಹಾರಕ್ಕಾಗಿ ಏನು ಮಾಡಬೇಕು ಎನ್ನುವುದನ್ನು ತಿಳಿಸಲಾಗಿದೆ. ಇದೇ ಮಾಹಿತಿಯನ್ನು ನಾವು ಇಂದು ಈ ಅಂಕಣದಲ್ಲೂ ಕೂಡ ಹಂಚಿಕೊಳ್ಳುತ್ತಿದ್ದೇವೆ.
ಹಲ್ಲಿ ಏನಾದರೂ ನಿಮ್ಮ ತಲೆಯ ಮೇಲೆ ಬಿದ್ದರೆ ನಿಮಗೆ ಪ್ರಾ’ಣಾ’ಪಾ’ಯ ಇದೆ ಎಂದು ಅರ್ಥ, ನೀವು ಬಹಳ ಎಚ್ಚರಿಕೆಯಿಂದ ಇರಬೇಕು. ನಿಮಗೆ ಅಪಘಾತ ಆಗಬಹುದು ಅಥವಾ ಇನ್ಯಾವುದೇ ರೀತಿಯಲ್ಲಿ ಪ್ರಾಣಕ್ಕೆ ಕಂಟಕ ಬರಬಹುದು. ಒಂದು ವೇಳೆ ಪಲ್ಲಿ ನಿಮ್ಮ ಮುಖದ ಮೇಲೆ ಬಿದ್ದರೆ ನಿಮಗೆ ಯಾವುದಾದರು ಒಂದು ದ್ರವ್ಯ ಒಲಿದು ಬರುತ್ತಿದೆ ಎಂದು ಅರ್ಥ.
ನೀವೇನಾದ್ರೂ ಮಲಗಿರುವಾಗ ಹಲ್ಲಿ ನಿಮ್ಮ ಕಣ್ಣುಗಳ ಮೇಲೆ ಬಿದ್ದು ಓಡಿ ಹೋಗಿದೆ ಎಂದರೆ ನೀವು ಇನ್ನೆಂದು ಕಾಣದ ಐಶ್ವರ್ಯವನ್ನು ಕಾಣುತ್ತೀರಿ, ಅದೃಷ್ಟ ದಿನಗಳು ಆರಂಭವಾಗುವುದರ ಸೂಚನೆ, ನಿಮ್ಮ ತೇಜಸ್ಸು ಹೆಚ್ಚಾಗಿ ನಿಮಗೆ ಎಲ್ಲೆಡೆ ಮಾನ್ಯತೆ ಸಿಗುತ್ತದೆ ಎನ್ನುವುದರ ಸೂಚನೆ ಆದರೆ ಒಂದು ವೇಳೆ ಹಲ್ಲಿಗಳು ನಿಮ್ಮ ತುಟಿಗಳ ಮೇಲೆ ಬಿದ್ದು ಓಡಿ ಹೋದರೆ ಅದು ಅಶುಭ ಫಲ ನೀವು ಕೂಡಿಟ್ಟ ಹಣವು ವ್ಯಯಿಸಿ ಹೋಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಬಲ ಭುಜದ ಮೇಲೆ ಹಲ್ಲಿ ಬಿದ್ದರೆ ಕಳ್ಳ ಕಾಕರಿಂದ ಕೆಡುಕಾಗಬಹುದು, ಅಮೂಲ್ಯವಾದ ವಸ್ತು ಒಂದನ್ನು ಕಳೆದುಕೊಳ್ಳುವ ಭ’ಯ’ದ ಪರಿಸ್ಥಿತಿ ಉಂಟಾಗುತ್ತದೆ. ಎದೆ ಮೇಲೆ ಬಿದ್ದರೂ ಕೂಡ ಯಶಸ್ಸು ಕೀರ್ತಿ ಲಾಭದ ಫಲ ಪ್ರಾಪ್ತಿಯಾಗುವ ಶುಭದ ಸೂಚನೆ. ಹೊಟ್ಟೆಯ ಮೇಲೆ ಬಿದ್ದರೆ ಧಾನ್ಯ ಲಾಭ, ಹೊಕ್ಕಳಿನ ಮೇಲೆ ಬಿದ್ದರೆ ತೀರ್ಥಯಾತ್ರೆ, ದೂರ ಪ್ರಯಾಣದ ಫಲ ಎಡದ ಮೊಣಕಾಲು ಕಾರ್ಯಸಿದ್ಧಿ ಕೈ ಕಾಲುಗಳ ಮೇಲೆ ಬಿದ್ದರೆ ದೂರ ಪ್ರಯಾಣದ ಸೂಚನೆಯಾಗಿದೆ.
ಇದರ ಕುರಿತ ವಿಶೇಷ ಸೂಚನೆ ಏನೆಂದರೆ ಹಲ್ಲಿಯೂ ದೇಹದ ಯಾವುದೇ ಭಾಗದ ಮೇಲೆ ಬಿದ್ದರೂ ಮೊದಲು ಶುದ್ಧವಾಗಿ ಸ್ಥಾನ ಮಾಡಬೇಕು ತಪ್ಪದೇ ಮನೆ ದೇವರಿಗೆ ತುಪ್ಪದ ದೀಪ ಹಚ್ಚಿ. ಒಂದು ವೇಳೆ ಅಶುಭ ಫಲಗಳಾಗಿದ್ದರೆ ಶನೇಶ್ವರನ ದೇವಸ್ಥಾನಕ್ಕೆ ಹೋಗಿ ತಿಲತೈಲಾಭೀಷೇಕ ಪೂಜೆ ಮಾಡಿಸಿ ಅಥವಾ ಎಳ್ಳೆಣ್ಣೆ ಅರ್ಪಿಸಿ ದೀಪ ಹಚ್ಚಿ, ಮತ್ತು ಸಾಧ್ಯವಾದರೆ ಬೆಳ್ಳಿ ಚಿನ್ನ ಅಥವಾ ಪಂಚಲೋಹದಿಂದ ಹಲ್ಲಿ ವಿಗ್ರಹ ಮಾಡಿಸಿ ಫಲ ತಾಂಬೂಲ ಸಹಿತ ಅರ್ಹರಿಗೆ ದಾನ ಮಾಡಿ.