ಅಡುಗೆ ಮನೆಯಲ್ಲಿ ಪಾತ್ರೆಗಳು ಹಾಗೂ ನೆಲ, ಗೋಡೆಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸುವ ನಾವು ಗ್ಯಾಸ್ ಬರ್ನರ್ಗಳ ಶುಚಿತ್ವದ ಕಡೆಗೆ ಗಮನಹರಿಸುವುದಿಲ್ಲ. ಅಡುಗೆ ಮನೆ ಸ್ವಚ್ಛವಾಗಿದ್ದರೆ ಮಾತ್ರ ಅಡುಗೆ ಮಾಡೋಕೆ ಮನಸ್ಸು ಬರುತ್ತದೆ.
ಪಾತ್ರೆ, ಲೋಟಗಳನ್ನು ತೊಳೆದಿಡುವ ನಾವು ಎಷ್ಟೋ ಬಾರಿ ಗ್ಯಾಸ್ ಬರ್ನರ್ಗಳ ಕಡೆಗೆ ಗಮನವಹಿಸಲು ಹೋಗುವುದೇ ಇಲ್ಲ. ಹೀಗಾಗಿ ಗ್ಯಾಸ್ ಬರ್ನರ್ಗಳಲ್ಲಿ ಕೊಳೆ ತುಂಬಿಕೊಂಡು ಬಿಟ್ಟಿರುತ್ತದೆ. ಇನ್ನೂ ಹಲವರಿಗೆ ಗ್ಯಾಸ್ ಬರ್ನರ್ಗಳನ್ನು ಸ್ವಚ್ಛಗೊಳಿಸುವುದು ಕಷ್ಟ ಎಂಬ ತಪ್ಪು ಕಲ್ಪನೆ ಕೂಡ ಇರುತ್ತದೆ.
ಆದರೆ ನಾವು ಇಲ್ಲಿ ಹೇಳಲಾದ ಸಿಂಪಲ್ ಸಲಹೆಗಳನ್ನು ಅಳವಡಿಸಿ ಕೊಂಡರೆ ಗ್ಯಾಸ್ ಬರ್ನರ್ಗಳನ್ನು ಅತ್ಯಂತ ಸುಲಭವಾಗಿ ಸ್ವಚ್ಛಗೊಳಿಸ ಬಹುದಾಗಿದೆ. ಮನೆಯ ಇತರೆ ಭಾಗಗಳನ್ನು ಸ್ವಚ್ಛಗೊಳಿಸುವಂತೆ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕೂಡ ತುಂಬಾನೇ ಮುಖ್ಯವಾಗಿದೆ.
ಈ ಸುದ್ದಿ ಓದಿ:- ಈ ಸೀಕ್ರೆಟ್ ಗೊತ್ತಾದ್ರೆ ಗ್ಯಾಸ್ ಬೇಗ ಖಾಲಿ ಆಗಲ್ಲ 100% ಗ್ಯಾರಂಟಿ.!
ಅಡುಗೆ ಮನೆಯೆಂದರೆ ಕೇವಲ ನೆಲ, ಗೋಡೆ, ಪಾತ್ರೆಗಳನ್ನು ಶುಚಿಗೊಳಿಸುವುದು ಮಾತ್ರವಲ್ಲ. ಗ್ಯಾಸ್ ಸ್ಟವ್ ಗಳ ಮೇಲೆಯೇ ಎಲ್ಲಾ ಆಹಾರಗಳನ್ನು ಬೇಯಿಸುವುದರಿಂದ ಇದನ್ನು ಸ್ವಚ್ಛಗೊಳಿಸುವುದು ಕೂಡ ಮುಖ್ಯವಾಗಿದೆ. ಹಾಗಾಗಿ ರಾತ್ರಿ ಗ್ಯಾಸ್ ಸ್ಟವ್ ಮೇಲೆ ಹಾಗೂ ಬರ್ನರ್ ಗಳನ್ನು ಸಹ ಸ್ವಚ್ಛ ಮಾಡಿಟ್ಟುಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
ಮನೆಯಲ್ಲಿರುವಂತಹ ಮಹಿಳೆ ಯರು ಗ್ಯಾಸ್ ಸ್ಟವ್ ಅನ್ನು ಪ್ರತಿ ಬಾರಿ ಸ್ವಚ್ಛಗೊಳಿಸುತ್ತಿರುತ್ತಾರೆ. ಆದರೆ ಮುಖ್ಯವಾದoತಹ ಕೆಲಸವನ್ನೇ ಮರೆಯುತ್ತಾರೆ ಅದು ಏನೆಂದರೆ ಗ್ಯಾಸ್ ಸ್ಟವ್ ಬರ್ನರ್ ಹೌದು ಇದೇ ಬಹಳ ಪ್ರಮುಖವಾಗಿರುವಂತಹ ವಸ್ತು ಇದನ್ನು ಸ್ವಚ್ಛ ಮಾಡುವುದು ಬಹಳ ಪ್ರಮುಖವಾದಂತಹ ಕೆಲಸವಾಗಿದೆ.
ಆದರೆ ಹೆಚ್ಚಿನ ಜನ ಇದನ್ನು ಕ್ಲೀನ್ ಮಾಡುವುದಕ್ಕೆ ಹೋಗುವುದಿಲ್ಲ ಇದರಿಂದಲೇ ನಿಮ್ಮ ಗ್ಯಾಸ್ ಸ್ಟವ್ ಹೆಚ್ಚಾಗಿ ಖರ್ಚಾಗುತ್ತಿರುತ್ತದೆ ಹಾಗೂ ಗ್ಯಾಸ್ ಸ್ಟವ್ ಹಾಳಾಗುವ ಸಾಧ್ಯತೆಗಳು ಕೂಡ ಇರುತ್ತದೆ. ಆದರೆ ಈ ದಿನ ಸ್ಟವ್ ಬರ್ನರ್ ಏನಾದರೂ ಹಾಳಾಗಿದ್ದರೆ ಅದನ್ನು ಹೇಗೆ ನಮ್ಮ ಮನೆ ಯಲ್ಲಿ ಸ್ವಚ್ಛ ಮಾಡಬಹುದು ಕಡಿಮೆ ಬೆಲೆಯಲ್ಲಿ ಸಿಗುವಂತಹ ಒಂದೇ ಒಂದು ವಸ್ತುವಿನಿಂದ ಹೇಗೆ ಅದನ್ನ ಸ್ವಚ್ಛ ಮಾಡಬಹುದು ಎಂದು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:-ಈ ರೀತಿ ಮಾಡಿ ಚಿಕ್ಕ ಸೊಳ್ಳೆ ಗುಂಗುರು\ನೋಣ ಯಾವುದು ನಿಮ್ಮ ಅಡುಗೆ ಮನೆಯಲ್ಲಿ ಇರಲ್ಲ.!
ಈ ಒಂದು ಸ್ಟವ್ ಅನ್ನು ಸ್ವಚ್ಛ ಮಾಡುವುದಕ್ಕೆ ಹಳೆಯ ಕಾಲದಲ್ಲಿ ಸೀಮೆಎಣ್ಣೆ ಸ್ಟವ್ ಗೆ ಉಪಯೋಗಿಸುತ್ತಿದ್ದಂತಹ ಸಣ್ಣದಾಗಿರುವಂತಹ ಸ್ಟವ್ ಪಿನ್ ಸಿಗುತ್ತಿತ್ತು ಅದು ಈಗಲೂ ಕೂಡ ಕೆಲವೊಂದು ಕಡೆ ಸಿಗುತ್ತದೆ ಅದನ್ನು ತಂದಿಟ್ಟುಕೊಳ್ಳಿ.
ಆನಂತರ ನೀವು ಸ್ಟವ್ ಅನ್ನು ಸರಿ ಮಾಡುವುದಕ್ಕೆ ಮೊದಲು ಗ್ಯಾಸ್ ಆಫ್ ಮಾಡಿ ಆನಂತರ ಅದನ್ನು ಹಿಂದಕ್ಕೆ ತಿರುಗಿಸಬೇಕು ಗ್ಯಾಸ್ ಸಿಲಿಂಡರ್ ನಿಂದ ಬರುವಂತಹ ಅನಿಲವು ಸ್ಟೌ ಬರ್ನರ್ ಬಳಿ ಬರುತ್ತದೆ ಆ ಒಂದು ಸ್ಥಳದಲ್ಲಿ ಹಿಂಭಾಗಕ್ಕೆ ಒಂದು ಸಣ್ಣದಾಗಿರುವಂತಹ ತೂತು ಇರುತ್ತದೆ.
ಆ ಒಂದು ತೂತಿಗೆ ಈ ಒಂದು ಸ್ಟವ್ ಪಿನ್ ಮಾತ್ರ ನುಗ್ಗಲು ಸಾಧ್ಯ. ಅದರ ಸಹಾಯದಿಂದ ಅದನ್ನು ಆ ಒಂದು ತೂತಿನ ಒಳಗಡೆ ಹಾಕಿ ತೆಗೆದು ಹಾಕಿ ತೆಗೆದು ಮಾಡಬೇಕು ಈ ರೀತಿ ಮಾಡುವುದರಿಂದ ಸಣ್ಣ ಹೋಲ್ ಒಳಗಡೆ ಇರುವಂತಹ ಕಸ ಎಲ್ಲ ಆಚೆ ಬರುತ್ತದೆ.
ಈ ಸುದ್ದಿ ಓದಿ:-ಪೂಜೆ ಮಾಡುವಾಗ ಈ ತಪ್ಪು ಮಾಡಬೇಡಿ.!
ಆಗ ಗ್ಯಾಸ್ ಸ್ಟವ್ ಸರಿಯಾಗಿ ಉರಿಯುತ್ತಿಲ್ಲ ಎನ್ನುವಂತಹ ಸಮಸ್ಯೆ ದೂರವಾಗುತ್ತದೆ. ಈ ಒಂದು ವಿಧಾನವನ್ನು ನೀವೇ ನಿಮ್ಮ ಮನೆಯ ಲ್ಲಿಯೇ ಮಾಡಬಹುದು ಹೊರಗಡೆ ಹೋಗಿ ಹಣ ಖರ್ಚು ಮಾಡಿ ರಿಪೇರಿ ಮಾಡಿಸುವ ಸನ್ನಿವೇಶ ಇರುವುದಿಲ್ಲ.