ಈ ದಿನಾಂಕದಲ್ಲಿ ಮದುವೆಯಾದರೆ ಕಷ್ಟ ತಪ್ಪಿದ್ದಲ್ಲ…………||
ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಮದುವೆ ಎನ್ನುವುದು ಬಹಳ ಮಹತ್ತರವಾದಂತಹ ಘಟ್ಟ ಅಥವಾ ಸಮಯ ಎಂದೇ ಹೇಳಬಹುದು. ಕೆಲವೊಂದಷ್ಟು ಜನ ಇದನ್ನು ಎರಡನೇ ಜನ್ಮ ಎಂದು ಸಹ ಹೇಳುತ್ತಾರೆ. ನೀವು ಹುಟ್ಟಿದಂತಹ ದಿನಾಂಕ ನಿಮಗೆ ಎಷ್ಟು ಶುಭಫಲಗಳನ್ನು ಕೊಡುತ್ತದೆಯೋ ಅದೇ ರೀತಿಯಾಗಿ ನೀವು ಮದುವೆಯಾದಂತಹ ದಿನಾಂಕವು ಕೂಡ ನಿಮಗೆ ಅಷ್ಟೇ ಶುಭಫಲಗಳನ್ನು ತಂದುಕೊಡುತ್ತದೆ ಎಂದು ಸಂಖ್ಯಾಶಾಸ್ತ್ರ ತಿಳಿಸುತ್ತದೆ.
ಹಾಗಾಗಿ ಮದುವೆಯ ದಿನಾಂಕ ವನ್ನು ಬಹಳ ಗಮನದಲ್ಲಿಟ್ಟುಕೊಂಡು ಯಾವ ದಿನಾಂಕದಂದು ಮದುವೆಯಾದರೆ ಅದು ನಮಗೆ ಶುಭಫಲವಾಗಿ ಪರಿವರ್ತನೆಯಾಗು ತ್ತದೆ ಹಾಗೂ ಯಾವ ದಿನಾಂಕದಂದು ಮದುವೆಯಾದರೆ ನಮಗೆ ಕಷ್ಟಗಳು ತಪ್ಪಿದ್ದಲ್ಲ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಮುಖ್ಯವಾಗಿರುತ್ತದೆ.
ಕೆಲವೊಂದಷ್ಟು ಜನ ಮದುವೆಯ ದಿನಾಂಕವನ್ನು ಅವರಿಗೆ ಅನುಕೂಲ ವಾಗುವಂತೆ ಇಟ್ಟುಕೊಳ್ಳುತ್ತಾರೆ ಆದರೆ ಯಾವುದೇ ಕಾರಣಕ್ಕೂ ತಾವೇ ಇಂತಹ ಒಂದು ದೊಡ್ಡ ನಿರ್ಧಾರವನ್ನು ಮಾಡಬಾರದು. ಬದಲಿಗೆ ಸಂಖ್ಯಾಶಾಸ್ತ್ರದ ಅನುಗುಣವಾಗಿ ಹಾಗೂ ಕೆಲವೊಂದಷ್ಟು ಜನ ಯಾವುದೇ ಒಂದು ಶುಭ ಸಮಾರಂಭವನ್ನು ಮಾಡುವುದಕ್ಕೂ ಮುನ್ನ ಯಾವ ದಿನಾಂಕ, ಯಾವ ಸಮಯ, ಯಾವ ಘಳಿಗೆ ಮಾಡಬೇಕು ಎಲ್ಲವನ್ನು ಸಹ ಶಾಸ್ತ್ರ ಕೇಳುವುದರ ಮೂಲಕ ದಿನಾಂಕವನ್ನು ಗುರುತಿಸಿ ಕೊಂಡು ಬಂದು ಆ ಒಂದು ದಿನ ಮನೆಯಲ್ಲಿ ಶುಭ ಕಾರ್ಯಕ್ರಮಗಳನ್ನು ಮಾಡುತ್ತಿರುತ್ತಾರೆ.
ಕೆಲವೊಂದಷ್ಟು ಜನ ತಮಗೆ ಅನುಕೂಲ ವಾಗುವಂತೆ ರಾಜಾ ದಿನಗಳು ತಮಗೆ ರಜೆ ಇರುವಂತಹ ದಿನಾಂಕ ದಂದು ಮನೆಯಲ್ಲಿ ಶುಭ ಸಮಾರಂಭ ಮಾಡುತ್ತಿರುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಈ ರೀತಿಯಾಗಿ ಮಾಡಬಾರದು. ಪ್ರತಿಯೊಂದಕ್ಕೂ ಕೂಡ ಉತ್ತಮವಾದಂತಹ ದಿನಾಂಕ ಸಮಯ ಘಳಿಗೆ ಎನ್ನುವುದು ಇರುತ್ತದೆ. ಆ ಒಂದು ಸಂದರ್ಭದಲ್ಲಿ ನಾವು ಆ ಒಂದು ಕಾರ್ಯ ಮಾಡಿದಾಗ ಮಾತ್ರ ನಾವು ಅದರಿಂದ ಅಭಿವೃದ್ಧಿ ಯಶಸ್ಸನ್ನು ಪಡೆಯಬಹುದು.
ಇಲ್ಲದೆ ಇದ್ದರೆ ಆ ಒಂದು ಸಂದರ್ಭದಲ್ಲಿ ಏನೆಲ್ಲಾ ಗ್ರಹಗಳ ಪರಿಸ್ಥಿತಿ ಸರಿಯಾಗಿ ಇರುವುದಿಲ್ಲವೋ ಅವುಗಳ ನಕಾರಾತ್ಮಕ ಶಕ್ತಿ ನಮ್ಮ ಮೇಲೆ ಪರಿಣಾಮ ಬೀರುವುದರ ಮೂಲಕ ನಾವು ದೋಷಕ್ಕೆ ಗುರಿಯಾಗ ಬೇಕಾಗುತ್ತದೆ. ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾವ ದಿನಾಂಕದಂದು ಮದುವೆಯಾಗಬಾರದು ಎಂದು ತಿಳಿಯೋಣ.
* 5, 14, 23 ಇಂತಹ ಒಂದು ಸಂಖ್ಯೆಯಲ್ಲಿ ಬರುವಂತಹ ದಿನಾಂಕ ಗಳಲ್ಲಿ ನೀವು ಯಾವುದೇ ಕಾರಣಕ್ಕೂ ಕೂಡ ಮದುವೆಯಾಗಬೇಡಿ. ಈ ಐದು ಎನ್ನುವಂತಹ ಸಂಖ್ಯೆ ಯಾವುದಾದರು ಒಳ್ಳೆಯ ಬಿಸಿನೆಸ್ ಮಾಡುವುದಕ್ಕೆ ಹೆಚ್ಚಿನ ಅಭಿವೃದ್ಧಿಯನ್ನು ತಂದು ಕೊಡುತ್ತದೆ ಆದರೆ ಮದುವೆ ಶುಭ ಸಮಾರಂಭಕ್ಕೆ ಇದು ಅಷ್ಟು ಸೂಕ್ತವಲ್ಲ.
5, 14, 23 ಇದನ್ನು ನಪುಂಸಕ ಗ್ರಹ ಎಂದು ಕರೆಯುತ್ತಾರೆ. ಇದರಲ್ಲಿ ಯಾವುದೇ ರೀತಿಯ ಅಟ್ರಾಕ್ಷನ್ ಎನ್ನುವುದು ಇರುವುದಿಲ್ಲ ಹಾಗಾಗಿ ಇದು ಅಷ್ಟು ಒಳ್ಳೆಯ ದಿನಾಂಕವಲ್ಲ. ಜನರಿಗೆ ನಿಮ್ಮ ಒಂದು ಜೋಡಿ ಎಷ್ಟೇ ಅದ್ಭುತವಾಗಿ ಕಂಡರೂ ನಿಮ್ಮ ನಡುವಿನ ಬಾಂಧವ್ಯ ಅಷ್ಟು ಉತ್ತಮವಾಗಿ ಇರುವುದಿಲ್ಲ.
* ಅದೇ ರೀತಿಯಾಗಿ A ಹಾಗೂ B ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಕೂಡ ಮದುವೆಯಾಗಬಾರದು. A ಅಂದರೆ 1 B ಅಂದರೆ 8. * ಅದೇ ರೀತಿಯಾಗಿ C ಇಂದ ಬರುವಂತಹ ಹೆಸರು ಹಾಗೆಯೇ V ಇಂದ ಬರುವಂತಹ ಹೆಸರಿನ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಮದುವೆ ಯಾಗಬಾರದು ಇವೆರಡು ಕೂಡ ವಿರುದ್ಧವಾದಂತಹ ಸಂಖ್ಯೆಯಾಗಿ ರುವುದರಿಂದ ನಿಮ್ಮಿಬ್ಬರ ನಡುವೆಯೂ ಕೂಡ ಯಾವುದೇ ರೀತಿಯ ಉತ್ತಮ ಬಾಂಧವ್ಯ ಇರುವುದಿಲ್ಲ.
* ಅದೇ ರೀತಿಯಾಗಿ D ಮತ್ತು B ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಕೂಡ ಮದುವೆಯಾಗಬಾರದು.
* ಹಾಗೂ E ಎನ್ನುವಂತಹ ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಯಾರ ಜೊತೆಯಾದರೂ ಮದುವೆಯಾಗಬಹುದು.
* V ಹಾಗೂ C ಅಕ್ಷರದಿಂದ ಪ್ರಾರಂಭವಾಗುವಂತಹ ವ್ಯಕ್ತಿಗಳು ಕೂಡ ಮದುವೆಯಾಗಬಾರದು.