Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ...

ಸೊಸೆ ಬಗ್ಗೆ ವಿಶೇಷ ಸುದ್ದಿ ಹಂಚಿಕೊಂಡು ಶುಭಾಶಯ ತಿಳಿಸಿದ ನಟ ಜಗ್ಗೇಶ್, ಈ ವಿಚಾರ ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಾ ಇಡೀ ಕರ್ನಾಟಕವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ನವರಸ ನಾಯಕ ಜಗ್ಗೇಶ್ ಕನ್ನಡ ಚಿತ್ರರಂಗದಲ್ಲಿ ಕಾಮಿಡಿಗೆ ಮಾಸ್ಟರ್ ಬ್ರಾಂಡ್. ಕಳೆದ ಎರಡು ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ಇವರು ಮೊದಲು ಸಣ್ಣಪುಟ್ಟ ಪಾತ್ರ ಮಾಡಿಕೊಂಡು ನಂತರ ಖಳನಾಯಕನಾಗಿ ಅಭಿನಯಿಸಿ ಈಗ ಇವರ ತೆರೆ ಮೇಲೆ ಇವರು ಬಂದರೆ ಸಾಕು ಜನ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ಹಾಸ್ಯ ಮಾಡುವ ಹಾಸ್ಯ ಚಕ್ರವರ್ತಿ ಆಗಿದ್ದಾರೆ.

ಜಗ್ಗೇಶ್ ಅವರು ಸಿನಿಮಾ ರಂಗದಲ್ಲಿ ಈ ರೀತಿ ತೊಡಗಿಕೊಂಡಿರುವುದರ ಜೊತೆಗೆ ಆಧ್ಯಾತ್ಮದ ವಿಚಾರದಲ್ಲಿ ಆಸಕ್ತಿ ಹೊಂದಿದ್ದಾರೆ. ಗುರು ರಾಘವೇಂದ್ರ ಪರಮ ಭಕ್ತರಾಗಿರುವ ಇವರು ಪ್ರತಿ ವಿಷಯದಲ್ಲೂ ಅವರನ್ನು ನಡೆಯುತ್ತಾರೆ. ಜೊತೆಗೆ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಪ್ರಮುಖ ತೀರ್ಪುಗಾರರಾಗಿರುವ ಇವರು ಅಲ್ಲಿ ಅವರ ಜೀವನದ ಅನೇಕ ಅನುಭವಗಳನ್ನು ನೆನೆದು ಹಂಚಿಕೊಳ್ಳುತ್ತಾರೆ.

ಇದನ್ನು ಕೇಳುವ ಸಲುವಾಗಿ ವಾರದ ಅಂತ್ಯಕ್ಕಾಗಿ ಕಾಯುವ ಅಭಿಮಾನಿಗಳಿದ್ದಾರೆ ಇದರೊಂದಿಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ಇವರು ಈಗಷ್ಟೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಈಗ ಅವರ ಕುಟುಂಬದ ಮತ್ತೊಬ್ಬ ಸದಸ್ಯರು ಕರ್ನಾಟಕದ ಖ್ಯಾತಿಯನ್ನು ದೇಶದಾದ್ಯಂತ ಮೊಳಗಿಸಲು ಸಜ್ಜಾಗುತ್ತಿದ್ದಾರೆ.

ಗಿಲ್ಲಿ ಸಿನಿಮಾ ಖ್ಯಾತಿಯ ನಟ ಗುರುರಾಜ್ ಅವರು ಜಗ್ಗೇಶ್ ಅವರ ಮೊದಲ ಮಗನಾಗಿದ್ದು, ಇವರು ನೆದರ್ಲ್ಯಾಂಡ್ ಮೂಲದ ವಿದೇಶಿ ಹುಡುಗಿ ಕೇಟಿ ಎನ್ನುವವರನ್ನು ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಅವರ ಪತ್ನಿ ಇಡೀ ಕರ್ನಾಟಕಕ್ಕೆ ಹೆಸರು ತಂದಿದ್ದಾರೆ. ಕರ್ನಾಟಕದ ಮಾಸ್ಟರ್ ಈಜು ಸ್ಪರ್ಧೆಯಲ್ಲಿ ಮೂರು ಬೆಳ್ಳಿ ಹಾಗೂ ಒಂದು ಚಿನ್ನದ ಪದಕ ಗಿಟ್ಟಿಸಿಕೊಂಡಿರುವ ಇವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಈ ಸಂತಸ ವಿಷಯವನ್ನು ಅವರ ಸೊಸೆ ಫೋಟೋ ಜೊತೆ ಹಂಚಿಕೊಂಡು ನಿನಗೆ ಶುಭವಾಗಲಿ ಎಂದು ಜಗ್ಗೇಶ್ ಅವರು ಬರೆದಿದ್ದಾರೆ. instagram ಅಲ್ಲಿ ಬಹಳ ಫಾಲೋವರ್ಸ್ ಗಳನ್ನು ಹೊಂದಿರುವ ಇವರ ಈ ಪೋಸ್ಟನ್ನು ಪೋಸ್ಟಾದ ಕೂಡಲೇ ಸಾವಿರಾರು ಜನ ವೀಕ್ಷಣೆ ಮಾಡಿ ಕಾಮೆಂಟ್ ಮಾಡುವ ಮೂಲಕ ಎಲ್ಲರೂ ಕೂಡ ತಮ್ಮ ಶುಭ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಇರುವ ಜಗ್ಗೇಶ್ ಅವರು ಇನ್ಸ್ಟಾಗ್ರಾಮ್ ಅಲ್ಲಿ ಆಗಾಗ ವಿಶೇಷ ಫೋಟೋಗಳನ್ನು ಹಂಚಿಕೊಂಡು ಅದರ ಕುರಿತಾಗಿ ತಮ್ಮ ನೆನೆಪುಗಳನ್ನು ಹಂಚಿಕೊಳ್ಳುತ್ತಾರೆ. ನೆನ್ನೆ ಕೂಡ ಪುನೀತ್ ಅವರ ಪುಣ್ಯ ಸ್ಮರಣೆಯ ಪ್ರಯುಕ್ತ ಅವರ ಮೊದಲ ಭೇಟಿಯ ದಿನದ ಫೋಟೋ ಹಂಚಿಕೊಂಡು ಪುನೀತ್ ಅವರ ಮೊದಲ ದಿನದ ಭೇಟಿ, ನಂತರ ಅವರ ಜೊತೆಗೆ ಬೆಳೆದ ಒಡನಾಟ ಹಾಗೂ ಅವರ ಕೊನೆ ದಿನದವರೆಗೂ ಇಬ್ಬರ ನಡುವೆ ಇದ್ದ ಬಾಂಧವ್ಯದ ಬಗ್ಗೆ ಸಾಲು ಸಾಲು ಬರಹಗಳನ್ನು ಬಹಳ ನೋವಿನ ಹೃದಯದಿಂದ ಬರೆದಿದ್ದರು.

ಇವರ ಹಿರಿಯ ಮಗ ಗುರುರಾಜ್ ಅವರ ಬಗ್ಗೆ ಹೇಳುವುದಾದರೆ ಅವರು ಗಿಲ್ಲಿ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದರು. ಆದರೆ ಇದಾದ ಬಳಿಕ ಗುರು ಹಾಗೂ ಮತ್ತೆರಡು ಸಿನಿಮಾಗಳಲ್ಲಿ ಅಭಿನಯಿಸಿದ ಇವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಉಳಿಯುವ ಅದೃಷ್ಟ ಇರಲಿಲ್ಲ. ಹೀಗಾಗಿ ತೆರೆ ಹಿಂದೆ ಸರಿದಿರುವ ಇವರು ಹಲವು ವರ್ಷಗಳಿಂದ ಯಾವುದೇ ಸಿನಿಮಾದಲ್ಲೂ ಕೂಡ ಅಭಿನಯಿಸಿಲ್ಲ. ಮತ್ತೆ ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಳ್ಳೊಳ್ಳೆ ಅವಕಾಶಗಳು ಬಂದು ಕುಟುಂಬದ ಖ್ಯಾತಿಯನ್ನು ಅವರು ಬೆಳಗುವಂತೆ ಆಗಲಿ ಎಂದು ಹಾರೈಸೋಣ. ಜಗ್ಗೇಶ್ ಸೊಸೆಯ ಸಾಧನೆ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ಕಾಮೆಂಟ್ ಮಾಡಿ.