ವಿಷ್ಣು ದಾದಾ ಅವರಿಗೆ ಪದ್ಮಶ್ರೀ ಯಾಕೆ ಕೊಡಲಿಲ್ಲ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಜಯಮಾಲಾ ಕೊಟ್ಟ ಬಾಲಿಶ ಉತ್ತರ ಏನು ಗೊತ್ತಾ ಕರ್ನಾಟಕ ತಾಯಿ ಕಂಡ ಈ ನೆಲದ ಶ್ರೇಷ್ಠ ಪುತ್ರರಲ್ಲಿ ಕನ್ನಡ ಚಲನಚಿತ್ರ ರಂಗದ ಮೇರು ನಟ ಅಭಿನಯ ಭಾರ್ಗವ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಅವರು ಕೂಡ ಒಬ್ಬರು.
ಇಡೀ ಕರ್ನಾಟಕದ ಏಳು ಕೋಟಿ ಕನ್ನಡಿಗರ ಆಸ್ತಿ ಅವರು, ಒಬ್ಬ ಸಿನಿಮಾ ಸೂಪರ್ ಸ್ಟಾರ್ ಎನ್ನುವ ಮಾತ್ರಕ್ಕೆ ಅವರಿಗೆ ಅಭಿಮಾನಿಗಳು ಆದವರಿಗಿಂತ ಅವರ ವ್ಯಕ್ತಿತ್ವವನ್ನು ಕಂಡು ಅಭಿಮಾನ ಹೆಚ್ಚಿಸಿಕೊಂಡವರೇ ಹೆಚ್ಚು. ತಮ್ಮ ಇಡೀ ಬದುಕನನ್ನೇ ಒಬ್ಬ ಸಂತನಂತೆ ಕಳೆದ ಈ ಅಭಿನವ ಸಂತ ತೆರೆ ಮೇಲೆ ಕೋಟಿಗೊಬ್ಬನಾಗಿ ವಿಷ್ಣು ದಾದನಾಗಿ ಮೆರೆದು, ಪ್ರೀತಿಯ ಅಭಿಮಾನಿಗಳ ಹೃದಯ ಸಾಹುಕಾರನಾಗಿ ಯಜಮಾನ ಎಂದು ಕರೆಸಿಕೊಂಡಿದ್ದರೂ ವೈಯಕ್ತಿಕ ಬದುಕಿನಲ್ಲಿ ಮಾತ್ರ ದುರಂತ ನಾಯಕನೇ ಸರಿ.
ವಿಷ್ಣುವರ್ಧನ್ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ದಿನದಿಂದಲೂ ಸಹಾ ಅವರಿಗೆ ಕನ್ನಡ ಚಲನಚಿತ್ರ ರಂಗ ಮತ್ತು ಸರ್ಕಾರ ಮತ್ತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಕೊಡಬೇಕಾದ ಗೌರವ ಕೊಟ್ಟಿಲ್ಲ ಎನ್ನುವುದು ನಾನಾ ಘಟನೆಗಳಿಂದ ಸಾಬೀತಾಗಿದೆ. ಅದರಲ್ಲೂ ಕೆಲವು ಉದಾಹರಣೆಗಳನ್ನು ಹೇಳುವುದಾದರೆ ವಿಷ್ಣುವರ್ಧನ್ ಅವರು ತೀರಿಕೊಂಡ ವರ್ಷ ಅಂದರೆ 2019ರಲ್ಲಿ ಕನ್ನಡ ಚಿತ್ರರಂಗ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತದೆ.
ಅರಮನೆ ಮೈದಾನದ ಅಂಗಳದಲ್ಲಿ ಅದ್ದೂರಿಯಾಗಿ ನಡೆಯುತ್ತಿದ್ದ ಆ ಕಾರ್ಯಕ್ರಮದಲ್ಲಿ ಕನ್ನಡದ ಎರಡು ಕಣ್ಣುಗಳಲ್ಲಿ ಒಂದು ಎನಿಸಿಕೊಂಡಿದ್ದ ವಿಷ್ಣುವರ್ಧನ್ ಅವರು ಸಹ ಇರುತ್ತಾರೆ. ಆದರೆ ಕಾರ್ಯಕ್ರಮದ ಉದ್ಘಾಟನೆ ವೇಳೆ ವೇದಿಕೆ ಮೇಲೆ ಯಾರು ಸಹ ಅವರನ್ನು ಆಹ್ವಾನಿಸುವುದಿಲ್ಲ. ಬೇರೆ ಬೇರೆ ಕಲಾವಿದರುಗಳು, ಮುಖ್ಯಮಂತ್ರಿಗಳು ಎಲ್ಲರೂ ಸೇರಿ ಕಾರ್ಯಕ್ರಮ ಮಾಡುತ್ತಿದ್ದರೂ ಏಕಾಂಗಿಯಾಗಿ ವೇದಿಕೆ ಕೆಳಗೆ ದಾದಾ ನಿಂತಿರುತ್ತಾರೆ.
ಅಂದು ಅವರು ಒಂದೇ ಒಂದು ಕರೆ ಕೊಟ್ಟಿದ್ದರು ಇಡೀ ಅವರ ಅಭಿಮಾನಿ ಬಳಗವೇ ಸಿಡಿದೇಳುತ್ತಿತ್ತು. ಆದರೆ ಕಾರ್ಯಕ್ರಮ ಚೆನ್ನಾಗಿ ಆದರೆ ಸಾಕು ಎಂದು ಈ ಹೃದಯವಂತ ನಗುನಗುತ ಮೌನವಾಗಿ ನಿಂತಿದ್ದರು. ಯಾಕೆಂದರೆ ಇದೆಲ್ಲವೂ ಅವರಿಗೆ ಅಭ್ಯಾಸವಾಗಿ ಹೋಗಿತ್ತು. ಇದಕ್ಕಿಂತಲೂ ತೀರ ಕಡಿಮೆಯಾಗಿ ಅವರನ್ನು ನಡೆಸಿಕೊಂಡಿದ್ದಾರೆ. ಅದೇ ವರ್ಷ ವಿಷ್ಣುವರ್ಧನ್ ಅವರು ಕಣ್ಮುಚ್ಚುತ್ತಾರೆ.
ಇಹ ಲೋಕದ ಯಾತ್ರೆ ಮುಗಿಸಿದ ಸಿರಿವಂತ ದೈವ ಮಾನವನಂತೆ ಸ್ವರ್ಗಸ್ತರಾಗುತ್ತಾರೆ. ಮುಂದಿನ ವರ್ಷಗಳಲ್ಲಿ ಅಭಿಮಾನಿಗಳೆಲ್ಲಾ ದಾದನ ಹೆಸರನ್ನು ಯಾಕೆ ಪದ್ಮಶ್ರಿಗೆ ಶಿಫಾರಸ್ಸು ಮಾಡುತ್ತಿಲ್ಲ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸರ್ಕಾರಕ್ಕೆ ಈ ಕುರಿತು ಮನವಿ ಮಾಡಿ ಎಂದು ಕೇಳಲು ಹೋಗುತ್ತಾರೆ. ಆಗ ಅಂದಿನ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಜಯಮಾಲಾ ಅವರು ನಾವು ಇನ್ನೂ ಅವರ ಹೆಸರನ್ನು ಶಿಫಾರಸು ಮಾಡದೆ ಇರುವುದಕ್ಕೆ ಕೊಟ್ಟ ಕಾರಣ ನಮ್ಮ ಬಳಿ ವಿಷ್ಣುವರ್ಧನ್ ಅವರ ಬಯೋಡೇಟಾ ಇಲ್ಲ ಎನ್ನುವುದು.
ಆ ಉತ್ತರ ಕೇಳಿದ ಯಾರಿಗೆ ಆದರೂ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. 200 ಸಿನಿಮಾ ಗಳಲ್ಲಿ ನಟಿಸಿರುವ ನೂರಾರು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಈ ಕಲಾಸರಸ್ವತಿ ಪುತ್ರನ ಬಯೋಡೇಟಾ ಕನ್ನಡ ವಾಣಿಜ್ಯ ಮಂಡಳಿಯಲ್ಲಿ ಇಲ್ಲ ಎಂದರೆ ಅದಕ್ಕೆ ಯಾವ ಅರ್ಥವೂ ಇಲ್ಲ. ಹೀಗೆ ಅವರನ್ನು ಬದುಕನುದ್ದಕ್ಕೂ ಎಲ್ಲರೂ ನೋಯಿಸಿದ್ದಾರೆ ಸ-ತ್ತ ಮೇಲೆ ಸಹ ಅವರ ಸಮಾಧಿ ವಿಚಾರದಲ್ಲೂ ಇದೇ ರೀತಿ ತಕರಾರು ನಡೆಯುತ್ತಿದೆ.
ಅಭಿಮಾನ್ ಸ್ಟುಡಿಯೋದಲ್ಲಿಯೇ ಅವರ ಸ್ಮಾರಕ ಆಗಬೇಕು ಎನ್ನುವುದು ಕುಟುಂಬಸ್ಥರು ಹಾಗೂ ಅಭಿಮಾನಿಗಳ ಇಚ್ಛೆ. ಆದರೆ ಸರ್ಕಾರ ಆ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸದೆ ಬೇರೆ ಕಡೆ ಸ್ಥಳ ಕೊಡುತ್ತೇವೆ, ಸ್ಮಾರಕವನ್ನೇ ಬೇರೆ ಕಡೆ ಶಿಫ್ಟ್ ಮಾಡುತ್ತೇವೆ ಎಂಬಿತ್ಯಾದಿ ವಾಯ್ದೆ ಹೇಳಿಕೊಂಡು ಮುಂದೂಡುತ್ತಲೇ ಇದೆ. ವಿಷ್ಣುವರ್ಧನ್ ಅವರಿಗೆ ಇವರೆಲ್ಲರಿಂದ ಅನ್ಯಾಯ ಆಗಿದ್ದರೂ ಕೂಡ ಅಭಿಮಾನಿಗಳ ಹೃದಯದಲ್ಲಿ ಮಾತ್ರ ಇವರು ಸೂರ್ಯ ಚಂದ್ರ ಇರುವವರೆಗೂ ಈ ಸಾಹುಕಾರ ಶಾಶ್ವತವಾಗಿ ನೆಲೆಸಿರುತ್ತಾರೆ.