ಜಿಯೋ ಜಮಾನದಲ್ಲಿ ದೇಶದಾದ್ಯಂತ ಎಂತಹ ಬದಲಾವಣೆ ಆಯ್ತು ಎಂದು ನಾವೆಲ್ಲ ಕಂಡಿದ್ದೇವೆ. ಜಿಯೋ ನೆಟ್ವರ್ಕ್ ಕೊಟ್ಟ ಉಚಿತ ಕರೆಗಳು ಹಾಗೂ ಉಚಿತ ಇಂಟರ್ನೆಟ್ ಸೌಲಭ್ಯದಿಂದ ದೇಶದಾದ್ಯಂತ ಎಲ್ಲರಿಗೂ ಇಂಟರ್ನೆಟ್ ಸೌಲಭ್ಯ ಕೈಗೆಟುಕುವಂತಾಯ್ತು. ಭಾರತದ ಕಡೆ ಹಳ್ಳಿಯವರೆಗೂ ಕೂಡ ಇಂಟರ್ನೆಟ್ ಸೌಲಭ್ಯವನ್ನು ಒದಗಿಸಿಕೊಟ್ಟ ಖ್ಯಾತಿ ಜಿಯೋ ನೆಟ್ವರ್ಕ್ ಸಿಗಬೇಕು.
ಜಿಯೋ ಮಾಲೀಕ ಕೂಡ ರಿಲಯನ್ಸ್ ಒಡೆತನದ ಮುಖ್ಯಸ್ಥ ಮುಕೇಶ್ ಅಂಬಾನಿಯವರೇ ಆಗಿದ್ದಾರೆ. ಈಗಲೂ ಸಹಾ ಜಿಯೋ ಸಿಮ್ ಎಂದರೆ ಜನ ಮುಗಿಬಿದ್ದು ಖರೀದಿಸುತ್ತಾರೆ. ಅಡೆತಡೆ ಇಲ್ಲದ ನೆಟ್ವರ್ಕ್ ಸೇವೆ ಮತ್ತು ಅಗ್ಗದರದ ಇಂಟರ್ನೆಟ್ ಸೌಲಭ್ಯ ಮತ್ತು ಕರೆ ದರ ಇರುವುದರಿಂದ ಮೊದಲಿನಂತೆ ಸಂಪೂರ್ಣ ಉಚಿತ ಇಲ್ಲದಿದ್ದರೂ ಸಹಾ ಉಳಿದ ನೆಟ್ವರ್ಕ್ಗಳಿಗೆ ಹೋಲಿಸಿದರೆ ಜಿಯೋ ಈಗಲೂ ಜನಮನ ಮೆಚ್ಚಿದ ನಂಬರ್ ಒನ್ ನೆಟ್ವರ್ಕ್.
ಜಿಯೋ ಸಿಮ್ ಆದಮೇಲೆ ಜಿಯೋ ಫೋನ್ ಕೂಡ ಬಂತು, ಕೀಪ್ಯಾಡ್ ಸೆಟ್ ಆಗಿದ್ದ ಜಿಯೋ ಫೋನು ಸಹ ಸಾಕಷ್ಟು ಅನುಕೂಲತೆಯನ್ನು ಮಾಡಿಕೊಟ್ಟಿತು. ಈಗ ಜಿಯೋ ಬೈಕ್ಗಳ ಕಾಲ, ಆದರೆ ಈ ಸುದ್ದಿ ಹೊಸದೇನಲ್ಲ. 2020ರಲ್ಲಿಯೇ ಮುಕೇಶ್ ಅಂಬಾನಿಯವರು ಈ ಒಂದು ಅನೌನ್ಸ್ ಮಾಡಿತ್ತು. ಶೀಘ್ರದಲ್ಲಿಯೇ ಎಲೆಕ್ಟ್ರಿಸಿಟಿ ಆಧಾರಿತ ಜಿಯೋ ಬೈಕ್ ಗಳು, ಜಿಯೋ ಸ್ಕೂಟಿ ಗಳು ಹಾಗೂ ಜಿಯೋ ಕಾರ್ಖಾನೆಗಳು ಆರಂಭವಾಗುತ್ತದೆ ಎನ್ನುವ ಸೂಚನೆ ಕೊಟ್ಟಿತ್ತು.
ಇದೆಲ್ಲಾ ಕಳೆದು ಎರಡು ವರ್ಷಗಳು ಆದರೂ ಸಹ ಇನ್ನು ಜಿಯೋ ವಾಹನಗಳ ಸದ್ದಿಲ್ಲ. ಇದರ ಬದಲಾಗಿ ಉಳಿದ ಕಂಪನಿಗಳ ಎಲೆಕ್ಟ್ರಿಕ್ ಬೈಕ್ ಗಳು, ಸ್ಕೂಟಿ ಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿದ್ದರೂ ಇನ್ನೂ ಸಹ ಜಿಯೋ ಬೈಕ್ ಅಖಾಡಕ್ಕೆ ಇಳಿದಿಲ್ಲ.
ಆದರೆ ಹಿಂದಿನ ಸಿದ್ಧತೆ ಮಾತ್ರ ಭರದಿಂದ ಸಾಗುತ್ತಿದೆ. ಸದ್ಯಕ್ಕೆ ದೇಶದ ಜನತೆಗೆ ಮತ್ತೊಮ್ಮೆ ಜಿಯೋ ಬೈಕ್ ಹಾಗೂ ಜಿಯೋ ಸ್ಕೂಟಿ ಕುರಿತಾದ ಖುಷಿ ಸುದ್ದಿ ಸಿಕ್ಕಿದ್ದು, ಶೀಘ್ರದಲ್ಲಿಯೇ ಈ ಸೇವೆ ಜನರಿಗೆ ಸಿಗುವ ಎಲ್ಲಾ ಸಾಧ್ಯತೆಗಳು ಇವೆ. ನಿಜವಾಗಿಯೂ ಜೀಯೋ ಬೈಕ ರಸ್ತೆ ಮೇಲೆ ಬರುತ್ತದಾ ಎನ್ನುವ ಅನುಮಾನ ಹೊಂದಿದ್ದ ಜನತೆಗೆ ಶಾ’ಕ್ ಆಗುವ ಸುದ್ದಿ ಇದು.
ಎಲೆಕ್ಟ್ರಿಕ್ ಜಿಯೋ ಸ್ಕೂಟಿ ಮತ್ತು ಪೆಟ್ರೋಲ್ ಸ್ಕೂಟಿ ಕೂಡ ತಯಾರಾಗುತ್ತಿರುವ ಬಗ್ಗೆ ಜಿಯೋ ವೆಬ್ಸೈಟ್ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಈ ಮಾಹಿತಿಯ ಪ್ರಕಾರ ಬೇರೆ ಕಂಪನಿಗಳ ಬೆಲೆಗಿಂತ ಜಿಯೋ ಸ್ಕೂಟಿ ಬೆಲೆ ಕಡಿಮೆ ಇರುತ್ತದೆಯಂತೆ. ಎಲೆಕ್ಟ್ರಿಸಿಟಿ ಆಧಾರಿತ ಜಿಯೋ ಸ್ಕೂಟಿ ಬೆಲೆ 14,999 ಹಾಗೂ ಜಿಯೋ ಬೈಕ್ ಬೆಲೆ 17,000 ಇರಬಹುದು ಎನ್ನುವ ಸೂಚನೆ ನೀಡಿದೆ.
ಜಿಯೋ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟವೆಂದರೆ ಒಂದೇ ಚಾರ್ಜಿನಲ್ಲಿ 100 ರಿಂದ 150 km ಓಡುವ ಸಾಮರ್ಥ್ಯ ಹೊಂದಿರುತ್ತದೆ. 4 ಸೆಕೆಂಡಿಗೆ 0.45km ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಸೀಟ್ ಕೆಳಗೆ ಎರಡು ಹೆಲ್ಮೆಟ್ ಇರುವಷ್ಟು ದೊಡ್ಡದಾಗಿದ್ದು, ಉಳಿದ ಫ್ಯೂಚರ್ಗಳು ಕೂಡ ಜನರಿಗೆ ಹತ್ತಿರವಾಗಿವೆ. ಚಾರ್ಜ್ ಇಲ್ಲದೆ ಬೈಕ್ ರಸ್ತೆ ಮಧ್ಯೆ ನಿಂತರೆ ಅನುಕೂಲವಾಗಲಿ ಎನ್ನುವ ಕಾರಣದಿಂದಾಗಿ 5 ಲೀಟರ್ ಪೆಟ್ರೋಲ್ ಹಿಡಿವ ಟ್ಯಾಂಕ್ ವ್ಯವಸ್ಥೆ ಕೂಡ ಮಾಡಲಾಗಿದೆ.
ಎಲೆಕ್ಟ್ರಿಕ್ ಸಿಟಿ ಖಾಲಿಯಾದ ಸಂದರ್ಭದಲ್ಲಿ ಪೆಟ್ರೋಲ್ ಸಹಾಯದಿಂದ ವಾಹನ ಚಲಾಯಿಸಬಹುದು. ಬಣ್ಣಗಳ ಆಯ್ಕೆಯಲ್ಲೂ ಕೂಡ ಜನರಿಗೆ ಇಷ್ಟವಾಗುವಂತೆ ನೀಲಿ, ಕಪ್ಪು, ಬಿಳಿ ಬಣ್ಣದಲ್ಲಿ ಲಭ್ಯವಿದೆ. ಆದರೆ ಬುಕಿಂಗ್ ಮಾಡುವ ಸಮಯದಲ್ಲಿಯೇ ನೀವು ಯಾವ ಬಣ್ಣ ಬೇಕು ಎಂದು ನಿರ್ಧರಿಸಬೇಕು. ಇದರ ಬ್ಯಾಟರಿಯನ್ನು ನಾಲ್ಕು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇಷ್ಟೆಲ್ಲಾ ಅನುಕೂಲತೆ ಇರುವ ಜಿಯೋ ಬೈಕ್ ಆದಷ್ಟು ಬೇಗ ಮಾರುಕಟ್ಟೆಗೆ ಬರಲಿ ಎಂದು ಎಲ್ಲರೂ ಕಾಯುತ್ತಿದ್ದಾರೆ.