ದೇಶದಾದ್ಯಂತ ಇರುವ ಎಲ್ಲ ವಿದ್ಯಾವಂತ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ಏಕೆಂದರೆ ಈ ವರ್ಷ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಜಾರಿಗೆ ಹೊಸ ಬಜೆಟ್ ಹೊರಡಿಸಿದ ಸಮಯದಲ್ಲಿ ಈ ರೀತಿ ಹೇಳಿದ್ದರು. ನಮ್ಮ ದೇಶದಾದ್ಯಂತ ಇರುವ ಎಲ್ಲ ಯುವಕ ಯುವತಿಯರಿಗೂ ಕೂಡ ಉದ್ಯೋಗ ಒದಗಿಸಲಾಗುವುದು. ನಮ್ಮ ದೇಶದ ಸ್ವಾವಲಂಬಿ ಭವಿಷ್ಯವನ್ನು ಸೃಷ್ಟಿಸಲು ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಪ್ರಾರಂಭಿಸಲಾಗುತ್ತಿದೆ.
ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ 4.0 ದಾಖಲಾತಿ ಪ್ರಕ್ರಿಯೆಯು ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು. ಇದು ಆರಂಭವಾದ ನಂತರ ನೀವೆಲ್ಲರೂ ಈ ಯೋಜನೆಯಲ್ಲಿ ನೋಂದಾಯಿಸಿ ಕೊಳ್ಳಬಹುದು. ಮತ್ತು ನಿಮ್ಮ ಕೌಶಲ್ಯದ ಆಧಾರದ ಮೇಲೆ ಯಾವುದೇ ಕ್ಷೇತ್ರದಲ್ಲಿ ಉಚಿತ ತರಬೇತಿಯನ್ನು ಪಡೆಯುವ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು. ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆಯ 4ನೇ ಹಂತದಲ್ಲಿ ಲಕ್ಷಾಂತರ ಯುವಕ ಯುವತಿಯರಿಗೆ ಉಚಿತ ತರಬೇತಿ ನೀಡಲಾಗುವುದು.
ಮತ್ತು ತರಬೇತಿಯ ಸಮಯದಲ್ಲಿ ಜೀವನ, ಆಹಾರ, ಇತರ ವೆಚ್ಚಗಳಿಗಾಗಿ 8000ವರೆಗೆ ಆರ್ಥಿಕ ನೆರವು ನೀಡಲಾಗುವುದು. ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನೀವೆಲ್ಲರೂ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆ 4.0 ಆನ್ಲೈನ್ ಮಾಧ್ಯಮದ ಮೂಲಕ ನೋಂದಣಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಅಡಿ ನೋಂದಣಿ ಆಗಿ ತರಬೇತಿ ಪಡೆದ ಲಕ್ಷಾಂತರ ಯುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ಕಲ್ಪಿಸುವ ಉಚಿತ ತರಬೇತಿ ನೀಡಲಾಗುವುದು.
ಹಾಗೂ ತರಬೇತಿ ಪಡೆದ ನಂತರ ಪ್ರತಿ ಅಭ್ಯರ್ಥಿಗೆ ಸರ್ಕಾರದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ನೀಡಲಾಗುವುದು. ಇದರ ಆಧಾರದ ಮೇಲೆ ನೀವು ಯಾವುದೇ ಕಂಪನಿಯಲ್ಲಿ ಕೆಲಸ ಪಡೆಯಬಹುದು. ಯಾಕೆಂದರೆ ಕೋರ್ಸಿನ ಅನುಸಾರವಾಗಿ ನಿಮ್ಮ ತರಬೇತಿಯ ಪ್ರಮಾಣ ಪತ್ರವನ್ನು ನೀಡಲಾಗಿರುತ್ತದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆಯಲ್ಲಿ ನಿಯಮಗಳಿವೆ ಅದರ ಪ್ರಕಾರ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಅಡಿ ನೋಂದಾಯಿಸಲು ಬಯಸುವ ಎಲ್ಲಾ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು.
ಶಾಲಾ ಮತ್ತು ಕಾಲೇಜು ಕಲಿತ ಅಭ್ಯರ್ಥಿಗಳು ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಭಾರತ ಸರ್ಕಾರದಿಂದ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯ ವಯೋಮಾನವನ್ನು ಕನಿಷ್ಠ 15 ವರ್ಷ ಹಾಗೂ ಗರಿಷ್ಠ 45 ವರ್ಷ ಎಂದು ನಿಗದಿಪಡಿಸಲಾಗಿದೆ. ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಅಡಿಯಲ್ಲಿ ನೋಂದಾಯಿಸಲಾದ ಪ್ರತಿಯೊಬ್ಬ ಅಭ್ಯರ್ಥಿಯು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಜ್ಞಾನವನ್ನು ಹೊಂದಿರಬೇಕು.
ಈ ಯೋಜನೆಗೆ ಯಾವುದೇ ನಿರುದ್ಯೋಗ ಯುವಕ ಯುವತಿ ಅಥವಾ ಆದಾಯ ಮೂಲ ಹೊಂದಿರದ ಯುವಕ ಯುವತಿಯರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆಧಾರ್ ಕಾರ್ಡ್ ಜೊತೆ ಲಿಂಕ್ ಆದ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಬ್ಯಾಂಕ್ ಖಾತೆ ಪಾಸ್ ಪುಸ್ತಕ ಮೊಬೈಲ್ ನಂಬರ್ ಇಮೇಲ್ ಐಡಿ ಅರ್ಹತಾ ಪ್ರಮಾಣ ಪತ್ರ ಮತ್ತು ವಿಳಾಸ ಪುರಾವೆ ಇವು ಅಗತ್ಯ ದಾಖಲೆಗಳಾಗಿವೆ.
ಪ್ರಧಾನ ಮಂತ್ರಿ ಕೌಶಲ್ಯ ವಿಕಾಸನ ಯೋಜನೆಯ ನಾಲ್ಕನೇ ಹಂತದಲ್ಲಿ ನೋಂದಾಯಿಸಲು ಮೊದಲು ನೀವು ಅಧಿಕೃತ ವೆಬ್ಸೈಟ್ ಆದ ಪ್ರಧಾನಮಂತ್ರಿ ಕೌಶಲ್ಯ ವಿಕಾಸನ ಯೋಜನೆ ಗೌರ್ಮೆಂಟ್ ಡಾಟ್ ಇನ್ ವೆಬ್ಸೈಟ್ಗೆ ಭೇಟಿ ಕೊಟ್ಟು ನೋಂದಾಯಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಳ್ಳಿ. ಈ ವಿಚಾರವನ್ನು ಹೆಚ್ಚಿನ ಜನರಿಗೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ.