ಸ-ತ್ತ ಮಗನ ವೀರ್ಯಾ ಬಳಸಿ ಈ ತಾಯಿ ಮಾಡಿದ ಕೆಲಸವೇನು ಗೊತ್ತ.? ವರ್ಷದ ಬಳಿಕ ಬಯಲಿಗೆ ಬಂದ ಸತ್ಯ.!

 

ಒಬ್ಬ ತಾಯಿಯು ತನ್ನ ಮಕ್ಕಳ ಮೇಲೆ ಎಷ್ಟು ಪ್ರೀತಿ ಇಟ್ಟಿರುತ್ತಾಳೆ ಎಂಬುದನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ ತನ್ನ ಮಗುವನ್ನು ಕಾಪಾಡಿಕೊಳ್ಳಲು ಎಂಥ ಸಂದರ್ಭದಲ್ಲಿಯೂ ಆ ತಾಯಿ ಯಾವ ಮಟ್ಟಕ್ಕಾದರೂ ಹೋಗುತ್ತಾಳೆ. ಸಾಮಾನ್ಯವಾಗಿ ಮಗು ತಾಯಿ ಹೊಟ್ಟೆಯಲ್ಲಿ ಬೆಳೆಯುತ್ತಿರುವಾಗಲೇ ತಾಯಿಯು ತನ್ನ ಮಗುವಿನ ಬಗ್ಗೆ ಕನಸು ಕಾಣಲು ಪ್ರಾರಂಭಿಸುತ್ತಾಳೆ. ಮಗುವಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ ದೇಶಕ್ಕೆ ಒಳ್ಳೆಯ ಪ್ರಜೆಯಾಗಿ ಮಾಡಬೇಕು ಎಂಬುದು ಪ್ರತಿಯೊಬ್ಬ ತಾಯಿಯ ಕನಸಾಗಿರುತ್ತದೆ.

ಹಾಗೆಯೆ ಪೂಣೆಯಲ್ಲಿ ವಾಸವಾಗಿದ್ದ ರಾಜಶ್ರೀ ಎಂಬ ತಾಯಿ ಈಕೆಗೆ ಪ್ರಥಮೇಶ್ ಎಂಬ ಒಬ್ಬ ಮಗನಿದ್ದ. ಮಗ ಬೆಳೆಯುತ್ತಿದ್ದಂತೆ ತಾಯಿಯ ಕನಸು ಕೂಡ ದೊಡ್ಡದಾಗಿ ಬೆಳೆಯುತ್ತಿತ್ತು. ಮಗನನ್ನು ಚೆನ್ನಾಗಿ ಓದಿಸಿ ಉತ್ತಮ ಪ್ರಜೆಯಾಗಿ ಮಾಡಬೇಕೆಂಬುದು ಅವಳ ಕನಸಾಗಿತ್ತು ಅವಳ ಕನಸಿನಂತೆ ಪ್ರಥಮೇಶ್ ಪ್ರೌಢ ಶಿಕ್ಷಣ, ಕಾಲೇಜು ಶಿಕ್ಷಣವನ್ನು ಮುಗಿಸಿ ನಂತರ ಉನ್ನತ ಶಿಕ್ಷಣಕ್ಕಾಗಿ ಜರ್ಮನಿ ದೇಶಕ್ಕೆ ಹೋಗುತ್ತಾನೆ. ಪ್ರೀತಿಯ ಕುಟುಂಬ ಒಳ್ಳೆಯ ವಿದ್ಯಾಭ್ಯಾಸ ಪಡೆದ ಮಗ ಹೀಗೆ ರಾಜಶ್ರೀ ಅವರ ಕುಟುಂಬ ತುಂಬಾ ಸಂತೋಷವಾಗಿ ಇತ್ತು.

ಆದರೆ 2013 ಫೆಬ್ರವರಿ ತಿಂಗಳಲ್ಲಿ ಇವರ ಕುಟುಂಬಕ್ಕೆ ಆಗಾಧವಾದ ಒಂದು ಸುದ್ದಿ ಕೇಳಿ ಬರುತ್ತದೆ. ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪ್ರಥಮೇಶ್ ಆರೋಗ್ಯವು 2013ರಲ್ಲಿ ಹಾಳಾಗಿದ್ದು, ಅಲ್ಲಿನ ಒಂದು ದೊಡ್ಡ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡಾಗ ಅಲ್ಲಿನ ವೈದ್ಯರು ಪ್ರಥಮೇಶ್ ಗೆ ಮೂಳೆಯಲ್ಲಿ ಕ್ಯಾನ್ಸರ್ ಗಂಟುಗಳಿದೆ ಎಂದು ತಿಳಿಸುತ್ತಾರೆ. ಇದನ್ನು ತಿಳಿದ ರಾಜಶ್ರೀ ತಕ್ಷಣ ಜರ್ಮನಿಗೆ ಬಂದು ಮಗನನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾಖಲಿಸಿ ಕೀಮಿಯೋತೆರಪಿ ಮಾಡಿಸುತ್ತಾಳೆ.

ಆ ಆಸ್ಪತ್ರೆಯ ನಿಯಮದಂತೆ ಯಾವುದೇ ಒಬ್ಬ ಕ್ಯಾನ್ಸರ್ ಪೀಡಿತ ಪುರುಷರು ಆಸ್ಪತ್ರೆಗೆ ದಾಖಲಾದರೆ ಅವರ ವೀರ್ಯಾಣುವನ್ನು ಹಾಗೂ ಮಹಿಳೆಯಾದರೆ ಅಂಡಾಣುವನ್ನು ಶೇಖರಿಸಿಡುತ್ತಿದ್ದರು. ಏಕೆಂದರೆ ರೋಗಿಯು ಸ.ತ್ತು ಹೋದರೆ ಅವರ ಕುಟುಂಬ ವೃದ್ಧಿಗೆ ಅದು ಸಹಾಯವಾಗಬಹುದು ಎಂದು ಹಾಗೆಯೆ ಪ್ರಥಮೇಶ್ ನ ವೀರ್ಯಾಣುವನ್ನು ಶೇಖರಿಸಿ, ಅವನ ತಾಯಿಯನ್ನು ಕರೆದು ನಿಮ್ಮ ಮಗನಿಗೆ ಕ್ಯಾನ್ಸರ್ ಕೊನೆಯ ಹಂತದಲ್ಲಿದೆ ಆದ್ದರಿಂದ ಆಸ್ಪತ್ರೆಯ ನಿಯಮದನ್ವಯ ಅವನ ವೀರ್ಯಾಣುವನ್ನು ಶೇಖರಿಸಿ ಇಟ್ಟಿದ್ದೇವೆ ಮುಂದೆ ನಿಮಗೆ ಬೇಕಾದರೆ ಪಡೆದುಕೊಳ್ಳಿ ಎಂದರು.

ಮಗನ ಮೇಲೆ ಬಹಳ ಕನಸುಗಳನ್ನು ಹೊಂದಿದ್ದ ರಾಜಶ್ರೀ ವೈದ್ಯರ ಮತ್ತನ್ನು ಕೇಳಿ ತಡೆಯಲಾಗದಷ್ಟು ದುಃಖ ಪಡುತ್ತಾಳೆ. ನಂತರ 2013 ಮೇ ತಿಂಗಳಿನಲ್ಲಿ ಭಾರತಕ್ಕೆ ಮಗನನ್ನು ಕರೆತಂದು ಮುಂಬೈನ ಒಂದು ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮೂಳೆ ಸರ್ಜರಿ ಮಾಡಿಸಿ ಗೆಡ್ಡೆಗಳನ್ನು ತೆಗೆಸಿದ್ದಾರೆ ಇದರಿಂದ ಪ್ರಥಮೇಶ್ ಸ್ವಲ್ಪ ಚೇತರಿಸಿಕೊಳ್ಳುತ್ತಾನೆ ಇದನ್ನು ನೋಡಿದ ಕುಟುಂಬ ಹಾಗೂ ರಾಜಶ್ರೀಯು ತನ್ನ ಮಗ ಮತ್ತೆ ಬದುಕುಳಿದ ಎಂದು ಸಂತೋಷ ಪಡುತ್ತಾರೆ.

ಆದರೆ ವಿಧಿ ಆಟವೇ ಬೇರೆಯಾಗಿತ್ತು. ಮುಂದಿನ ಎರಡು ವರ್ಷಗಳಲ್ಲಿ ಪ್ರಥಮೇಶ್ ಗೆ ಮತ್ತೆ ಕ್ಯಾನ್ಸರ್ ಬಂದು ಕಣ್ಣು ಕಾಣದಂತಾಗಿ ದೇಹ ಸ್ಥಿತಿ ದಿನೇ ದಿನೇ ಕ್ಷೀಣಿಸುತಿತ್ತು. ಇವನನ್ನು ಕಾಪಾಡಲು ಎಷ್ಟೇ ಪ್ರಯತ್ನ ಪಟ್ಟರು ಚಿಕಿತ್ಸೆ ಫಲಕಾರಿಯಾಗಿದೆ ಮೂರು ವರ್ಷಗಳ ಬಳಿಕ ಕೊನೆಗೆ ಸಾ.ವ.ನಪ್ಪುತ್ತಾನೆ. ಮಗನ ಮ.ರ.ಣದಿಂದ ತಾಯಿಯು ಹತಾಶಳಾಗಿ ತುಂಬಾ ಕಣ್ಣೀರು ಹಾಕುತ್ತಾಳೆ ತಕ್ಷಣ ಜರ್ಮನಿ ಆಸ್ಪತ್ರೆಯಲ್ಲಿ ತನ್ನ ಮಗನ ವೀರ್ಯಾಣವನ್ನು ಶೇಖರಿಸಿಟ್ಟಿರುವುದನ್ನು ನೆನಪಿಸಿಕೊಂಡು ಅದು ಆಕ್ಟಿವ್ ಇದೆಯಾ ಎಂದು ತಿಳಿದುಕೊಂಡು ಅಲ್ಲಿನ ಸರ್ಕಾರದಿಂದ ಬಹಳ ಹಣವನ್ನು ಖರ್ಚು ಮಾಡಿ ವೀರ್ಯಾಣುವನ್ನು ತರಿಸಿಕೊಳ್ಳುತ್ತಾಳೆ.

ಬಾಡಿಗೆ ತಾಯಿಯ ಆ ವೀರ್ಯಾಣುವನ್ನು ಬಳಸಿ ಮೊಮ್ಮಕ್ಕಳನ್ನು ಮಾಡಿಕೊಳ್ಳಲು ರಾಜಶ್ರೀ ತೀರ್ಮಾನ ಮಾಡಿ ಬಾಡಿಗೆ ತಾಯಿಗೋಸ್ಕರ ಬಹಳಷ್ಟು ಜನರನ್ನು ಕೇಳಿಕೊಂಡರೂ ಯಾರೊಬ್ಬರೂ ಕ್ಯಾನ್ಸರ್ ನಿಂದ ಸತ್ತ ಒಬ್ಬ ವ್ಯಕ್ತಿ ವೀರ್ಯಾಣುವನ್ನು ಹಾಕಿಸಿಕೊಳ್ಳಲು ಒಪ್ಪಲಿಲ್ಲ. ಕೊನೆಗೆ ರಾಜಶ್ರೀಯ ಕುಟುಂಬದ ಒಬ್ಬ ಹೆಣ್ಣು ಮಗಳು ಪ್ರಥಮೇಶ್ ವಿರ್ಯಾಣುವನ್ನು ಹಾಕಿಸಿಕೊಳ್ಳಲು ಒಪ್ಪಿಕೊಳ್ಳುತ್ತಾರೆ 9 ತಿಂಗಳ ಬಳಿಕ ಅವಳು ಒಂದು ಗಂಡು ಒಂದು ಹೆಣ್ಣು ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದಾರೆ.

ರಾಜಶ್ರೀ ಬಹಳ ಸಂತೋಷ ಪಟ್ಟು ಗಂಡು ಮಗುವಿಗೆ ಪ್ರಥಮೇಶ್, ಹೆಣ್ಣು ಮಗುವಿಗೆ ತ್ರಿಷಾ ಎಂದು ಹೆಸರಿಡುತ್ತಾಳೆ. ತನ್ನ ಮಗನನ್ನು ನಾನು ಮತ್ತೆ ಭೂಮಿಗೆ ಕರೆತಂದೆ ಎಂದು ರಾಜಶ್ರೀ ಕಣ್ಣೀರಿಡುತ್ತಾ ಸಂತೋಷದಿಂದ ದೇವರಿಗೆ ಧನ್ಯವಾದ ತಿಳಿಸಿದಳು. ಹೀಗೆ ಒಬ್ಬಳು ತಾಯಿ ತನ್ನ ಮಗ ಸತ್ತ ನಂತರ ಅವನ ವೀರ್ಯಾಣುವಿನಿಂದ ಮೊಮ್ಮಕ್ಕಳನ್ನು ಪಡೆದಿದ್ದಾಳೆ. ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ ಮತ್ತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment