ಕಳೆದ ನಾಲ್ಕು ವರ್ಷದ ಹಿಂದೆ ತೆರೆಕಂಡಂತಹ ಜೊತೆ ಜೊತೆಯಲಿ ಧಾರಾವಾಹಿ ಕಿರಿತರ ಲೋಕದಲ್ಲಿ ಒಂದು ಸಂಚಲನವನ್ನೇ ಸೃಷ್ಟಿ ಮಾಡಿದ್ದು ಧಾರಾವಾಹಿ ಅಂದರೆ ಹೇಗಿರಬೇಕು ಎನ್ನುವುದನ್ನು ಎತ್ತಿ ತೋರಿಸಿತು. ಒಂದು ರೀತಿಯಲ್ಲಿ ಹೇಳಬೇಕಾದರೆ ಜೊತೆಯಲ್ಲಿ ಧಾರವಾಹಿ ಬಂದ ನಂತರವಷ್ಟೇ ಕಿರುತೆರೆಗೆ ಒಂದು ಸ್ಥಾನ ಮಾನ ಬೆಲೆ ಎಂಬುದು ದೊರೆತದ್ದು. ಏಕೆಂದರೆ ಇಲ್ಲಿಯವರೆಗೂ ಕೂಡ ಯಾವುದೇ ಧಾರವಾಹಿಯು ಕೂಡ ಇಷ್ಟು ಅದ್ದೂರಿಯಾಗಿ ಮೇಕಿಂಗ್ ಮಾಡಿರಲಿಲ್ಲ ಇದೇ ಮೊದಲ ಬಾರಿಗೆ ಎಲ್ಲಾ ರೀತಿಯಾದಂತಹ ಅದ್ದೂರಿ ತನವನ್ನು ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ತೋರಿಸಿಕೊಟ್ಟರು. ಇನ್ನು ಈ ಒಂದು ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಂತಹ ಅನಿರುದ್ಧವರು ಆರ್ಯವರ್ಧನ್ ಎಂಬ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು.
ಅಷ್ಟೇ ಅಲ್ಲದೆ ಈ ಒಂದು ಧಾರಾವಾಹಿಗೆ ರಿಯಲ್ ಹೀರೋ ಮತ್ತು ಮುಖ್ಯ ಕಥೆಗಾರ ಪಾತ್ರಗಾರ ಅಂದರೆ ಅದು ಅನಿರುಧ್ ಅಂತಾನೇ ಹೇಳಬಹುದು. ಅನಿರುಧ್ ಅವರಿಗೆ ಬೆಳ್ಳಿತೆರೆಯಲಿ ಯಾವುದೇ ರೀತಿಯಾದಂತಹ ಯಶಸ್ಸು ಮತ್ತು ಬೇಡಿಕೆ ಇಲ್ಲದೆ ಮನೆಯಲ್ಲಿ ಕುಳಿತಿದಂತಹ ಸಂದರ್ಭದಲ್ಲಿ ಕೈಬೀಸಿ ಕರೆದದ್ದು ಕಿರುತೆರೆ. ಈ ಒಂದು ಧಾರಾವಾಹಿಯಿಂದ ಅನಿರುಧ್ ಅವರ ಬದುಕೆ ಬದಲಾಯಿತು ಅಂತ ಹೇಳಬಹುದು ಇದೊಂದು ಟರ್ನಿಂಗ್ ಪಾಯಿಂಟ್. ಕಿರುತೆರೆಯಲ್ಲಿ ನಟನೆ ಮಾಡುವುದರ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಅನಿರುಧ್ ಅವರು ಪಡೆದುಕೊಂಡರು ಈ ಧಾರಾವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡರು.
ಇನ್ನು ಸಾಕಷ್ಟು ಜನ ಅನಿರುಧ್ ಅವರಿಗಾಗಿ ಈ ಧಾರವಾಹಿ ನೋಡುತ್ತಿದ್ದರು ಎಂಬುವುದು ಕೂಡ ಅಷ್ಟೇ ಸತ್ಯ ಆದರೆ ಕಳೆದ ಎರಡು ದಿನದಿಂದ ಅನಿರುಧ್ ಅವರ ಬಗ್ಗೆ ಸಾಕಷ್ಟು ವದಂತಿಗಳು ಕೇಳಿ ಬರುತ್ತಿದೆ. ಧಾರವಾಹಿ ಟೆಕ್ನಿಕಲ್ ಟೀಮ್ ನೊಂದಿಗೆ ಕಿರಿಕ್ ಮಾಡಿಕೊಂಡು ಧಾರಾವಾಹಿಯಿಂದ ಹೊರ ನಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ಅನಿರುಧ್ ಮತ್ತು ಜೊತೆ ಜೊತೆಯಲಿ ಧಾರಾವಾಹಿ ನಿರ್ಮಾಪಕ ಹಾಗೂ ನಿರ್ದೇಶಕ ಆರೋರು ಜಗದೀಶ್ ಅವರು ಕೂಡ ಪತ್ರಿಕ ಮಾಧ್ಯಮದಲ್ಲಿ ಸುದ್ದಿ ಘೋಷ್ಟಿಯನ್ನು ನಡೆಸಿದ್ದಾರೆ. ಅನಿರುಧ್ ಅವರು ಸದಾ ಕಾಲ ಕಿರಿಕ್ ಮಾಡುತ್ತಿದ್ದರು ಅಷ್ಟೇ ಅಲ್ಲದೆ ಅವರನ್ನು ನಿಭಾಯಿಸುವುದು ನಮಗೆ ಬಹಳನೇ ಕಷ್ಟವಾಗುತ್ತಿತ್ತು.
ಇದಕ್ಕಿದ್ದ ಹಾಗೆ ಕೋಪಗೊಳ್ಳುವುದು ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಿ ಹೋಗುವುದು ಇಂತಹ ಕೆಲಸವನ್ನು ಮಾಡುತ್ತಿದ್ದರು ಇವೆಲ್ಲದರಿಂದ ನಮಗೆ ಬಹಳ ಬೇಸರವಾಗಿದೆ. ಅಷ್ಟೇ ಅಲ್ಲದೆ ನಮ್ಮನ್ನು ಮೂರ್ಖರು ಎಂದು ಬೈತಿದ್ದಾರೆ ಹಾಗಾಗಿ ನಾವು ಅನಿರುಧ್ ಅವರನ್ನು ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹೊರ ಹಾಕಿದ್ದೇವೆ ಕಿರುತೆರೆಯಿಂದ ಎರಡು ವರ್ಷ ಬ್ಯಾನ್ ಮಾಡಿದ್ದೇವೆ ಎಂಬ ಅಧಿಕೃತ ಮಾಹಿತಿಯನ್ನು ತಿಳಿಸಿದರು. ಇವೆಲ್ಲ ಒಂದು ಕಡೆಯಾದರೆ ಇದೀಗ ಮತ್ತೊಂದು ಕಡೆ ಅಭಿಮಾನಿಗಳಲ್ಲಿ ಆತಂಕ ಮತ್ತು ಅನುಮಾನ ಎರಡು ಕೂಡ ಸೃಷ್ಟಿಯಾಗಿದೆ. ಏಕೆಂದರೆ ಅನಿರುಧ್ ಪಾತ್ರವನ್ನು ಇನ್ನು ಮುಂದೆ ಯಾರು ಮಾಡಲಿದ್ದಾರೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮನೆ ಮಾಡಿದೆ ಆರ್ಯವರ್ಧನ್ ಅವರ ಪಾತ್ರವನ್ನು ಇನ್ನು ಮುಂದೆ ಯಾರು ನಿಭಾಯಿಸಿಕೊಂಡು ಹೋಗುತ್ತಾರೆ ಎಂಬುದೇ ಇದೀಗ ಒಂದು ಮೇಘ ಟ್ವಿಸ್ಟ್ ಆಗಿದೆ.
ಈಗಾಗಲೇ ಅನಿರುಧ್ ಅವರು ಧಾರವಾಹಿ ತಂಡದಿಂದ ಹೊರ ಬಂದಿರುವುದು ಸತ್ಯ ಹಾಗಾಗಿ ಈ ಒಂದು ಜಾಗಕ್ಕೆ ಬೇರೊಬ್ಬ ನಟನನ್ನು ಆಯ್ಕೆ ಮಾಡಬೇಕು ಎಂದು ಜೊತೆ ಜೊತೆಯಲಿ ಧಾರಾವಾಹಿ ತಂಡ ನಿರ್ಧರಿಸಿದ್ದಾರೆ. ಈಗಾಗಲೇ ಸಾಕಷ್ಟು ಹೆಸರನ್ನು ಸೂಚಿಸಿದೆ ಆರ್ಯವರ್ಧನ್ ಪಾತ್ರಕ್ಕೆ ಕೆಲವು ನಟರ ಹೆಸರು ಕೇಳಿ ಬರುತ್ತಿವೆ. ಮೊದಲನೇಯದಾಗಿ ನಟ ವಿಜಯ್ ರಾಘವೇಂದ್ರ ಅವರ ಹೆಸರು ಕೇಳಿ ಬರುತ್ತಿವೆ. ಎರಡನೇಯದಾಗಿ ಇನ್ನು ಅಶ್ವಿನಿ ನಕ್ಷತ್ರ ಸೀರಿಯಲ್ನಲ್ಲಿ ಜನಪ್ರಿಯರಾಗಿರುವ ಜೆ.ಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ಇತ್ತೀಚಿಗೆ ಹಿಂದಿ ಸೀರಿಯಲ್ ಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರ ಖಡಕ್ ಲುಕ್, ಆರ್ಯವರ್ಧನ್ ಪಾತ್ರಕ್ಕೆ ಸೂಕ್ತವಾಗಿರುತ್ತದೆ. ಹೀಗಾಗಿ ಜೆ.ಕೆಯನ್ನು ಆಯ್ಕೆ ಮಾಡಬಹುದು ಎನ್ನಲಾಗುತ್ತಿದೆ.
ಮೂರನೇಯದಾಗಿ ನಟ ಹರೀಶ್ ರಾಜ್ ಹೆಸರು ಕೇಳಿ ಬರುತ್ತಿದೆ. ಅನೇಕ ಸೀರಿಯಲ್ ಗಳನ್ನು ಮಾಡಿ, ಬಳಿಕ ಸಿನಿಮಾಗಳಲ್ಲೂ ನಟಿಸಿ ಹರೀಶ್ ರಾಜ್ ಜನಪ್ರಿಯರಾಗಿದ್ದಾರೆ. ಅವರು ಕೂಡ ಈ ಪಾತ್ರಕ್ಕೆ ಆಯ್ಕೆ ಸೂಕ್ತರು ಎನ್ನಲಾಗುತ್ತಿದೆ. ಇನ್ನು ನಾಲ್ಕನೇಯದಾಗಿ ಹಿಟ್ಲರ್ ಕಲ್ಯಾಣದಲ್ಲಿ ನಟಿಸುತ್ತಿರುವ ದಿಲೀಪ್ ರಾಜ್. ಆರ್ಯವರ್ಧನ್ ಖಡಕ ಲುಕ್ಗೆ ದಿಲೀಪ್ ರಾಜ್ ಅವರೆ ಎನ್ನುವ ಅಭಿಪ್ರಾಯವು ಕೆಲವರಿಗಿದೆ. ಆದರೆ ಈ ಕುರಿತು ನಿರ್ದೇಶಕ ಆರೂರು ಜಗದೀಶ್ ಸ್ಪಷ್ಟನೆ ನೀಡಿಲ್ಲ. ಜೊತೆಗೆ ಧಾರಾವಾಹಿ ತಂಡದಿಂದ ಯಾವುದೇ ಮಾಹಿತಿ ಅಧಿಕೃತವಾಗಿ ಹೊರ ಬಿದ್ದಿಲ್ಲ. ನಿಮ್ಮ ಪ್ರಕಾರ ಈ ನಾಲ್ಕು ನಟರಲ್ಲಿ ಯಾರು ಆರ್ಯವರ್ಧನ್ ಪಾತ್ರವನ್ನು ನಿಭಾಯಿಸಬಲ್ಲರು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ಒಂದು ವೇಳೆ ಆರ್ಯವರ್ಧನ್ ಪಾತ್ರದಲ್ಲಿ ಅನಿರುಧ್ ಅವರೆ ಮುಂದುವರೆಯುವುದು ನಿಮ್ಮ ಇಚ್ಛೆ ಆಗಿದ್ದರೆ ಅವರ ಹೆಸರನ್ನು ಕೂಡ ಕಾಮೆಂಟ್ ಮಾಡಬಹುದು.