ಆಂಜನೇಯ ಸ್ವಾಮಿ ಹಿಂದೂಗಳ ಪಾಲಿನ ನಂಬಿಕೆಯ ದೇವರು. ಶಕ್ತಿಗೆ, ಯುಕ್ತಿಗೆ ಧೈರ್ಯಕ್ಕೆ, ಸಾಹಸಕ್ಕೆ, ಭಕ್ತಿ ಹಾಗೂ ನಿಸ್ವಾರ್ಥಕ್ಕೆ ಹೆಸರುವಾಸಿ ಆಗಿರುವ ಆಂಜನೇಯನನ್ನು ಮಾರುತಿ, ಹನುಮಂತ, ವಾಯುಪುತ್ರ, ಅಂಜನಿಪುತ್ರ, ಪಾವಮಾನ ಇನ್ನೂ ಅನೇಕ ಹೆಸರುಗಳಿಂದ ಕರೆಯುತ್ತಾರೆ.
ಚಿರಂಜೀವಿಗಳಲ್ಲಿ ಒಬ್ಬರು ಎನಿಸಿಕೊಂಡಿರುವ ಆಂಜನೇಯ ದೇವರು ಇನ್ನೂ ಕೂಡ ಹಿಮಾಲಯದ ಗಂಧ ಮಾದರ ಪರ್ವತದಲ್ಲಿ ನೆಲೆಸಿದ್ದಾರೆ ಎನ್ನುವುದು ಭಕ್ತಾದಿಗಳ ನಂಬಿಕೆ. ಕಲಿಯುಗದಲ್ಲಿ ಭಕ್ತರ ಕೋರಿಕೆಗಳಿಗೆ ತಕ್ಷಣ ಒಲಿಯುವ ದೇವರು ಎಂದರೆ ಆಂಜನೇಯ. ಈ ಆಂಜನೇಯನನ್ನು ನಂಬಿದರೆ ಅವರ ಕಷ್ಟಗಳು ಪರಿಹಾರ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.
ಹಾಗಾಗಿ ಪ್ರತಿ ಮನೆ ಮನೆಗಳಲ್ಲೂ ಆಂಜನೇಯನನ್ನು ಪೂಜಿಸುತ್ತಾರೆ ಹಾಗೂ ಪ್ರತಿ ಗ್ರಾಮದಲ್ಲಿಯೂ ಆಂಜನೇಯನ ದೇಗುಲ ಇರುತ್ತದೆ. ಕಲಿಯುಗದಲ್ಲಿ ಮನುಷ್ಯರಿಗೆ ಕಾಡುವ ಅನೇಕ ಸಮಸ್ಯೆಗಳ ಪೈಕಿ ಸಾಲ ಬಾಧೆಯೂ ಕೂಡ ಉಂಟು. ಮನುಷ್ಯನು ಅನೇಕ ಕಾರಣಗಳಾಗಿ ಮತ್ತೊಬ್ಬರ ಬಳಿ ಸಾಲ ಮಾಡುವ ಪರಿಸ್ಥಿತಿ ಬರುತ್ತದೆ.
ಬ್ಯಾಂಕ್ ಅಥವಾ ಸರ್ಕಾರಿ ಸಂಸ್ಥೆಗಳಲ್ಲಿ ಪಡೆದ ಸಾಲವೇ ಆಗಿದ್ದರೂ ಬಳಿಕ ಅದನ್ನು ತೀರಿಸುವುದು ಬಹಳ ಸಮಸ್ಯೆ ವಿಚಾರ. ಒಂದುವೇಳೆ ನಾವಂದುಕೊಂಡಂತೆ ಯೋಜನೆ ನಡೆಯದಿದ್ದರೆ ಅತಿ ದೊಡ್ಡ ಸಾಲದ ಸುಳಿಯಲ್ಲಿ ನಾವು ಸಿಲುಕಿ ಕೊಳ್ಳುತ್ತೇವೆ. ಅದರಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಲು ಭಗವಂತನ ಮೊರೆ ಹೋಗಲೇಬೇಕು.
ಈ ರೀತಿ ಸಾಲದ ಸಮಸ್ಯೆಯಿಂದ ಬಳಲುತ್ತಿರುವುದು ಆಂಜನೇಯನ ಬಳಿ ಭಕ್ತಿಯಿಂದ ಈ ವಿಧಾನದಲ್ಲಿ ಬೇಡಿಕೊಂಡರೆ ಸಾಕ್ಷಾತ್ ಆಂಜನೇಯ ಸ್ವಾಮಿಯೇ ಬಂದು ನಿಮ್ಮ ಸಾಲವನ್ನು ತೀರಿಸಿದ ರೀತಿ ಪವಾಡಗಳು ನಡೆದು ನಿಮ್ಮ ಬದುಕಿನಲ್ಲಿ ಒಳ್ಳೆಯದಾಗಿ ಸಾಲ ತೀರುತ್ತದೆ.
ನೀವು ವಿಶೇಷವಾಗಿ ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಬೇಕು ಅಷ್ಟೇ, ಅದು ಕೂಡ ಬಹಳ ಸರಳ ವಿಧಾನದಲ್ಲಿ. ನೀವು ಮಂಗಳವಾರದ ಅಥವಾ ಶನಿವಾರದಂದು ಇದನ್ನು ಮಾಡಬಹುದು. ಶನಿವಾರ ಪೂಜಿಸಿದರೆ ಇನ್ನು ವಿಶೇಷ ಫಲ ಸಿಗುತ್ತದೆ. ಶನಿವಾರದ ದಿನ ಮನೆಯನ್ನು ಸ್ವಚ್ಛ ಮಾಡಿ ಆಂಜನೇಯ ಫೋಟೋ ಅಥವಾ ವಿಗ್ರಹದ ಮುಂದೆ ಕುಳಿತು ಮಲ್ಲಿಗೆ ಎಣ್ಣೆ ದೀಪವನ್ನು ಹಚ್ಚಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಆಂಜನೇಯನ ಕೃಪೆಗಾಗಿ ಪ್ರಾರ್ಥಿಸಬೇಕು.
ಗೃಹಲಕ್ಷ್ಮಿ ಯೋಜನೆ ಹಣ ಆಗಸ್ಟ್ 2 ಸಿಗಲ್ಲ ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಮತ್ತೊಂದು ಹೊಸ ನಿರ್ಧಾರ ಕೈಗೊಂಡ ಸರ್ಕಾರ.!
ನಂತರ 11 ವೀಳ್ಯದೆಲೆ ಹಾಗೂ 11 ಅಡಿಕೆಯನ್ನು ತೆಗೆದುಕೊಳ್ಳಬೇಕು ಪ್ರತಿ ವೀಳ್ಯದೆಲೆ ಮೇಲೆ ಕೂಡ ಆಂಜನೇಯ ಇಷ್ಟವಾಗುವ ಕೇಸರಿ ಸಿಂಧೂರದಲ್ಲಿ ಶ್ರೀ ರಾಮ ಎಂದು ಬರೆದು ಒಂದು ಅಡಿಕೆ ಹಾಕಿ ಕೆಂಪು ದಾರದಿಂದ ಅದನ್ನು ಕಟ್ಟಬೇಕು ಈಗ ಭಕ್ತಿಯಿಂದ ಮತ್ತೊಮ್ಮೆ ಆಂಜನೇಯನನ್ನು ನೆನೆಯುತ್ತಾ 11 ಬಾರಿ ಹನುಮಾನ್ ಚಾಲೀಸಾ ಪಠಿಸಬೇಕು.
ಪ್ರತಿ ಬಾರಿ ಹನುಮಾನ್ ಚಾಲೀಸಾ ಪಠಿಸಿದ ಮೇಲೆ ಒಂದೊಂದು ಪಾನ್ ಅನ್ನು ಆಂಜನೇಯನ ವಿಗ್ರಹದ ಮುಂದೆ ಅಥವಾ ಫೋಟೋ ಮುಂದೆ ಅರ್ಪಿಸಬೇಕು. ಕೊನೆಯಲ್ಲಿ ಧೂಪ ದೀಪ ಆರತಿ ನೈವೇದ್ಯಗಳಿಂದ ಪೂಜೆ ಮಾಡಿ ಮುಗಿದ ಬಳಿಕ ಹತ್ತಿರದಲ್ಲಿರುವ ಯಾವುದಾದರೂ ಆಲದ ಮೇಲೆ ಅಥವಾ ಅರಳಿ ಮರದ ಕೆಳಗಡೆ ಈ ಪಾನ್ ಗಳನ್ನು ಇಟ್ಟು ಬರಬೇಕು.
ಆಗಲೂ ಕೂಡ ಹನುಮಂತನ ಬಳಿ ಮನಸ್ಸಿನಲ್ಲಿ ಈ ಸಾಲವನ್ನು ತೀರಿಸುವ ದಾರಿ ತೋರಿಸಿ ಎಂದು ಪ್ರಾರ್ಥಿಸಿ ಕೊಳ್ಳಬೇಕು. ಈ ರೀತಿ 11 ವಾರಗಳು ಆಚರಣೆ ಮಾಡಿದರೆ ನಿಮ್ಮ ಈ ವ್ರತ ಮುಗಿಯುವುದರ ಒಳಗೆ ನಿಮಗೆ ಒಳ್ಳೆಯದಾಗಿ ಸಾಲ ತೀರಿಸುವ ಮಾರ್ಗ ತಿಳಿಯುತ್ತದೆ. ನೀವು ನಿಮ್ಮ ಸಮಸ್ಯೆಯಿಂದ ಹೊರ ಬರುತ್ತೀರಿ ಇದಕ್ಕೆ ಅಚಲವಾದ ನಂಬಿಕೆ ಹಾಗೂ ಭಕ್ತಿ ಬಹಳ ಮುಖ್ಯ.