ಈ ಪ್ರಪಂಚದಲ್ಲಿ ಇರುವ ಪ್ರತಿಯೊಬ್ಬ ಮನುಷ್ಯನಿಗೂ ಕೂಡ ಸುಖ-ದುಃ’ಖ ನೋ’ವು-ನಲಿವು, ಅದೃಷ್ಟ-ದು’ರಾ’ದೃ’ಷ್ಟ ಎನ್ನುವುದು ಇದ್ದೇ ಇರುತ್ತದೆ. ಆತ ಅಗರ್ಭ ಶ್ರೀಮಂತನೇ ಆಗಿದ್ದರೂ, ಅಧಿಕಾರಿಯೇ ಆಗಿದ್ದರೂ, ರಾಜನೇ ಆಗಿದ್ದರೂ ಕೂಡ ಆತನಿಗೂ ಸಮಸ್ಯೆ ತಪ್ಪಿದ್ದಲ್ಲ ಬದುಕಿನ ಒಂದಲ್ಲಾ ಒಂದು ಜಂಜಾಟದಲ್ಲಿ, ಸಂಘರ್ಷದಲ್ಲಿ ಸಿಲುಕಿಕೊಂಡು ಹೋರಾಟ ಮಾಡುತ್ತಲೇ ಇರುತ್ತಾನೆ.
ಈ ಭೂಮಿ ಮೇಲೆ ನಮ್ಮ ಜೀವನ ನಾಟಕದಂತೆ ಎಂದು ಎಲ್ಲರಿಗೂ ಗೊತ್ತು, ಸೂತ್ರಧಾರನಾದ ಭಗವಂತ ಆಡಿಸುವ ರೀತಿ ನಾವೆಲ್ಲ ಆಡುತ್ತಿರುತ್ತೇವೆ. ದೇವರ ಮೇಲೆ ನಂಬಿಕೆ ಇರುವವರು ಅದೃಷ್ಟದ ಮೇಲೆ ಒಳ್ಳೆಯದು ಹಾಗೂ ಕೆಟ್ಟಸಮಯ ಎನ್ನುವುದರ ಮೇಲೆ ಕೂಡ ನಂಬಿಕೆ ಇಡುತ್ತಾರೆ. ಪಾಸಿಟಿವ್ ಇದ್ದಮೇಲೆ ನೆ’ಗೆ’ಟಿ’ವ್ ಕೂಡ ಇದೆ ಎನ್ನುವುದು ಗಣಿತ ಮಾತ್ರ ಅಲ್ಲ ಪ್ರಕೃತಿಯು ಕೂಡ ತೆರೆದಿಟ್ಟಿರುವ ಸತ್ಯ.
ಈ ಪ್ರಕೃತಿಯಲ್ಲಿರುವ ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳು ನಮ್ಮ ಮೇಲೂ ಸಹಾ ಪ್ರಭಾವ ಬೀರುತ್ತವೆ. ಒಂದು ಕುಟುಂಬದ ವಾತಾವರಣ ಸಕಾರಾತ್ಮಕವಾಗಿದ್ದರೆ ಅಥವಾ ಆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ವಾಸವಾಗಿದ್ದರೆ ಎಲ್ಲಾ ಕೆಲಸಗಳು ಸಲೀಸಾಗಿ ಆಗುತ್ತವೆ, ಎಲ್ಲಾ ಸದಸ್ಯರು ಆರೋಗ್ಯವಾಗಿರುತ್ತಾರೆ, ಸದಾ ನಗು ನಗುತ ಚಟುವಟಿಕೆಯಿಂದ ಕೂಡಿರುತ್ತಾರೆ ಒಬ್ಬರ ಜೊತೆ ಮತ್ತೊಬ್ಬರಿಗೆ ವಿಶ್ವಾಸ ಇದ್ದು ಮನೆ ನಂದಗೋಕುಲದಂತಿರುತ್ತದೆ.
ಅದೇ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ವಾಸವಿದ್ದರೆ ಅಥವಾ ನಕರಾತ್ಮಕ ಶಕ್ತಿಯ ಪ್ರಭಾವ ಮನೆ ಮೇಲೆ ಬಿದ್ದಿದ್ದರೆ ಕುಟುಂಬದ ಚಿತ್ರಣವೇ ಬದಲಾಗಿರುತ್ತದೆ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ, ಸದಾಕೋಪ ಏರು ಧ್ವನಿಯಲ್ಲಿ ಮಾತನಾಡುವುದು, ಕೆಟ್ಟ ಭಾಷೆ ಬಳಸುವುದು, ಅನಾರೋಗ್ಯ, ವ್ಯವಹಾರ ನ’ಷ್ಟ ಆಗುವುದು ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರದೆ ಕೆಟ್ಟ ಸಹವಾಸ ಮಾಡಿ ಕೆಟ್ಟುಹೋಗುವುದು ಇದೆಲ್ಲಾ ಆಗುತ್ತದೆ.
ಹಾಗಾಗಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶ ಮಾಡದಂತೆ ವಾಸ ಮಾಡದಂತೆ ಗೃಹಿಣಿ ಎಚ್ಚರಿಕೆ ವಹಿಸಬೇಕು. ಪ್ರತಿದಿನ ಕೂಡ ಮನೆ ಸ್ವಚ್ಛ ಮಾಡಿಕೊಂಡು ಮನೆದೇವರ ಹೆಸರೇಳಿ ದೀಪ ಹಚ್ಚಿ ಎಲ್ಲರ ಒಳಿತಿಗಾಗಿ ಆ ಮನೆಯಲ್ಲಿರುವ ಹೆಣ್ಣು ಮಗಳು ಪ್ರಾರ್ಥಿಸಿದರೆ ನಕಾರಾತ್ಮಕ ಶಕ್ತಿಯು ದೂರ ಹೋಗುತ್ತದೆ. ಆದರೆ ಪೂಜೆ ಮಾಡುವಾಗ ತಪ್ಪದೇ ಪ್ರಮುಖವಾದ ಒಂದು ವಿಧಾನ ಅನುಸರಿಸಬೇಕು.
ಅದೇನೆಂದರೆ, ಮನೆಯ ಮುಖ್ಯ ದ್ವಾರದ ಮೂಲಕವೇ ನಕಾರಾತ್ಮಕ ಶಕ್ತಿ ಪ್ರವೇಶಿಸುವುದು ಅಲ್ಲದೆ ಮನೆ ಮುಖ್ಯದ್ವಾರವನ್ನೇ ಪಿತೃ ವಾಸಿಸ್ಥಾನ ಎನ್ನುತ್ತಾರೆ, ಇಲ್ಲಿ ದೋಷಗಳು ಉಂಟಾದಾಗ ಈ ರೀತಿ ನಕಾರಾತ್ಮಕ ಶಕ್ತಿಗಳ ಪ್ರಭಾವ ಉಂಟಾಗಿ ಮನೆಗೆ ಕೆಡುಕಾಗುತ್ತದೆ ಹಾಗಾಗಿ ಮನೆಯ ಮುಖ್ಯದ್ವಾರದ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು.
ಅರಿಶಿಣದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆದು ಪೂಜಿಸಿದರೆ ನಿಮ್ಮ ಮನೆಗೆ ಧನಾಕರ್ಷಣೆ ಉಂಟಾಗುತ್ತದೆ. ಸಿಂಧೂರ ಮತ್ತು ಶ್ರೀಗಂಧದಿಂದ ಸ್ವಸ್ತಿಕ್ ಚಿಹ್ನೆ ಬರೆದರೆ ಕೆಟ್ಟ ದೃಷ್ಟಿ ನಾಶವಾಗುತ್ತದೆ. ಜೊತೆಗೆ ಪಿತೃಗಳ ಆಶೀರ್ವಾದ ಕೂಡ ದೊರೆಯುತ್ತದೆ. ಪ್ರತಿ ತಿಂಗಳು ಮನೆಯ ಮುಖ್ಯ ದ್ವಾರವನ್ನು ಸ್ವಚ್ಛ ಮಾಡಿ ಈ ರೀತಿ ಭಕ್ತಿಯಿಂದ ಸ್ವಸ್ತಿಕ್ ಚಿಹ್ನೆ ಬರೆದು ಪೂಜಿಸಬೇಕು.
ಇದರೊಂದಿಗೆ ಮನೆಯ ಮುಖ್ಯದ್ವಾರದ ಒಳಗಡೆ ಕುಟುಂಬದ ಹಿರಿಯರ ಭಾಗ್ಯಸಂಖ್ಯೆಯನ್ನು ಬರೆಯಬೇಕು ಭಾಗ್ಯಸಂಖ್ಯೆ ಎಂದರೆ ಲಕ್ಕಿ ನಂಬರ್ ಎಂದು ನಾವು ಭಾವಿಸಬಹುದು. ಇದನ್ನು ಮನೆಯಿಂದ ಹೊರ ಹೋಗುವಾಗ ಹಾಗೂ ಒಳ ಬರುವಾಗ ಸ್ಪರ್ಷ ಮಾಡಿಕೊಂಡು ಓಡಾಡುವುದರಿಂದ ಒಂದು ಪಾಸಿಟಿವ್ ಎನರ್ಜಿ ಬರುತ್ತದೆ. ಕೈಗೊಂಡ ಎಲ್ಲಾ ಕೆಲಸಗಳು ಕೂಡ ಪೂರ್ತಿ ಆಗುತ್ತದೆ.
ಮನೆಯ ಎಲ್ಲಾ ಸದಸ್ಯರು ಅವರ ಲಕ್ಕಿ ನಂಬರ್ ಅನ್ನು ಕೋಣೆಯಲ್ಲಿ ಯಾವುದಾದರೂ ಕಾಗದ ಮೇಲೆ ಬರೆದು ಅಂಟಿಸಿಕೊಂಡು ಪ್ರತಿದಿನ ಕೂಡ ನೋಡುವುದರಿಂದ ಮತ್ತು ಸ್ಪರ್ಶ ಮಾಡುವುದರಿಂದ ಅವರ ಜೀವನದಲ್ಲೂ ಒಳ್ಳೆ ರೀತಿಯ ಬದಲಾವಣೆಗಳು ಆರಂಭವಾಗುತ್ತವೆ. ಈ ಸಣ್ಣ ತಂತ್ರವನ್ನು ಪಾಲಿಸಿ ಜೀವನದಲ್ಲಿ ಏಳಿಗೆ ಹೊಂದಿರಿ.