ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಮಲಿ ಧಾರಾವಾಹಿಯ ಅನಿಕಾ & ಶಂಭು ಈ ಅಂತರ್ಜಾತಿ ವಿವಾಹ ಯಾವ ರೀತಿ ನಡೆಯಲಿದೆ ಗೊತ್ತಾ.?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ ಒಂದು ಕಾಲದಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಧಾರವಾಹಿ ಅದರಲ್ಲಿಯೂ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತಹ ಅನಿಕಾ ಪಾತ್ರ ಬಹಳನೇ ವಿಶೇಷವಾಗಿತ್ತು ತನ್ನ ವಿಭಿನ್ನ ನಟನೆಯ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು. ಈಕೆಯ ಮೂಲ ಹೆಸರು ಗ್ಯಾಬ್ರಿಯಾಲ ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು, ಇನ್ನು ಇದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತಹ ಶಂಭು ಅಲಿಯಾಸ್ ಸುಹಾಸ್ ಅವರು ಕೂಡ ಹಳ್ಳಿ ಹುಡುಗನ ಪಾತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಅಭಿನಯಿಸಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ನಿಸ್ಸಿಮಾರಾಗಿದ್ದರು. ಇದೀಗ ಒಂದೇ ದಾರವಾಹಿಯಲ್ಲಿ ನಟಿಸುತ್ತಿದ್ದಂತಹ ಕಿರುತರೆ ಕಲಾವಿದರು ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುವ ಹಂತಕ್ಕೆ ತಲುಪಿದ್ದಾರೆ.

ವಿಶೇಷ ಏನೆಂದರೆ ಗ್ಯಾಬ್ರಿಯಾಲ ಮತ್ತು ಸುಹಾಸ್ ಇಬ್ಬರೂ ಕೂಡ ಮೂರು ವರ್ಷದಿಂದಲೂ ಕೂಡ ಪ್ರೀತಿಸುತ್ತಿದ್ದರು ಆದರೆ ತಮ್ಮ ಪ್ರೀತಿಯ ವಿಚಾರವನ್ನು ಎಲ್ಲಿಯೂ ಕೂಡ ವ್ಯಕ್ತಪಡಿಸಿಲ್ಲ. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಮಾಧ್ಯಮ ಒಂದರ ಮುಂದೆ ಬಂದು ತಾವಿಬ್ಬರೂ ಪ್ರೀತಿಸುತ್ತಿರುವಂತಹ ವಿಚಾರವನ್ನು ಹೊರ ಹಾಕಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ತಿಂಗಳು ತಾವು ಕೋರ್ಟ್‌ ನಿಯಮದ ಪ್ರಕಾರ ಮದುವೆಯಾಗಲಿದ್ದಾರೆ ಎಂಬ ಮಾಹಿತಿಯನ್ನು ಕೂಡ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಇಬ್ಬರು ಸಾಂಪ್ರದಾಯದಂತೆ ಮದುವೆಯಾಗುವುದನ್ನು ಬಿಟ್ಟು ಯಾಕೆ ಈ ರೀತಿ ಕೋರ್ಟ್ ವಿವಾಹ ಆಗುತ್ತಿದ್ದರೆ ಎಂಬುದನ್ನು ನೋಡುವುದಾದರೆ. ಗ್ಯಾಬ್ರಿಯಾಲ ಮೂಲತಃ ಕ್ರಿಶ್ಚಿಯನ್ ಇನ್ನು ಸುಹಾಸ್ ಪಕ್ಕ ಬ್ರಾಹ್ಮಣ ಹುಡುಗ ಇಬ್ಬರಲ್ಲೂ ಕೂಡ ಜಾತಿಯ ಭೇದವಿದೆ.

ಒಂದು ಜಾತಿಯಂತೆ ವಿವಾಹವಾದರೆ ಮತ್ತೊಂದು ಜಾತಿಗೆ ಮುಜುಗರ ಆಗಬಹುದು ಹಾಗಾಗಿ ಇಬ್ಬರೂ ಕೂಡ ಕೂತು ಮಾತನಾಡಿ ಭಾರತೀಯ ಸರ್ಕಾರದ ಆದೇಶದ ಮೇರೆಗೆ ಕೋರ್ಟ್ ನಲ್ಲಿ ಮದುವೆಯಾಗಲಿದ್ದಾರಂತೆ. ಆದರೆ ಈ ಮದುವೆ ಬಹಳ ಸರಳವಾಗಿರುತ್ತದೆ ಮದುವೆಗೆ ಕುಟುಂಬಸ್ಥರನ್ನು ಹೊರತುಪಡಿಸಿ ಯಾರನ್ನು ಕೂಡ ಆಹ್ವಾನಿಸುವುದಿಲ್ಲವಂತೆ. ಮದುವೆಯಾದ ನಂತರ ಅದ್ದೂರಿಯಾಗಿ ಆರತಕ್ಷತೆಯನ್ನು ಇಟ್ಟುಕೊಳ್ಳುತ್ತಾರಂತೆ. ಈ ಒಂದು ಕಾರ್ಯಕ್ರಮಕ್ಕೆ ಕಿರುತೆರೆ ಬೆಳ್ಳಿತರೆ ಹಾಗೂ ಸ್ನೇಹಿತರು ಎಲ್ಲರನ್ನೂ ಕೂಡ ಆಹ್ವಾನಿಸುತ್ತಾರಂತೆ. ಮಾಧ್ಯಮದವರು ನಿಮ್ಮ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇದಕ್ಕೆ ಉತ್ತರಿಸಿದಂತಹ ಗ್ಯಾಬ್ರಿಯಾಲ ಅವರು ಪ್ರಾರಂಭದಲ್ಲಿ ಕಷ್ಟವಾಯಿತು ಮನೆಯವರ ಒಪ್ಪಿಗೆ ಪಡೆಯುವುದಕ್ಕೆ ಸುಮಾರು ಒಂದು ವರ್ಷವೇ ಬೇಕಾಯಿತು.

ನಾನು ಕ್ರಿಶ್ಚನ್ ಕುಟುಂಬಕ್ಕೆ ಸೇರಿದವಳು ನನ್ನ ತಾಯಿಗೆ ಈ ವಿಚಾರ ಹೇಳಿದಾಗ ಮದುವೆಯಾಗಲು ಹೇಗೆ ಸಾಧ್ಯ ಅವರು ಹಿಂದು ಕುಟುಂಬದವರು ಶಾಸ್ತ್ರ ಸಂಪ್ರದಾಯವನ್ನು ತುಂಬಾ ಪಾಲನೆ ಮಾಡುತ್ತಾರೆ ನೀನು ಮದುವೆಯಾದರೆ ನಿನಗೆ ಕಷ್ಟ ಆಗಬಹುದು ಅಂತ ಹೇಳಿದರು. ಇತ್ತ ಕಡೆ ಸುಹಾಸ್ ಮನೆಯಲ್ಲೂ ಕೂಡ ಪ್ರಾರಂಭದಲ್ಲಿ ಬಹಳ ವಿ.ರೋ.ಧ ವ್ಯಕ್ತವಾಯಿತು ಏಕೆಂದರೆ ಸುಹಾಸ್ ಮೂಲತಃ ಬ್ರಾಹ್ಮಣ ಕುಟುಂಬದವರು ಅವರ ಆಹಾರ ಪದ್ಧತಿ, ಆಚಾರ ವಿಚಾರ ಸಂಪ್ರದಾಯ ಎಲ್ಲವೂ ಕೂಡ ವಿಭಿನ್ನ ಹಾಗಾಗಿ ಅವರ ಮನೆಯಲ್ಲಿ ಮದುವೆಯ ವಿಚಾರ ಪ್ರಸ್ತಾಪವಾದಾಗ ಅವರ ತಾಯಿ ಬಹಳ ವಿ.ರೋ.ಧ ವ್ಯಕ್ತಪಡಿಸಿದರಂತೆ. ಆದರೆ ಸುಹಾಸ್ ತಮ್ಮ ತಾಯಿಗೆ ತಿಳಿ ಹೇಳಿ ತಾವೀಬ್ಬರು ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಿದ್ದೇವೆ ಬಿಟ್ಟಿರಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಅರ್ಥ ಮಾಡಿಸುತ್ತಾರಂತೆ.

ಮಕ್ಕಳ ಪ್ರೀತಿಯ ಮುಂದೆ ಜಾತಿಭೇದ ಇವೆಲ್ಲವೂ ಯಾವುದು ಇಲ್ಲ ಎಂಬುದನ್ನು ಮನಗಂಡಂತಹ ಪೋಷಕರು ಇದೀಗ ಇಬ್ಬರ ಮದುವೆಗೆ ಒಪ್ಪಿಗೆಯನ್ನು ಸೂಚಿಸಿದ್ದಾರಂತೆ. ಅಕ್ಟೋಬರ್ ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಂತೆ ನಾವಿಬ್ಬರು ಒಬ್ಬರನ್ನೊಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇವೆ ಹಾಗಾಗಿ ಮುಂದೆ ಜೀವನದಲ್ಲಿಯೂ ಕೂಡ ಒಟ್ಟಾಗಿ ಬದುಕುತ್ತೇವೆ ಎಂಬ ಭರವಸೆ ನಮ್ಮಲ್ಲಿ ಇದೆ ಎಂಬುದನ್ನು ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಕಮಲಿ ಸೀರಿಯಲ್ ಸೆಟ್ನಲ್ಲಿ ಪ್ರಾರಂಭವಾದಂತ ಇವರ ಪರಿಚಯ ಸ್ನೇಹವಾಗಿ ಬೆಳೆದು, ಪ್ರೀತಿಗಾಗಿ ತಿರುಗಿ, ಇದೀಗ ಮದುವೆ ಹಂತಕ್ಕೆ ಬಂದು ತಲುಪಿದೆ. ಈ ಅಂತರ್ಜಾತಿ ವಿವಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಈ ಜೋಡಿ ಮದುವೆ ಆದರೆ ಮುಂದಿನ ದಿನದಲ್ಲಿ ಹೇಗಿರುತ್ತಾರೆ.? ಶಂಭು ಅನಿಕಾಗೆ ಪ್ರೊಪೋಸ್ ಮಾಡಿದ ವಿಡಿಯೋ ಈ ಕೆಳಗಿದೆ ನೋಡಿ.

Leave a Comment

WhatsApp Group Join Now
Telegram Group Join Now