ಒಬ್ಬ ನಟ ನಿರಂತರವಾಗಿ ಹಿಟ್ ಸಿನಿಮಾಗಳನ್ನು ನೀಡುವುದು ಅಂದರೆ ತಮಾಷೆಮಾತಲ್ಲ ಒಂದು ಸಿನಿಮಾವನ್ನು ಹಿಟ್ ಮಾಡಬಹುದು ಆದರೆ ನಿರಂತರವಾಗಿ ಐದು ಸಿನಿಮಾಗಳನ್ನು ಕೂಡ ಹಿಟ್ ಮಾಡುವುದು ಅಂದರೆ ಅದು ಒಂದು ದೊಡ್ಡ ಸಾಹಸನೆ ಅಂತ ಹೇಳಬಹುದು. ಈ ರೀತಿಯ ಯಶಸ್ಸು ಕಾಣುವುದಕ್ಕೆ ಆತ ಬಹಳಷ್ಟು ಪರಿಶ್ರಮವನ್ನು ವಹಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಅಭಿಮಾನಿ ಬಳಗವು ಕೂಡ ಆತನ ಕೈ ಹಿಡಿಯಬೇಕಾಗುತ್ತದೆ ಇದರ ಜೊತೆಗೆ ಆತನ ಅದೃಷ್ಟವೂ ಕೂಡ ಚೆನ್ನಾಗಿ ಇರಬೇಕಾಗುತ್ತದೆ. ಈ ಮೂರರಲ್ಲಿ ಯಾವುದಾದರೂ ಒಂದು ಕಡಿಮೆಯಾದರೂ ಕೂಡ ಆತ ಹಿಟ್ ಸಿನಿಮಾಗಳನ್ನು ನೀಡುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಇಂದು ನಮ್ಮ ಕನ್ನಡದಲ್ಲಿ ನಿರಂತರವಾಗಿ ಐದು ಹಿಟ್ ಸಿನಿಮಾಗಳನ್ನು ನೀಡಿದಂತಹ ನಾಯಕ ನಟರು ಯಾರು ಹಾಗೂ ಇವರು ಈ ಸಿನಿಮಾಗಳನ್ನು ನೀಡುವುದಕ್ಕೆ ಕಾರಣವೇನು ಇವರು ಪಟ್ಟ ಕಷ್ಟವೇನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.
ಮೊದಲನೆಯದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಹಾರು ಹಿಟ್ ಸಿನಿಮಾಗಳನ್ನು ಕನ್ನಡ ಇಂಡಸ್ಟ್ರಿ ಗೆ ನೀಡಿದ್ದಾರೆ 2006ರಿಂದ 8ರವರೆಗೆ ಗಣೇಶ್ ಅವರು ಅಭಿನಯಿಸಿದಂತಹ ಆರು ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳಾಗಿದೆ. ಹೌದು ಮುಂಗಾರು ಮಳೆ, ಚೆಲುವಿನ ಚಿತ್ತಾರ, ಹುಡುಗಾಟ, ಕೃಷ್ಣ, ಅರಮನೆ, ಚೆಲ್ಲಾಟ ಈ ಆರು ಸಿನಿಮಾಗಳು ಕೂಡ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ಇದಾದ ನಂತರ ಹಿಟ್ ಸಿನಿಮಾಗಳನ್ನು ನೀಡಿದ ನಾಯಕ ನಟರ ಪೈಕಿ ಉಪೇಂದ್ರ ಅವರು ಎ ಸಿನಿಮಾ, ಪ್ರೀತ್ಸೆ, ರಕ್ತ ಕಣ್ಣೀರು, ಗೌರಮ್ಮ, ಹಾಲಿವುಡ್, ಗೋಕರ್ಣ ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿಕೊಂಡಿವೆ. ರಾಕಿಂಗ್ ಸ್ಟಾರ್ ಯಶ್ ಅವರು 2012 ರಿಂದ 2020 ರ ವರೆಗೆ ಸುಮಾರು 9ಕ್ಕೂ ಅಧಿಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಮಿಸ್ಟರ್ ರಾಮಾಚಾರಿ, ಕೆಜಿಎಫ್ 1 ಮತ್ತು ಕೆಜಿಎಫ್ 2 ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಗಜಕೇಸರಿ ಡ್ರಾಮ ಗೂಗ್ಲಿ ಸಂತು ಸ್ಟ್ರೈಟ್ ಫಾರ್ವರ್ಡ್ ಹೀಗೆ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇದನ್ನು ಹೊರತು ಪಡಿಸಿದರೆ ಕಿಚ್ಚ ಸುದೀಪ್ ಕಿಚ್ಚ ಸುದೀಪ್ ಅವರು 2011 ರಿಂದ 2015 ರವರೆಗೆ ಸುಮಾರು 8 ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ವಿಷ್ಣುವರ್ಧನ, ರನ್ನ, ಈಗ, ವರದನಾಯಕ, ಕೆಂಪೇಗೌಡ, ಮಾಣಿಕ್ಯ, ಬಚ್ಚನ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದರ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು 2011 ರಿಂದ 2015 ರವರೆಗೆ ಸಾಕಷ್ಟು ಸಿನಿಮಾಗಳನ್ನು ನೀಡಿದ್ದಾರೆ ಇವುಗಳಲ್ಲಿ ಸಾರಥಿ, ಸಂಗೊಳ್ಳಿ ರಾಯಣ್ಣ ಸೂಪರ್ ಹಿಟ್ ಸಿನಿಮಾಗಳಾದರೆ ಬುಲ್ ಬುಲ್ ಮತ್ತು ಬೃಂದಾವನ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿದೆ. ನಂತರ ಯಜಮಾನ ತಾರಕ್ ರಾಬರ್ಟ್ ಚಕ್ರವರ್ತಿ ಜಗ್ಗು ದಾದ ಕುರುಕ್ಷೇತ್ರ ಸಿನಿಮಾಗಳು ಸೂಪರ್ ಹಿಟ್ ಆಗಿದೆ.
ಇನ್ನು ಪುನೀತ್ ರಾಜಕುಮಾರ್ ಅವರು 11ಕ್ಕೂ ಅಧಿಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ ಹೌದು 2002 ರಲ್ಲಿ ಕೆರೆ ಕಂಡ ಅಪ್ಪು ಸಿನಿಮಾದಿಂದ ಹಿಡಿದು 2009ರಲ್ಲಿ ಕರೆಕಂಡಂತಹ ವಂಶಿ ಸಿನಿಮಾದವರೆಗೆ ಸುಮಾರು ಹನ್ನೊಂದು ಸಿನಿಮಾವೂ ಕೂಡ ಸೂಪರ್ ಹಿಟ್ ಆಗಿದೆ. ಅಪ್ಪು, ಅಭಿ, ಅರಸು, ಮೌರ್ಯ ವಂಶಿ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದೆ. 2016 ರಿಂದ 21 ರವರೆಗೆ ಸುಮಾರು 6 ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ರಾಜಕುಮಾರ, ಯುವರತ್ನ, ಅಂಜನಿಪುತ್ರ, ನಟಸಾರ್ವಭೌಮ, ದೊಡ್ಮನೆ ಹುಡುಗ, ಜೇಮ್ಸ್ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿದೆ. ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡದಲ್ಲಿ ಅತಿ ಹೆಚ್ಚು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದವರ ಪೈಕಿ ಪುನೀತ್ ರಾಜಕುಮಾರ್, ದರ್ಶನ್, ಯಶ್, ಸುದೀಪ್ ಅವರು ಮೊದಲ ಸ್ಥಾನದಲ್ಲಿ ಕಂಡು ಬರುತ್ತಾರೆ ನಿಮ್ಮ ನೆಚ್ಚಿನ ನಟ ಯಾರು ಎಂಬುದನ್ನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.