Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಈ ದಾಖಲೆಯನ್ನು ಕನ್ನಡದಲ್ಲಿ...

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಈ ದಾಖಲೆಯನ್ನು ಕನ್ನಡದಲ್ಲಿ ಇನ್ನು ಯಾವ ನಟಿಯು ಕೂಡ ಮಾಡಿಲ್ಲ.

ರಿಷಬ್ ಶೆಟ್ಟಿ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ. ಕರಾವಳಿಯ ದೈವಾರದಲ್ಲಿ ಹಾಗೂ ಅಲ್ಲಿನ ಶಾಸ್ತ್ರ ಸಂಪ್ರದಾಯ ಮತ್ತು ಪ್ರಕೃತಿಗೆ ಮಾನವನ ಕೊಡುಗೆ ಇವೆಲ್ಲದರ ಕುರಿತಾಗಿ ಕಾಂತಾರ ಸಿನಿಮಾ ಮೂಡಿ ಬಂದಿದೆ. ಪ್ರಕೃತಿಗೆ ನಾವು ಬೇಕಾಗಿಲ್ಲ ನಮಗೆ ಪ್ರಕೃತಿ ಬೇಕು ಎಂಬುದನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಲಾಗಿದೆ. ಈ ಒಂದು ಕಾಂತಾರ ಸಿನಿಮಾವನ್ನು ಸ್ವತಃ ರಿಷಬ್ ಶೆಟ್ಟಿ ಅವರೇ ನಿರ್ದೇಶನ ಮಾಡಿದ್ದಾರೆ.

ಒಂದೇ ಮಾತಿನಲ್ಲಿ ಹೇಳಬೇಕಾದರೆ ಸ್ವತಃ ರಿಷಬ್ ಶೆಟ್ಟಿಯವರಿಗೂ ಕೂಡ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತದೆ ಎಂಬ ವಿಚಾರ ತಿಳಿದಿರಲಿಲ್ಲ. ಒಂದು ಹೊಸ ಎಕ್ಸ್ಪರಿಮೆಂಟ್ ಮಾಡುವ ಸಲುವಾಗಿ ಈ ಸಿನಿಮಾವನ್ನು ಮಾಡುತ್ತಾರೆ ಈ ಸಿನಿಮಾ ತೆರೆ ಮೇಲೆ ಮೂಡಿ ಬಂದ ನಂತರ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ. ಈ ಕಾರಣಕ್ಕಾಗಿ ಕಾಂತಾರ ಸಿನಿಮಾ ಮೊದಲ ವಾರ ಭರ್ಜರಿ ಕಲೆಕ್ಷನ್ ಮಾಡಿ ಇದೀಗ ಎರಡನೇ ವಾರವು ಕೂಡ ದಾಪುಗಾಲು ಇಟ್ಟಿದೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಕೆಜಿಎಫ್ ದಾಖಲೆಯನ್ನು ಕೂಡ ಇದೀಗ ಕಾಂತಾರ ಮುರಿಯುವ ಮಟ್ಟಕ್ಕೆ ಹೋಗಿ ನಿಂತಿದೆ.

ಕನ್ನಡದಲ್ಲಿ ಬಿಡುಗಡೆಯಾದ ಕಾಂತಾರ ಸಿನಿಮಾ ಗೆ ಇದೀಗ ಎಲ್ಲಿಲ್ಲದ ಬೇಡಿಕೆ ಇದೆ ಇದೇ ಕಾರಣಕ್ಕಾಗಿ ತೆಲುಗು ತಮಿಳು ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯಲ್ಲಿ ಈ ಸಿನಿಮ ಡಬ್ಬಿಂಗ್ ಆಗಿದೆ. ಹಿಂದಿಯಲ್ಲಿ ಸುಮಾರು ಎರಡುವರೆ ಸಾವಿರ ಥಿಯೇಟರ್ನಲ್ಲಿ ಕಾಂತಾರ ಸಿನಿಮಾ ಬಿಡುಗಡೆಯಾಗಿದ್ದ ಉತ್ತಮ ಪ್ರದರ್ಶನವನ್ನು ಕಾಣುತ್ತಿದೆ. ಇನ್ನು ಈ ಕಾಂತಾರ ಸಿನಿಮಾ ವನ್ನು ನೋಡಿದಂತಹ ದಕ್ಷಿಣ ಭಾರತದ ಸ್ಟಾರ್ ನಟ ನಟರು ರಿಷಬ್ ಶೆಟ್ಟಿ ಅವರಿಗೆ ಶುಭಾಶಯದ ಮಹಾಪುರವನ್ನೇ ಹರಿಸುತ್ತಿದ್ದಾರೆ ಅಷ್ಟರ ಮಟ್ಟಿಗೆ ಈ ಸಿನಿಮಾ ಹಿಟ್ ಆಗುತ್ತಿದೆ.

ಇನ್ನು ಈ ಸಿನಿಮಾದ ಮೈನ್ ಕ್ಯಾರೆಕ್ಟರ್ ಅಂದರೆ ಅದು ನಟಿ ಸಪ್ತಮಿ ಗೌಡ ಅಂತಾನೇ ಹೇಳಬಹುದು ಹೌದು ನಟಿ ಸಪ್ತಮಿ ಗೌಡ ಅವರಿಗೆ ಇದು ಎರಡನೇ ಸಿನಿಮಾ. ಮೂಲತಃ ಬೆಂಗಳೂರಿನವರಾದ ನಟಿ ಸಪ್ತಮಿ ಗೌಡ ಈ ಹಿಂದೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದಲ್ಲಿ ನಟಿಸಿದ್ದರು ಆದರೆ ಅದರಲ್ಲಿ ಅಷ್ಟಾಗಿ ಫೇಮಸ್ ಆಗಿರಲಿಲ್ಲ. ಕಾಂತಾರ ಸಿನಿಮಾದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ ಸಾಮಾನ್ಯವಾಗಿ ನಮ್ಮ ಇಂಡಸ್ಟ್ರಿಯಲ್ಲಿ ನಟಿಯಾಗಿ ಪಾದರ್ಪಣೆ ಮಾಡಬೇಕು ಅಂದರೆ ಅದಕ್ಕೆ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಇದರ ಜೊತೆಗೆ ಸಂಭಾವನೆ ವಿಚಾರದಲ್ಲಿ ಯಾವ ನಿರೀಕ್ಷೆಯನ್ನು ಕೂಡ ಇಟ್ಟುಕೊಳ್ಳುವುದಿಲ್ಲ ಒಂದು ಚಾನ್ಸ್ ಕೊಟ್ಟರೆ ಸಾಕು ಮುಂದಿನ ಸಿನಿಮಾದಿಂದ ಸಂಭಾವನೆ ನೋಡಿಕೊಳ್ಳೋಣ ಅಂತ ಅಂದುಕೊಳ್ಳುತ್ತಾರೆ. ಆದರೆ ನಟಿ ಸಪ್ತಮಿ ಗೌಡ ಅವರಿಗೆ ಮಾತ್ರ ತಾವು ನಟನೆ ಮಾಡಿದ ಮೊದಲ ಸಿನಿಮಾದಲ್ಲಿಯೇ ಯಾರಿಗೂ ಸಿಗದಷ್ಟು ಹಾಗೂ ನಿರೀಕ್ಷೆಗೂ ಮೀರಿದಂತಹ ಸಂಭಾವನೆಯನ್ನು ಪಡೆದಿದ್ದಾರೆ.

ಹೌದು ಸಪ್ತಮಿ ಗೌಡ ಅವರು ಕಾಂತಾರ ಸಿನಿಮಾಗೆ ಬರೋಬರಿ 50 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ ಕನ್ನಡದಲ್ಲಿ ಇಲ್ಲಿಯವರೆಗೂ ಯಾವ ನಟಿಯು ಕೂಡ ಇಷ್ಟು ದೊಡ್ಡ ಮಟ್ಟದ ಸಂಭಾವನೆಯನ್ನು ಪಡೆದಿಲ್ಲ. ತಾವು ಅಭಿನಯಿಸಿದ ಮೊದಲ ಸಿನಿಮಾಗೆ ಎರಡರಿಂದ 5 ಲಕ್ಷ ಸಂಭಾವನೆ ಪಡೆಯುವುದೇ ಹೆಚ್ಚು ಟಾಪ್ ನಟಿಯರಿಗೆ 10 ಲಕ್ಷ ಸಂಭಾವನೆ ನೀಡುತ್ತಾರೆ. ಆದರೆ ಸಪ್ತಮಿ ಗೌಡ ಅವರು ಮಾತ್ರ 50 ಲಕ್ಷ ರೂಪಾಯಿ ಈ ಸಂಭಾವನೆ ಪಡೆಯುವುದರ ಮೂಲಕ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನು ಕಾಂತಾರ ಸಿನಿಮಾವನ್ನು ನೀವು ನೋಡಿದ್ದರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ