Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಕಾಂತರಾ ಸಿನಿಮಾಗೆ ಯಾವುದೇ ಗ್ರಾಫಿಕ್ ಬಳಸದೆ, ಅದ್ಭುತವಾಗಿ ಸೀನ್ ಬರಲು ರಿಷಬ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಒಮ್ಮೆ ಈ ಮೇಕಿಂಗ್ ವಿಡಿಯೋ ನೋಡಿ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತಿರಾ.

Posted on November 15, 2022 By Kannada Trend News No Comments on ಕಾಂತರಾ ಸಿನಿಮಾಗೆ ಯಾವುದೇ ಗ್ರಾಫಿಕ್ ಬಳಸದೆ, ಅದ್ಭುತವಾಗಿ ಸೀನ್ ಬರಲು ರಿಷಬ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಒಮ್ಮೆ ಈ ಮೇಕಿಂಗ್ ವಿಡಿಯೋ ನೋಡಿ ನಿಜಕ್ಕೂ ಬಾಯಿ ಮೇಲೆ ಬೆರಳಿಡ್ತಿರಾ.

ಕಾಂತಾರ ಕನ್ನಡ ಚಿತ್ರರಂಗದಲ್ಲಿ ಆದರೆ ಆದ ಇತಿಹಾಸವನ್ನು ಸೃಷ್ಟಿ ಮಾಡಿದೆ. ಯಾರ ಬಾಯಲ್ಲಿ ಕೇಳಿದರು ಕಾಂತಾರ ಚಿತ್ರದ್ದೆ ಸುದ್ದಿ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಚಿತ್ರವು ಪ್ರೇಕ್ಷಕರನ್ನು ಮತ್ತು ಸಿನಿಪಂಡಿತರನ್ನು ವಿಸ್ಮಯಗೊಳಿಸುತ್ತಿದೆ. ಇನ್ನೂ ಅದು ಮುಂದುವರೆಸಿದೆ. ಕನ್ನಡಿಗನ ʼಕಾಂತಾರʼ ದೇಶಾದ್ಯಂತ ಅಬ್ಬರಿಸುತ್ತಿದೆ. ದಿನದಿಂದ ದಿನಕ್ಕೆ ಒಂದರಂತೆ ಎಲ್ಲಾ ದಾಖಲೆಗಳನ್ನು ಮುರಿಯುತ್ತಿದೆ.

ಸಾರ್ವಕಾಲಿಕ ದೊಡ್ಡ ಯಶಸ್ಸಿನತ್ತ ಸಾಗಿರುವ ಕಾಂತಾರ ಸದ್ಯ ದಾಖಲೆ ಸೃಷ್ಟಿಸಿದೆ. ಕಾಂತಾರ ಚಿತ್ರಮಂದಿರಗಳಲ್ಲಿ 7 ವಾರಗಳಿಗಿಂತ ಹೆಚ್ಚು ಕಾಲ ತನ್ನದೇ ಆದ ಸ್ಥಾನವನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದು ಖಂಡಿತವಾಗಿಯೂ ಸಂಭ್ರಮಾಚರಣೆಗೆ ಕಾರಣವಾಗಿದೆ. ಹೊಂಬಾಳೆ ಕಾರ್ಯನಿರ್ವಾಹಕ ನಿರ್ಮಾಪಕ ಕಾರ್ತಿಕ್ ಗೌಡ ಅವರು ಚಿತ್ರದ ಇದುವರೆಗಿನ ಅತ್ಯುತ್ತಮ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ವರದಿಯ ಪ್ರಕಾರ, ನವೆಂಬರ್ 18 ರ ಶುಕ್ರವಾರ ಬಿಡುಗಡೆಯಾದ ಸಿನಿಮಾ ಅದೇ ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಮುಂದುವರೆಸಿದರೆ, ಚಿತ್ರವು ಮೊದಲ ದಿನ ಬಿಡುಗಡೆಯಾದ ಎಲ್ಲಾ ಪರದೆಗಳಲ್ಲಿ 50 ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಲನಚಿತ್ರವಾಗಿ ಇತಿಹಾಸವನ್ನು ಸೃಷ್ಟಿಸುತ್ತದೆ! ತಿರುಗಿ ನೋಡಿದರೆ, ಪ್ರಬಲವಾದ ಕೆಜಿಎಫ್ 2 ಸೇರಿದಂತೆ ಈ ಹಿಂದೆ ಯಾವುದೇ ಕನ್ನಡ ಚಿತ್ರವು ತನ್ನ ಥಿಯೇಟರ್ ಓಟದಲ್ಲಿ ಖಚಿತವಾಗಿ ಹೆಜ್ಜೆ ಹಾಕುವಲ್ಲಿ ಯಶಸ್ವಿಯಾಗಲಿಲ್ಲ.

ಕಾಂತಾರ ಕೂಡ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರವಾಗುವತ್ತ ಬೇಗ ಕಾಲನ್ನು ಹಾಕುತ್ತಿದೆ ಮತ್ತು ಕೆಜಿಎಫ್ 2 ಕ್ಕಿಂತ ಕಡಿಮೆ ಅಂತರದಲ್ಲಿ ಹಿಂದೆ ಇದೆ. ರಿಷಬ್‌ ಶೆಟ್ಟಿ ನಟನೆಯ ‘ಕಾಂತಾರ’ ಸಿನಿಮಾವು ಈವರೆಗೂ ಹಲವು ದಾಖಲೆಗಳನ್ನು ಉಡೀಸ್ ಮಾಡಿದೆ. ವಿಶ್ವಾದ್ಯಂತ ಈ ಸಿನಿಮಾದ ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಸದ್ಯ ಹೊಸದೊಂದು ದಾಖಲೆ ಈ ಚಿತ್ರದಿಂದ ನಿರ್ಮಾಣವಾಗಿದೆ.

ಕರ್ನಾಟಕದಲ್ಲಿ 25ಕ್ಕೆ 77 ಲಕ್ಷ ‘ಕಾಂತಾರ’ ಸಿನಿಮಾದ ಟಿಕೆಟ್ ಸೇಲ್ ಆಗಿದ್ದವು. ಇದೀಗ ಸಂಖ್ಯೆ ಒಂದು ಕೋಟಿ ತಲುಪಿದೆ. ಹೌದು, ಕರ್ನಾಟಕದಲ್ಲಿ ‘ಕಾಂತಾರ’ ಸಿನಿಮಾದ ಒಂದು ಕೋಟಿ ಟಿಕೆಟ್‌ ಮಾರಾಟವಾಗಿವೆ. ಶಿವ ಎಂಬ ಪಾತ್ರದಲ್ಲಿ ರಿಷಬ್ ಶೆಟ್ಟಿ ಕಾಣಿಸಿಕೊಂಡರೆ, ನಟಿ ಸಪ್ತಮಿ ಗೌಡ, ಲೀಲಾ ಎಂಬ ಪಾತ್ರ ಮಾಡಿದ್ದಾರೆ. ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ದೀಪಕ್‌ ರೈ, ಮಾನಸಿ ಸುಧೀರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಬಣ್ಣ ಹಚ್ಚಿದ್ಧಾರೆ.

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡಿದ್ದಾರೆ. ‘ಕಾಂತಾರ’ ಸಿನಿಮಾದಲ್ಲಿ ಭೂತಕೋಲದ ಮೇಲೆ ಜನರಿಟ್ಟಿರುವ ನಂಬಿಕೆ, ಕಾಡಿನ ಅತಿಕ್ರಮಣ ಕುರಿತಂತೆ ಸಾಕಷ್ಟು ವಿಷಯಗಳಿವೆ. ಜಾನಪದ ಶೈಲಿಯ ದೈವದ ಆಚರಣೆಯನ್ನು ಅದ್ಭುತವಾಗಿ ತೋರಿಸಲಾಗಿದೆ. ಸದ್ಯ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಕಾಂತಾರ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ಚಿತ್ರದ ಉತ್ತಮತೆಗಾಗಿ ರಿಷಬ್ ಶೆಟ್ಟಿಯವರು ಯಾವುದೇ ತರಹದ ಗ್ರಾಫಿಕ್ಸ್ ಅನ್ನು ಬಳಸಿಲ್ಲ ಇನ್ನು ಇದಕ್ಕೆ ಉದಾಹರಣೆ ಸಿನಿಮಾದ ಒಂದು ದೃಶ್ಯದಲ್ಲಿ ರಿಷಬ್ ರವರು ಕಂಬಳದಲ್ಲಿ ಕೋಣಗಳ ಸಮನಾಗಿ ಓಡಬೇಕಿತ್ತು, ಅದಕ್ಕೆ ಈ ಸಿನಿಮಾದ ಛಾಯಾಗ್ರಹಕರಾದ ಅರವಿಂದ್ ಕಶ್ಯಪ್ ರವರು ಕೂಡ ಗದ್ದೆಯಲ್ಲಿ ಕ್ಯಾಮರವನ್ನು ಹಿಡಿದುಕೊಂಡು ಛಾಯಾಗ್ರಹಣ ಮಾಡಿದ್ದಾರೆ ಈ ಸಿನಿಮಾದಲ್ಲಿ ನೈಸರ್ಗಿಕವಾಗಿ ಕಾಣುವ ಹಾಗೆ ಛಾಯಾಗ್ರಹಣ ಮಾಡಿದ್ದಾರೆ ಹಾಗೂ ಈ ಎಲ್ಲಾ ಪಾತ್ರಗಳನ್ನು ಉತ್ತಮವಾಗಿ ಮಾಡಲು ಕೂಡ ಬಹಳ ಪರಿಶ್ರಮವನ್ನು ಹಾಕಿದ್ದಾರೆ ಎಂದರೆ ಸುಳ್ಳಾಗುವುದಿಲ್ಲ. ನೀವು ಕೂಡ ಒಮ್ಮೆ ಈ ಮೇಕಿಂಗ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ.

Entertainment Tags:Kanthara, Rishab Shetty, Sapthami Gowda
WhatsApp Group Join Now
Telegram Group Join Now

Post navigation

Previous Post: ಸಚಿವ ಆರ್.ಆಶೋಕ್ ಅಪ್ಪು ಹೆಸರಿನ ರಸ್ತೆ ಉದ್ಘಾಟನೆ ಸಮಾರಂಭಕ್ಕೆ ದರ್ಶನ್ ಕರೆಸುತ್ತೇನೆ ಅಂದಾಗ ಅಶ್ವಿನಿ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಶಾ-ಕ್ ಆಗುತ್ತೆ ಈ ವಿಡಿಯೋ ನೋಡಿ.
Next Post: ರಮ್ಯಾ ನಿರ್ಮಾಣದ ಮೊದಲ ಚಿತ್ರ “ಸ್ವಾತಿ ಮುತ್ತಿನ ಮಳೆ ಹನಿಯೇ” ಸಿನಿಮಾ ಕೇವಲ 42 ದಿನಕ್ಕೆ ಶೂಟಿಂಗ್ ಕಂಪ್ಲೀಟ್ ಆಗಿದೆ, ಇದೇನು ಶಾರ್ಟ್ ಫಿಲಂ ಹಾಂ ಅಂತಿದ್ದಾರೆ ನೆಟ್ಟಿಗರು.!

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore