ಎಸ್ ಎಸ್ ಎಲ್ ಸಿ ಪಾಸಾದoತಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವತಿಯಿಂದ ಹೊಸ ಹುದ್ದೆಗಳಿಗೆ ನೇಮಕಾತಿಯನ್ನು ಕರೆದಿದ್ದಾರೆ ಹೌದು ಎಸ್ ಎಸ್ ಎಲ್ ಸಿ ಪಾಸಾದoತಹ ಪುರುಷ ಹಾಗೂ ಮಹಿಳಾ ಈ ಇಬ್ಬರು ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಹಾಗಾದರೆ ಈ ದಿನ ಎಸ್ ಎಸ್ ಎಲ್ ಸಿ ಪಾಸಾದಂತಹ ಅಭ್ಯರ್ಥಿಗಳು ಯಾವ ಹುದ್ದೆಗೆ ಅಂದರೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು ಹಾಗೂ ಯಾವ ಯಾವ ದಾಖಲಾತಿಗಳು ಬೇಕಾಗುತ್ತದೆ. ಹಾಗೂ ಯಾರೆಲ್ಲಾ ಈ ಹುದ್ದೆಗೆ ಅರ್ಹರಿದ್ದಾರೆ ಈ ಅರ್ಜಿಯ ಪ್ರಾರಂಭ ದಿನಾಂಕ ಯಾವುದು ಹಾಗೂ ಕೊನೆಯ ದಿನಾಂಕ ಯಾವುದು.
ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಡಿಸೆಂಬರ್ 15ನೇ ತಾರೀಖಿನಂದು ಈ ಹುದ್ದೆಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸಬಹುದು ಎನ್ನುವಂತಹ ಮಾಹಿತಿಯನ್ನು ಸರ್ಕಾರ ಹೊರಡಿಸಿದೆ.
ಹುದ್ದೆಯ ಹೆಸರು :- ಪ್ರಕ್ರಿಯೆ ಸರ್ವರ್ ಹಾಗೂ ಪೀವನ್ ಹುದ್ದೆಗೆ ಇಲ್ಲಿ ನೀವು ಅರ್ಜಿಯನ್ನು ಸಲ್ಲಿಸಬಹುದು.
ಪ್ರಕ್ರಿಯೆ ಸರ್ವರ್ ಹುದ್ದೆಯಲ್ಲಿ 5 ಪೋಸ್ಟ್ ಗಳು ಖಾಲಿ ಇದ್ದು
ಪಿವನ್ ಹುದ್ದೆಯಲ್ಲಿ 28 ಪೋಸ್ಟ್ ಗಳು ಖಾಲಿ ಇದೆ.
ಪ್ರತಿಯೊಬ್ಬ ಕರ್ನಾಟಕದ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ಶೈಕ್ಷಣಿಕ ವಿದ್ಯಾರ್ಹತೆ :- ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
ವಯೋಮಿತಿ :- ಶಿವಮೊಗ್ಗ ಇ ಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರಅಭ್ಯರ್ಥಿಯು 16- ಜನವರಿ-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.
ಇಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ ಇದ್ದು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ಇದೆ. ಮೊದಲೇ ಹೇಳಿದಂತೆ ಇಲ್ಲಿ ಪುರುಷ ಹಾಗೂ ಮಹಿಳಾ ಅಭ್ಯರ್ಥಿ ಇಬ್ಬರು ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಶುಲ್ಕ :-
* ಎಸ್ ಸಿ, ಎಸ್ ಟಿ, PH ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
* 2a, 2b, 3a, 3b ಅಭ್ಯರ್ಥಿಗಳಿಗೆ 100 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.
* ಸಾಮಾನ್ಯ ಅಭ್ಯರ್ಥಿಗಳಿಗೆ 200 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ.
ಪಾವತಿಯ ವಿಧಾನ :- ಆನ್ಲೈನ್
ಆಯ್ಕೆ ಪ್ರಕ್ರಿಯೆ :- ಮೆರಿಟ್ ಪಟ್ಟಿ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಇಲ್ಲಿ ಯಾವುದೇ ರೀತಿಯ ಲಿಖಿತ ಪರೀಕ್ಷೆ ಹಾಗೂ ದೈಹಿಕ ಪರೀಕ್ಷೆ ಇರುವುದಿಲ್ಲ.
ವೇತನ :- ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ
* ಪ್ರಕ್ರಿಯೆ ಸರ್ವರ್ ಗೆ 19,950 ರಿಂದ 37,900 ವೇತನ ಸಿಗುತ್ತದೆ.
* ಪೇವನ್ ಗೆ 17,000 ರಿಂದ 28,950 ವೇತನ ಸಿಗುತ್ತದೆ.
ಅರ್ಜಿ ಪ್ರಾರಂಭ ದಿನಾಂಕ :- 15/12/2023
ಕೊನೆಯ ದಿನಾಂಕ :- 16/01/2024
ಹಾಗೂ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನಾಂಕ :- 17/01/2024
ಹುದ್ದೆಗಳ ಅಧಿಸೂಚನೆ
ಸಂಸ್ಥೆಯ ಹೆಸರು :- ಶಿವಮೊಗ್ಗ ಇಕೋರ್ಟ್ ( ಶಿವಮೊಗ್ಗ ಜಿಲ್ಲಾ ನ್ಯಾಯಾಲಯ )
ಪೋಸ್ಟ್‌ಗಳ ಸಂಖ್ಯೆ :- 33
ಉದ್ಯೋಗ ಸ್ಥಳ :- ಶಿವಮೊಗ್ಗ – ಕರ್ನಾಟಕ