ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ ತೆರೆಕಂಡು ಐದು ದಿನವಾಗಿದೆ ಐದು ದಿನವೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಆದರೂ ಕೂಡ ಕೆಲವು ಸಿನಿಮಾ ರಸಿಕರು ಮಾತ್ರ ಈ ಸಿನಿಮಾ ಸುದೀಪ್ ಅವರಿಗೆ ಹೊಂದುವಂತಹ ಸಿನಿಮಾ ಅಲ್ಲ ಈ ಸಿನಿಮಾ ಸುದೀಪ್ ಅವರು ಮಾಡಬಾರದಿತ್ತು ಅಂತ ಹೇಳಿಕೊಂಡಿದ್ದಾರೆ. ಆದರೆ ಕಿಚ್ಚ ಸುದೀಪ್ ಅವರು ಮಾತ್ರ ಯಾವಾಗಲೂ ಮಾಸ್ ಸಿನಿಮಾದಲ್ಲಿ ನಟನೆ ಮಾಡುವುದಕ್ಕಿಂತ ಕೆಲವೊಮ್ಮೆ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಇದೊಂದೇ ಕಾರಣಕ್ಕಾಗಿ ನಾನು ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಕೆಲವು ಕಡೆ ವಿಕ್ರಂತ್ ರೋಣ ಸಿನಿಮಾ ಓಡುತ್ತಿಲ್ಲ ಈ ಸಿನಿಮಾ ಫ್ಲಾಪ್
ಅಂತ ಹೇಳುತ್ತಿದ್ದರು ಆದರೆ ವಿಕ್ರಾಂತ್ ರೋಣ ಸಿನಿಮಾ ಮಾತ್ರ ಎಲ್ಲರ ನಿರೀಕ್ಷೆಗೂ ಮೀರಿದಂತಹ ಫಲಿತಾಂಶವನ್ನೇ ತಂದುಕೊಟ್ಟಿದೆ.
ಕನ್ನಡಕ್ಕಿಂತಲೂ ತೆಲುಗು, ತಮಿಳು, ಮತ್ತು ಹಿಂದಿಯಲ್ಲಿ ಹೆಚ್ಚು ವೀಕ್ಷಣೆಯನ್ನು ಗಳಿಸಿಕೊಂಡಿದೆ ಅಷ್ಟೇ ಅಲ್ಲದೆ ಪರ ರಾಜ್ಯದಲ್ಲಿ ವಿಕ್ರಂತ್ ರೋಣ ಸಿನಿಮಾದ ಅಬ್ಬರ ಹೆಚ್ಚಾಗಿಯೇ ಇದೆ. ಕನ್ನಡಿಗರು ಮಾತ್ರ ಇದು ರಂಗಿತರಂಗ ಸಿನಿಮಾದ ಭಾಗ ಎರಡರಂತಿದೆ ಎಂದು ಹೇಳುತ್ತಿದ್ದಾರೆ ಇದಕ್ಕೆ ಉತ್ತರ ನೀಡಿದಂತಹ ಕಿಚ್ಚ ಸುದೀಪ್ ಅವರು ನೀವು ಹಾಗೆಯೇ ತಿಳಿದುಕೊಳ್ಳಿ ಅದರಲ್ಲಿ ತಪ್ಪೇನಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ಇದೀಗ ಕಿಚ್ಚ ಸುದೀಪ್ ಅವರ ಸ್ವಭಾವ ಮತ್ತು ಗುಣವನ್ನು ಮತ್ತೊಮ್ಮೆ ಎತ್ತಿ ತೋರಿಸುವಂತಹ ಸಮಯ ಬಂದಿದೆ ಅಂತ ಹೇಳಬಹುದು. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಅವರು ಒಬ್ಬ ನಟ ಇದನ್ನು ಹೊರತುಪಡಿಸಿದರೆ ಹಲವಾರು ಸಮಾಜಮುಖಿ ಕೆಲಸವನ್ನು ಮಾಡಿದ್ದಾರೆ ಬಡವರಿಗೆ ಸಹಾಯ ಮಾಡಿದ್ದಾರೆ ವಿದ್ಯಾರ್ಥಿಗಳಿಗೆ ನೆರವನ್ನು ನೀಡಿದ್ದಾರೆ.
ಇಷ್ಟು ಮಾತ್ರವಲ್ಲದೆ ಕಲಾವಿದರಿಗೂ ಕೂಡ ಸಾಕಷ್ಟು ಸಹಾಯ ಮಾಡಿದ್ದಾರೆ ಈ ಬಾರಿ ಅವರು ವಿಕ್ರಾಂತ್ ರೋಣ ಸಿನಿಮಾ ಯಶಸ್ವಿ ಪಡೆದ ಕಾರಣ ಈ ಸಿನಿಮಾವನ್ನು ನಿರ್ದೇಶನ ಮಾಡಿದ ಅನುಪ್ ಭಂಡಾರಿ ಅವರಿಗೆ ದುಬಾರಿ ಬೆಲೆಯ ಕಾರು ಒಂದನ್ನು ಗಿಫ್ಟ್ ನೀಡಿದ್ದಾರೆ. ಸುದೀಪ್ ಅವರು ಸಿನಿಮಾ ರಂಗದವರಿಗೆ ಇದೇ ಮೊದಲಿನಲ್ಲ ಈ ರೀತಿ ಉಡುಗೊರೆ ನೀಡುತ್ತಿರುವುದು ಇದಕ್ಕಿಂತ ಹಿಂದೆಯೂ ಕೂಡ ಸಾಕಷ್ಟು ಜನರಿಗೆ ಉಡುಗೊರೆಯನ್ನು ನೀಡಿದ್ದಾರೆ ಅದು ಯಾವುದು ಎಂಬುದನ್ನು ನೋಡುವುದಾದರೆ. ರಾ ರಾ ರಕ್ಕಮ್ಮ ಹಾಡಿಗೆ ಜಾನಿ ಮಾಸ್ಟರ್ ಸರ್ ಗೆ ಅಭಿನಂದನಾರ್ಥ 18ಲಕ್ಷ ಮೌಲ್ಯದ ಕಾರ್ ಉಡುಗೊರೆ ನೀಡಿದ್ದಾರೆ. ಜೊತೆಗೆ ಕಿಚ್ಚ ಸುದೀಪ್ ಅವರ ಬಾಡಿ ಗಾರ್ಡ್ ಆದಂತಹ ಕಿಚ್ಚ ಕಿರಣಗ್ ಅವರಿಗೆ ತಾಯಲ್ ಎನ್ ಫೀಲ್ಡ್ ಗಾಡಿಯನ್ನು ಹುಟ್ಟು ಹಬ್ಬದ ಉಡುಗೊರೆಯಾಗಿ ನೀಡಿದ್ದರು.
ಅಷ್ಟು ಮಾತ್ರವಲ್ಲದೆ ವಿಕ್ರಾಂತ್ ರೋಣ ಸಿನೆಮಾ ನಿರ್ದೇಶಕ ಅನೂಪ್ ಅವರಿಗೆ ಗಿಫ್ಟ್ ನೀಡಿದ್ದಾರೆ ಎಂದು ರಾಮು ಅವರು ಸಂದರ್ಶನದಲ್ಲಿ ತಿಳಿಸಿದ್ದು ಎಲ್ಲರಿಗೂ ಅಚ್ಚರಿ ತಂದಿತು. ಸಂದರ್ಶನದಲ್ಲಿ ರಾಮು ಅವರು ಅನುಪ್ ಸರ್ ಕ್ಯಾಬಿನಲ್ಲಿ ಬಂದಿದ್ದನ್ನು ಸುದೀಪ್ ಸರ್ ನೋಡಿದ್ದರು. ಬಳಿಕ ಹೈದ್ರಾಬಾದ್ ಬಂದ ಸಮಯದಲ್ಲಿ ಅನೂಪ್ ಸರ್ ಗಾಗಿ ಒಂದು ಕಾರ್ ತೆಗೆದುಕೊಂಡು ಗಿಫ್ಟ್ ನೀಡಿದರು. ಈ ಮೂಲಕ 25 ಲಕ್ಷದ ಕಿಯಾ ಕಾರು ಅನೂಪ್ ಅವರ ಹುಟ್ಟು ಹಬ್ಬಕ್ಕೆ ಗಿಫ್ಟ್ ಆಗಿ ನೀಡಿದ್ದಾರೆ ಈ ಮೂಲಕ ಅವರಿಗಾಗಿ ಅವರು ಸ್ವಾರ್ಥ ಬದುಕು ಸಾಗಿಸಿಲ್ಲ ಎಂದು ರಾಮು ಹೇಳಿದ್ದಾರೆ. ಸಣ್ಣ ಪುಟ್ಟ ವಿಚಾರದಲ್ಲಿ ಖುಷಿ ಪಡುವ ಇವರು ಮನಸ್ಸು ಅಪ್ಪಟ ಬಂಗಾರದಂತದ್ದು ಎಂದು ರಾಮು ಅವರು ತಿಳಿಸಿದ್ದಾರೆ.