ದರ್ಶನ್ ಗೆ ಚಪ್ಪಲಿಯಲ್ಲಿ ಒಡೆದವನು ಯಾವನಾದ್ರೂ ಆಗಿರಲಿ ಆದ್ರೆ ಯಾವ್ದೇ ಕಾರಣಕ್ಕೂ ಮಾತ್ರ ಸಿಕ್ಕಕೋಬೇಡಿ, ಒಂದು ವೇಳೆ ಸಿಕ್ಕಾಕೊಂಡ್ರೆ ಏನಾಗ್ತಿರ ಗೊತ್ತಾ.? ಖಡಕ್ ಎಚ್ಚರಿಕೆ ಕೊಟ್ಟ ಸುದೀಪ್

ಕಷ್ಟದ ಕಾಲದಲ್ಲಿ ಸ್ನೇಹಿತನನ್ನು ಬಿಟ್ಟು ಕೋಡದ ಕಿಚ್ಚ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾ ಬಿಡುಗಡೆಗೊ ಮುನ್ನವೇ ಸಾಕಷ್ಟು ವಿವಾದವನ್ನು ತನ್ನ ಮೈ ಮೇಲೆ ಇಳಿದುಕೊಂಡಿರುವ ವಿಚಾರ ನಿಮಗೆ ತಿಳಿದೇ ಇದೆ. ಅದರಲ್ಲಿಯೂ ಕೂಡ ಭಾನುವಾರ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಹಾಡನ್ನು ರಿಲೀಸ್ ಮಾಡುವಂತಹ ಸಮಯದಲ್ಲಿ ಕಿಡಿಗೇಡಿ ಒಬ್ಬರು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದಿದ್ದರೆ. ಇದು ನಿಜಕ್ಕೂ ಕೂಡ ಒಂದು ದೊಡ್ಡ ಆ.ಘಾ.ತ.ಕಾ.ರಿ ವಿಚಾರ ಅಂತಾನೆ ಹೇಳಬಹುದು.

ದರ್ಶನ್ ಮೇಲೆ ಇಂಥದೊಂದು ಕೃತ್ಯ ಎಸಗಿದ್ದಾರೆ ಎಂಬ ವಿಚಾರ ವೈರಲ್ ಆಗುತ್ತಿದ್ದ ಹಾಗೆ ದರ್ಶನ್ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ಸಂಬಂಧ ಪಟ್ಟಂತಹ ನಟ ನಟಿಯರು ಎಲ್ಲರೂ ಕೂಡ ದರ್ಶನ್ ಪರವಾಗಿ ನಿಂತಿದ್ದಾರೆ. ಇನ್ನು ದರ್ಶನ ಹಾಗೂ ಸುದೀಪ್ ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದರು ಆದರೆ ಕೆಲವು ಕಾರಣಾಂತರಗಳಿಂದ ಕಳೆದ ನಾಲ್ಕೈದು ವರ್ಷಗಳಿಂದ ಅವರಿಬ್ಬರೂ ದೂರಾಗಿದ್ದಾರೆ. ದೂರಾಗಿದ್ದರು ಕೂಡ ಅವರಿಬ್ಬರ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶವಿಲ್ಲ ಒಬ್ಬರ ಮೇಲೆ ಮತ್ತೊಬ್ಬರಿಗೆ ಅಪಾರ ಗೌರವವಿದೆ.

ಇಬ್ಬರೂ ಕೂಡ ಒಟ್ಟಾಗಿ ಇಲ್ಲ, ಮಾತನಾಡುತ್ತಿಲ್ಲ ಎಂಬುದನ್ನು ಬಿಟ್ಟರೆ ಒಬ್ಬ ಸ್ನೇಹಿತನ ವಿಚಾರಕ್ಕೆ ಬಂದರೆ ಮತ್ತೊಬ್ಬ ಸ್ನೇಹಿತರ ಸುಮ್ಮನೆ ಇರುವುದಿಲ್ಲ ಎಂಬುದು ಇದೀಗ ಸಾಬೀತು ಆಗಿದೆ. ಹೌದು ನಟ ದರ್ಶನ್ ಮೇಲೆ ಚಪ್ಪಲಿ ಎಸೆತವನ್ನು ಖಂಡಿಸಿ ಕಿಚ್ಚ ಸುದೀಪ್ ಮೊನ್ನೆ ಅಷ್ಟೇ ತಮ್ಮ ಟ್ವಿಟರ್ ಖಾತೆಯಲ್ಲಿ ದೀರ್ಘ ಸಾಲುಗಳನ್ನು ಬರೆದುಕೊಂಡಿದ್ದರು. “ಎಲ್ಲರನ್ನೂ ಗೌರವಿಸಿ ಯಾರಿಗೂ ಕೂಡ ಇಂಥ ಅಪಮಾನ ಮಾಡಬೇಡಿ ದರ್ಶನ್ ಮತ್ತು ನನ್ನ ನಡುವೆ ಸರಿ ಇಲ್ಲದೆ ಇದ್ದರೂ ಕೂಡ ಇಂತಹ ಕೆಲಸ ಮಾಡಿದಾಗ ಅದನ್ನು ಸಹಿಸಿಕೊಂಡು ಸುಮ್ಮನೆ ಇರುವುದಕ್ಕೆ ನನ್ನಿಂದ ಸಾಧ್ಯವಿಲ್ಲ ಇದರ ಬಗ್ಗೆ ನಾನು ಮಾತನಾಡಲೇಬೇಕು ಎಂದು ಹೇಳಿಕೊಂಡಿದ್ದರು”.

ಇದು ಒಂದು ಕಡೆಯಾದರೆ ಕಳೆದ ರಾತ್ರಿ ಮತ್ತೊಂದು ವಿಡಿಯೋ ಮಾಡುವುದರ ಮೂಲಕ ದರ್ಶನ್ ಗೆ ಚಪ್ಪಲಿಯಲ್ಲಿ ಹೊಡೆದ ವ್ಯಕ್ತಿಗೆ ಖಡಕ್ ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಹೌದು ಅದೇನೆಂದರೆ “ಚಪ್ಪಲಿಯಲ್ಲಿ ಹೊಡೆದದ್ದು ಯಾರಾದರೂ ಆಗಿರಲಿ ಯಾವ ನಟನ ಅಭಿಮಾನಿಯಾದರು ಆಗಿರಲಿ ಆದರೆ ಯಾವುದೇ ಕಾರಣಕ್ಕೂ ಕೂಡ ನೀವು ಸಿಕ್ಕಿ ಹಾಕಿಕೊಳ್ಳಬೇಡಿ ಒಂದು ವೇಳೆ ಸಿಕ್ಕಿ ಹಾಕಿಕೊಂಡರೆ ಆ ನಟನ ಅಭಿಮಾನಿಗಳು ಎಷ್ಟು ಜನ ಇದ್ದಾರೋ ಅಷ್ಟು ಜನರಿಂದ ನೀವು ಒದೆ ತಿನ್ನುತ್ತೀರಾ ಎಂದು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ”.

ಕಿಚ್ಚ ಸುದೀಪ್ ಹೇಳಿಕೆ ಕೊಟ್ಟಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ದರ್ಶನ್ ಅಭಿಮಾನಿಗಳು ಕೂಡ ಇದಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಸ್ನೇಹ ಎಂಬುವುದು ಬರಿ ಮಾತಿನಲ್ಲಿ ಮಾತ್ರ ಇರುವುದಿಲ್ಲ ಮನಸ್ಸಿನಲ್ಲಿಯೂ ಕೂಡ ಇರುತ್ತದೆ ಅದರಲ್ಲಿಯೂ ಕೂಡ ಕಷ್ಟದ ಸಮಯದಲ್ಲಿ ಜೀವನ ಗೆಳೆಯನನ್ನು ಎಂದಿಗೂ ಕೂಡ ಕಿಚ್ಚ ಸುದೀಪ್ ಕೈಬಿಡುವುದಿಲ್ಲ ಎಂಬುದಕ್ಕೆ ಇದೇ ನೈಜ ಉದಾಹರಣೆ.‌

ಕಿಚ್ಚ ಸುದೀಪ್ ಇದೇ ಮೊದಲೆನಲ್ಲ ದರ್ಶನ್ ಗೆ ಈ ರೀತಿಯ ಸಹಾಯ ಮಾಡಿರುವುದು 2010ರಲ್ಲಿ ಸಾರಥಿ ಸಿನಿಮಾ ಬಿಡುಗಡೆ ವೇಳೇ ಜೈ.ಲಿನಲ್ಲಿ ದರ್ಶನ್ ಇದ್ದಾಗ ಈ ಸಿನಿಮಾವನ್ನು ರಿಲೀಸ್ ಮಾಡಿ ಅವರಿಗೆ ಎಲ್ಲಾ ರೀತಿಯ ಸಹಾಯ ಮಾಡಿದ್ದರು. ಇಬ್ಬರು ನಡುವೆ ಏನೇ ಮನಸ್ತಾಪ ಕಲಹಗಳಿದ್ದರೂ ಕೂಡ ಕಷ್ಟದ ಸಮಯದಲ್ಲಿ ಒಂದಾಗಿದ್ದನ್ನು ನೋಡಿದಂತಹ ಕರುನಾಡ ಜನತೆ ಕಿಚ್ಚ ಸುದೀಪ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದೇನೆ ಆಗಲಿ ದರ್ಶನ್ ಅವರಿಗೆ ಇಂತಹ ಅಪಮಾನ ಮಾಡಿದ್ದು ನಿಜಕ್ಕೂ ಕೂಡ ತಪ್ಪು ಈ ಘಟನೆಯಿಂದಾದರೂ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಮೊದಲಿನಂತೆ ಒಂದಾಗಲಿ ಎಂದು ಹಾರೈಸೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ

Leave a Comment

WhatsApp Group Join Now
Telegram Group Join Now