ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kicha Sudeep) ಅವರ ಮ್ಯಾಕ್ಸ್ ಚಿತ್ತವು (Max Movie) ಬಿಡುಗಡೆ ಆಗಿದೆ. ವಿಕ್ರಾಂತ್ ರೋಣ ಬಳಿಕ ಬಹಳ ಗ್ಯಾಪ್ ನಲ್ಲಿ ಮ್ಯಾಕ್ಸ್ ಚಿತ್ರ ಬಿಡುಗಡೆಯಾಗಿದ್ದು, ತಡವಾದರೂ ಅವರ ಅಭಿಮಾನಿಗಳ ಪಾಲಿಗೆ ಹಿಟ್ ಸಿನಿಮಾ ಕೊಟ್ಟು ಖುಷಿಪಡಿಸಿದ್ದಾರೆ ಸುದೀಪ್.
ಎಲ್ಲಿಯೂ ಯಾವುದೇ ನೆಗೆಟಿವ್ ವಿಮರ್ಶೆ ಇಲ್ಲದೆ ಸಿನಿಮಾ ಬಗ್ಗೆ ಎಲ್ಲರೂ ಮಾತನಾಡುತ್ತಿದ್ದಾರೆ ಇದೇ ಸಂಭ್ರಮದಲ್ಲಿ ಮ್ಯಾಕ್ಸ್ ಚಿತ್ರ ತಂಡವು ಸಕ್ಸಸ್ ಮೀಟ್ ಕೂಡ ಅರೆಂಜ್ ಮಾಡಿದ್ದು ಅಲ್ಲಿಗೆ ಬಂದಿದ್ದ ಮಾಧ್ಯಮ ಮಿತ್ರರ ಪ್ರಶ್ನೆಗೆ ಉತ್ತರಿಸುವಾಗ ಬಾಸಿಸಂ ಕಾಲ ಮುಗೀತು ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು ಎನ್ನುವ ಕಾಂಟ್ರವರ್ಸಿ ಬಗ್ಗೆ ಕೂಡ ಮುಕ್ತವಾಗಿ ಮಾತನಾಡಿ ಕ್ಲಾರಿಟಿ ಕೊಟ್ಟಿದ್ದಾರೆ.
ದರ್ಶನ್ ನೇರವಾಗಿ ದರ್ಶನ್ ಅವರ ಹೆಸರನ್ನು ಕೂಡ ಪ್ರಸ್ತಾಪಿಸಿ ಕಿಚ್ಚ ಮಾತನಾಡಿದ್ದಾರೆ ಈ ಬಗ್ಗೆ ಪ್ರಶ್ನೆ ಎದುರಾಗುತ್ತಿದ್ದಂತೆ ನೇರವಾಗಿ ಪ್ರಶ್ನೆ ಕೇಳಿ, ನಾನು ನೇರವಾಗಿ ಉತ್ತರ ಕೊಡಲು ಬಯಸುತ್ತಿದ್ದೇನೆ ನೀವು ಕೇಳುತ್ತಿರುವುದು ಏನೆಂದು ಗೊತ್ತಾಯಿತು. ಅಂದು ನನ್ನ ಸ್ನೇಹಿತ ಹಾಗೂ ಅಭಿಮಾನಿ ಆಗಿರುವ ನನ್ನ ಹುಡುಗ ಪ್ರದೀಪ್ ಸಿನಿಮಾ ನೋಡಿ ಆಚೆ ಬರುವಾಗ ಅಲ್ಲಿ ನನ್ನ ಇನ್ನಷ್ಟು ಅಭಿಮಾನಿಗಳು ಕಿಚ್ಚ ಮಾಸ್ ಎಂದು ಕರೆಯುತ್ತಿದ್ದರು.
ಈ ಕಾರಣಕ್ಕಾಗಿ ಅವರು ವಿಶ್ ಮಾಡಲು ಮನೆಗೆ ಕೇಕ್ ತರುವಾಗ ಕೇಕ್ ಮೇಲೆ ಇನ್ ಮೇಲೆ ಬಾಸಿಸಂ ಮುಗೀತು ಮ್ಯಾಕ್ಸಿಸಂ ಕಾಲ ಶುರು ಎಂದು ಬರೆಸಿದ್ದರು. ಆದರೆ ಇದನ್ನು ಮೊದಲ ಬಾರಿಗೆ ಯಾವುದೋ ಮಾಧ್ಯಮದಲ್ಲಿ ಬಹಳ ನೆಗೆಟಿವ್ ಆಗಿ ತೋರಿಸಲಾಯಿತು, ಅದರಲ್ಲೂ ನೇರವಾಗಿ ದರ್ಶನ್ ಗೆ ಸುದೀಪ್ ಟಾಂಟ್ ಕೊಟ್ಟರೆ? ಎಂದು ಸುದ್ದಿ ಮಾಡಿದರು.
ಅದು ಇನ್ನು ನನ್ನ ಕಿವಿಯಲ್ಲಿ ಸದ್ದಾಗುತ್ತದೆ ಈ ರೀತಿ ದೃಷ್ಟಿಕೋನ ಕೊಟ್ಟಿದ್ದು ಯಾರು ಇದರಿಂದ ಹುಡುಗನಿಗೆ ಏನಾದರೂ ಆದರೆ ಜವಾಬ್ದಾರಿ ಮೀಡಿಯಾ ತೆಗೆದುಕೊಳ್ಳುತ್ತದಾ? ಇದೇ ಮಾಧ್ಯಮಗಳಲ್ಲಿ ಕುಳಿತು ದರ್ಶನ್ ಬಗ್ಗೆಯೂ ಮಾತನಾಡಿದ್ದೇನೆ ನನ್ನ ಅವರ ನಡುವೆ ಏನು ಇಲ್ಲ ಬಹಳ ಕಷ್ಟಪಟ್ಟು ಅವರು ಜೀವನದಲ್ಲಿ ಮೇಲೆ ಬಂದಿದ್ದಾರೆ ಎಂದು ಹೇಳಿದ ಮೇಲೆ ಟಾಂಟ್ ಕೊಡುವುದು ಎಲ್ಲಿಂದ ಬಂತು.
ಈಗಾಗಲೇ ಇಂಡಸ್ಟ್ರಿ ಬಹಳ ನೋವಿನಲ್ಲಿ ಇದೆ ನಾವೆಲ್ಲರೂ ಸೇರಿ ಒಳ್ಳೆ ಸಿನಿಮಾಗಳನ್ನು ಮಾಡಿ ಸಾಧ್ಯವಾದಷ್ಟು ಚಿತ್ರರಂಗವನ್ನು ಉಳಿಸಬೇಕು, ಬೆಳೆಸಬೇಕು. ನಮ್ಮ ಹಿರಿಯರು ಬಹಳಷ್ಟು ಶ್ರಮದಿಂದ ಇದನ್ನು ಕಟ್ಟಿದ್ದಾರೆ. ನಾವು ಇದನ್ನು ಮುಂದಿನ ತಲೆಮಾರಿಗೆ ವರ್ಗಾಯಿಸುವ ಜವಾಬ್ದಾರಿ ಇದೆ.
ಈ ಕೆಲಸ ಮಾಡುವುದು ಬಿಟ್ಟು ಈ ರೀತಿ ಕಾಂಟ್ರವರ್ಸಿಗಳಲ್ಲಿ ಸಿಲುಕಿಕೊಂಡು ಇರಬೇಕಾ ಇದಕ್ಕೆಲ್ಲ ಪರೋಕ್ಷವಾಗಿ ಕಾರಣ ಯಾರು? ಈ ರೀತಿ ಪರ್ಸ್ಪೆಕ್ಟಿವ್ ಕೊಟ್ಟಿದ್ದು ಯಾರು? ಇದು ತಪ್ಪು ತಾನೇ? ಈಗಾಗಲೇ ಆನ್ಲೈನ್ ನಲ್ಲಿ ಫ್ಯಾನ್ಸ್ ವಾರ್ ಇದ್ದೇ ಇದೆ ಜೊತೆಗೆ ಜವಾಬ್ದಾರಿ ಇಲ್ಲದ ಮೀಡಿಯಾ ಕೂಡ ಯಾಕೆ? ಏನು? ಎಲ್ಲಿ ಎನ್ನುವ ಯಾವುದೇ ವಿಚಾರ ವಿಚಾರಿಸದೆ ಇಷ್ಟ ಬಂದ ಹಾಗೆ ಹರಿ ಬಿಟ್ಟರೆ ಜವಾಬ್ದಾರಿ ಯಾರು?
ನಾನು ನನ್ನ ತಂದೆಯನ್ನು ಬಾಸ್ ಎನ್ನುತ್ತೇನೆ, ಈ ಸುದ್ದಿ ಯಾವ ಮೀಡಿಯ ಮಾಡಿದ್ದು ಅವರಿಗೂ ಅವರ ಕಚೇಯಲ್ಲಿ ಬಾಸ್ ಬರುತ್ತಾರೆ, ಇಂಡಸ್ಟ್ರಿಯಲ್ಲಿ ಹೇಳುವುದಾದರೆ ದ್ರುವ ಬಾಸ್, ಉಪ್ಪಿ ಬಾಸ್, ಶಿವಣ್ಣ ಬಾಸ್ ಹೀಗೆ ಅವರವರ ಅಭಿಮಾನಿಗಳು ತಮ್ಮ ಹೀರೋಗೆ ಬಾಸ್ ಎನ್ನುತ್ತಾರೆ ಹೀಗಾಗಿ ಇದು ಯಾವ ಬಾಸ್ ಗೆ ಹೇಳಿದ್ದು, ಎಂದು ಅರ್ಥಮಾಡಿಕೊಳ್ಳಬೇಕು ಇದೆಲ್ಲ ಬಿಡಿ ಖಂಡಿತವಾಗಿಯೂ ಆ ಹುಡುಗನ ಮನಸ್ಸು ಆ ರೀತಿ ಇಲ್ಲವೇ ಇಲ್ಲ ಎಂದು ವಿಷಯ ಇತ್ಯರ್ಥ ಮಾಡುವ ಪ್ರಯತ್ನ ಮಾಡಿದ್ದಾರೆ.