ಕಿಡ್ನಿ ಫೇಲ್ಯೂರ್ ಅಥವಾ ಕಿಡ್ನಿಗೆ ಇನ್ಫೆಕ್ಷನ್ ಈ ರೀತಿ ಕಿಡ್ನಿ ಗೆ ಸಂಬಂಧಿಸಿದ ಸಮಸ್ಯೆಗಳು ಜನಸಾಮಾನ್ಯರಿಗೆ ಬಂದರೆ ಅದನ್ನು ಸಹಿಸಿಕೊಳ್ಳುವುದು ಬಹಳ ಕಷ್ಟ. ಯಾಕೆಂದರೆ ಕಿಡ್ನಿ ಸಮಸ್ಯೆ ಇದ್ದರೆ ಯಾವುದೇ ಸಾಮಾನ್ಯ ವೈದ್ಯರು ಆ ರೋಗಿಗಳನ್ನು ಪರೀಕ್ಷಿಸುವುದಿಲ್ಲ, ತಜ್ಞ ವೈದ್ಯರ ಬಳಿಗೆ ಹೋಗಬೇಕು ಇನ್ನು ಮುಂತಾದ ಸಮಸ್ಯೆಗಳಿರುತ್ತವೆ.
ಒಂದು ಬಾರಿ ಕಿಡ್ನಿಗೆ ಇನ್ಫೆಕ್ಷನ್ ಆದರೆ ಅದು ಜೀವನಪೂರ್ತಿ ಗುಣವಾಗುವುದಿಲ್ಲ ಎನ್ನುವ ತಪ್ಪು ತಿಳುವಳಿಕೆ ಕೂಡ ಇದೆ. ಒಂದು ವೇಳೆ ಡಯಾಲಿಸಿಸ್ ಮಾಡಲು ಹೇಳಿದರೆ ಬಡ ಜನರಿಗೆ ಬಹಳ ದೊಡ್ಡ ಹೊರೆಯಾಗಿ ಬಿಡುತ್ತದೆ, ಈ ರೀತಿ ಕಿಡ್ನಿ ಸಮಸ್ಯೆ ಇದ್ದವರು ಯಾರು ಡಯಾಲಿಸಿಸ್ ಗೆ ಒಳಗಾಗಬೇಕು, ಕ್ರಿಯೇಟಿನೈನ್ ಲೆವೆಲ್ ಕಡಿಮೆ ಮಾಡಿಕೊಳ್ಳುವುದು ಹೇಗೆ ಎನ್ನುವ ಕುರಿತು ಈ ಅಂಕಣದಲ್ಲಿ ಕೆಲ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.
ಕಿಡ್ನಿ ಸಮಸ್ಯೆ ಬಂದ ತಕ್ಷಣ ಎಲ್ಲರೂ ಡಯಾಲಿಸಿಸ್ ಗೆ ಹೋಗಬೇಕಾದ ಅವಶ್ಯಕತೆ ಇಲ್ಲ. ಯಾಕೆಂದರೆ ಡಯಾಲಿಸಿಸ್ ಎನ್ನುವುದು ಬಹಳ ದೊಡ್ಡ ಖರ್ಚು ಮಾತ್ರ ಅಲ್ಲದೆ ಮನೆಯಲ್ಲಿ ಇರುವ ಇತರ ಸದಸ್ಯರ ಮನಸ್ಸನ್ನು ಕೂಡ ಕೆಡಿಸುವ ವಿಷಯವಾಗಿದೆ. ಪದೇ ಪದೇ ಆಸ್ಪತ್ರೆಗೆ ತಿರುಗುವುದು, ಆ ಖರ್ಚು ವೆಚ್ಚಗಳು ಬಹಳ ನೋ’ವನ್ನುಂಟು ಮಾಡುತ್ತವೆ.
ಹಾಗಾಗಿ ಕಿಡ್ನಿ ಸಮಸ್ಯೆ ಇದ್ದರೆ ತಕ್ಷಣವೇ ಡಯಾಲಿಸಿಸ್ ಎಂದು ಡಿಸೈಡ್ ಆಗಬೇಡಿ ಯಾರಿಗೆ ಮೂತ್ರ ವಿಸರ್ಜನೆ ಮಾಡಲು ಸಮಸ್ಯೆ ಇದೆ ಉಸಿರಾಟದ ತೊಂದರೆ ಆಗುತ್ತಿದೆ ಮತ್ತು ರಕ್ತದಲ್ಲಿ ಹಿಮೋಗ್ಲೋಬಿನ್ ಲೆವೆಲ್ 7% ಗಿಂತ ಕಡಿಮೆ ಇದೆ ಅಂತಹವರು ಮಾತ್ರ ಡಯಾಲಿಸಿಸ್ ಮಾಡಿಸುವ ಅವಶ್ಯಕತೆ ಇರುತ್ತದೆ.
ಮೊದಲಿಗೆ ಈ ರೀತಿ ಸಮಸ್ಯೆಗಳು ಯಾಕೆ ಬರುತ್ತವೆಂದರೆ ನಾವು ಹೆಚ್ಚಾಗಿ ಮಾತ್ರೆ ಇಂಜಕ್ಷನ್ ಮುಂತಾದ ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಅಥವಾ ಆಕ್ಸಿಡೆಂಟ್ ಆಗಿ ಕಿಡ್ನಿ ಸಮಸ್ಯೆ ಬರಬಹುದು, ಕಿಡ್ನಿ ಭಾಗದಲ್ಲಿಗೆ ಉಂಟಾಗುವ ಅಶುದ್ಧತೆಯಿಂದ ಇನ್ಫೆಕ್ಷನ್ ಅಥವಾ ಹೆರಿಡಿಟಿಯಿಂದ ಕೂಡ ವಂಶಪಾರಂಪರ್ಯವಾಗಿ ಈ ಸಮಸ್ಯೆ ಬರಬಹುದು. BP ಶುಗರ್, ಮುಂತಾದ ಆರೋಗ್ಯ ಸಮಸ್ಯೆ ಇರುವವರಿಗೆ ಬರಬಹುದು, ಅತಿಯಾದ ಆಲ್ಕೋಹಾಲ್ ಸೇವನೆ ಕೂಡ ಒಂದು ಕಾರಣ ಆಗಿರಬಹುದು.
ಈ ರೀತಿ ಕಿಡ್ನಿ ಫೇಲ್ಯೂರ್ ಆಗೋದಕ್ಕೆ ಕಿಡ್ನಿಗೆ ಇನ್ಫೆಕ್ಷನ್ ಆಗೋದಕ್ಕೆ ಹಲವಾರು ಕಾರಣಗಳಿವೆ. ಯಾವುದೇ ಕಾರಣಗಳು ಇದ್ದರೂ ಒಮ್ಮೆ ನೀವು ಇದನ್ನು ಗುಣಪಡಿಸಿಕೊಳ್ಳಲು ಮನಸ್ಸು ಮಾಡಿದರೆ ಕೇವಲ ಒಂದೇ ತಿಂಗಳಲ್ಲಿ ನಿಮ್ಮ ಕ್ರಿಯೇಟಿನೈನ್ ಕಡಿಮೆ ಮಾಡಿಕೊಳ್ಳಬಹುದು, ಅದಕ್ಕಾಗಿ ಈಗ ನಾವು ಹೇಳುವ ಈ ಆಹಾರ ಪದ್ಧತಿ ರೂಢಿ ಮಾಡಿಕೊಳ್ಳಿ.
ಮೊದಲಿಗೆ ದಿನಕ್ಕೆ 5 ಗ್ರಾಂ ಮಾತ್ರ ಉಪ್ಪಿನ ಸೇವನೆ ಮಾಡಬೇಕು, ಒಂದು ಲೀಟರ್ ಗಿಂತ ಹೆಚ್ಚು ನೀರು ಕುಡಿಯಬಾರದು. ಆಹಾರದಲ್ಲಿ ಅಕ್ಕಿ, ಗೋಧಿ, ಜೋಳ, ರೊಟ್ಟಿ, ಸಿರಿಧಾನ್ಯ ಇವುಗಳ ಪ್ರಮಾಣ ಊಟದಲ್ಲಿ 25% ಮಾತ್ರ ಇರಬೇಕು ಉಳಿದ 75 ಪರ್ಸೆಂಟ್ ಸೊಪ್ಪು ಮತ್ತು ಧಾನ್ಯಗಳು ಇರಬೇಕು.
ಅದರಲ್ಲೂ ಸೊಪ್ಪಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸುವುದರಿಂದ ಅದ್ಭುತವಾದ ರಿಸಲ್ಟ್ ಕಾಣಬಹುದು. ಆದರೆ ಧಾನ್ಯಗಳಲ್ಲಿ ತೊಗರಿಬೇಳೆ ಹಾಗೂ ಹುರುಳಿಗಳನ್ನು ಸೇವಿಸಬಾರದು ಯಾಕೆಂದರೆ ಅವು ಸುಲಭವಾಗಿ ಜೀರ್ಣವಾಗುವುದಿಲ್ಲ ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ದೂರ ಇರಬೇಕು.
ಒಗ್ಗರಣೆಗೆ ಬಿಟ್ಟು ಎಣ್ಣೆ ಯಾವುದಕ್ಕೂ ಬಳಸಬಾರದು, ಆಲ್ಕೋಹಾಲ್ ನಿಂದ ದೂರ ಇರಬೇಕು, ಯಾವುದೇ ರೀತಿಯ ಜ್ಯೂಸ್ ಗಳನ್ನು ಕೂಡ ಕುಡಿಯಬಾರದು. ಈ ರೀತಿ ಒಂದು ತಿಂಗಳು ಕಟ್ಟುನಿಟ್ಟಾಗಿ ಪಥ್ಯದಲ್ಲಿ ಇದ್ದರೆ ಬಹಳ ಪರಿಣಾಮಕಾರಿಯಾಗಿ ರಿಸಲ್ಟ್ ಕಾಣುತ್ತೀರಿ. ಈ ವಿಚಾರದ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.