ನಟ ಕಿಶೋರ್ ತಮ್ಮ ಅದ್ಭುತವಾದ ಅಭಿನಯನಿಂದಲೇ ಎಲ್ಲರ ಮನೆ ಮಾತಾಗಿದ್ದಾರೆ. ಸುಮಾರು ಎರಡು ದೇಶಕದಿಂದಲೂ ಕೂಡ ಚಿತ್ರರಂಗದಲ್ಲಿ ಹಲವಾರು ವಿಭಿನ್ನ ರೀತಿಯ ಕಥೆಗಳನ್ನು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಮನರಂಜನೆಯನ್ನು ನೀಡಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ನಟ ಕಿಶೋರ್ ಅವರು ನೀಡುವಂತಹ ಹೇಳಿಕೆಗಳು ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ಸಿನಿಮಾ ನಮ್ಮ ಕನ್ನಡ ಸಿನಿಮಾವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡ ಸಿನಿಮಾ.
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೊಂದು ಮೈಲಿಗಲ್ಲನ್ನು ಸೃಷ್ಟಿ ಮಾಡಿದ ಸಿನಿಮಾ ಅಂತಾನೆ ಹೇಳಬಹುದು. ಕನ್ನಡದವರು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡಬಹುದು ಎಂಬುದನ್ನು ಎತ್ತಿ ತೋರಿಸಿದಂತಹ ಸಿನಿಮಾ ಹಾಗಾಗಿ ಕೆಜಿಎಫ್ ಸಿನಿಮಾವನ್ನು ತುಂಬಾ ಜನ ಹೊಗಳುತ್ತಾರೆ. ಇನ್ನು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ದಾಟಿದ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಕೂಡ ಪಾತ್ರವಾಗಿದೆ. ಸುಮಾರು ಐದು ಭಾಷೆಯಲ್ಲಿ ತೆರೆ ಕಂಡಂತಹ ಈ ಸಿನಿಮಾವನ್ನು ಈಗಲೂ ಎಲ್ಲರೂ ಹೊಗಳುತ್ತಿದ್ದಾರೆ ಅಷ್ಟೇ ಅಲ್ಲದೆ ಕೆಜಿಎಫ್ ಸಿನಿಮಾ ವನ್ನು ಬ್ರೇಕ್ ಮಾಡುವಂತಹ ಮತ್ತೊಂದು ಸಿನಿಮಾ ಇಲ್ಲಿಯವರೆಗೂ ರಿಲೀಸ್ ಆಗಿಲ್ಲ ಎಂಬುದು ಸಂತಸದ ವಿಚಾರ.
ಆದರೆ ನಟ ಕಿಶೋರ್ ಅವರು ಮಾತ್ರ ಮೊನ್ನೆಯಷ್ಟೇ ಸಂಚಲನಾತ್ಮಕ ಹೇಳಿಕೆಯನ್ನು ನೀಡುವುದರ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೌದು ಕಿಶೋರ್ ಅವರನ್ನು ಕೆ.ಜಿ.ಎಫ್. ಸಿನಿಮಾದ ಬಗ್ಗೆ ಪ್ರಶ್ನೆಯನ್ನು ಕೇಳಲಾಗುತ್ತದೆ ಆಗ ಕಿಶೋರ್ ಅವರು
“ನಾನು ಕೆಜಿಎಫ್ 2 ಸಿನಿಮಾ ಈವರೆಗೂ ನೋಡಿಲ್ಲ. ನೋಡಬೇಕು ಅಂತ ಅನಿಸಿಲ್ಲ. ನಾನು ನೋಡುವ ಚಿತ್ರಗಳೇ ಬೇರೆ. ನನ್ನ ಅಭಿರುಚಿಯ ಸಿನಿಮಾದಲ್ಲಿ ಅದು ಇಲ್ಲ’ ಎಂದು ಹೇಳುವ ಮೂಲಕ ಯಶ್ ಫ್ಯಾನ್ಸ್ ಅನ್ನು ಅವರು ಕೆಣಕಿದ್ದಾರೆ. ಹಾಗಾದರೆ, ಕಿಶೋರ್ ಯಾವ ರೀತಿಯ ಚಿತ್ರಗಳನ್ನು ನೋಡುತ್ತಾರೆ ಎನ್ನುವ ಪಟ್ಟಿಯನ್ನು ಕೊಡಲಿ ಎಂದು ಯಶ್ ಫ್ಯಾನ್ಸ್ ನಟನ ಮೇಲೆ ಗರಂ ಆಗಿದ್ದಾರೆ”.
ಕಿಶೋರ್ ನಟಿಸಿರುವ ಸಿನಿಮಾಗಳು, ಅವರ ಅಭಿರುಚಿಗೆ ತಕ್ಕದ್ದಾದ ಚಿತ್ರಗಳಾ ಎಂದು ಪ್ರಶ್ನೆಯನ್ನೂ ಹಲವರು ಮಾಡಿದ್ದಾರೆ. ನಟ ಕಿಶೋರ್ ಅವರು ಕೇವಲ ಇದೊಂದು ವಿಚಾರಕ್ಕೆ ಮಾತ್ರವಲ್ಲದೆ ಕಾಂತಾರಾ ಸಿನಿಮಾದ ವಿಚಾರವಾಗಿಯೂ ಕೂಡ ಮಾತನಾಡಿದ್ದಾರೆ. ಹೌದು ಕಾಂತಾರ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಭಿನಯ ಮಾಡಿದ್ದರು ಕೂಡ ಅದೇ ಸಿನಿಮಾದ ಬಗ್ಗೆ ಮತ್ತೊಂದು ಹೇಳಿಕೆಯನ್ನು ನೀಡುವುದರ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದರೂ ಹೌದು.
ಈ ಹಿಂದೆಯೂ ಕಿಶೋರ್ ಅವರು ಕಾಂತಾರ ಸಿನಿಮಾದ ದೈವದ ಬಗ್ಗೆ ಕೆಲವು ಮಾತುಗಳನ್ನು ಬರೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ದೈವಕ್ಕೆ ಯುವಕನೊಬ್ಬ ಅಪಮಾನ ಮಾಡಿದ್ದ ಎಂಬ ಕಾರಣಕ್ಕಾಗಿ ಯುವಕನೊಬ್ಬ ಸ.ತ್ತಿ.ದ್ದಾನೆ ಎಂಬ ಸುದ್ದಿಗಳು ವೈರಲಾಗಿದ್ದವು. ಇದನ್ನು ನೋಡಿದಂತಹ ಕಿಶೋರ್ ಅವರು “ಕೊಲ್ಲುವ ದೈವ, ಮನಸ್ಸನ್ನು ಪರಿವರ್ತಿಸಲಾರದೇ?? ಕಾಂತಾರದ ದೈವವನ್ನು ಅವಮಾನಿಸಿದ ಯುವಕ ರಕ್ತಕಾರಿ ಸಾವು ಅನ್ನೊ ವೈರಲ್ ವಿಡಿಯೊ ವಾಟ್ಸಾಪಿನಲ್ಲಿ ಹರಿದು ಬಂತು.
ಆ ಸಿನಿಮಾದ ಭಾಗವಾಗಿ ಈ ಥರದ ತಪ್ಪು ತಿಳುವಳಿಕೆಗಳನ್ನು ತಿದ್ದುವುದು ನನ್ನ ಬಾಧ್ಯತೆ ಎಂದು ನಂಬಿ ಬರೆಯುತ್ತಿದ್ದೇನೆ. ಕೊಲ್ಲುವ ಶಕ್ತಿಯಿರುವ ದೈವಕ್ಕೆ ಅದರ ಬದಲು ಮನಃಪರಿವರ್ತನೆ ಮಾಡುವ ಶಕ್ತಿ
ಏಕೆ ಏಕೆ ಇರುವುದಿಲ್ಲ? ಏಕೆಂದರೆ ಕತೆಗಾರನಿಗೆ ಕಥೆ ಮುಂದೆ ಸಾಗುವುದಿಲ್ಲ. ಅವನ ಮಟ್ಟಿಗೆ ಒಂದು ಕಥೆಯನ್ನು ಪರಿಣಾಮಕಾರಿಯಾಗಿ ಹೇಳುವ ತನ್ನ ಉದ್ದೇಶ ಸಾಧನೆಗೆ ದೈವವೊ, ದೆವ್ವವೊ ಒಂದು ಸಾಧನವಷ್ಟೆ, ಸಿನಿಮಾವಾಗಲಿ ಪುರಾಣವಾಗಲಿ.
ದೈವವೋ ದೆವ್ವವೋ ನಮ್ಮ ನಮ್ಮ ನಂಬಿಕೆಯಷ್ಟೇ. ನಂಬಿದರೆ ಉಂಟು ನಂಬದಿದ್ದರೆ ಇಲ್ಲ. ಹಾಗೆಂದು ಕಷ್ಟಕಾಲದಲ್ಲಿ ಮನಸ್ಟೈರ್ಯ ಕೊಡುವ ನಂಬಿಕೆಗಳನ್ನು ಅವಮಾನಿಸುವ ಅವಶ್ಯಕತೆಯೂ ಇಲ್ಲ. ಕಿಡಿಗೇಡಿಗಳನ್ನು ಶಿಕ್ಷಿಸಲು ಕಾನೂನಿದೆ. ಅವರವರ ನಂಬಿಕೆ ಅವರಿಗೆ. ನಂಬಿಕೆ ಇರಲಿ ಮೂಢನಂಬಿಕೆ ಬೇಡ. ಅದರ ಹೆಸರಲ್ಲಿ ದ್ವೇಷವೂ. ಎಂದು ನಟ ಕಿಶೋರ್ ಅವರು ಹೇಳಿದರು.
ಒಟ್ಟಾರೆಯಾಗಿ ಹೇಳುವುದಾದರೆ ಕಿಶೋರ್ ಅವರು ಇತ್ತೀಚಿನ ದಿನದಲ್ಲಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ ನಟ ಚೇತನ್ ಅಹಿಂಸ ಅವರನ್ನು ಹೊರತು ಪಡಿಸಿದರೆ ಇದ್ದ ವಿಚಾರವನ್ನು ಅಷ್ಟೇ ನಿಷ್ಟೂರವಾಗಿ ಹೇಳುವಂತಹ ಮತ್ತೋರ್ವ ನಟ ಅಂದರೆ ಅದು ಕಿಶೋರ್ ಅಂತಾನೆ ಹೇಳಬಹುದು. ಅದೇನೇ ಆಗಲಿ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಒಂದು ಹೆಮ್ಮೆಯನ್ನು ತಂದು ಕೊಟ್ಟಿದೆ ಅದರ ಬಗ್ಗೆ ಈ ರೀತಿ ಅಸಡ್ಡೆಯಾಗಿ ಮಾತನಾಡಿರುವುದು ಸಿನಿ ರಸಿಕರಿಗೆ ಬೇಸರವನ್ನುಂಟು ಮಾಡಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ