* ಸಾಮಾನ್ಯವಾಗಿ ಸೀರೆಕೊಳ್ಳುವವರೆಲ್ಲ ಸಂದರ್ಭಕ್ಕೆ ತಕ್ಕ ಬಣ್ಣದ ಸೀರೆಗಳನ್ನು ತೆಗೆದುಕೊಳ್ಳುವ ಯೋಚನೆ ಮಾಡಬೇಕು.
* ಬಿಸಿಲುಗಾಲದಲ್ಲಿ ಕೆಂಪು ಕಪ್ಪು ಬಣ್ಣದ ಸೀರೆಗಳನ್ನು ಕೊಳ್ಳಬೇಕು ಈ ಬಣ್ಣಗಳು ಬಿಸಿಲಿನ ಶಾಖವನ್ನು ಬೇಗನೆ ಹೀರುತ್ತದೆ.
* ಮಳೆಗಾಲ ಮತ್ತು ಚಳಿಗಾಲದಲ್ಲಿ ಮಂದವಾದ ಬಣ್ಣದ ಸೀರೆಗಳನ್ನು ಕೊಂಡರೆ ಉತ್ತಮ.
* ಯಾವ ಕಾಲದಲ್ಲಿಯೇ ಆಗಲಿ ತಮ್ಮ ಶರೀರದ ಬಣ್ಣವನ್ನು ಗಮನಿಸಿ ಸೀರೆಗಳನ್ನು ಕೊಳ್ಳುವುದು ಉತ್ತಮ.
ಉದಾಹರಣೆಗೆ :- ಅತೀ ಕಪ್ಪು ಬಣ್ಣವುಳ್ಳವರು ಕಡುಬಿಳಿಯ ಸೀರೆಗಳನ್ನು ಮತ್ತು ಮಂದವಾದ ಬಣ್ಣಗಳ ಸೀರೆಗಳನ್ನು ಆರಿಸಬಾರದು ಅದರಿಂದ ಅವರ ಶರೀರದ ಬಣ್ಣವೂ ಚೆನ್ನಾಗಿ ತೋರುತ್ತದೆ ಅಂದರೆ ಅವರ ದೇಹದ ಕಪ್ಪು ಬಣ್ಣವು ಉಳುಪಿನಲ್ಲಿ ಹೆಚ್ಚು ತೋರಿಸುತ್ತದೆ. ಅಂತಹವರು ತಿಳಿ ಬಣ್ಣಗಳ ಸೀರೆಗಳನ್ನು ಕೊಳ್ಳುವುದು ಉತ್ತಮ.
ಈ ಸುದ್ದಿ ಓದಿ:-ಹೊಸ ವೋಟರ್ ಐಡಿ ಕಾರ್ಡ್ ಪಡೆಯುವ ವಿಧಾನ.! ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ.!
* ಸುಮಾರು ಕೆಂಪು ಮಿಶ್ರಿತ ಬಣ್ಣದವರು ಸಹ ತಿಳಿಬಣ್ಣಗಳ ಸೀರೆ ಗಳನ್ನು ಆರಿಸಬಹುದು.
* ಕಪ್ಪು ಬಣ್ಣದವರಿಗೆ ಬಾದಾಮಿ ತಿಳಿ ನೀಲಿ ನಸು ಹಸಿರು ನಸು ಗುಲಾಬಿ, ಗುಲಾಬಿ, ಆನಂದ, ನಸು ಮಂಜoತಾ ಕನಕಾಂಬರ ನಸು ಹಳದಿ ಮತ್ತು ಬಿಳಿಯ ಸೀರೆಗಳು ಚಿಕ್ಕ ಚಿಕ್ಕ ಹೂಗಳಿದ್ದಲ್ಲಿ ಉತ್ತಮ.
* ಕಪ್ಪು ಕೆಂಪು ಮಿಶ್ರೀತ ಬಣ್ಣದವರು ಬೂದು ಬಣ್ಣ ಕೋಕೋ ಬಣ್ಣ ಆಕಾಶ ನೀಲಿ ಈರುಳ್ಳಿ ಬಣ್ಣ ಮತ್ತು ಬಿಳಿ ಬಣ್ಣದ ಸೀರೆಗಳಲ್ಲಿ ದೊಡ್ಡ ದೊಡ್ಡ ಹೂಗಳಿದ್ದರೂ ಶೋಭಿಸುತ್ತದೆ.
* ಬಿಳಿ ಬಣ್ಣದವರು ಕಡು ನೀಲಿ, ಕಡು ಹಸಿರು, ಟೊಮೇಟೋ, ಕೆಂಪು ಸೀರೆಯ ಬಿಳಿಯ ಹೂಗಳು ನೇರಳೆ ಮಂಜಂತ ಎಲ್ಲಾ ಬಣ್ಣದ ಸೀರೆ ಗಳು ಚೆನ್ನಾಗಿ ಕಾಣಿಸುತ್ತದೆ. ಆದರೆ ಹೆಚ್ಚಾಗಿ ಬಿಳಿಯ ಬಣ್ಣವನ್ನು ಹೊಂದಿರುವವರು ತಿಳಿ ಬಣ್ಣದ ಸೀರೆಗಳನ್ನು ಕೊಂಡರೆ ಸೀರೆ ಮತ್ತು ಉಡುವವರ ಸೌಂದರ್ಯ ಕಾಪಾಡುವುದಿಲ್ಲ.
ಈ ಸುದ್ದಿ ಓದಿ:-ಗೃಹಲಕ್ಷ್ಮಿ 6ನೇ ಕಂತಿನ ಹಣ ಬರಲ್ಲ ಸರ್ಕಾರದಿಂದ ಮಹಿಳೆಯರಿಗೆ ಬಿಗ್ ಶಾ-ಕ್
* ಇನ್ನು ತಮ್ಮ ಶರೀರದ ಗಾತ್ರಕ್ಕನುಗುಣವಾಗಿ ಸೀರೆಗಳನ್ನು ಕೊಳ್ಳು ವುದು ಸೂಕ್ತ. ಸ್ಥೂಲಕಾಯದವರು ತೆಳುವಾದ ಸೀರೆಗಳನ್ನು ಆರಿಸ ಬೇಕು. ಇಂತಹ ಸೀರೆಗಳನ್ನು ಉಡುವುದರಿಂದ ಅವರ ದೇಹದ ಗಾತ್ರ ಹೆಚ್ಚಾಗಿ ಕಾಣುವುದಿಲ್ಲ ಅಲ್ಲದೆ ಅವರಿಗೆ ಓಡಾಡುವಾಗ ಕೆಲಸ ಮಾಡುವಾಗ ಆಯಾಸವು ಆಗುವುದಿಲ್ಲ.
* ಇನ್ನು ನೀಳ ದೇಹದವರು ಪೊಲಿಯೆಸೈರ್, ಟೆರಿನ್ ಗಂಜಿ ನೀರು ಹಾಕಿ ಇಸ್ತ್ರಿ ಮಾಡಿಸಿದ ಪ್ರಿಂಟೆಡ್ ರೇಷ್ಮೆ ಸೀರೆಗಳನ್ನು ಸುಮಾರು ದಪ್ಪನಾದ ಸೀರೆಗಳನ್ನು ಉಡುವುದರಿಂದ ಅವರ ದೇಹದ ಅಂದ ಹೆಚ್ಚುತ್ತದೆ. ಸಣ್ಣ ಸಣ್ಣ ಹೂವುಗಳಿರುವ ಸೀರೆಗಳು ಸುಂದರವಾಗಿರುತ್ತದೆ.
* ಮಧ್ಯದ ಕಾಯದವರು ಯಾವ ಸೀರೆಯನ್ನು ಬೇಕಾದರೂ ಉಡ ಬಹುದು. ಉದ್ದವಿರುವಂತಹ ಮಹಿಳೆಯರು ದೊಡ್ಡ ಅಂಚಿನ ಸೀರೆ ಗಳನ್ನು ಉಡುವುದರಿಂದ ಅಂಚಿನ ಸೌಂದರ್ಯ ಚೆನ್ನಾಗಿ ಕಾಣುತ್ತದೆ.
ಈ ಸುದ್ದಿ ಓದಿ:-ಇದೊಂದು ಕಪ್ ಕುಡಿದರೆ ಬಿ.ಪಿ, ಶುಗರ್, ಆಸ್ತಮಾ ಎಲ್ಲಾ ಕಂಟ್ರೋಲ್ ಆಗೋಗುತ್ತೆ.!
ಜರಿಯುಳ್ಳ ರೇಷ್ಮೆ ಸೀರೆಗಳು ಅವುಗಳ ಅಂಚನ್ನು ದೊಡ್ಡದಾಗಿ ಹೊಂದಿರಬೇಕು.
* ಗಿಡ್ಡಾಕೃತಿಯವರು ಸಣ್ಣ ಬಾರ್ಡರ್ ನ ಸೀರೆ ಉಡುವುದರಿಂದ ಅವರ ಅಂದ ಹೆಚ್ಚುತ್ತದೆ.
* ನೂಲಿನ ಸೀರೆ ಯಾವುದು ಇರಲಿ ಅವುಗಳನ್ನು ಗಂಜಿ ನೀರು ಹಾಕಿ ಇಸ್ತ್ರಿ ಮಾಡಿಯೇ ಉಡಬೇಕು.
* ಸಾಮಾನ್ಯವಾಗಿ ಕಾಲೇಜು ತರುಣಿಯರು ನೌಕರಿಗೆ ಹೋಗುವವರು ನೂಲಿನ ಸೀರೆಯನ್ನು ಜಾಸ್ತಿ ಉಡುವುದನ್ನು ನಾವು ನೋಡಬಹುದು. ಕಾರಣ ಸೀರೆಯು ನಮ್ಮಲ್ಲಿಯೇ ಕಲೆಯ ಅಂದವನ್ನು ಮೈಗೂಡಿಸಿ ಕೊಂಡು ಉಡುವವರ ದೇಹಕ್ಕೆ ಭಾರವೆನಿಸದೆ ಹಗುರವಾಗಿರುತ್ತದೆ. ಅಲ್ಲದೆ ಮಳೆಗಾಲ, ಬಿಸಿಲುಗಾಲ, ಚಳಿಗಾಲದಲ್ಲಿ ಯೂ ಸಹ ಈ ಸೀರೆಗಳನ್ನು ಉಡಬಹುದು.
* ಸೀರೆಯ ಅಂದದ ಹೆಚ್ಚುವಿಕೆ ಅಥವಾ ತಗ್ಗುವಿಕೆ ಅದನ್ನು ಉಡುವವರ ವೈಖರಿಯನ್ನು ಅವಲಂಬಿಸಿರುತ್ತದೆ. ಯಾವುದೇ ಸೀರೆಯಾಗಲಿ ನೆಲತಾಗುವಂತೆ ಉಡಬಾರದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.