ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಮನೆಯಲ್ಲಿರುವಂತಹ ಕೆಲವೊಂದಷ್ಟು ಪದಾರ್ಥಗಳು ಉಪಯೋಗಕ್ಕೆ ಬರುವುದಿಲ್ಲ ಎಂದು ಅದನ್ನು ಆಚೆ ಹಾಕುತ್ತಿರುತ್ತಾರೆ. ಆದರೆ ಅದನ್ನೇ ಮತ್ತೆ ನಾವು ಉಪಯೋಗಿಸಿಕೊಂಡು ಯಾವ ಕೆಲಸಗಳಿಗೆ ಬಳಸಿಕೊಳ್ಳಬಹುದು ಹಾಗೂ ಅದನ್ನು ಎಸಿಯೋ ಬದಲು ಹೇಗೆ ಮತ್ತೆ ಪುನರ್ ಬಳಕೆ ಮಾಡಿಕೊಳ್ಳಬಹುದು ಎನ್ನುವ ಮಾಹಿತಿ ತಿಳಿದಿರುವುದಿಲ್ಲ.
ಹಾಗಾಗಿ ಅವರು ಅವುಗಳನ್ನು ಆಚೆ ಹಾಕುತ್ತಿರುತ್ತಾರೆ ಆದರೆ ಈಗ ನಾವು ಹೇಳುವಂತಹ ಮಾಹಿತಿ ತಿಳಿದರೆ ನೀವು ಖಂಡಿತವಾಗಿಯೂ ಅವುಗಳನ್ನು ಆಚೆ ಹಾಕುವುದಿಲ್ಲ. ಬದಲಿಗೆ ಅದನ್ನು ಮರುಬಳಕೆ ಮಾಡಿಕೊಳ್ಳುತ್ತೀರಿ ಹಾಗೂ ಅದು ನಿಮ್ಮ ಬಹಳ ಪ್ರಮುಖವಾದ ಕೆಲಸಕ್ಕೆ ಬರುತ್ತದೆ ಎಂದು ಹೇಳಬಹುದು.
ಪಿತೃ ಪಕ್ಷಕ್ಕೆ ಸಂಬಂಧಿಸಿದ ಮಾಹಿತಿಗಳು.!
ಹಾಗಾದರೆ ಈ ದಿನ ಮನೆಯಲ್ಲಿ ನಾವು ಕೆಲಸಕ್ಕೆ ಬರುವುದಿಲ್ಲ ಎಂದು ಆಚೆ ಹಾಕುವಂತಹ ವಸ್ತುಗಳನ್ನು ಬಳಸಿಕೊಂಡು ಯಾವ ಕೆಲಸವನ್ನು ಮಾಡಬಹುದು ಅಂದರೆ ಅದು ಯಾವ ಕೆಲಸಕ್ಕೆ ಅನುಕೂಲವಾಗುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
* ಸಾಮಾನ್ಯವಾಗಿ ಮನೆಯಲ್ಲಿ ಪ್ರತಿಯೊಬ್ಬರೂ ಕೂಡ ಈರುಳ್ಳಿ, ಬೆಳ್ಳುಳ್ಳಿ ಇವುಗಳನ್ನು ಉಪಯೋಗಿಸುತ್ತಾರೆ ಆದರೆ ಅವುಗಳ ಸಿಪ್ಪೆಯನ್ನು ಕಸಕ್ಕೆ ಹಾಕುತ್ತಾರೆ ಆದರೆ ಅವೆರಡನ್ನು ಉಪಯೋಗಿಸಿ ಬಹಳ ಅದ್ಭುತ ವಾದಂತಹ ಕೆಲಸಕ್ಕೆ ಉಪಯೋಗಿಸಬಹುದಾಗಿದೆ. ಹೌದು ಈರುಳ್ಳಿ ಸಿಪ್ಪೆ ಹಾಗೂ ಬೆಳ್ಳುಳ್ಳಿ ಸಿಪ್ಪೆ ಇದರ ಜೊತೆ ಬೇವಿನ ಸೊಪ್ಪಿನ ಎಲೆಗಳನ್ನು ಸಹ ಚೆನ್ನಾಗಿ ಒಣಗಿಸಿ ಇಷ್ಟನ್ನು ಶೇಖರಣೆ ಮಾಡಿಟ್ಟುಕೊಂಡು ಇವೆಲ್ಲ ವನ್ನು ಮಿಕ್ಸಿ ಜಾರಿಗೆ ಹಾಕಬೇಕು ಆನಂತರ ಸ್ವಲ್ಪ ಲವಂಗ ಪಲಾವ್ ಎಲೆ, ಕರ್ಪೂರ ಇಷ್ಟನ್ನು ಹಾಕಿ ತರಿತರಿಯಾಗಿ ನೀರು ಹಾಕಿಕೊಳ್ಳದೆಯೇ ರುಬ್ಬಿಕೊಳ್ಳಬೇಕು.
ವಾಸ್ತು ಶಾಸ್ತ್ರದ ಮುಖ್ಯ ಸಲಹೆಗಳು.!
ಈ ರೀತಿ ಪುಡಿ ಮಾಡಿಕೊಂಡಂತಹ ಮಿಶ್ರಣವನ್ನು ಯಾವುದಾದರೂ ಒಂದು ಮಣ್ಣಿನ ದೀಪದ ಒಳಗಡೆ ಹಾಕಿ ಅದರ ಮೇಲೆ ಒಂದು ಕರ್ಪೂರ ವನ್ನು ಪುಡಿ ಮಾಡಿ ಹಾಕಿ ಹಚ್ಚಿದರೆ ಅದರಲ್ಲಿ ಬರುವಂತಹ ಹೊಗೆಯು ಮನೆಯಲ್ಲಿರುವಂತಹ ಎಲ್ಲಾ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಹಾಗೂ ಸಂಜೆಯ ಸಮಯ ಈ ರೀತಿ ಮಾಡುವುದರಿಂದ ಯಾವುದೇ ಸೊಳ್ಳೆಗಳು ಕೂಡ ಮನೆಯ ಒಳಗೆ ಪ್ರವೇಶ ಮಾಡುವುದಿಲ್ಲ. ಇದರಲ್ಲಿ ಇರುವಂತಹ ಎಲ್ಲಾ ಅಂಶ ಕ್ರಿಮಿ ಕೀಟಗಳನ್ನು ನಾಶ ಮಾಡುತ್ತದೆ. ಹಾಗೂ ಇದು ಒಳ್ಳೆಯ ಪರಿ ಮಳವನ್ನು ಸಹ ತರುತ್ತದೆ ಎಂದೇ ಹೇಳಬಹುದು.
* ಯಾರ ಮನೆಯಲ್ಲಿ ಇಡ್ಲಿ ಪಾತ್ರೆ ಇರುವುದಿಲ್ಲವೋ ಅಂತವರು ಈಗ ನಾವು ಹೇಳುವ ಈ ಒಂದು ವಿಧಾನವನ್ನು ಅನುಸರಿಸಿದರೆ ತುಂಬಾ ಸುಲಭವಾಗಿ ಒಮ್ಮೆ ಇಡ್ಲಿಯನ್ನು ಬೇಯಿಸಬಹುದು ಹೌದು.
ಇಡ್ಲಿ ಹಿಟ್ಟು ಕೊನೆಯದಾಗಿ ಸ್ವಲ್ಪ ಇದ್ದರೆ ಅದನ್ನು ಒಂದು ದೊಡ್ಡ ತಟ್ಟೆಯ ಒಳಗಡೆ ಎಣ್ಣೆ ಸವರಿ ಹಾಕಿ ಒಂದು ದೊಡ್ಡ ಪಾತ್ರೆಯಲ್ಲಿ ಕೆಳಗಡೆ ಸ್ಟ್ಯಾಂಡ್ ಇಟ್ಟು ಆನಂತರ ಈ ತಟ್ಟೆಯನ್ನು ಇಟ್ಟು ಇಡ್ಲಿಯನ್ನು ಮಾಡಬಹುದು.
ಪಲಾವ್ ಎಲೆಯ ತಂತ್ರ.! ಈ ತಂತ್ರ ಮಾಡಿದ್ದಲ್ಲಿ ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ.!
ಆನಂತರ ಅದನ್ನು ಸಣ್ಣ ಸಣ್ಣದಾಗಿ ಕತ್ತರಿಸಿ ತಿನ್ನಬಹುದು. ಹೀಗೆ ಈ ರೀತಿ ಕೊನೆಯಲ್ಲಿ ಉಳಿದಂತಹ ಹಿಟ್ಟನ್ನು ಈ ವಿಧಾನ ಅನುಸರಿಸಿ ಬಳಸುವುದರಿಂದ ಸುಲಭವಾಗಿ ಇಡ್ಲಿಯನ್ನು ಬೇಯಿಸಬಹುದು. ಅಥವಾ ಚಿಕ್ಕ ಚಿಕ್ಕ ಬೌಲ್ ಬಳಸಿಕೊಂಡು ಸಹ ಈ ರೀತಿ ಇಡ್ಲಿಯನ್ನು ಮಾಡಬಹುದು.
* ಸಾಮಾನ್ಯವಾಗಿ ಬಿಂದಿ ಪ್ಯಾಕೆಟ್ ಅನ್ನು ನಾವು ಉಪಯೋಗಿಸಿದ ನಂತರ ಆಚೆ ಹಾಕುತ್ತೇವೆ. ಆದರೆ ಅದನ್ನು ನೀವು ಚಿಕ್ಕ ಪರ್ಸ್ ರೀತಿ ಬಳಸಬಹುದು ಅಂದರೆ ಆ ಸ್ಟಿಕರ್ ಪ್ಯಾಕೆಟ್ ಒಂದು ಭಾಗದಲ್ಲಿ ಸ್ಟಿಕ್ಕರ್ ಹಾಕಿ ಅಂಟಿಸಿಕೊಳ್ಳಬೇಕು ಮತ್ತೊಂದು ಕಡೆ ನೀವು ಉಪಯೋಗಿಸುವ ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಈ ರೀತಿ ಇಂತಹ ಕೆಲವೊಂದಷ್ಟು ಕಾರ್ಡ್ ಗಳನ್ನು ನೀವು ಇದರ ಒಳಗೆ ಇಟ್ಟು ಉಪಯೋಗಿಸಬಹುದು.