ಯಾವುದೇ ಸಿನಿಮಾದ ಪ್ರಚಾರದ ವಿಷಯದಲ್ಲಿ ಮಾಧ್ಯಮಗಳು ಬಹಳ ಮುಖ್ಯವಾದ ಸ್ಥಾನ ವಹಿಸುತ್ತವೆ ಸಿನಿಮಾ ತಂಡ ಹಾಗೂ ಸಿನಿಮಾ ಅಭಿಮಾನಿಗಳ ನಡುವೆ ಒಂದು ಸೇತುವೆಯಾಗಿ ಮಾಧ್ಯಮಗಳು ಕೆಲಸ ಮಾಡುತ್ತವೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಸಿನಿಮಾಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಅಪ್ಡೇಟ್ಸ್ ಗಳನ್ನು ಸಿನಿಮಾದಲ್ಲಿರುವ ನಾಯಕಿ ಕಲಾವಿದರುಗಳು ಟ್ರೈಲರ್ ಟೀಸರ್ ಮತ್ತು ಸಿನಿಮಾ ರಿಲೀಸ್ ಅನೌನ್ಸ್ ಆಗುವ ಡೇಟ್ ತನಕ ಮತ್ತು ಅದಾದ ಬಳಿಕ ಅದರ ಸಕ್ಸಸ್ಸಿನ ಅಪ್ಡೇಟ್ಸ್ ಎಲ್ಲವೂ ಕೂಡ ಸಿನಿಮಾದಿಂದ ಜನರಿಗೆ ತಲುಪುವ ತನಕ ಮಾಧ್ಯಮಗಳು ಅಲ್ಲಿ ಮಧ್ಯವರ್ತಿಗಳ ರೀತಿ ಇರುತ್ತವೆ. ಹಾಗಾಗಿ ಪ್ರಚಾರ ಎಂದ ತಕ್ಷಣ ಮಾಧ್ಯಮಗಳೇ ಬೇಕು ಎನ್ನುವ ಒಂದು ಮಾತು ಕೂಡ ಇದೆ. ಆದರೆ ದರ್ಶನ್ ಅವರ ಕ್ರಾಂತಿ ಸಿನಿಮಾಗೆ ಮಾಧ್ಯಮಗಳು ಪ್ರಚಾರ ಮಾಡುವುದಿಲ್ಲ ಜೊತೆಗೆ ದರ್ಶನ್ ಅವರಿಗೆ ಸಂಬಂಧಪಟ್ಟ ಯಾವ ವಿಚಾರವನ್ನು ಕೂಡ ನಾವು ಮಾಧ್ಯಮಗಳಲ್ಲಿ ಹೇಳುವುದಿಲ್ಲ ಎನ್ನುವ ನಿರ್ಧಾರಕ್ಕೆ, ಮಾಧ್ಯಮಗಳು ಬಂದಿವೆ.
ಹಾಗಾದರೆ ಇದರಿಂದ ದರ್ಶನ ಅವರ ಕ್ರಾಂತಿ ಸಿನಿಮಾಗೆ ತೊಂದರೆ ಆಗಲಿದೆಯಾ ಇದಕ್ಕೆ ಉತ್ತರ ಇಲ್ಲಿದೆ ನೋಡಿ ವರ್ಷದ ಹಿಂದೆ ದರ್ಶನ್ ಅವರು ತಮ್ಮ ವೈಯುಕ್ತಿಕ ವಿವಾದದ ಸಮಯದಲ್ಲಿ ರಿಲೀಸ್ ಆದ ದರ್ಶನ್ ಅವರೇ ಮಾತನಾಡಿರುವ ಆಡಿಯೋ ಎಂದು ಹೇಳಲಾದ ಆ ಒಂದು ಆಡಿಯೋದಲ್ಲಿ ದರ್ಶನ್ ಅವರು ಮಾಧ್ಯಮಗಳ ಬಗ್ಗೆ ತುಂಬಾ ಕೆ.ಟ್ಟದಾಗಿ ಅ.ವ್ಯಾ.ಚ ಶಬ್ದಗಳನ್ನು ಬಳಸಿ ಮಾತನಾಡಿದರು ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ಮಾಧ್ಯಮಗಳಲ್ಲಿ ದರ್ಶನ್ ಅವರ ಹೆಸರನ್ನು ಕೂಡ ಹೇಳದ ಹಾಗೆ ಅಥವಾ ಯಾವುದಾದರೂ ಬೇರೆಯವರ ಸಂದರ್ಶನ ಸಮಯದಲ್ಲಿ ಅವರೇನಾದರು ದರ್ಶನ್ ಅವರ ಹೆಸರು ಹೇಳಿದರೆ ಅದನ್ನು ಬೀಪ್ ಮಾಡುವ ಮೂಲಕ ಅಥವಾ ದರ್ಶನ್ ಅವರು ಇರುವ ಸಭೆ ಸಮಾರಂಭ ಕಾರ್ಯಕ್ರಮಗಳಿಗೆ ನಾವು ಬರುವುದಿಲ್ಲ ಎಂದು ಹೇಳುವ ಮೂಲಕ ದರ್ಶನ್ ಅವರನ್ನು ಮಾಧ್ಯಮಗಳು ಬಾಯ್ಕಾಟ್ ಮಾಡಿದ್ದವು.
ಆದರೆ ಅಭಿಮಾನಿಗಳಿಗೆ ಇದು ಬಹಳ ದೊಡ್ಡ ಮಟ್ಟದ ಬೇಸರ ಹಾಗೂ ನೋವುಂಟು ಮಾಡಿತ್ತು ಪ್ಯಾನ್ ಇಂಡಿಯಾ ಸಿನಿಮಾ ಆಗಿ ತಯಾರಾಗುತ್ತಿರುವ ಕ್ರಾಂತಿ ಸಿನಿಮಾದ ಸಮಯದಲ್ಲಿ ಮಾಧ್ಯಮಗಳು ಈ ರೀತಿ ವರ್ತಿಸುವುದರಿಂದ ನಮ್ಮ ಬಾಸ್ ಸಿನಿಮಾ ಪ್ರಚಾರವಿಲ್ಲದೆ ಸೋಲುತ್ತದೆ ಎನ್ನುವ ಭಯ ಅಭಿಮಾನಿಗಳಲ್ಲಿ ಕಾಡತೊಡಗಿತ್ತು. ಇದರಿಂದ ಸ್ವಯಂ ಪ್ರೇರಿತರಾಗಿ ತಾವೇ ಅಭಿಮಾನಿಗಳೆಲ್ಲಾ ಒಟ್ಟಾಗಿ ಸೇರಿ ಮಾಧ್ಯಮಗಳು ಪ್ರಚಾರ ಕೊಡದೆ ಹೋದರೆ ಏನಾಯ್ತು ನಾವೇ ನಮ್ಮ ಬಾಸ್ ಸಿನಿಮಾವನ್ನು ಪ್ರಚಾರ ಮಾಡಿಕೊಳ್ಳುತ್ತೇವೆ ಎನ್ನುವ ನಿರ್ಧಾರಕ್ಕೆ ಬಂದು ಬಿಟ್ಟಿದ್ದಾರೆ. ಮಾಧ್ಯಮಗಳು ಇಲ್ಲದಿದ್ದರೆ ಸಾಮಾಜಿಕ ಮಾಧ್ಯಮಗಳ ಮೂಲಕ ನಾವು ಕ್ರಾಂತಿ ಸಿನಿಮಾವನ್ನು ಪ್ರಚಾರ ಮಾಡುತ್ತೇವೆ ಎಂದು ಎಲ್ಲಾ ಅಭಿಮಾನಿಗಳು ಸೇರಿ ತಾವು ಬಳಸುವ ಸೋಶಿಯಲ್ ಮೀಡಿಯಾವನ್ನು ಬಳಸಿಕೊಂಡು ಎಲ್ಲಾ ಜನರಿಗೂ ಕ್ರಾಂತಿ ಸಿನಿಮಾದ ಅಪ್ಡೇಟ್ಗಳು ಸಿಗುವಂತೆ ಮಾಡುತ್ತಿದ್ದಾರೆ.
ಈವರೆಗೆ ಮಾಧ್ಯಮಗಳಲ್ಲಿ ಕ್ರಾಂತಿ ಸಿನಿಮಾದ ಬಗ್ಗೆ ಮಾಹಿತಿ ಬರೆದೆ ಹೋದರು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಮಾನಿಗಳು ಕೊಟ್ಟಿರುವ ಮಾಹಿತಿಯ ಪ್ರಕಾರ ಸಿನಿಮಾದಲ್ಲಿ ರಚಿತಾ ರಾಮ್ ಅವರು ನಾಯಕಿಯಾಗಿದ್ದಾರೆ, ಹರಿಕೃಷ್ಣ ಅವರ ನಿರ್ದೇಶನ ಇದಕ್ಕಿದೆ. ಬಿ. ಸುರೇಶ್ ಹಾಗೂ ಶೈಲಜಾ ನಾಗೇಶ್ ಅವರು ಸೇರಿದಂತೆ ಯಜಮಾನ ಸಿನಿಮಾ ತಂಡದ ಬಹುತೇಕ ಕಲಾವಿದರು ಇದರಲ್ಲಿ ಇರಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಮತ್ತು ಮುಖ್ಯ ಭೂಮಿಕೆಯಲ್ಲಿ ಸುಮಲತ ಅಂಬರೀಶ್ ಮತ್ತು ರವಿಚಂದ್ರನ್ ಅವರು ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಕೂಡ ಗೊತ್ತಾಗಿದೆ. ನಿಮಗೂ ಅಕ್ಷರ ಕ್ರಾಂತಿಗೆ ಸಂಬಂಧಿಸಿದ ಸಬ್ಜೆಕ್ಟ್ ಹೊಂದಿದೆ ಎಂದು ಕೂಡ ಹೇಳಲಾಗುತ್ತಿದೆ. ನಿಜಕ್ಕೂ ಇಂತಹ ಶ್ರೇಷ್ಠ ಮಟ್ಟದ ಅಭಿಮಾನಿಗಳನ್ನು ಪಡೆದಿರುವ ದರ್ಶನ್ ಅವರೇ ಅದೃಷ್ಟವಂತರು ಎಂದು ಹೇಳಬಹುದು ದರ್ಶನ್ ಅವರನ್ನು ಅಭಿಮಾನಿಗಳು ಎಷ್ಟು ಪ್ರೀತಿಸುತ್ತಾರೆ ಎನ್ನುವುದಕ್ಕೆ ಇದೇ ಸಾಕ್ಷಿಯಾಗಿದೆ. ನಿಮ್ಮ ಪ್ರಕಾರ ಕ್ರಾಂತಿ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರಾಂತಿಯಲ್ಲಿ ಸೃಷ್ಟಿ ಮಾಡುತ್ತ.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.