Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.

Posted on August 22, 2022August 31, 2022 By Kannada Trend News No Comments on ಗಣೇಶ ಹಬ್ಬದಲ್ಲು ಕ್ರಾಂತಿ ಅಬ್ಬರ, ಡಿ ಬಾಸ್ ಅಭಿಮಾನಿಗಳು ಗಣೇಶನಿಂದ ಕ್ರಾಂತಿ ಸಿನಿಮಾ ಪ್ರೋಮೋಷನ್ ಮಾಡಿಸುತ್ತಿರುವ ಈ ವಿಡಿಯೋ ನೋಡಿ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 55ನೇ ಸಿನಿಮಾ ಕ್ರಾಂತಿ ಸಿನಿಮಾ ಈಗಾಗಲೇ ಚಿತ್ರೀಕರಣ ಸಂಪೂರ್ಣವಾಗಿ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರು ಕ್ರಾಂತಿ ಸಿನಿಮಾದಲ್ಲಿ ತುಂಬಾ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಸರ್ಕಾರಿ ಶಾಲೆಯನ್ನು ಉಳಿಸುವಂತಹ ಮತ್ತು ವಿದ್ಯೆಗೆ ಇರುವಂತಹ ಪ್ರಾಮುಖ್ಯತೆಯನ್ನು ಈ ಸಿನಿಮಾದಲ್ಲಿ ಎತ್ತಿ ತೋರಿಸಲಾಗಿದೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ ಅವರನ್ನು ಬ್ಯಾನ್ ಮಾಡಿ ಆರು ತಿಂಗಳಿಗೆ ಕಳೆದು ಹೋಗಿದೆ ಎಲ್ಲಾ ಮಾಧ್ಯಮದಿಂದಲೂ ಕೂಡ ದರ್ಶನ್ ಅವರನ್ನು ಬ್ಯಾನ್ ಮಾಡಲಾಗಿದೆ. ಈ ಕಾರಣಕ್ಕಾಗಿ ದರ್ಶನ್ ಅವರ ಸಿನಿಮಾದ ಅಪ್ಡೇಟ್ಸ್ ಗಳು ಎಲ್ಲಿಯೂ ಕೂಡ ದೊರೆಯುತ್ತಿಲ್ಲ. ಆದರೂ ಕೂಡ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಮಾಧ್ಯಮಗಳು ನಮ್ಮ ನೆಚ್ಚಿನ ನಟನ ಬಗ್ಗೆ ಪ್ರಚಾರ ಮಾಡದಿದ್ದರೂ ಪರವಾಗಿಲ್ಲ ನಾವೇ ನಮ್ಮ ದರ್ಶನವರ ಸಿನಿಮಾವನ್ನು ಪ್ರಚಾರ ಮಾಡುತ್ತಿವೆ ಅಂತ ಪ್ರತಿನಿತ್ಯವೂ ಕೂಡ ಕ್ರಾಂತಿ ಸಿನಿಮಾದ ಬಗ್ಗೆ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಿದ್ದರೆ.

ವಿಶೇಷ ಏನೆಂದರೆ ನಮ್ಮ ಸಿನಿಮಾವನ್ನು ಪ್ರಚಾರ ಮಾಡಿ ಅಂತ ದರ್ಶನ್ ಆಗಲಿ ಅಥವಾ ಚಿತ್ರತಂಡದವರು ಎಲ್ಲಿಯೂ ಕೂಡ ಹೇಳಿಕೊಂಡಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಮೇಲೆ ಇರುವಂತಹ ಅಭಿಮಾನಕ್ಕಾಗಿ ತಮ್ಮ ಸ್ವಂತ ದುಡ್ಡಿನಲ್ಲಿ ಖರ್ಚು ಮಾಡಿ ಪ್ರತಿನಿತ್ಯವೂ ಕೂಡ ವಿಭಿನ್ನ ರೀತಿಯಾದಂತಹ ವಿಶೇಷವಾದಂತಹ ರೀತಿಯಲ್ಲಿ ಸಿನಿಮಾದ ಪ್ರಮೋಷನ್ ಕಾರ್ಯವನ್ನು ಮಾಡುತ್ತಿದ್ದಾರೆ. ಹೌದು ಹಬ್ಬ ಹರಿದಿನ ಜಾತ್ರೆ ಬಸ್ ಸ್ಟ್ಯಾಂಡ್ ಸಾರ್ವಜನಿಕ ಸ್ಥಳ ಇನ್ನು ಮುಂತಾದ ಕಡೆಯಲ್ಲಿ ಕ್ರಾಂತಿ ಸಿನಿಮಾದ ಪೋಸ್ಟರ್ ಅನ್ನು ಹಿಡಿದು ಎಲ್ಲಾ ಕಡೆ ಕ್ಯಾನ್ವಾಸ್ ಮಾಡುತ್ತಿದ್ದಾರೆ. ಇನ್ನೇನು ಗಣೇಶ ಒಬ್ಬ ಬರುತ್ತಿದೆ ಗಣೇಶ ಹಬ್ಬಕ್ಕೆ ಇನ್ನೂ ಕೇವಲ ಒಂದೇ ಒಂದು ವಾರ ಬಾಕಿ ಉಳಿದಿದೆ ಹಾಗಾಗಿ ಗಣೇಶನ ಮೂರ್ತಿಯಲ್ಲೂ ಕೂಡ ಇದೀಗ ಕ್ರಾಂತಿ ಸಿನಿಮಾದ ಪೋಸ್ಟರ್ ಕಾಣಿಸಿಕೊಂಡಿದೆ.

ಹೌದು ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ನೆಚ್ಚಿನ ನಟನಾ ಸಿನಿಮಾವನ್ನು ಪ್ರಚಾರಗೊಳಿಸಬೇಕು ಎಂಬ ಕಾರಣಕ್ಕಾಗಿ ಗಣೇಶ ಮೂರ್ತಿ ಇರುವಂತಹ ಪಕ್ಕದಲ್ಲಿಯೇ ದರ್ಶನ ಅವರ ಮೂರ್ತಿಯನ್ನು ತಯಾರಿಸಿ ಗಣೇಶನ ಕೈನಲ್ಲಿ ಕ್ರಾಂತಿ ಪೋಸ್ಟರ್ ಒಂದನ್ನು ಕೊಟ್ಟಿದ್ದಾರೆ. ಈ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ನೆಟ್ಟಿಗರ ಗಮನವನ್ನು ಸೆಳೆದಿದೆ. ಅಷ್ಟೇ ಅಲ್ಲದೆ ದರ್ಶನ್ ಅಭಿಮಾನಿಗಳು ಈ ಒಂದು ವಿಗ್ರಹವನ್ನು ನೋಡಿ ತುಂಬಾನೇ ಖುಷಿ ಪಟ್ಟಿದ್ದಾರೆ. ಇದೇ ರೀತಿಯಾದಂತಹ ವಿಗ್ರಹವನ್ನು ಎಲ್ಲಾ ಕಡೆ ತಯಾರಿಸಬೇಕು ಎಂಬ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆರ್ಡರ್ ಕೂಡ ಬಂದಿದೆ. ಹಾಗಾಗಿ ಗಣೇಶ ಹಬ್ಬಕ್ಕೆ ಕೇವಲ ಗಣೇಶ ಮಾತ್ರವಲ್ಲದೆ ಗಣೇಶನ ಕೈನಲ್ಲಿ ಕ್ರಾಂತಿ ಸಿನಿಮ ಇರುವಂತ ಪೋಸ್ಟರ್ ಮತ್ತು ದರ್ಶನ್ ಇರುವುದು ಈ ಮೂರು ಮೂರ್ತಿ ಕೂಡ ನಿಮಗೆ ಕಾಣಿಸುತ್ತದೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವಾರವಷ್ಟೇ ಗಣೇಶನ ಮೂರ್ತಿಯ ಪಕ್ಕ ಅಪ್ಪು ಮೂರ್ತಿ ಇದ್ದದ್ದನ್ನು ನೀವು ನೋಡೇ ಇದ್ದೀರಿ ಅಪ್ಪು ಇರುವಂತಹ ಗಣೇಶ ಮೂರ್ತಿಗೆ ಎಷ್ಟು ಬೇಡಿಕೆ ಇತ್ತೋ ಅಷ್ಟೇ ಬೇಡಿಕೆ ಇದೀಗ ದರ್ಶನ್ ಇರುವಂತಹ ಗಣೇಶ ಮೂರ್ತಿಗೂ ಕೂಡ ಇದೆ. ಇದೆಲ್ಲವನ್ನು ನೋಡುತ್ತಿದ್ದರೆ ಅಭಿಮಾನಿಗಳು ಎಷ್ಟು ತಮ್ಮ ನಟರನ್ನು ಪ್ರೀತಿಸುತ್ತಾರೆ ಎಂಬುದು ಅರ್ಥವಾಗುತ್ತದೆ ಇನ್ನು ಕೆಲವು ನೆಟ್ಟಿಗರು ಅಪ್ಪು ಅಭಿಮಾನಿಗಳು ಮಾಡುತ್ತಿದ್ದಂತಹ ಕೆಲಸವನ್ನೇ ಇದೀಗ ದರ್ಶನ್ ಅಭಿಮಾನಿಗಳು ಕೂಡ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಆದರೆ ಎಲ್ಲ ನಟರಿಗೂ ಕೂಡ ಅವರದೇ ಆದಂತಹ ಅಭಿಮಾನಿ ಬಳಗ ಇರುತ್ತದೆ ಹಾಗಾಗಿ ತಮಗೆ ಬೇಕಾದರೆ ರೀತಿಯಲ್ಲಿ ಪ್ರಚಾರ ಕಾರ್ಯವನ್ನು ಕೈಗೊಳ್ಳುತ್ತಾರೆ ಇದು ಸರಿ ಅಥವಾ ಇದು ತಪ್ಪು ಎಂಬುದನ್ನು ಹೇಳುವುದಕ್ಕೆ ಯಾರಿಗೂ ಕೂಡ ಮಾನ್ಯತೆ ಇರುವುದಿಲ್ಲ. ಹಾಗಾಗಿ ತಮ್ಮ ಖುಷಿಗೆ ತಮ್ಮ ಸಂತೋಷಕ್ಕೆ ಅಭಿಮಾನಿಗಳು ಏನು ಮಾಡಿದರು ಕೂಡ ಅದೆಲ್ಲವನ್ನು ನಾವು ನೋಡಬೇಕಿದೆ.

ಸದ್ಯಕ್ಕೆ ಗಣೇಶ ಹಬ್ಬಕ್ಕೆ ಕ್ರಾಂತಿ ಸಿನಿಮಾದ ಪೋಸ್ಟರ್ ಇರುವಂತಹ ಹಾಗೂ ದರ್ಶನ್ ಇರುವಂತ ವಿಗ್ರಹಗಳು ಮಾರುಕಟ್ಟೆಗೆ ಬರುವುದಂತೂ ಖಚಿತ ಇದರ ಜೊತೆಗೆ ಅಭಿಮಾನಿಗಳು ಗಣೇಶ ಹಬ್ಬಕ್ಕೆ ಕ್ರಾಂತಿ ಸಿನಿಮಾದ ಯಾವುದಾದರೂ ಒಂದು ಹಾಡನ್ನು ಬಿಡುಗಡೆ ಮಾಡಲೇಬೇಕು ಎಂದು ಪಟ್ಟು ಹಿಡಿದು ಕುಳಿತುಕೊಂಡಿದ್ದಾರೆ. ದರ್ಶನ್ ಗೆ ಮತ್ತು ಸಿನಿಮಾದ ನಿರ್ಮಾಪಕ ನಿರ್ದೇಶಕರಿಗೆ ಒತ್ತಾಯ ಮಾಡಿದ್ದಾರೆ. ಹಾಗಾಗಿ ಈ ಗಣೇಶ ಹಬ್ಬಕ್ಕೆ ಕ್ರಾಂತಿ ಸಿನಿಮಾದ ಹಾಡು ಬಿಡುಗಡೆಯಾಗುತ್ತದೆ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ. ಸದ್ಯಕ್ಕಂತೂ ಮಾರುಕಟ್ಟೆಯಲ್ಲಿ ಎಲೆ ನೋಡಿದರೂ ಒಂದು ಕಡೆ ಕಪ್ಪು ಇರುವಂತಹ ವಿಗ್ರಹಗಳು ಕಾಣ ಸಿಗುತ್ತಿದ್ದರೆ ಮತ್ತೊಂದು ಕಡೆ ದರ್ಶನ್ ಹಾಗೂ ಕ್ರಾಂತಿ ಸಿನಿಮಾದ ಪೋಸ್ಟರ್ ಇರುವಂತಹ ಗಣೇಶಗಳು ಕಾಣಸಿಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

Entertainment Tags:Darshan, Gowri Ganesha Festival, Kranthi movie, Lord Ganesha
WhatsApp Group Join Now
Telegram Group Join Now

Post navigation

Previous Post: ಶ್ರಾವ್ಯ ನಟಿಯಾಗಿ ಯಶಸ್ಸನ್ನೇ ಕಾಣಲಿಲ್ಲ ಯಾಕೆ ಗೊತ್ತಾ.? ಬಹುದಿನದ ನಂತರ ಸತ್ಯ ತೆರೆದಿಟ್ಟ ಓಂ ಪ್ರಕಾಶ್ ರಾವ್.
Next Post: ವಿ.ಚ್ಛೇ‌.ದ.ನ ಪಡೆದಿದ್ದ ರಜನಿಕಾಂತ್ ಅಳಿಯ ಧನುಷ್ ಮತ್ತು ಮಗಳು ಐಶ್ವರ್ಯ ಇದೀಗ ಮಕ್ಕಳಿಗಾಗಿ ಮತ್ತೆ ಒಂದಾಗುತ್ತಿದ್ದಾರೆ.

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore