(Kranti 1st day collection)ಮೊದಲ ದಿನವೇ ಬಾರಿ ಕಲೆಕ್ಷನ್ ಮಾಡಿದ ಕ್ರಾಂತಿ, ಇದುವರೆಗಿನ ಎಲ್ಲಾ ದಾಖಲೆಗಳು ಉಡೀಸ್, ಕಥೆ ಏನು ಮತ್ತು ಓಟಿಟಿಯಲ್ಲಿ ರಿಲೀಸ್ ಯಾವಾಗ ಎನ್ನುವ ಮಾಹಿತಿ ಇಲ್ಲಿದೆ ನೋಡಿ. ಇಷ್ಟು ದಿನ ದರ್ಶನ್ (Darshan) ಅಭಿಮಾನಿಗಳೆಲ್ಲ ತುದಿಗಾಲಲ್ಲಿ ಕಾಯುತ್ತಿದ್ದ ಸಿನಿಮಾ ಕ್ರಾಂತಿ (Kranti) ಇಂದು ಭರ್ಜರಿಯಾಗಿ ಪ್ರದರ್ಶನಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರವಾದ ಕ್ರಾಂತಿ ಈ ದಿನ ಬಿಡುಗಡೆ ಆಗಿದ್ದು ಇಷ್ಟು ದಿನ ಇದ್ದ ಜನರ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.
ಈ ವರ್ಷ ‘ಕ’ ಹೆಸರಿನಿಂದ ಬಿಡುಗಡೆಗೊಂದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿದೆ ಕೆಜಿಎಫ್ 2 (KGF 2) , ಕಾಂತಾರ (Kantara) ಹವಾ ಹೀಗೆ ಮುಂದುವರೆದಿದ್ದು ಕ್ರಾಂತಿ ಸಹ ನಿರೀಕ್ಷೆಗೂ ಮೀರಿ ಓಪನಿಂಗ್ ಪಡೆದುಕೊಂಡಿದೆ. ಈಗ ಎಲ್ಲರೂ ಸಹ ಬಾಕ್ಸಾಫೀಸ್ ಸುಲ್ತಾನನ ಕ್ರಾಂತಿ ಸಿನಿಮಾದ ಮೊದಲನೇ ಕಲೆಕ್ಷನ್ (Collection) ಎಷ್ಟು ಎಂದು ತಲೆಕೆಡಿಸಿಕೊಳ್ಳುತ್ತಿದ್ದು ಅಂಕಿ ಅಂಶಗಳ ಪ್ರಕಾರ ಅದು ಈವರೆಗಿನ ಎಲ್ಲಾ ದಾಖಲೆಗಳನ್ನು ಮುರಿಯುವತ್ತ ಭರದಿಂದ ಸಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ.
ಕ್ರಾಂತಿ ಸಿನಿಮಾವು ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದು ಸದ್ಯಕ್ಕೆ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಗೊಂಡಿದೆ. ಕ್ರಾಂತಿ ಸಿನಿಮಾದ ಸಾರಾಂಶ ಸರ್ಕಾರಿ ಶಾಲೆಗಳನ್ನು ಉಳಿಸುವ ಕುರಿತದ್ದಾಗಿದೆ ಎಂದು ಈಗಾಗಲೇ ದರ್ಶನ್ ಮತ್ತು ತಂಡ ಸುಳಿವು ಬಿಟ್ಟು ಕೊಟ್ಟಿತ್ತು. ವಿ. ಹರಿಕೃಷ್ಣ (V.Harikrishna) ಅವರ ನಿರ್ದೇಶನ (Direction) ಮತ್ತು ಶೈಲಜನಾಗ್ (Shailaja Nag) ಹಾಗೂ ಬಿ ಸುರೇಶ್ (B.Suresh) ಅವರ ನಿರ್ಮಾಣದಲ್ಲಿ (Production) ತಯಾರಾದ ಈ ಸಿನಿಮಾ ಬಹುತಾರಾಗಣವನ್ನೇ ಹೊಂದಿತ್ತು.
ದರ್ಶನ್, ರಚಿತಾ ರಾಮ್, ನಿಮಿಕಾ ರತ್ನಾಕರ್, ರವಿಚಂದ್ರನ್, ರವಿಶಂಕರ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ನಯನ ಇನ್ನು ಮುಂತಾದ ಅತಿ ದೊಡ್ಡ ತಾರಾ ಬಳಗ ಸಿನಿಮಾದಲ್ಲಿ ಇದೆ. ಎನ್ ಆರ್ ಐ (NRI) ಆಗಿದ್ದ ದರ್ಶನ್ ಬಂದು ಕರ್ನಾಟಕದಲ್ಲಿ ತಾನು ಓದಿದ ಶಾಲೆಯನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವ ಕಥೆ ಜೊತೆಗೆ ಶಿಕ್ಷಣ ಉದ್ಯಮಿಕರಣವಾಗುತ್ತಿರುವುದರ ಬಗ್ಗೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇರುವ ಹುಳುಕುಗಳ ಬಗ್ಗೆ ಬೆಳಕು ಚೆಲ್ಲಿರುವ ಸಿನಿಮಾ ಇದಾಗಿದೆ ಎನ್ನಬಹುದು.
ಜನವರಿ 26 ಅಂದರೆ, ಈ ದಿನ ಬೆಳಗ್ಗೆ ರಿಲೀಸ್ ಆದ ಈ ಸಿನಿಮಾ ಒಂದೇ ದಿನದಲ್ಲಿ 10 ಕೋಟಿ ಕಲೆಕ್ಷನ್ ಗಳಿಸಿದೆ ಎನ್ನುವ ಮಾಹಿತಿಗಳು ಹೊರ ಬೀಳುತ್ತಿವೆ. ಆದರೆ ಶುಕ್ರವಾರ ಬೆಳಗ್ಗೆ ಅಷ್ಟೇ ಇದಕ್ಕೆ ಸ್ಪಷ್ಟತೆ ಅಂಕಿ ಅಂಶಗಳ ಸಮೇತ ಸಿಗಲಿದೆ. ಈಗಾಗಲೇ ನಾಳೆ ಶೋಗಳಿಗೂ ಕೂಡ ಟಿಕೆಟ್ ಬುಕ್ ಆಗಿದ್ದು ಆ ಕಲೆಕ್ಷನ್ 5 ಕೋಟಿ ಇರಲಿದೆ ಎನ್ನುವ ಮಾಹಿತಿ ಇದೆ. ಮತ್ತು ಈ ಭಾನುವಾರದ ಅಂತ್ಯದೊಳಗೆ 30 ರಿಂದ 35 ಕೋಟಿಯನ್ನು ಸಿನಿಮಾ ಗಳಿಸುವ ಸಾಧ್ಯತೆ ಇದೆ.
ಈ ಸಿನಿಮಾದ ಬಜೆಟ್ 25 ಕೋಟಿ ಆಗಿದ್ದು, ಇದಕ್ಕಿಂತ ಹೆಚ್ಚಿನ ಗಳಿಕೆಯನ್ನು ಸಿನಿಮಾ ಮಾಡಿದರೆ ಅದು ಯಶಸ್ವಿ ಸಿನಿಮಾ ಎಂದು ಕರೆಸಿಕೊಳ್ಳುತ್ತದೆ. ಈ ಎಲ್ಲಾ ಮಾಹಿತಿಯಿಂದ ಕ್ರಾಂತಿ ಗೆದ್ದಿದೆ ಎಂದು ಹೇಳುವುದರಲ್ಲಿ ಅನುಮಾನವೇ ಇಲ್ಲ. ಇದರ ನಡುವೆ ಕ್ರಾಂತಿ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಆಗುವುದರ ಬಗ್ಗೆ ಕೂಡ ಮಾತುಕತೆ ಹರಿದಾಡುತ್ತಿವೆ. ಈ ಬಗ್ಗೆ ತಯಾರಕರು ವಿಷಯ ಹಂಚಿಕೊಳ್ಳದೇ ಇದ್ದರು ಸಿನಿಮಾ ಓಟಿಟಿಯಲ್ಲಿ (OTT) ಫೆಬ್ರವರಿ ಅಂತ್ಯದಲ್ಲಿ ರಿಲೀಸ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಈಗಾಗಲೇ ಹಲವು ಒಟಿಟಿ ಪ್ಲಾಟ್ಫಾರ್ಮ್ ಗಳು ಇರುವುದರಿಂದ ಝೀಫೈ (Zee5) ಅಥವಾ ಸನ್ ನೆಕ್ಸ್ಟ್ (SunNext) ಗೆ ಈ ರೈಟ್ಸ್ ಸಿಗಬಹುದು ಎನ್ನುವ ಸುಳಿವು ಸಿಗುತ್ತಿದೆ. ಇನ್ನು ಈಗಾಗಲೇ ಸಿನಿಮಾ ನೋಡಿದವರು ಸಿನಿಮಾವನ್ನು ಬಹಳ ಹೊಗಳುತ್ತಿದ್ದು, ತಂಡ ಪಟ್ಟ ಶ್ರಮಕ್ಕೆ ಅಷ್ಟೇ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳುತ್ತಿದ್ದಾರೆ. ನೀವು ಸಹ ಇನ್ನು ಸಿನಿಮಾ ನೋಡಿಲ್ಲ ಎಂದರೆ ದಯವಿಟ್ಟು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಕನ್ನಡ ಸಿನಿಮಾಗಳನ್ನು ಬೆಂಬಲಿಸಿ.