ಮೇಘನಾ ರಾಜ್ (Meghana raj) ಅವರು ಮಗು ಆದ ಬಳಿಕ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ಇವರು ಫೇಸ್ಬುಕ್ (facebook) ಮತ್ತು ಇನ್ಸ್ಟಾಗ್ರಾಮ್ (instagram) ಅಲ್ಲಿಯೂ ಕೂಡ ತಮ್ಮ ಹೊಸ ಹೊಸ ಫೋಟೋ ಶೂಟ್ಗಳು ತಮ್ಮ ಮಗನ ಕುರಿತ ವಿಚಾರಗಳು ಕುಟುಂಬದ ಕುರಿತ ವಿಚಾರಗಳು ಇವೆಲ್ಲವನ್ನು ಹಂಚಿಕೊಳ್ಳುತ್ತಿರುತ್ತಾರೆ.
ಇದೀಗ ಅವರ ಅಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಒಂದು ಅಪ್ಲೋಡ್ ಆಗಿದೆ ಆದರೆ ಆ ವಿಡಿಯೋ ಈ ಬಾರಿ ಚಿರು (Chiru) ಮತ್ತು ರಾಯನ್ (Rayan) ಬಗ್ಗೆ ಅಲ್ಲದೆ ಐಶ್ವರ್ಯ ಸರ್ಜಾ (Aishwarya Sarja) ಅವರ ಕುರಿತಾಗಿದೆ. ಐಶ್ವರ್ಯ ಸರ್ಜಾ ಅವರು ಮಾಡಿದ ರೀಲ್ಸ್ (reels) ಒಂದನ್ನು ಮೇಘನಾ ರಾಜ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಮೇಘನಾ ರಾಜ್ ಅವರು ಚಿರು ಸರ್ಜಾ ಅವರ ಕೈ ಹಿಡಿದ ದಿನದಿಂದ ಅರ್ಜುನ್ ಸರ್ಜಾ (Arjun Sarja) ಕುಟುಂಬದ ಸದಸ್ಯರಾದರು. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಹಾಗೂ ಮೇಘನಾ ರಾಜ್ ನಡುವೆ ಉತ್ತಮ ಬಾಂಧವ್ಯವಿದ್ದು ಇಬ್ಬರು ಅಕ್ಕತಂಗಿಯರಿಗಿಂತ ಹೆಚ್ಚು ಅನ್ಯೋನ್ಯವಾಗಿರುತ್ತಾರೆ. ಐಶ್ವರ್ಯ ಸರ್ಜಾ ಕನ್ನಡದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಮತ್ತು ತೆಲುಗಿನಲ್ಲಿ ಲಾಂಚ್ ಆಗಲು ಕೂಡ ರೆಡಿ ಆಗುತ್ತಿದ್ದಾರೆ.
ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರ ವಿಡಿಯೋಗಳು ವೈರಲಾಗುತ್ತಿರುತ್ತದೆ. ಹೀಗೆ ಕ್ರೇಜಿಸ್ಟಾರ್ ಕ್ರೇಜಿಸ್ಟಾರ್ ಐ ಲವ್ ಯು ದ ವೇ ಯು ಆರ್ ಎಂದು ರೀಲ್ಸ್ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋದಲ್ಲಿ ಹಾಡು ಮುಗಿಯುವಷ್ಟರಲ್ಲಿ ಆರಕ್ಕಿಂತ ಹೆಚ್ಚು ಬಟ್ಟೆಗಳನ್ನು ಇವರು ಚೇಂಜ್ ಮಾಡಿದ್ದಾರೆ. ಇದು ಸಕ್ಕತ್ ಇಂಟರೆಸ್ಟಿಂಗ್ ಆಗಿರುವುದರಿಂದ ಈ ಇವರ ಈ ಪ್ರತಿಭೆಗೆ ಮತ್ತು ಕ್ರಿಯೇಟಿವಿಟಿಗೆ ಸಾಕಷ್ಟು ಲೈಕ್ಸ್ ಗಳ ಸುರಿ ಮಳೆ ಕೂಡ ಸಿಕ್ಕಿದೆ.
ಅರ್ಜುನ್ ಸರ್ಜಾ ಅವರು ಕನ್ನಡದ ಹೆಸರಾಂತ ನಟ. ಪ್ರತಾಪ್, ಅಳಿಮಯ್ಯ, ಸಿಂಧೂರ ತಿಲಕ ಮುಂತಾದ ಸಿನಿಮಾಗಳ ಹೀರೋ ಆಗಿರುವ 90 ರ ದಶಕದ ಹ್ಯಾಂಡ್ ಸಮ್ ಹೀರೋ. ಆದರೆ ಇವರ ಕಲೆಯನ್ನು ಕನ್ನಡ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗವೇ ಹೆಚ್ಚು ಗುರುತಿಸಿತ್ತು ಎಂದು ಹೇಳಬಹುದು. ಕನ್ನಡಕ್ಕಿಂತ ತಮಿಳಿನಲ್ಲೇ ಹೆಚ್ಚು ಅವಕಾಶಗಳನ್ನು ಪಡೆದು ಫೇಮಸ್ ಆಗಿರುವ ಇವರು ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕೂಡ ನಟಿಸಿದ್ದಾರೆ.
ಹೀಗೆ ಬಹುಭಾಷಾ ಕಲಾವಿದ ಆಗಿರುವ ಅರ್ಜುನ್ ಸರ್ಜಾ ಕನ್ನಡದ ಹಿರಿಯ ನಟ ರಾಜೇಶ್ (Rajesh) ಅವರ ಪುತ್ರಿ ಆಗಿರುವ ಆಶಾ ರಾಣಿಯವರನ್ನು (Asharani) ಮದುವೆ ಆಗಿದ್ದಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಮೊದಲ ಮಗಳೇ ಐಶ್ವರ್ಯ ಸರ್ಜಾ. ಮಗಳು ಐಶ್ವರ್ಯ ಸರ್ಜಾ ಅವರನ್ನು ಅಲ್ಲದೆ ಅವರ ಸಹೋದರಿ ಮಕ್ಕಳಾದ ಚಿರು ಸರ್ಜಾ ಮತ್ತು ಧ್ರುವ ಸರ್ಜಾ ಅವರನ್ನು ಸಹ ಸಿನಿಮಾ ರಂಗಕ್ಕೆ ಕರೆತಂದದ್ದು ಅರ್ಜುನ್ ಸರ್ಜಾ ಅವರೇ.
ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರನ್ನು ತಮ್ಮ ಮಕ್ಕಳಂತೆ ಇವರು ಸಾಕಿದ್ದಾರೆ ಇದನ್ನು ಮತ್ತು ಧ್ರುವ ಮತ್ತು ಚಿರು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಚಿರು ಅ-ಗ-ಲಿ-ಕೆ ನಂತರ ಕೂಡ ಅರ್ಜುನ್ ಸರ್ಜಾ ಕುಟುಂಬ ಮತ್ತು ಮೇಘನಾ ಅವರ ನಡುವೆ ಒಳ್ಳೆ ಬಾಂಧವ್ಯವಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಈ ಕುರಿತು ಅಪಪ್ರಚಾರವೇ ನಡೆಯುತ್ತಿದೆ. ಈಗ ಮೇಘನಾ ರಾಜ್ ಅವರು ಡ್ಯಾನ್ಸಿಂಗ್ ಡಾಲ್ (Dancing doll) ಎಂದು ಶೀರ್ಷಿಗೆ ಕೊಟ್ಟು ಐಶ್ವರ್ಯ ಅವರ ಈ ಡ್ಯಾನ್ಸ್ ವಿಡಿಯೋ ಹಂಚಿಕೊಂಡಿರುವುದು ಅವರಿಬ್ಬರ ನಡುವೆ ಇರುವ ಅನ್ಯೋನ್ಯತೆಗೆ ಸಾಕ್ಷಿ ಆಗಿದೆ ಅನ್ನಬಹುದು.