ಕುರುಕ್ಷೇತ್ರ ಸಿನಿಮಾದಲ್ಲಿ ಕರ್ಣನ ಪಾತ್ರ ಮಾಡಬೇಕಿದ್ದ ಶಿವಣ್ಣ ಆ ಪಾತ್ರದಿಂದ ಹೊರ ಬಂದಿದ್ದು ಯಾಕೆ ಗೊತ್ತಾ.? ಕೊನೆಗೂ ಸತ್ಯ ಬಯಲು

 

ಕನ್ನಡದಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಎಂದರೆ ಅದೆಂತಹದ್ದೋ ಕ್ರೇಜ್, ಆ ಸಿನಿಮಾ ರಿಲೀಸ್ ನಾಡ ಹಬ್ಬದಂತಹ ಸಂಭ್ರಮವನ್ನು ಕರ್ನಾಟಕದಲ್ಲಿ ತಂದಿರುತ್ತದೆ. ಇನ್ನು ಮಲ್ಟಿ ಸ್ಟಾರ್ (Multi star’s movie) ಗಳ ಸಿನಿಮಾ ಎಂದು ಬಿಟ್ಟರಂತೂ ಆ ಸಂತೋಷಕ್ಕೆ ಪಾರವೇ ಇಲ್ಲ. ನೆಚ್ಚಿನ ನಟರನ್ನೆಲ್ಲಾ ಒಂದೇ ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಸದಾ ಕಾತುರರಾಗಿರುತ್ತಾರೆ. ಅಲ್ಲದೆ ಇಂತಹ ಮಲ್ಟಿ ಸ್ಟಾರ್ ಗಳ ಸಿನಿಮಾ ಹ್ಯಾಂಡಲ್ ಮಾಡುವ ಕಥೆಯೂ ವಿಶೇಷವಾಗಿರುತ್ತದೆ ಎನ್ನುವ ಕಾರಣಕ್ಕೆ ಇನ್ನು ಹೆಚ್ಚಿಗೆ ಎಕ್ಸೈಟ್ ಆಗಿರುತ್ತಾರೆ.

ಕನ್ನಡದಲ್ಲಿ ಪ್ರತಿಯೊಂದು ಮಲ್ಟಿ ಸ್ಟಾರ್ ಸಿನಿಮಾ ಕೂಡ ಗೆದ್ದಿದೆ, ಹಾಗಾಗಿ ಇಂತಹ ಪ್ರಯೋಗಗಳು ಆಗಾಗ ಕನ್ನಡದಲ್ಲಿ ನಡೆಯುತ್ತಲೇ ಇರುತ್ತದೆ. ಹೀಗೆ 2019ರಲ್ಲಿ ಕುರುಕ್ಷೇತ್ರ (Kurukshethra) ಎನ್ನುವ ಪೌರಾಣಿಕ ಕಥೆ (Mythological movie) ಎಳೆಯುಳ್ಳ ಸಿನಿಮಾವನ್ನು ಈ ರೀತಿ ಚಿತ್ರರಂಗದ ದಿಗ್ಗಜರುಗಳನ್ನೆಲ್ಲ ಸೇರಿಸಿ ಮಾಡಲಾಗಿತ್ತು.

ಮಹಾಮಹಿಮ ಭೀಷ್ಮರ ಪಾತ್ರದಲ್ಲಿ ಅಂಬರೀಶ್ , ಧೃತರಾಷ್ಟ್ರರಾಗಿ ಶ್ರೀನಾಥ್, ಶ್ರೀ ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ಕುಂತಿಯಾಗಿ ಭಾರತಿ ವಿಷ್ಣುವರ್ಧನ್, ಧರ್ಮರಾಯನಾಗಿ ಶಿವರಾಜಕುಮಾರ್, ಅರ್ಜುನರಾಗಿ ಸೋನು ಸೂದ್, ಅಭಿಮನ್ಯು ಆಗಿ ನಿಖಿಲ್ ಕುಮಾರಸ್ವಾಮಿ, ದ್ರೌಪದಿ ಆಗಿ ಸ್ನೇಹ, ಕರ್ಣನಾಗಿ ಅರ್ಜುನ್ ಸರ್ಜಾ, ಭಾನುಮತಿಯಾಗಿ ಮೇಘನಾ ರಾಜ್ ಮತ್ತು ಸಿನಿಮಾದ ಮುಖ್ಯಪಾತ್ರಧಾರಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅವರು ದುರ್ಯೋಧನ ಪಾತ್ರದಲ್ಲಿ ಅಬ್ಬರಿಸಿದ್ದರು.

ಈ ಸಿನಿಮಾ ಒಂದು ರೀತಿಯಲ್ಲಿ ದುರ್ಯೋಧನನ (Duryodhana role) ಪಾತ್ರವನ್ನು ಹೆಚ್ಚಾಗಿ ಕೇಂದ್ರೀಕರಿಸಿತ್ತು ಎಂದರು ಸುಳ್ಳಲ್ಲ. ದುರ್ಯೋಧನ ಒಳ್ಳೆತನ ಮತ್ತು ಕೆಟ್ಟತನ ಎರಡನ್ನು ಸೇರಿಸಿ ಸಿನಿಮಾ ಮಾಡಲಾಗಿದ್ದರಿಂದ ಸಿನಿಮಾದಲ್ಲಿ ಎಲ್ಲಾ ಪಾತ್ರಗಳು ಕೂಡ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಧಕ್ಕಿಸಿ ಅಭಿನಯಿಸಿದ್ದಾರೆ.

ಬಹು ವರ್ಷಗಳ ನಂತರ ಕನ್ನಡದಲ್ಲಿ ಈ ರೀತಿ ಒಂದು ಪೌರಾಣಿಕ ಚಿತ್ರ ತಯಾರಾಗಿತ್ತು ಎಲ್ಲಾ ಪಾತ್ರಗಳಿಗೂ ಕೂಡ ನಿರ್ದೇಶಕರಾದ ನಾಗಣ್ಣ ಮತ್ತು ನಿರ್ಮಾಪಕರಾದ ಮುನಿರತ್ನ ಅವರು ಅಳೆದು ತೂಗಿ ಕಲಾವಿದರನ್ನು ಆಯ್ದುಕೊಂಡಿದ್ದರು. ಆದರೆ ಕರ್ಣನ ಪಾತ್ರಕ್ಕೆ ಅರ್ಜುನ್ ಸರ್ಜಾ ಅವರಿಗೂ ಮೊದಲು ಶಿವರಾಜ್ ಕುಮಾರ್ ಅವರನ್ನು ಒಪ್ಪಿಸಲಾಗಿತ್ತಂತೆ. ಮೊದಲಿಗೆ ಕಥೆ ಕೇಳಿದ ಶಿವಣ್ಣ ಇದಕ್ಕೆ ಒಪ್ಪಿಕೊಂಡಿದ್ದರೂ.

ಇದೇ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಅವರ ಟಗರು ಮತ್ತು ದಿ ವಿಲನ್ ಸಿನಿಮಾಗಳು ತಯಾರಾಗುತ್ತಿದ್ದವು ಎಲ್ಲಾ ಸಿನಿಮಾಗಳ ಶೂಟಿಂಗ್ ಬ್ಯುಝಿಯಲ್ಲಿ ಡೇಟ್ ಸಿಗದ ಕಾರಣ ಅವರು ಕುರುಕ್ಷೇತ್ರ ಸಿನಿಮಾದಲ್ಲಿ ನಟಿಸಲು ಆಗಲಿಲ್ಲ. ದರ್ಶನ್ ಜೊತೆ ಸಿನಿಮಾ ಮಾಡಲು ಅವಕಾಶ ಕಳೆದುಕೊಂಡಿದ್ದ ಕ್ಕಾಗಿ ಇಂದಿಗೂ ಸಹ ಶಿವಣ್ಣ ಅದರ ಬಗ್ಗೆ ಬೇಸರಿಸಿಕೊಳ್ಳುತ್ತಾರೆ. ಅದೇ ರೀತಿ ಮುಂದೆ ಒಂದು ದಿನ ನಮ್ಮಿಬ್ಬರನ್ನು ಹ್ಯಾಂಡಲ್ ಮಾಡುವ ನಿರ್ಮಾಪಕ ಮತ್ತು ನಿರ್ದೇಶಕ ಸಿಕ್ಕರೆ ಖಂಡಿತವಾಗಿಯೂ ಮುಂದೆ ಒಟ್ಟಿಗೆ ಕಾಣಿಸಿಕೊಳ್ಳುತ್ತೇವೆ ಎನ್ನುವ ಸಮಾಧಾನದ ನುಡಿಗಳನ್ನು ಕೂಡ ನುಡಿಯುತ್ತಾರೆ.

ಈ ಹಿಂದೆ ದೇವರ ಮಗ (Devara maga) ಎನ್ನುವ ಸಿನಿಮಾದಲ್ಲಿ ಕೂಡ ಶಿವಣ್ಣ ಹಾಗೂ ದರ್ಶನ್ ಕಾಣಿಸಿಕೊಂಡಿದ್ದರು. ದರ್ಶನವರು ಆಗತಾನೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಆಗಿನ್ನು ಹೀರೋ ಆಗಿ ಅವರು ಹೆಸರು ಮಾಡಿರಲಿಲ್ಲ. ಸಿಕ್ಕ ಸಣ್ಣಪುಟ್ಟ ಪಾತ್ರ ಮತ್ತು ವಿಲನ್ ರೋಲ್ (villain role) ಗಳಲ್ಲಿ ಅಭಿನಯಿಸಿದ್ದರು. ಅಂಬರೀಶ್ ಕೂಡ ಅಭಿನಯಿಸಿದ್ದ ಈ ಸಿನಿಮಾದಲ್ಲಿ ದರ್ಶನ್ ವಿಲನ್ ರೋಲ್ ಮಾಡಿದ್ದರು. ಆ ದಿನಗಳಲ್ಲಿ ದೇವರ ಮಗ ಸಿನಿಮಾ ಬಹಳ ದೊಡ್ಡ ಸೌಂಡ್ ಮಾಡಿತ್ತು. ಮತ್ತೊಮ್ಮೆ ಇವರಿಬ್ಬರನ್ನು ತೆರೆ ಮೇಲೆ ಕಾಣಲು ಕನ್ನಡಿಗರು ಕಾಯುತ್ತಿದ್ದಾರೆ.

Leave a Comment