ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿ (Karnataka building and other construction worker board) ನೋಂದಣಿಯಾಗಿ ಲೇಬರ್ ಕಾರ್ಡ್ (Labour’s card) ಹೊಂದಿರುವ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಯೋಜನೆಗಳ ನೆರವು ಸಿಗುತ್ತಿದೆ.
ಅಸಂಘಟಿತ ವಲಯದಲ್ಲಿ ದುಡಿಯುವ ಈ ಕಾರ್ಮಿಕರಿಗಾಗಿ ಸರ್ಕಾರವು (government) ಹೊಸ ಹೊಸ ಯೋಜನೆಗಳನ್ನು ಕೂಡ ಜಾರಿಗೆ ತರುತ್ತಿದೆ. ಇತ್ತೀಚೆಗೆ ಲೇಬರ್ ಕಾರ್ಡ್ ದಾಖಲೆಗಳನ್ನು ಕೊಟ್ಟು ಲೇಬರ್ ಕಾರ್ಡ್ ರಿನೀವಲ್ (Labiur card renewal) ಮಾಡಿಸಿಕೊಳ್ಳಬೇಕು ಎನ್ನುವ ಆದೇಶವನ್ನು ಕೂಡ ಹೊರಡಿಸಿದೆ.
ಮತ್ತು ಲೇಬರ್ ಕಾರ್ಡ್ ಹೊಂದಿರುವ ಫಲಾನುಭವಿಗಳಾಗಲು ಅದರ ಪ್ರಯೋಜನವನ್ನು ಪಡೆಯಲು ಹೊಸದಾದ ತಂತ್ರಾಂಶವನ್ನು (New website) ಕೂಡ ಬಿಡುಗಡೆ ಮಾಡಿದೆ. ಆ ಹೊಸ ವೆಬ್ ಸೈಟ್ ಅಲ್ಲಿ ನೀವು ಲೇಬರ್ ಕಾರ್ಡ್ ಗೆ ಅರ್ಜಿ ಹಾಕಬಹುದು, ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು, ಅರ್ಜಿ ಸ್ಥಿತಿಯನ್ನು ಪರೀಕ್ಷಿಸಬಹುದು ಹಾಗೂ QR ಕೋಡ್ ಹೊಂದಿರುವ ಹೊಸ ಇ-ಕಾರ್ಡ್ (e-card) ಪಡೆಯಬಹುದು. ಅದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಮೊದಲಿಗೆ https://labouronline.kar.nic.in ವೆಬ್ಸೈಟ್ ಗೆ ಭೇಟಿಕೊಡಿ.
● ಲೇಬರ್ ಕಾರ್ಡ್ ಮುಖಪುಟ ಓಪನ್ ಆಗುತ್ತದೆ ಅದರಲ್ಲಿ ನಿಮಗೆ ಮೂರು ಆಪ್ಷನ್ ಗಳು ಕಾಣುತ್ತದೆ. ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿ, ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ಭದ್ರತಾ ಮಂಡಳಿ ಈ ಮೂರು ಆಯ್ಕೆಗಳಲ್ಲಿ ಮೊದಲನೇ ಆಯ್ಕೆ ಆದ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಮಂಡಳಿ ಎನ್ನುವ ಆಪ್ಷನ್ ಅನ್ನು ಆಯ್ಕೆ ಮಾಡಬೇಕು.
● ಸ್ಕ್ರೀನ್ ಮೇಲೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಮಂಡಳಿ ಯೋಜನೆಗಳ ಕುರಿತು ಒಂದಷ್ಟು ಮಾಹಿತಿ ಸಿಗುತ್ತದೆ ಅದನ್ನು ಪೂರ್ತಿ ಓದಿಕೊಳ್ಳಿ.
● ಸ್ಕ್ರೋಲ್ ಮಾಡುತ್ತಾ ಕೆಳಗೆ ಬಂದರೆ ಯೋಜನೆಗಳ ಪಟ್ಟಿಯೇ ಸಿಗುತ್ತದೆ.
● ಅಪ.ಘಾ.ತ ಪರಿಹಾರ, ಪ್ರಮುಖ ವೈದ್ಯಕೀಯ ವೆಚ್ಚ, ಸಹಾಯಧನ, ತಾಯಿ ಮಗು ಸಹಾಯ ಹಸ್ತ, ಪಿಂಚಣಿ ಮುಂದುವರೆಯುವಿಕೆ, ಹೆರಿಗೆ ಸೌಲಭ್ಯ, ದುರ್ಬಲತೆ ಪಿಂಚಣಿ ಸೌಲಭ್ಯ, ಶೈಕ್ಷಣಿಕ ಸಹಾಯಧನ, ಅಂತ್ಯಕ್ರಿಯ ವೆಚ್ಚ, ವೈದ್ಯಕೀಯ ಸಹಾಯಧನ, ಮದುವೆಗೆ ಸಹಾಯಧನ, ಪಿಂಚಣಿ ಸೌಲಭ್ಯ, ಉಚಿತ ಬಸ್ ಸೌಲಭ್ಯ, ಶ್ರಮ ಸಾಮರ್ಥ್ಯ ಕಿಟ್, ಕಾರ್ಮಿಕರ ಮಕ್ಕಳಿಗೆ UPSC, KPSC ಪರೀಕ್ಷೆಗಳಿಗೆ ಉಚಿತವಾಗಿ ಪೂರ್ವ ತರಬೇತಿ ಸೌಲಭ್ಯ ಇನ್ನೂ ಮುಂತಾದ ಎಲ್ಲಾ ಯೋಜನೆಗಳ ಲಿಸ್ಟ್ ಇರುತ್ತದೆ.
ಡಿವೋರ್ಸ್ ಕೊಡ್ತಿಲ್ಲ ಜೊತೆಯಲ್ಲಿ ಜೀವ್ನನೂ ಮಾಡ್ತಿಲ್ಲ ಅಂದ್ರೆ ಏನು ಮಾಡಬೇಕು.? ಕಾನೂನು ಹೇಳೋದೇನು.!
● ಇಲ್ಲಿ ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಬೇಕಿದ್ದರೂ ರಿಜಿಸ್ಟ್ರೇಷನ್ ಆಸ್ ಕನ್ಸ್ಟ್ರಕ್ಷನ್ ವರ್ಕರ್ ಲಾಗಿನ್ (registration as construction worker / log in) ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
● ನೀವು ಈಗಾಗಲೇ ರಿಜಿಸ್ಟರ್ ಆಗಿದ್ದರೆ ಅದಕ್ಕೂ ಆಪ್ಷನ್ ಇರುತ್ತದೆ ನಿಮ್ಮ ರಿಜಿಸ್ಟರ್ ನಂಬರ್ ಹಾಗೂ ರೆಫರೆನ್ಸ್ ನಂಬರ್ ಹಾಕಿ ವೆರಿಫೈ ಮಾಡಿ ಲಾಗಿನ್ ಆಗಿ ಅಥವಾ ಮೊಬೈಲ್ ನಂಬರ್ ರಿಜಿಸ್ಟರ್ ಆಗಿದ್ದರೆ ಮೊಬೈಲ್ ಸಂಖ್ಯೆಯನ್ನು ಹಾಕಿ ಒಟಿಪಿ ವೆರಿಫೈ ಮಾಡುವ ಮೂಲಕ ಕೂಡ ಲಾಗಿನ್ ಆಗಬಹುದು
● ಲಾಗಿನ್ ಆದಾಗ ಮತ್ತೊಂದು ಡ್ಯಾಶ್ ಬೋರ್ಡ್ ಕಾಣಿಸುತ್ತದೆ ಅದರಲ್ಲಿ ಹೊಸ ನೋಂದಣಿ, ನವೀಕರಣ, ಯೋಜನೆಗಳು, ಯೋಜನೆಗಳ ಸ್ಥಿತಿ ಪರಿಶೀಲನೆ ಮತ್ತು ಇ-ಕಾರ್ಡ್ ಎನ್ನುವ ಆಪ್ಷನ್ ಇರುತ್ತದೆ ಇದರಲ್ಲಿ ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ ಮುಂದುವರಿಯಬಹುದು.