ಕರ್ನಾಟಕ ಕಾರ್ಮಿಕ ಇಲಾಖೆ ವತಿಯಿಂದ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಎರಡು ಮಕ್ಕಳಿಗೆ ಸ್ಕಾಲರ್ಶಿಪ್ ನೀಡಲಾಗುತ್ತಿದೆ. ಲೇಬರ್ ಕಾರ್ಡ್ ಹೊಂದಿ ನೋಂದಣಿ ಆಗಿರುವ ಕಾರ್ಮಿಕರ ಇಬ್ಬರು ಮಕ್ಕಳುಗಳು ಇದುವರೆಗೆ ಸರ್ಕಾರದ ಈ ಸಹಾಯಧನವನ್ನು ಪಡೆಯುತ್ತಿದ್ದರು. ನರ್ಸರಿ ಇಂದ ಸ್ನಾತಕೋತರ ಪದವಿ ವಿದ್ಯಾಭ್ಯಾಸ ಮಾಡುವವರಿಗೂ ಸ್ಕಾಲರ್ಶಿಪ್ ಬರುತ್ತಿದೆ. ಇದರಿಂದ ಲಕ್ಷಾಂತರ ಕಾರ್ಮಿಕ ಮಕ್ಕಳಿಗೆ ಉಪಯೋಗ ಆಗುತ್ತಿತ್ತು ಸರ್ಕಾರ ಜಾರಿಗೆ ತಂದಿರುವ ಅತ್ಯುತ್ತಮ ಯೋಜನೆ ಇದು ಎನಿಸಿದೆ.
ಸರ್ಕಾರದ ಯಾವುದೇ ಯೋಜನೆಯಾದರೂ ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತಿರುತ್ತದೆ. ನಕಲಿ ಫಲಾನುಭವಿಗಳನ್ನು ಕಂಡುಹಿಡಿಯಲು ಈ ರೀತಿ ಅಪ್ಡೇಟ್ ಮಾಡಿಲೇ ಬೇಕಾಗಿರುತ್ತದೆ, ಇಂತಹ ಸಾಕಷ್ಟು ಕಾರಣಗಳಿಂದ ಎಲ್ಲಾ ಯೋಜನೆಯಲ್ಲಿಯೂ ಪ್ರತಿಸಲವೂ ಸ್ವಲ್ಪ ಮಾರ್ಪಾಡು ಮಾಡಿ ಯೋಜನೆಯನ್ನು ಜಾರಿಗೆ ತರುತ್ತಾರೆ. ಅಂತಹದೇ ಒಂದು ಬದಲಾವಣೆ ಲೇಬರ್ ಕಾರ್ಡ್ ಸ್ಕಾಲರ್ಶಿಪ್ ಪಡೆಯುವವರ ಸ್ಟೇಟಸ್ ಅಲ್ಲಿ ಆಗಿದೆ.
ಎಲ್ಲರಿಗೂ ತಿಳಿದಿರುವಂತೆ ಕಟ್ಟಡ ಕಾರ್ಮಿಕರ ಕಾರ್ಡ್ ಹೊಂದಿರುವವರ ಮಕ್ಕಳು ಸ್ಕಾಲರ್ಶಿಪ್ ಪಡೆಯಲು ಬೇಕಾದ ಮೂಲ ದಾಖಲೆಗಳಾದ ಕಳೆದ ವರ್ಷದ ಅಂಕಪಟ್ಟಿ, ಹೊಸ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಆಗಿರುವುದರ ಬಗ್ಗೆ ಪ್ರಮಾಣ ಪತ್ರ ಅಥವಾ ಶುಲ್ಕ ಪಾವತಿ ರಶೀದಿ, ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಮಾಹಿತಿ ಮುಂತಾದ ದಾಖಲೆಗಳೊಂದಿಗೆ ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್, ಅಥವಾ CSC ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಂದಿ ಇವುಗಳಿಗೆ ಸೇವಾ ಸಿಂಧು ಕೇಂದ್ರಗಳ ಮೊರೆ ಹೋಗುತ್ತಾರೆ. ಅಪ್ಲಿಕೇಶನ್ ಹಾಕಿ ಸಾಕಷ್ಟು ಮಂದಿ ಕಳೆದ ವರ್ಷಗಳಲ್ಲಿ ಇದರ ಫಲಾನುಭವಿಗಳೂ ಆಗಿರುತ್ತಾರೆ. ಈ ವರ್ಷವೂ ಕೂಡ 2022 – 23 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನಿಸಲಾಗಿತ್ತು. ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳು ಇದಕ್ಕೆ ಅಪ್ಲಿಕೇಶನ್ ಕೂಡ ಹಾಕಿದ್ದಾರೆ.
ಈ ಬಾರಿ ಕಡೆ ದಿನಾಂಕವನ್ನು ಒಂದು ತಿಂಗಳವರೆಗೆ ಹೆಚ್ಚಿಗೆಯೂ ನೀಡಲಾಗಿದೆ. ಇದರಿಂದ ಇನ್ನಷ್ಟು ಅನುಕೂಲ ಆಗಿದೆ. ಆದರೆ ಈಗಾಗಲೇ ಅಪ್ಲಿಕೇಶನ್ ಹಾಕಿರುವವರ ಸ್ಟೇಟಸ್ ಚೆಕ್ ಮಾಡಿದರೆ ಅದರಲ್ಲಿ ಒಂದು ಬದಲಾವಣೆ ಆಗಿರುವುದನ್ನು ಕಾಣಬಹುದು. ಇದೇ ಮೊದಲ ಬಾರಿಗೆ ಈ ರೀತಿಯ ಒಂದು ಬದಲಾವಣೆ ಸ್ಟೇಟಸ್ ನಲ್ಲಿ ಆಗಿದೆ. ಇಲ್ಲಿಯ ತನಕ ಅಪ್ಲಿಕೇಶನ್ ಹಾಕಿದ ಮೇಲೆ CSC ಕೇಂದ್ರಕ್ಕೆ ಹೋಗಿ ಅದರ ಸ್ಟೇಟಸ್ ಚೆಕ್ ಮಾಡುವಾಗ ಅಪ್ಲಿಕೇಶನ್ ಸಬ್ಮಿಟ್ ಎನ್ನುವ ರೋ ಅಲ್ಲಿ ಕಂಪ್ಲಿಟೆಡ್ ಎಂದು ಇರುತ್ತಿತ್ತು.
ಪುಷ್ ಟಾಟಾ ಟು ಸೇವಾ ಸಿಂಧು ಡಾಟಾ ಬೋರ್ಡ್ ಎನ್ನುವ ರೋ ಅಲ್ಲಿ ಡಿಲಿವರ್ಡ್ ಎಂದು ಇರುತ್ತಿತ್ತು. ಈಗ ಮತ್ತೊಂದು ಹೊಸ ಸೇರ್ಪಡೆ ಆಗಿದೆ. ಈ ಎರಡು ಕಾಲಂಗಳ ಮಧ್ಯೆ ವೆರಿಫಿಕೇಶನ್ ಬೈ ಲೇಬರ್ ಇನ್ಸ್ಪೆಕ್ಟರ್ ಆಫೀಸ್ ಎನ್ನುವ ಹೊಸ ಕಾಲಂ ಕಾಣುತ್ತಿದೆ. ಅದರಲ್ಲಿ ಅಂಡರ್ ಪ್ರೋಸೆಸ್ ಎಂದು ಕೂಡ ಬರುತ್ತಿದೆ. ಅಂದರೆ ಇದರ ಅರ್ಥ ನಿಮ್ಮ ಅಪ್ಲಿಕೇಶನ್ ಸಬ್ಮಿಶನ್ ಕಂಪ್ಲೀಟ್ ಆಗಿ ಅದು ಇಲಾಖೆಯ ವೆಬ್ಸೈಟ್ ಸೇರಿದೆ. ಅಲ್ಲಿ ನಿಮ್ಮ ದಾಖಲೆ ಪರಿಶೀಲನೆ ಆಗುವುದು ಬಾಕಿ ಇದೆ ಎಂದರ್ಥ. ಇದಾದ ಮೇಲೆ ನಿಮ್ಮ ಖಾತೆಗೆ ಎಂದಿನಂತೆ ಸ್ಕಾಲರ್ಶಿಪ್ ಹಣ ಜಮೆ ಆಗುತ್ತದೆ. ಈಗ ಹೊಸ ಮಾರ್ಪಾಡು ಸ್ಟೇಟಸ್ ಚೆಕ್ ಮಾಡುವವರಿಗೆ ಇದು ಇನ್ನೂ ಕ್ಲಿಯರ್ ಆಗಿ ಮಾಹಿತಿ ತಿಳಿಸುತ್ತದೆ.