ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ವಿನೋದ್ ರಾಜಕುಮಾರ್ ಅವರು ಅದ್ಭುತ ಕಲಾವಿದ ಅದ್ಭುತ ಡ್ಯಾನ್ಸರ್ ಕೂಡ ಡ್ಯಾನ್ಸ್ ರಾಜ ಡ್ಯಾನ್ಸ್ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡುವುದರ ಮೂಲಕ ಸ್ಯಾಂಡಲ್ವುಡ್ ಗೆ ಪಾದರ್ಪಣೆ ಮಾಡಿದರು. ಒಂದು ಕಾಲದಲ್ಲಿ ವಿನೋದ್ ರಾಜಕುಮಾರ್ ಅಂದರೆ ಎಲ್ಲಿಲ್ಲದ ಕ್ರೇಜ್ ಇವರ ಡ್ಯಾನ್ಸ್ ಗೆ ಮಾರು ಹೋಗದವರೇ ಇಲ್ಲ ಒಂದು ರೀತಿಯಲ್ಲಿ ಹೇಳಬೇಕಾದರೆ ಕನ್ನಡದ ಮೈಕಲ್ ಜಾಕ್ಸನ್ ಅಂತಾನೆ ಹೇಳಬಹುದು. 90ರ ದಶಕದಲ್ಲಿ ವಿನೋದ್ ರಾಜಕುಮಾರ್ ಅವರ ಮಾದರಿಯಲ್ಲಿ ಯಾರೂ ಕೂಡ ಡಾನ್ಸ್ ಮಾಡುತ್ತಿರಲಿಲ್ಲ ಇವರ ಡ್ಯಾನ್ಸನ್ನು ನೋಡಿದಂತಹ ಪ್ರಭುದೇವ ಹಾಗೂ ಮಾಸ್ಟರ್ ಮಹಾದೇವ್ ಚಿನ್ನಿ ಪ್ರಕಾಶ್ ಇನ್ನಿತರ ಕೊರಿಯೋಗ್ರಾಫರ್ ನಿಜಕ್ಕೂ ಬೆರಗಾಗಿ ಹೋಗಿದ್ದರು.
ಇಷ್ಟೊಂದು ಅದ್ಭುತ ಡಾನ್ಸ್ ಅನ್ನು ಇವರು ಎಲ್ಲಿ ಕಲಿತರು ಇಷ್ಟು ನಿರ್ಳಗಳವಾಗಿ ಮೈಯಲ್ಲಿ ಮೂಳೆ ಇಲ್ಲದೆ ಇರುವ ರೀತಿಯಲ್ಲಿ ಡಾನ್ಸ್ ಮಾಡುತ್ತಾರಲ್ಲ ಎಂದು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಿದ್ದರು. ಆ ಕಾಲದಲ್ಲಿ ವಿನೋದ್ ರಾಜಕುಮಾರ್ ಅವರಿಗೆ ಎಲ್ಲಿಲ್ಲದ ಬೇಡಿಕೆ 90ರ ದಶಕದಲ್ಲಿ ವಿನೋದ್ ರಾಜಕುಮಾರ್ ಹಾಗೂ ಶಶಿಕುಮಾರ್ ಬಿಟ್ಟರೆ ಇನ್ಯಾರು ಕೂಡ ಚಿತ್ರರಂಗದಲ್ಲಿ ಹೆಚ್ಚು ಡಾನ್ಸ್ ಮಾಡುತ್ತಿರಲಿಲ್ಲ ಇದಕ್ಕಾಗಿಯೇ ಇವರಿಬ್ಬರಿಗೆ ಹೆಚ್ಚಿನ ಆಫರ್ ಬರುತ್ತಿತ್ತು. ವಿನೋದ್ ರಾಜಕುಮಾರ್ ಅವರು ಕೂಡ ಇಲ್ಲಿಯವರೆಗೂ ಸುಮಾರು ರಿಂದ 40 ಸಿನಿಮಾದಲ್ಲಿ ನಾಯಕನಟನಾಗಿ ಪೋಷಕ ನಟನಾಗಿ ಹಾಗೂ ಸಹ ಪಾತ್ರದಾರರ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ವಿನೋದ್ ರಾಜಕುಮಾರ್ ಅವರ ಚಿತ್ರರಂಗದಿಂದ ದೂರ ಉಳಿದಿರುವಂತಹ ವಿಚಾರ ನಿಮ್ಮೆಲ್ಲರಿಗೂ ತಿಳಿದೇ ಇದೆ.
ಕನ್ನಡದ ಕಂದ ಎಂಬ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ್ದೆ ಇವರ ಕೊನೆಯ ಸಿನಿಮಾ ಅಂತ ಹೇಳಬಹುದು 2007 ರಲ್ಲಿ ಈ ಸಿನಿಮಾ ತೆರೆ ಕಂಡಿತು. ಈ ಸಿನಿಮಾದಲ್ಲಿ ನಟನೆ ಮಾಡಿದ ನಂತರ ಇಲ್ಲಿಯವರೆಗೂ ಎಲ್ಲಿಯೂ ಕೂಡ ನಟ ವಿನೋದ್ ರಾಜಕುಮಾರ್ ಅವರು ಕಾಣಿಸಿಕೊಂಡಿಲ್ಲ. ಒಬ್ಬ ವ್ಯಕ್ತಿ ಇದ್ದಕ್ಕಿದ್ದ ಹಾಗೆ ಚಿತ್ರರಂಗದಿಂದ ದೂರ ಉಳಿದಿದ್ದಾನೆ ಅಂದರೆ ನಿಜಕ್ಕೂ ಕೂಡ ಬೇಸರ ಉಂಟು ಮಾಡಿದೆ. ಅಷ್ಟೇ ಅಲ್ಲದೆ ವಿನೋದ್ ರಾಜಕುಮಾರ್ ಅವರು ಇಂತಹದೊಂದು ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವುದಕ್ಕೆ ಕಾರಣವಾದರೂ ಏನು ಎಂಬ ಹಲವಾರು ಅನುಮಾನಗಳು ಅಭಿಮಾನಿಗಳಲ್ಲಿ ಮೂಡಿರುವುದಂತೂ ಸಹಜ. ಸದ್ಯಕ್ಕೆ ವಿನೋದ್ ರಾಜ್ ಕುಮಾರ್ ಅವರು ಚಿತ್ರರಂಗದ ಸಹವಾಸವೇ ಬೇಡ ಅಂತ ಬೆಂಗಳೂರಿನ ಸಮೀಪದಲ್ಲಿ ಇರುವಂತಹ ಹಳ್ಳಿ ಒಂದರಲ್ಲಿ ವ್ಯವಸಾಯವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಇನ್ನು ಇವರು ತಮ್ಮ ತಾಯಿಯನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅಂದರೆ ಬೇರೊಬ್ಬ ಸೊಸೆ ಮನೆಗೆ ಬಂದರೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ ಅಥವಾ ಇಲ್ಲವೋ ಎಂಬ ಅನುಮಾನದಿಂದಾಗಿ ವಯಸ್ಸು 50 ಆದರೂ ಕೂಡ ಇನ್ನೂ ಮದುವೆಯಾಗದೆ ತಮ್ಮ ತಾಯಿಯ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಕೇವಲ ಇದಿಷ್ಟು ಮಾತ್ರವಲ್ಲದೆ ಕೊರೋನಾ ಇದ್ದ ಸಮಯದಲ್ಲಿ ಸಾಕಷ್ಟು ಜನರಿಗೆ ತಮ್ಮ ಸ್ವಂತ ದುಡ್ಡಿನಲ್ಲಿ ಫುಡ್ ಕಿಟ್ ಕೊಡಿಸಿದ್ದಾರೆ. ಇನ್ನು ತಾವು ವಾಸವಾಗಿರುವಂತಹ ಗ್ರಾಮದಲ್ಲಿ ಮೂಲಭೂತ ಸೌಕರ್ಯ ಇರಬೇಕು ಎಂಬ ಕಾರಣಕ್ಕಾಗಿ ನೀರಿನ ಸೌಕರ್ಯ ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡುವುದು ಸಹಾಯಧನ ಹಾಗೂ ಆಸ್ಪತ್ರೆ ಹೀಗೆ ನಾನಾ ರೀತಿಯಾದಂತಹ ಸಮಾಜಮುಖಿ ಸೇವೆಯನ್ನು ಮಾಡಿದ್ದಾರೆ.
ಕಳೆದ ಎರಡು ತಿಂಗಳಿನ ಹಿಂದೆಯಷ್ಟೇ ತಮಿಳುನಾಡಿನಲ್ಲಿ ಇದ್ದಂತಹ ತಮ್ಮ ಜಮೀನನ್ನು ಮಾರಿ ಸುಮಾರು 58 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಹೊಸ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಲೀಲಾವತಿ ಮತ್ತು ವಿನೋದ್ ರಾಜಕುಮಾರ್ ಅವರು ಇದ್ದಷ್ಟು ದಿನವೂ ಕೂಡ ಸಮಾಜಕ್ಕೆ ಒಳ್ಳೆಯ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ. ಇಷ್ಟೆಲ್ಲಾ ಒಳ್ಳೆಯ ಸದ್ಗುಣಗಳನ್ನು ಒಳಗೊಂಡಿದ್ದರು ಕೂಡ ಚಿತ್ರರಂಗ ಯಾಕೆ ಇವರನ್ನು ಕಡೆಗಣಿಸಿದೆ ಇವರಿಗೆ ಯಾಕೆ ಅಭಿನಯ ಮಾಡುವುದಕ್ಕೆ ಪಾತ್ರಗಳನ್ನು ಕೊಡುತ್ತಿಲ್ಲ ಎಂಬ ಪ್ರಶ್ನೆಗೆ ಇದೀಗ ಲೀಲಾವತಿಯವರೇ ಸ್ವತಹ ಸಂದರ್ಶನ ಒಂದರಲ್ಲಿ ಉತ್ತರ ನೀಡಿದ್ದಾರೆ. ಇವರು ಕೊಟ್ಟ ಉತ್ತರವನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವೆನಿಸುತ್ತದೆ ಆದರೂ ಕೂಡ ಲೀಲಾವತಿ ಅಮ್ಮನವರು ತಮ್ಮ ಬದುಕಿನಲ್ಲಿ ನಡೆದಂತಹ ಕಹಿ ಘಟನೆಯನ್ನು ಹೊರ ಹಾಕಿ ತಮ್ಮ ಮಗನಿಗೆ ನಡೆದಂತಹ ಅನ್ಯಾಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.
ಯಾವ ತಾಯಿ ತನ್ನ ಮಗನ ಭವಿಷ್ಯ ಉಜ್ವಲವಾಗಿರಲಿ ಅಂತ ಬಯಸೋದಿಲ್ಲ ಹೇಳಿ ಅದರ ಅಪ್ಪನಷ್ಟು ಬಯಸಿದ್ದೀನಿ ಸಾಕಷ್ಟು ಜಿಗುಪ್ಸೆಗಳು ಕಷ್ಟಗಳು ಎಲ್ಲವೂ ಬಂದಿದ್ದು ಆದರೆ ಬಲವಂತ ಮಾಡಿ ಅವಕಾಶ ಬರಲೇಬೇಕು ಅಂತ ಮಾಡುವಂತ ಅವಶ್ಯಕತೆ ಬೇಕಾಗಿಲ್ಲ. ನೀನು ದುಡಿ ನಾನು ತೋಟ ಮಾಡ್ತೇನೆ ನಿನ್ನ ಜೀವನದಲ್ಲಿ ಜಿಗುಪ್ಸೆ ಕಡಿಮೆ ಆಗಬೇಕು ಅಂದರೆ ಕರ್ತವ್ಯದಲ್ಲಿ ನಿರತನಾಗು ಸರಿ ಹೋಗುತ್ತೆ ಅಂತ ಹೇಳಿ ಅವನಿಗೆ ಕೃಷಿಯಲ್ಲಿ ನಾನು ಅಳವಡಿಸಿಕೊಂಡೇ. ಆ ಸಮಯದಲ್ಲಿ ಎಲ್ಲರು ಕೂಡ ಹೇಳಿದರು ಅಯ್ಯೋ ಆ ಮಗನ ಹತ್ತಿರ ದುಡಿಸ್ಕೊಂಡು ತಾಯಿ ಸುಮ್ಮನೆ ಕೂತಿದ್ದಾಳೆ ಅಂತ. ನಾನು ಸುಮ್ನೆ ಕೂತಿಲ್ಲ ಯಾರೇ ಬಂದು ನನ್ನ ತೋಟ ನೋಡಿದ್ರು ಇದು ತೋಟ ಅಲ್ಲ ಸ್ವರ್ಗ ಅಂತ ಹೇಳುತ್ತಾರೆ.
ಆಗ ನನಗೆ ಸ್ವರ್ಗದಲ್ಲೇ ಇದ್ದಷ್ಟು ಸಂತೋಷ ಆಗುತ್ತೆ ಅಷ್ಟೇ ಸಾಕು ನನಗೆ ಶೋಲ್ಡರ್ ಸ್ಪಿನ್ ಮಾಡೋದಕ್ಕೆ ಎಲ್ಲಿಂದ ಪ್ರಾರಂಭ ಮಾಡಿದ್ದಾನೆ ಅಂದರೆ ಮೈಕಲ್ ಜಾಕ್ಸನ್ ಮಾಡೋದನ್ನ ನೋಡಿಕೊಂಡು ಪ್ರಾಕ್ಟೀಸ್ ಮಾಡುತ್ತಾ ಇದ್ದ. ಚಿಕ್ಕವನಿದ್ದಾಗ ಶೋಲ್ಡರ್ ಸ್ಪಿನ್ ಮಾಡುವಾಗ ಅಮ್ಮ ಅಮ್ಮ ಹಿಡ್ಕೊ ಅಂತ ಹೇಳಿ ನಾನು ಅವನು ಇಬ್ಬರು ಬಿದ್ದಿದ್ವಿ. ಅಷ್ಟು ಹುಚ್ಚು ಹಾಗು ಕಿಚ್ಚು ಇತ್ತು ಅವನಿಗೆ ಅದನ್ನ ನೆನೆಸ್ಕೊಂಡ್ರೆ ನನಗೆ ಕೋಪ ಬರುತ್ತದೆ.ಇನ್ನು ಅಷ್ಟು ಚೆನ್ನಾಗಿ ಡ್ಯಾನ್ಸ್ ಮಾಡ್ತಾನೆ ಅಂತ ಎಲ್ಲರು ಹೇಳ್ತಾರೆ ಹೊರತು ನೀನು ಚೆನ್ನಾಗಿ ಮಾಡ್ತಿಯಪ್ಪ ಅಂತ ಒಬ್ಬರಾದರು ಅವನಿಗೆ ಒಂದು ಪ್ರಶಸ್ತಿ ಕೊಟ್ಟಿದ್ದಾರೆಯೇ? ಅಥವಾ ಚಿತ್ರರಂಗದಲ್ಲಿ ಒಂದು ಒಳ್ಳೆಯ ಅವಕಾಶ ಕೊಡುವ ಮನಸ್ಸು ಮಾಡಿದ್ದಾಯೇ? ಇಲ್ಲ ಖಂಡಿತವಾಗಿಯೂ ಇಲ್ಲವೇ ಇಲ್ಲ.
ಯಾಕೆ ಲೀಲಾವತಿ ಮಗ ಮಾಡಿದ ತಪ್ಪೇನು ನಾವು ಏನು ತಪ್ಪು ಮಾಡಿದ್ದೀವಿ ಈಗಲೂ ಕೂಡ ನಾನು ದೈರ್ಯದಿಂದ ಹೇಳ್ತಿನಿ ವಿನೋದ್ ರಾಜ್ ಕರಿಯರ್ ಹೀಗೆ ಆಗಲು ಕಾರಣ ಒಂದು ದೊಡ್ಡ ನಿರ್ಮಾಣ ಸಂಸ್ಥೆ ಹಾಗು ಅವರ ಮಕ್ಕಳುಗಳು ಮತ್ತು ಕೆಲವು ನಿರ್ಮಾಪಕರು ನಿರ್ದೇಶಕರು. ಅವರ ಹೆಸರು ಹೇಳುವ ಧೈರ್ಯ ನನಗಿಲ್ಲ ದೇವರ ಕೈಯಲ್ಲಿ ಅಬಲೆಯ ಹಾಗೆ ನಾನು ನನಗೆ ಅವನು ಆಧಾರವಾಗಿದ್ದಾನೆ ಹೊರತು ಬೇರೆ ಯಾವ ಇದು ನಮಗೆ ಇಲ್ಲಎಂದು ಭಾವುಕರಾಗಿ ಲೀಲಾವತಿ ಅವರು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ