ಏಪ್ರಿಲ್ 9ನೇ ತಾರೀಖಿನಂದು ನಿಮ್ಮ ರಾಶಿಯಲ್ಲಿ 7ನೇ ಮನೆಯಲ್ಲಿದ್ದ ಬುಧನು ವಕ್ರನಾಗಿ 6ನೇ ಮನೆಗೆ ಬರುತ್ತಿದ್ದಾರೆ. 13ನೇ ಮನೆಗೆ ರವಿಯು 7ನೇ ಮನೆಗೆ ಅಂದರೆ ಸಪ್ತಮ ಭಾವಕ್ಕೆ ಬರುತ್ತಿರುವುದು ತುಲಾ ರಾಶಿಯವರಿಗೆ ಶ್ರೇಷ್ಠವಾದ ಸಮಯವಾಗಿದೆ, ಅತ್ಯಂತ ರಾಜಯೋಗ ನೀಡುತ್ತಿದೆ.
23ನೇ ತಾರೀಖಿನಂದು ಕುಜನು 6ನೇ ಮನೆಗೆ ಬರುತ್ತಿದ್ದಾರೆ, ಪಂಚಮದಿಂದ ಷಷ್ಠ ಸ್ಥಾನಕ್ಕೆ ಬರುತ್ತಿದ್ದಾರೆ. ಇದು ಕೂಡ ಮಿತ್ರ ಸ್ಥಾನವಾಗಿರುವುದರಿಂದ ಶುಭಫಲ ನೀಡುತ್ತಿದೆ. ಏಪ್ರಿಲ್ 24 ನೇ ತಾರೀಖಿನಂದು ಶುಕ್ರನು ಉಚ್ಛಸ್ಥಾನಕ್ಕೆ ಬರುತ್ತಿದ್ದಾರೆ ಇದು ಕೂಡ ಅತ್ಯಂತ ಶುಭಪ್ರದವಾಗಿದೆ.
ಈ ತಿಂಗಳ ಅಂತ್ಯದಲ್ಲಿ ಅಂದರೆ 30ನೇ ತಾರೀಖು ಗುರುವು ಸ್ಥಾನ ಬದಲಾವಣೆ ಆಗುತ್ತಿರುವುದು ದ್ವಾದಶ ರಾಶಿಗಳೆಲ್ಲದರ ಮೇಲೆ ಬದಲಾವಣೆ ಬೀರುತ್ತದೆ. ಅದರಲ್ಲೂ ತುಲಾರಾಶಿಗೆ ಗುರುಬಲ ಕ್ಷೀಣಿಸುತ್ತದೆ.
ಸೂರ್ಯನು ಸಪ್ತಮ ಸ್ಥಾನದಲ್ಲಿ ಇರುವುದರಿಂದ ನೀವು ಅಂದುಕೊಂಡ ಎಲ್ಲಾ ಕಾರ್ಯಗಳಲ್ಲೂ ಕೂಡ ನಿಮಗೆ ಯಶಸ್ಸು ಸಿಗುತ್ತದೆ. ನೀವು ಈ ಸಮಯದಲ್ಲಿ ಯಾವುದೇ ಕೆಲಸ ಆರಂಭಿಸಿದರು ಅಥವಾ ಅದಕ್ಕೆ ಯೋಜನೆ ಹಾಕಿಕೊಂಡು ಪ್ರಯತ್ನಪಟ್ಟರು ಅದು ಖಂಡಿತ ಕೈ ಹಿಡಿಯುತ್ತದೆ.
ಏಪ್ರಿಲ್ ತಿಂಗಳಿನಲ್ಲಿ ನಿಮಗೆ 9 ಹಾಗೂ 12 ಮನೆಯ ಅಧಿಪತಿಯಾದ ಬುಧನು ಕೆಟ್ಟಿರುತ್ತಾನೆ ಆದರೆ ಏಪ್ರಿಲ್ 24ರಂದು ಬುಧನ ನೀಚಭಂಗತ್ವವಾಗಿ ಇದು ರಾಜಯೋಗವಾಗಿ ಬದಲಾಗುತ್ತಿದೆ ನಂತರ ಬುಧನು ಕೂಡ ಸ್ಟ್ರಾಂಗ್ ಆಗುವುದರಿಂದ ನಿಮ್ಮ ರಾಜಯೋಗ ಇನ್ನಷ್ಟು ಹೆಚ್ಚು ಆಗಲಿದೆ.
ಬುಧನ ಪ್ರಭಾವದಿಂದಾಗಿ ಈ ತಿಂಗಳ ಅಂತ್ಯದಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಬಹಳ ಉತ್ತಮ ಬದಲಾವಣೆಗಳು ಕಂಡುಬರುತ್ತವೆ. ದೊಡ್ಡಮಟ್ಟದ ವಹಿವಾಟುಗಳು ಮತ್ತು ಒಳ್ಳೆಯ ಸಂಪರ್ಕಗಳು ಕೂಡ ಸಿಗುತ್ತವೆ ನೀವು ನಿರೀಕ್ಷೆ ಮಾಡಿದಷ್ಟು ಆರ್ಥಿಕ ಲಾಭಗಳು ಉಂಟಾಗಿ ಧನಯೋಗ ಪ್ರಾಪ್ತಿಯಾಗುತ್ತದೆ.
ಏಪ್ರಿಲ್ 24 ರಿಂದ 29 ರವರೆಗೆ ಅತ್ಯಂತ ಶುಭಫಲಗಳು ಸಿಗುತ್ತಿವೆ ರಾಶಿಯಿಂದ ದ್ವಿತೀಯ ಹಾಗೂ ಸಪ್ತಮಾಧಿಪತಿ, ಕುಜನು 6ನೇ ಮನೆಗೆ ಬರುತ್ತಿರುವುದರಿಂದ ಕೋಪ ಹೆಚ್ಚಾಗಿರುತ್ತದೆ. ಸಣ್ಣಪುಟ್ಟ ವಿಷಯವನ್ನು ದೊಡ್ಡದು ಮಾಡಿ ಮನಸ್ಸಿಗೆ ಬಹಳ ಮಾಡಿಕೊಳ್ಳುತ್ತೀರಾ ಸಾಲದಕ್ಕೆ ಉಗುರಿನಲ್ಲಿ ಹೋಗುವ ವಿಚಾರಕ್ಕೆ ಕೊಡಲಿ ತೆಗೆದುಕೊಂಡು ಸಿಕ್ಕಾಪಟ್ಟೆ ಜಗಳ ಆಡುತ್ತೀರ ಆದರೆ ಇದು ಯಾವುದು ಪ್ರಯೋಜನಕ್ಕೆ ಬರುವುದಿಲ್ಲ.
ಈ ಸಮಯದಲ್ಲಿ ಸ್ವಲ್ಪ ಶಾಂತಿ ಹಾಗೂ ಸಮಾಧಾನದ ಇದ್ದರೆ ಸಮಯ ತಾನೇ ಕಳೆಯುತ್ತದೆ ನಂತರ ಪಶ್ಚಾತಾಪ ಪಡುವ ಬದಲು ಈಗಲೇ ಎಚ್ಚರಿಕೆವಹಿಸಿ ಆರೋಗ್ಯದಲ್ಲೂ ಹೆಚ್ಚಿನ ವ್ಯತ್ಯಾಸಗಳು ಇಲ್ಲ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚಿನ ನಿಗಾ ವಹಿಸಿ.
ಈಗಾಗಲೇ ಪಂಚಮ ಶನಿ ಪ್ರಭಾವ ತುಲಾ ರಾಶಿಯವರ ಮೇಲೆ ಇದೆ ಆ ಪ್ರಭಾವ ಇದ್ದೇ ಇರುತ್ತದೆ ಇದನ್ನು ಕಡಿಮೆ ಮಾಡಿಕೊಳ್ಳಲು ಮತ್ತು ಇನ್ಯಾವುದೇ ರೀತಿ ದೋಷಗಳು ಇದ್ದರೂ ಎಲ್ಲದರ ನಿವಾರಣೆಗಾಗಿ ಮತ್ತು 6 ನೇ ತಾರೀಖಿನಂದು ಶನಿ ಪ್ರದೋಷ ಇರುವ ದಿನದಂದು ಶಿವಾಲಯಕ್ಕೆ ಹೋಗಿ ಶಿವನಿಗೆ ಹಾಗೂ ನಂದಿಗೆ ಅಭಿಷೇಕ ಮಾಡಿ ನಂದಿಯ ಕೊಂಬುಗಳ ಮಧ್ಯದಿಂದ ಶಿವಲಿಂಗ ದರ್ಶನ ಮಾಡಿ ಎಲ್ಲಾ ರೀತಿಯ ಪಾಪಗಳು ನಿವಾರಣೆ ಆಗುತ್ತದೆ.
ಈ ತಿಂಗಳು ಪೂರ್ತಿ ತುಳಸಿ ಆರಾಧನೆ ಮಾಡುವುದನ್ನು ಮಾತ್ರ ಮರೆಯಬೇಡಿ. ಪ್ರತಿದಿನವೂ ಸಂಜೆ ಸಮಯ ತುಳಸಿ ಬಳಿ ದೀಪ ಹಚ್ಚಿ ನವಗ್ರಹಗಳ ಆರಾಧನೆ ಮಾಡಿ ಎಲ್ಲವೂ ಶುಭವಾಗುತ್ತದೆ.