ಇತ್ತೀಚಿನ ದಿನಗಳಲ್ಲಿ ಆಮೆ ಉಂಗುರ ಧರಿಸುವುದು ಬಹಳ ಟ್ರೆಂಡಿಂಗ್ ಆಗಿದೆ. ಆಮೆ ಉಂಗುರ ಧರಿಸುವುದರಿಂದ ಅದೃಷ್ಟ ಹೆಚ್ಚಾಗುತ್ತದೆ ಹಣಕಾಸಿನ ಕೊರತೆ ಬರುವುದಿಲ್ಲ. ವ್ಯಾಪಾರ ವ್ಯವಹಾರಗಳಲ್ಲಿ ಮತ್ತು ಎಲ್ಲಾ ಕಾರ್ಯಗಳಲ್ಲೂ ಕೂಡ ಜಯ ಸಿಗುತ್ತದೆ ಎಂದು ನಂಬಲಾಗುತ್ತದೆ.
ನಮ್ಮ ಪುರಾಣಗಳಲ್ಲಿರುವ ನಂಬಿಕೆ ಪ್ರಕಾರವಾಗಿ ತಾಯಿ ಮಹಾಲಕ್ಷ್ಮಿ ಸಮುದ್ರದಿಂದ ಜನಿಸಿದವರು ಹಾಗಾಗಿ ನೀರಿನಲ್ಲಿರುವ ಈ ಆಮೆಯು ಐಶ್ವರ್ಯದ ಸಂಕೇತ ಎಂದು ಭಾವಿಸಲಾಗಿದೆ. ಮಹಾ ವಿಷ್ಣುವಿನ 10 ಅವತಾರಗಳಲ್ಲಿ ಕೂರ್ಮಾವತಾರ ಕೂಡ ಒಂದಾಗಿರುವುದರಿಂದ ಲಕ್ಷ್ಮಿ ಸಮೇತ ಮಹಾ ವಿಷ್ಣುವಿನ ಮೇಲೆ ಅಪಾರವಾದ ನಂಬಿಕೆ ಇರುವವರು ಅವರ ಅನುಗ್ರಹ ಕೋರಿ ಈ ಉಂಗುರಗಳನ್ನು ಧರಿಸುತ್ತಾರೆ.
ಆದರೆ ಎಲ್ಲಾ ರಾಶಿಯವರಿಗೂ ಕೂಡ ಇದು ಆಗಿ ಬರುವುದಿಲ್ಲ, ಆಮೆ ಉಂಗುರ ಧರಿಸುವುದಕ್ಕೂ ಕೆಲವು ನಿಯಮಗಳಿವೆ. ಒಂದು ವೇಳೆ ಇದರಲ್ಲಿ ವ್ಯತ್ಯಾಸಗಳಾದರೆ ಕಷ್ಟ ತಪ್ಪಿದ್ದಲ್ಲ, ಹಾಗಾದರೆ ಆಮೆ ಉಂಗುರ ಧರಿಸಲು ಪಾಲಿಸಲೇಬೇಕಾದ ನಿಯಮಗಳೇನು? ಇವುಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಈ ಸುದ್ದಿ ಓದಿ:- ತುಲಾ ರಾಶಿಯ ಏಪ್ರಿಲ್ ತಿಂಗಳ ಭವಿಷ್ಯ 2024, ಈ ಎಂಟು ದಿನಗಳು ಮಾತ್ರ ಮಹಾರಾಜಯೋಗ.!
* ಆಮೆ ಉಂಗುರವನ್ನು ಉಂಗುರದ ಬೆರಳು ಅಥವಾ ಮಧ್ಯದ ಬೆರಳಿಗೆ ಮಾತ್ರ ಧರಿಸಬೇಕು, ಅದರಲ್ಲೂ ಬಲಗೈ ಬೆರಳಿಗೆ ಮಾತ್ರ ಧರಿಸಬೇಕು
* ಆಮೆ ಉಂಗುರವನ್ನು ಗುರುವಾರ ಅಥವಾ ಶುಕ್ರವಾರದಂದು ಮಾತ್ರ ಖರೀದಿಸಬೇಕು ಹಾಗೂ ಧರಿಸಬೇಕು
* ಉಂಗುರವನ್ನು ನಮ್ಮ ಕಡೆಗೆ ಮುಖ ಮಾಡಿದಂತೆ ಧರಿಸಬೇಕು.
* ಶುಭಫಲಗಳಿಗಾಗಿ ಆಮೆ ಉಂಗುರ ಧರಿಸುವುದಾದರೆ ಪಂಚಧಾತು, ಅಷ್ಟಧಾತು ಅಥವಾ ಬೆಳ್ಳಿಯ ಆಮೆ ಉಂಗುರಗಳನ್ನು ಧರಿಸಬೇಕು.
* ಉಂಗುರದಲ್ಲಿ ದೈವ ಕಳೆ ಬರಬೇಕು ಮತ್ತು ಅದಕ್ಕೆ ಶಕ್ತಿ ಬರಬೇಕು ಎಂದರೆ ವಿಧಿ ವಿಧಾನದ ಮೂಲಕ ಅದನ್ನು ಧರಿಸಬೇಕು. ಉಂಗುರ ಖರೀದಿಸಿ ತಂದ ಮೇಲೆ ಗುರುವಾರ ಅಥವಾ ಶುಕ್ರವಾರದಂದು ಶುಭ ಘಳಿಕೆ ನೋಡಿ ಆ ಸಮಯದಲ್ಲಿ ಹಾಲಿನಲ್ಲಿ ಅಥವಾ ಗಂಗಾಜಲದಲ್ಲಿ ಉಂಗುರವನ್ನು ಹದ್ದಿ ಲಕ್ಷ್ಮಿ ದೇವಿಯ ವಿಗ್ರಹ ಅಥವಾ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ಒಳ್ಳೆ ಸಮಯದಲ್ಲಿ ಧರಿಸಬೇಕು.
* ಒಮ್ಮೆ ಉಂಗುರ ಧರಿಸಿಕೊಂಡ ಮೇಲೆ ಪದೇ ಪದೇ ವಿನಾಕಾರಣ ಅವುಗಳನ್ನು ತೆಗೆಯುತ್ತಿರಬಾರದು ಅಥವಾ ಬೇರೆ ಉಂಗುರಕ್ಕೆ ಬದಲಾಯಿಸುತ್ತ ಇರಬಾರದು.
ಈ ಸುದ್ದಿ ಓದಿ:- ಮನೆಯಲ್ಲಿ ದೈವಶಕ್ತಿ ಇದೆಯೋ ಇಲ್ಲವೋ ಎನ್ನುವುದನ್ನು ತಿಳಿಯುವುದು ಹೇಗೆ ನೋಡಿ.!
* ವಾಸ್ತು ಶಾಸ್ತ್ರದ ಪ್ರಕಾರವಾಗಿ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರಬೇಕು ಮತ್ತು ವ್ಯಕ್ತಿಯಲ್ಲಿ ಸೃಜನಶೀಲತೆ ಹೆಚ್ಚಾಗಬೇಕು, ಸಹನೆ ಮತ್ತು ಶಾಂತಿ ನೆಲೆಸಬೇಕು ಎಂದು ಬಯಸುವುದಾದರೆ ಆಮೆ ಉಂಗುರ ಧರಿಸಬೇಕು. ಈ ಉಂಗುರ ಧರಿಸುವುದರಿಂದ ಮನುಷ್ಯನಿಗೆ ಮನಸ್ಸು ಬಹಳ ಪ್ರಶಾಂತವಾಗಿರುತ್ತದೆ ಸಕಾರಾತ್ಮಕ ಚಿಂತನೆಗಳು ಆಲೋಚನೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಕೂಡ ಆಮೆ ಉಂಗುರ ಧರಿಸಲು ಸೂಚಿಸಲಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಈ ನಾಲ್ಕು ರಾಶಿಯವರು ಮಾತ್ರ ಆಮೆ ಉಂಗುರವನ್ನು ಧರಿಸಲೇಬಾರದು. ಯಾವ ರಾಶಿಯವರು ಮತ್ತು ಅದಕ್ಕೆ ಕಾರಣ ಏನು ವಿವರ ಹೀಗಿದೆ.
1. ಮೇಷರಾಶಿ – ಮೇಷ ರಾಶಿಯವರ ಧಿಪತಿ ಅಂಗಾರಕ ಈ ಕಾರಣದಿಂದಾಗಿ ಧರಿಸಬಾರದು. ಒಂದುವೇಳೆ ಈ ರಾಶಿಯವರು ಆಮೆ ಉಂಗುರವನ್ನು ಧರಿಸಿದರೆ ಆರ್ಥಿಕ ನಷ್ಟಗಳು ಮತ್ತು ಕೆಲಸ ಕಾರ್ಯಗಳಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ತವರು ಮನೆಯಿಂದ ಈ ವಸ್ತುಗಳನ್ನು ತೆಗೆದುಕೊಂಡು ಬಂದರೆ ಗಂಡನ ಅದೃಷ್ಟ ಕುಲಾಯಿಸುತ್ತೆ.!
2. ಕನ್ಯಾ ರಾಶಿ – ಕನ್ಯಾ ರಾಶಿಯ ಅಧಿಪತಿ ಬುಧ ಆದಕಾರಣ ಕನ್ಯಾ ರಾಶಿಯವರು ಕೂಡ ಆಮೆ ಉಂಗುರವನ್ನು ಧರಿಸುವುದು ಸೂಕ್ತವಲ್ಲ. ತಪ್ಪಿದರೆ ವ್ಯಕ್ತಿಗತವಾಗಿ ಹಾಗೂ ವೃತ್ತಿಗತವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
3. ವೃಶ್ಚಿಕ ರಾಶಿ – ವೃಶ್ಚಿಕ ರಾಶಿಯ ಅಧಿಪತಿ ಅಂಗಾರಕ ಆದಕಾರಣ ವೃಶ್ಚಿಕ ರಾಶಿಯವರು ಕೂಡ ಆಮೆ ಉಂಗುರ ಧರಿಸಬಾರದು. ಒಂದು ವೇಳೆ ಧರಿಸಿದರೆ ಕುಜ ದೋಷಗಳನ್ನು ಎದುರಿಸಬೇಕಾಗುತ್ತದೆ.
4. ಮೀನ ರಾಶಿ – ಮೀನ ರಾಶಿಯ ಅಧಿಪತಿ ಬೃಹಸ್ಪತಿ. ಒಂದು ವೇಳೆ ಮೀನ ರಾಶಿಯವರು ಆಮೆ ಉಂಗುರ ಧರಿಸಿದರೆ ಅವರಿಗೆ ಗುರುಬಲ ಕಡಿಮೆ ಆಗುತ್ತದೆ, ಈ ಕಾರಣದಿಂದ ಕೂಡ ಧರಿಸಬಾರದು.