Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Newsಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು...

ಪ್ರೀತ್ಸಿ ಮದ್ವೆ ಆಗಿದ್ರು ಕೂಡ ಯೋಗಿ ಹೆಂಡ್ತಿ ಓಡೋಗಿದ್ದು ಯಾಕೆ ಗೊತ್ತಾ.? ಖಾಸಗಿ ವಿಚಾರ ಹೇಳಿಕೊಂಡು ನೋವು ಹೊರ ಹಾಕಿದ ನಟ ಲೂಸ್ ಮಾದ ಯೋಗಿ.

ಲೂಸ್ ಮಾದ ಯೋಗೇಶ್ (Loosemada Yogesh) ಕರ್ನಾಟಕದಲ್ಲಿ ಯೋಗಿ ಅಲಿಯಾಸ್ ಲೂಸ್ ಮಾದ ಎಂದು ಫೇಮಸ್ ಆಗಿರುವವರು. ತಮ್ಮದೇ ಆದ ವಿಶೇಷ ಮ್ಯಾನರಿಸಂ ಹಾಗೂ ವಿಭಿನ್ನ ಬಗೆಯ ಡೈಲಾಗ್ ಡೆಲವರಿ ಯಿಂದ ಕನ್ನಡ ಚಲನಚಿತ್ರ ರಂಗದಲ್ಲಿ ಹೀರೋ ಸ್ಥಾನ ಗಿಟ್ಟಿಸಿಕೊಂಡಿರುವ ಇವರು ದುನಿಯಾ (Dhuniya) ಸಿನಿಮಾದ ಮೂಲಕ ಆಕ್ಟಿಂಗ್ ಶುರು ಮಾಡಿದರು. ನಂತರ ಬಂದ ನಂದ ಲವ್ಸ್ ನಂದಿತಾ (Nanda loves Nanditha) ಸಿನಿಮಾದಿಂದ ಸಂಪೂರ್ಣ ನಾಯಕ ನಟಿಯಾಗಿ ಹೊರಹೊಮ್ಮಿದರು.

ಆ ಸಮಯದಲ್ಲಿ ಬಹಳ ಬೇಡಿಕೆಯ ಮತ್ತು ಹೆಂಗಳೆಯರ ನೆಚ್ಚಿನ ನಟನಾಗಿದ್ದ ಇವರು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ನಂದ ಲವ್ಸ್ ನಂದಿತ, ಅಂಬಾರಿ, ಅಲೆಮಾರಿ, ರಾವಣ, ಪ್ರೀತ್ಸೆ ಪ್ರೀತ್ಸೆ, ಲೂಸ್, ಸಿದ್ಲಿಂಗು ಹೀಗೆ ಅವರು ಕೊಟ್ಟ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ರಮ್ಯಾ, ಮೇಘನಾರಾಜ್, ಶಿವಣ್ಣ, ಪ್ರಕಾಶ್ ರಾಜ್, ಪುನೀತ್ ರಾಜಕುಮಾರ್ ಇಂತಹ ಸ್ಟಾರ್ ಕಲಾವಿದರೊಂದಿಗೆ ತೆರೆ ಹಂಚಿಕೊಂಡ ಹೆಮ್ಮೆಯ ನಟ ಇವರು.

ಮಲ್ಟಿ ಸ್ಟಾರ್ ಸಿನಿಮಾಗಳಲ್ಲೂ ಕೂಡ ಅಭಿನಯಿಸಿರುವ ಇವರು ಪುನೀತ್ ರಾಜಕುಮಾರ್ ಅವರ ಹುಡುಗರು ಮತ್ತು ಯಾರೇ ಕೂಗಾಡಲಿ ಸಿನಿಮಾದಿಂದ ಮತ್ತೊಂದು ಶೇಡ್ ಅಲ್ಲಿ ಕಾಣಿಸಿಕೊಳ್ಳಲು ಶುರು ಮಾಡಿದರು. ಇತ್ತೀಚೆಗೆ ಡಾಲಿ ಧನಂಜಯ್ ಅವರೊಂದಿಗೂ ಕೂಡ ಜೈರಾಜ್ ಅವರ ಜೀವನದ ಚಿತ್ರ ಎನಿಸಿಕೊಂಡ ಹೆಡ್ ಅಂಡ್ ಬುಷ್ (Head and bush) ಸಿನಿಮಾದಲ್ಲಿ ಕೂಡ ಮುಖ್ಯ ಪಾತ್ರ ಒಂದನ್ನು ನಿರ್ವಹಿಸಿದ್ದರು. ಶಿವಣ್ಣನ ಜೊತೆಗೂ ಕೂಡ ಲೀಡರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ಚಿತ್ರರಂಗದಲ್ಲಿ ನಾಯಕನಾಗಿ ಬೇಡಿಕೆ ಕಡಿಮೆ ಆಗುತ್ತಿದ್ದ ಸಮಯದಲ್ಲಿ ಮಲ್ಟಿ ಸ್ಟಾರ್ (Multi stars) ಸಿನಿಮಾಗಳ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿಸಿರುವ ಇವರನ್ನು ಅಭಿಮಾನಿಗಳು ತಮಿಳಿನ ನಟ ಧನುಷ್ (Dhanush) ಜೊತೆ ಹೋಲಿಕೆ ಮಾಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಕೂಡ ಯಾವುದೇ ವಿವಾದ ಇಲ್ಲದೆ ಬದುಕುತ್ತಿದ್ದ ಇವರ ದಾಂಪತ್ಯದಲ್ಲಿ ಈಗ ಬಿರುಗಾಳಿ ಎದ್ದಿದೆ. ತನ್ನ ಬಾಲ್ಯ ಸ್ನೇಹಿತೆ ಆಗಿದ್ದ ಸಂಗೀತ (Samgeetha) ಎನ್ನುವವರೊಂದಿಗೆ 2017ರಲ್ಲಿ ಲೂಸ್ ಮಾದ ಯೋಗಿ ಅವರು ಹಸೆಮಣೆ ಏರಿದ್ದರು.

ಈ ಮುದ್ದಾದ ಜೋಡಿಗೆ ಮುದ್ದು ಮಗು ಕೂಡ ಇದೆ. ಆದರೆ ಯೋಗಿ ಅವರ ಪತ್ನಿ ಈಗ ಮನೆ ಬಿಟ್ಟು ಹೋಗಿದ್ದಾರಂತೆ. ಈ ವಿಷಯವನ್ನು ಸ್ವತಃ ಲೂಸ್ ಮಾದ ಯೋಗಿ ಅವರೇ ಹೇಳಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಅವರು ನಾನು ಅದು ಮತ್ತು ಸರೋಜಾ ಸಿನಿಮಾ ಬಿಡುಗಡೆ ಸಮಯದಲ್ಲಿ ನೀಡಿದ ಸಂದರ್ಶನ ಒಂದರಲ್ಲಿ ಅವರು ಎಷ್ಟು ಬ್ಯುಸಿ ಇದ್ದಾರೆ ಎನ್ನುವುದನ್ನು ಹೇಳುವಾಗ ಎಲ್ಲಾ ಹೆಂಡತಿಯರಿಗೂ ತಮ್ಮ ಗಂಡ ತಮಗೆ ಮತ್ತು ಮಕ್ಕಳಿಗೆ ಸಮಯ ಕೊಡಬೇಕು ಎನ್ನುವ ಆಸೆ ಇರುತ್ತದೆ.

ಆದರೆ ನಾವು ಸಿನಿಮಾ, ಶೂಟಿಂಗ್ ಅಂತ ಬಿಝಿ ಇರುವ ಕಾರಣ ನನ್ನ ಹೆಂಡತಿ ಕೋಪ ಮಾಡಿಕೊಂಡು ಮಗು ಕರೆಕೊಂಡು ತವರು ಮನೆಗೆ ಹೋಗಿ ಬಿಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಲೂಸ್ ಮಾದ ಯೋಗಿ ಅವರ ತಂದೆಯು ಕೂಡ ಹೆಸರಾಂತ ಪ್ರೊಡ್ಯೂಸರ್ ಆಗಿದ್ದು, ಅಣ್ಣನು ಸಹ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ. ಇವರ ತಾಯಿ ಅಂಬುಜ (Ambuja) ಅವರು ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪುನರ್ ವಿವಾಹ, ಚುಕ್ಕಿ, ಯಾರೆ ನೀ ಮೋಹಿನಿ ಇನ್ನು ಮುಂತಾದ ಅನೇಕ ಧಾರಾವಾಹಿಗಳಲ್ಲಿ ಖಡಕ್ ಅತ್ತೆಯ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.