ಕೃಷಿ ಕೂಡ ಇಂದು ಆಧುನಿಕರಣವಾಗುತ್ತಿದೆ. ಆಧುನಿಕ ಯಂತ್ರೋಪಕರಣಗಳನ್ನು ಬಳಸಿಕೊಂಡು ಕೃಷಿ ಕೆಲಸವನ್ನು ಸರಳ ಮಾಡುವ ಪ್ರಯತ್ನಗಳು ಜೋರಾಗಿವೆ. ಕೃಷಿ ಚಟುವಟಿಕೆಗೆ ಅನೇಕ ಸಾಧನಗಳು ಬೇಕು ಎನ್ನುವುದು ಎಲ್ಲರಿಗೂ ಗೊತ್ತು. ಈಗ ಟ್ಯಾಕ್ಟರ್ ಗಳು ಟಿಲ್ಲರ್ ಗಳು ಬಂದು ನೇಗಿಲು, ನೋಗ, ಕುಂಟೆ, ಗುಂಡುಗಳು ಮಾಡುತ್ತಿದ್ದ ಕೆಲಸವನ್ನು ಅದಕ್ಕಿಂತ ವೇಗವಾಗಿ ಮತ್ತು ಸರಳವಾಗಿ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿವೆ.
ಆದ್ದರಿಂದ ಇತ್ತೀಚೆಗೆ ಟ್ರ್ಯಾಕ್ಟರ್ ಕೂಡ ಕೃಷಿಯ ಒಂದು ಪ್ರಮುಖ ಭಾಗ ಎಂದೇ ಹೇಳಬಹುದು. ಉಳುಮೆ ಕೆಲಸದಿಂದ ಹಿಡಿದು ಬೆಳೆದ ಪದಾರ್ಥವನ್ನು ಮನೆಗೆ ಸಾಗಿಸುವ ಎತ್ತಿನಗಾಡಿ ಮಾಡುತ್ತಿದ್ದ ಕೆಲಸದ ತನಕವೂ ಕೂಡ ಟ್ಯಾಕ್ಟರ್ ಅನುಕೂಲತೆ ಸಾಕಷ್ಟು ಇದೆ. ಹೀಗಾಗಿ ಕೃಷಿ ಮಾಡುವ ಪ್ರತಿಯೊಬ್ಬ ರೈತನು ತಾನೊಂದು ಟ್ರ್ಯಾಕ್ಟರ್ ಖರೀದಿಸಬೇಕು ಎಂದು ಆಸೆ ಪಡುತ್ತಾನೆ.
ಆದರೆ ಒಳ್ಳೆಯ ಕಂಪನಿಯ ದುಬಾರಿ ಬೆಳೆಯ ಟ್ರ್ಯಾಕ್ಟರ್ ಖರೀದಿಸಲು ಎಲ್ಲ ರೈತರಿಂದಲೂ ಕೂಡ ಸಾಧ್ಯವಿಲ್ಲ. ಸರ್ಕಾರವು ಕೂಡ ಟ್ರಾಕ್ಟರ್ ಕೊಳ್ಳುವ ರೈತರಿಗೆ ಸಬ್ಸಿಡಿ ಸಾಲ, ಕಡಿಮೆ ಬಡ್ಡಿ ಸಾಲ ಇಂತಹ ಸಹಾಯ ಮಾಡುತ್ತಿದ್ದರು ಇನ್ನು ಅನೇಕರಿಗೆ ಇದು ಕೈಗೆಟುಕದ ಕುಸುಮವಾಗಿದೆ. ಆದ್ದರಿಂದ ಜನ ಸೆಕೆಂಡ್ ಹ್ಯಾಂಡಲ್ ಆದರೂ ಖರೀದಿಸೋಣ ಒಳ್ಳೆ ಕಂಡಿಷನಲ್ಲಿ ಇದ್ದರೆ ಸಾಕು ಎಂದು ಎದುರು ನೋಡುತ್ತಿರುತ್ತಾರೆ ಅಂತವರಿಗೆಲ್ಲ ಈ ಮಾಹಿತಿ ಅನುಕೂಲ ನೀಡಲಿದೆ.
ಕರ್ನಾಟಕದ ದಾವಣಗೆರೆ ಜಿಲ್ಲೆಯ ಉಚ್ಚಂಗಿದುರ್ಗ ಎನ್ನುವಲ್ಲಿ ಇರುವ ಸೆಕೆಂಡ್ ಹ್ಯಾಂಡಲ್ ಟ್ಯಾಕ್ಟರ್ ಶೋ ರೂಮ್ ಗೆ ನೀವು ತಕ್ಷಣವೇ ಭೇಟಿ ಕೊಡುವುದರಿಂದ ಒಳ್ಳೆಯ ಕಂಡೀಷನಲ್ಲಿ ಇರುವ ಟ್ಯಾಕ್ಟರ್ ಗಳನ್ನು ಖರೀದಿಸಬಹುದು. ಸದ್ಯಕ್ಕೆ ಈಗ ಅಲ್ಲಿ ಕೆಲ ಟ್ರಾಕ್ಟರ್ಗಳು ಸೆಕೆಂಡ್ ಹ್ಯಾಂಡಲ್ ಅಲ್ಲಿ ಮಾರಾಟಕ್ಕಿದ್ದು ಅವುಗಳ ವಿವರವನ್ನು ಈ ಅಂಕಣದಲ್ಲಿ ನೀಡಲಾಗಿದೆ.
ಸೋನಾಲಿಕ RX 42 ಟ್ರ್ಯಾಕ್ಟರ್ ಮಾರಾಟಕ್ಕಿದ್ದು, ಇದು 2018ರ ಮಾಡೆಲ್ ಆಗಿದೆ. ಇಂಜಿನ್, ಗೇರ್ ಬಾಕ್ಸ್, ಟೈರ್ ಗಳು ಸುಸ್ಥಿತಿಯಲ್ಲಿದ್ದು ದಾಖಲೆ ಕೂಡ ಸರಿಯಾಗಿದೆ. ಇದಕ್ಕೆ ಬೆಲೆಯನ್ನು 3,60,000ರೂ. ಎಂದು ನಿಗದಿ ಮಾಡಲಾಗಿದೆ. ಸೋನಾಲಿಕ RX35 ಟ್ರಾಕ್ಟರ್ ಕೂಡ ಮಾರಾಟಕ್ಕಿದ್ದು, ಇದು 2019ರ ಮಾಡೆಲ್ ಆಗಿದೆ. ಇದರ ಇಂಜಿನ್, ಗೇರ್ ಬಾಕ್ಸ್ ಸುಸ್ಥಿತಿಯಲ್ಲಿದ್ದು ದಾಖಲೆ ಕೂಡ ಸರಿಯಾಗಿದೆ. ಮುಂದಿನ ಟೈಯರ್ ಗಳು ಶೇಕಡ 50%ರಷ್ಟು ಹಿಂದಿನ ಟೈಯರ್ ಗಳ 100% ಬಟನ್ಸ್ ಹೊಂದಿದೆ.
ಇದಕ್ಕೂ ಸಹ 3,60,000 ರೂಗಳನ್ನು ನಿಗದಿ ಮಾಡಲಾಗಿದೆ. ಮಹಿಂದ್ರ 415, 2019ರ ಮಾಡಲಿನ ಟ್ರ್ಯಾಕ್ಟರ್ ಕೂಡ ಸೆಕೆಂಡ್ ಹ್ಯಾಂಡಲ್ ನಲ್ಲಿ ಮಾರಾಟಕ್ಕಿದ್ದು, ಇದರ ಗೇರ್ ಬಾಕ್ಸ್ ಇಂಜಿನ್ ಸಹ ಸ್ಥಿತಿಯಲ್ಲಿದೆ, ದಾಖಲೆಗಳು ಸರಿಯಾಗಿದೆ. ಮುಂದಿನ ಟೈಯರ್ ಗಳು ಶೇಕಡ 90% ಹಿಂದಿ ಟೈಯರ್ಗಳು 100% ಬಟನ್ಸ್ ಹೊಂದಿವೆ. ಇದಕ್ಕೆ ಬೆಲೆಯನ್ನು ನಾಲ್ಕು ಲಕ್ಷ ರೂ ಎಂದು ನಿಗದಿಪಡಿಸಲಾಗಿದೆ.
ಸ್ವರಾಜ್ 742 ಎನ್ನುವ ಟ್ಯಾಕ್ಟರ್ ಕೂಡ ಸೇಲ್ ಗೆ ಇದ್ದು, ಇದು ಸಹ 2019ರ ಮಾಡೆಲ್ ಆಗಿದೆ. ದಾಖಲೆಗಳು ಕೂಡ ಸರಿಯಾಗಿದ್ದು ಮುಂದಿನ ಮತ್ತು ಹಿನ್ನಲೆ ಟೈಯರ್ ಗಳು ಶೇಕಡ 30% ಬಟನ್ಸ್ ಗಳನ್ನು ಹೊಂದಿವೆ. ಈ ಟಾಕ್ಟರಿಗೂ ಕೂಡ ನಾಲ್ಕು ಲಕ್ಷ ರೂಗಳನ್ನು ನಿಗದಿಪಡಿಸಲಾಗಿದೆ. ಇದರಂತೆ ಸುಸ್ಥಿತಿಯಲ್ಲಿ ಇರುವ ದಾಖಲೆಗಳು ಸರಿ ಇರುವ ಸ್ವರಾಜ್ 742 ,2018ರ ಮಾಡೆಲ್ ಸೋನಾಲಿಕ ಆರ್ ಎಕ್ಸ್ 2019 ರ ಮಾಡಲ್ ಟ್ಯಾಕ್ಟರ್ಗಳು ಕೂಡ ಈ ಶೋರೂಮ್ ಅಲ್ಲಿ ಮಾರಾಟಕ್ಕೆ ಇದೆ. ಇವುಗಳ ಬೆಲೆಯನ್ನು ಕಡಿಮೆ ಮಾಡುವ ಸಾಧ್ಯತೆಗಳು ಕೂಡ ಇವೆ. ಹೆಚ್ಚಿನ ಮಾಹಿತಿಗಾಗಿ ಶೋರೂಮ್ ಅನ್ನು ಸಂಪರ್ಕಿಸಿ.