ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಒಬ್ಬ ವ್ಯಕ್ತಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಪಾಪುಲರ್ ಆಗಲು ಸಹಾಯ ಮಾಡುತ್ತಿವೆ. ಮಾಧ್ಯಮಗಳ ವಿಚಾರದಲ್ಲಿ ಹೇಳುವುದಾದರೆ ಮೊದ-ಮೊದಲು ಕೆಲವೊಂದು ರಿಯಾಲಿಟಿ ಶೋಗಳ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಡುವ ಇವರು ಕೆಲವೇ ದಿನಗಳಲ್ಲಿ ಕೋಟ್ಯಾಂತರ ಜನರ ಮನಸ್ಸನ್ನು ಮುಟ್ಟಿ ಪಾಪುಲರ್ ಫೇಸ್ ಆಗಿ ಬಿಡುತ್ತಾರೆ. ಆದರೆ ಈ ರೀತಿ ಐಡೆಂಟಿಟಿ ಗಳಿಸಿಕೊಳ್ಳಲು ಕಲಾವಿದರು ಪಡುವ ಕಷ್ಟ ಅಷ್ಟಿಷ್ಟಲ್ಲ. ಒಮ್ಮೆ ಈ ರೀತಿ ಜಯ ಸಿಕ್ಕರೆ ನಂತರ ಅವರ ಬದುಕಿನ ಗತಿಯೇ ಬದಲಾಗಿ ಹೋಗುತ್ತದೆ. ಪ್ರೇಕ್ಷಕರನ್ನು ಮೆಚ್ಚಿಸಿ ಅವರಿಂದ ಶಭಾಷ್ ಎನ್ನುಸಿಕೊಳ್ಳುವ ಸಲುವಾಗಿ ಹಲವಾರು ಸಾಹಸಗಳಿಗೆ ಕೈ ಹಾಕುತ್ತಾರೆ ಕಲಾವಿದರುಗಳು. ಇಂಥಹ ವಿಚಾರದಲ್ಲಿ ಮಜಾ ಭಾರತ ಖ್ಯಾತಿಯ ರಾಘವೇಂದ್ರ ಅವರನ್ನು ಉದಾಹರಣೆಯಾಗಿ ಕೊಡಬಹುದು.
ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಮಜಾ ಭಾರತ ಎನ್ನುವ ಕಾಮಿಡಿ ಶೋ ಅಲ್ಲಿ ಮೊದಲು ಕಾಣಿಸಿಕೊಂಡ ರಾಘವೇಂದ್ರ ಅವರು ಪಾತ್ರಕ್ಕೆ ಅನಿವಾರ್ಯತೆ ಇದರಿಂದ ಮೂರು ವಾರಗಳು ಹುಡುಗಿ ಗೆಟಪ್ಪಿನಲ್ಲಿಯೇ ಕಾಣಿಸಿಕೊಂಡರು. ನಂತರ ಅವರು ಹುಡುಗನ ಪಾತ್ರ ಮಾಡುತ್ತಿದ್ದರು ಕೂಡ ಜನ ಅವರನ್ನು ಹುಡುಕಿ ಪಾತ್ರದಲ್ಲಿ ಹೆಚ್ಚು ಮೆಚ್ಚಿಕೊಂಡರು. ಸೋಶಿಯಲ್ ಮೀಡಿಯಾಗಳಲ್ಲೂ ಕೂಡ ಇದರ ಬಗ್ಗೆ ಚರ್ಚೆ ಮಾಡುತ್ತಾ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಇದನ್ನೆಲ್ಲ ಗಮನಿಸಿದ ರಾಘವೇಂದ್ರ ಅವರು ಅಭಿಮಾನಿಗಳ ಸಲುವಾಗಿ ತಾವು ಅದೇ ಗೆಟಪ್ನಲ್ಲಿ ಮುಂದುವರೆಯಲು ನಿರ್ಧಾರ ಮಾಡಿದರು. ಮತ್ತು ಅವರಿಗೆ ಅದೇ ಪಾತ್ರಗಳ ಹೆಚ್ಚಾಗಿ ಹುಡುಕಿ ಬರುತ್ತಿತ್ತು ಎಂದು ಸಹ ಹೇಳಬಹುದು. ಈ ತರ ಮಜಾ ಭಾರತದ ರಾಗಿಣಿ ಎಂದೇ ಇವರು ಫೇಮಸ್ ಆಗಿ ಬಿಟ್ಟರು.
ಹುಡುಗಿ ಪಾತ್ರ ಹಾಕುವುದು ದೊಡ್ಡದಲ್ಲ ಅದನ್ನು ನಿಭಾಯಿಸಿವುದು ದೊಡ್ಡದು ಎನ್ನುವುದ ಅರಿತ ಅವರು ಪಾತ್ರಕ್ಕೆ ನ್ಯಾಯ ಒದಗಿಸುವ ಸಲುವಾಗಿ ಯಾವಾಗಲೂ ಹೆಚ್ಚಾಗಿ ಹುಡುಗಿಯರ ನಡವಳಿಕೆಗಳನ್ನು ಹಾಗೂ ಅವರ ಹಾವಭಾವಗಳನ್ನು ಗಮನಿಸಿ ನಂತರ ಅದರಿಂದ ಕಲಿತುಕೊಂಡು ತಾವು ಕೂಡ ಅದನ್ನೇ ಅಳವಡಿಕೆ ಮಾಡಿಕೊಳ್ಳಲು ಶುರು ಮಾಡಿದರಂತೆ. ಚೆನ್ನಾಗಿ ಕಾಣಬೇಕು ಎಂದರೆ ಮೊದಲು ಕಾಸ್ಟ್ಚೂಮ್ ಗೆ ಬೆಲೆ ಕೊಡಬೇಕು ಎನ್ನುವುದನ್ನು ಅರಿತ ಅವರು ಹುಡುಗಿರನ್ನು ಮೀರಿಸುವ ಅಷ್ಟರಮಟ್ಟಿಗೆ ಹುಡುಗಿ ಗೆಟಪ್ಪಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಗೂ ತಮ್ಮ ವಾಯ್ಸ್ ಅನ್ನು ಮಾಡಲೇಷನ್ ಮಾಡುವ ಮೂಲಕ ಹುಡುಗಿ ರೀತಿಯಲ್ಲಿ ಮಾತನಾಡುವ ಕಲೆ ಕೂಡ ಅವರಿಗೆ ತಿಳಿದಿದೆ. ಮತ್ತು ಪಾತ್ರ ಮಾಡುವಾಗ ಥೇಟ್ ಹುಡುಗಿಯಂತೆ ನಡೆದುಕೊಳ್ಳುವ ಅವರನ್ನು ಹುಡುಗ ಎಂದು ಯಾರೂ ಕೂಡ ಪತ್ತೆ ಹಚ್ಚಲಾರದಷ್ಟು ಪಾತ್ರದೊಳಗೆ ಅವರು ಪರಕಾಯ ಪ್ರವೇಶ ಮಾಡಿಬಿಟ್ಟಿರುತ್ತಾರೆ.
ಕಿರುತರೆಯಿಂದ ಈ ರೀತಿ ಫೇಮಸ್ ಆದ ಮೇಲೆ ಬೆಳ್ಳಿ ಪರದೆ ಮೇಲೆ ಮಿಂಚುವುದು ಎಲ್ಲರ ಮಹದಾಸೆ. ರಾಘವೇಂದ್ರ ಅವರು ಕೂಡ ಈಗ ಸಿನಿಮಾಗಳಲ್ಲಿ ಪಾತ್ರ ಮಾಡುತ್ತಿದ್ದು ಮಾಯಾ ಬಜಾರ್ ಎನ್ನುವ ಸಿನಿಮಾದಲ್ಲಿ ಪುಟ್ಟ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು 60,000 ಸಂಭಾವನೆಗಳನ್ನು ಕೂಡ ಪಡೆದಿದ್ದಾರಂತೆ. ಇದರ ಜೊತೆಗೆ ಕಲರ್ಸ್ ಕನ್ನಡ ವಾಹಿನಿ ಪ್ರಸಾರವಾಗುತ್ತಿರುವ ಗಿಚ್ಚ ಗಿಲ್ಲಿ ಗಿಲ್ಲಿ ಎನ್ನುವ ಕಾರ್ಯಕ್ರಮದಲ್ಲಿ ಕೂಡ ಕಂಟೆಸ್ಟೆಂಟ್ ಆಗಿದ್ದಾರೆ. ಮೂಲಗಳ ಪ್ರಕಾರ ಇವರು ಒಂದು ದಿನದ ಎಪಿಸೋಡ್ ಗೆ ಲಕ್ಷದವರೆಗೆ ಸಂಭಾವನೆ ಪಡೆದುಕೊಳ್ಳುತ್ತಾರೆ ಎಂದು ತಿಳಿದು ಬಂದಿದೆ. ಈ ಪ್ರತಿಭಾವಂತ ಕಲಾವಿದನಿಗೆ ಮತ್ತಷ್ಟು ಅವಕಾಶಗಳು ದೊರೆಯಲಿ ಕಿರುತೆರೆ ಪ್ರೇಕ್ಷಕರನ್ನು ರಂಜಿಸುವುದರ ಜೊತೆಗೆ ಬೆಳ್ಳಿ ಪರದೆ ಮೇಲು ಕೂಡ ಮೋಡಿ ಮಾಡಲಿ ಎಂದು ಹಾರೈಸೋಣ.