ತಾಯಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ ತಾಯಿ ಮಹಾಲಕ್ಷ್ಮಿ ಶುದ್ಧತೆ ಸಕಾರಾತ್ಮಕತೆ ಮತ್ತು ಧರ್ಮ ಇದ್ದ ಕಡೆ, ತನ್ನ ಮೇಲೆ ಶ್ರದ್ಧೆ ಭಕ್ತಿ ಗೌರವ ಕೊಡುವವರ ಕಡೆಗೆ ಮಾತ್ರ ನೆಲೆಸುತ್ತಾರೆ ಹಾಗೆಯೇ ದೇವಿಯ ಅನುಗ್ರಹ ದೊರೆತರೂ ನಂತರ ನಾವು ಮಾಡುವ ಸಣ್ಣ ದೋಷದಿಂದ ಕೂಡ ತಾಯಿಗೆ ಬೇಸರವಾಗಿ ಕೋಪಗೊಂಡು ಆಕೆ ಮನೆ ಬಿಟ್ಟು ಹೋಗಬಹುದು.
ಹಾಗಾಗಿ ಚಂಚಲ ಸ್ವಭಾವದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವುದು ಮಾತ್ರವಲ್ಲ ಆಕೆ ಮನೆಯಲ್ಲಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಸದಾ ಕಾಲ ಎಚ್ಚರಿಕೆಯಿಂದ ಇರಬೇಕು. ಮನೆಗಳಲ್ಲಿ ಅಪವಿತ್ರ ಉಂಟು ಮಾಡುವ ಅಥವಾ ದಾರಿದ್ರ್ಯ ಉಂಟುಮಾಡುವ ತಪ್ಪುಗಳನ್ನು ಮಾಡಬಾರದು.
ಈ ಸುದ್ದಿ ಓದಿ:- ಸಂಜೆ ವೇಳೆ 5 ಕೆಲಸ ಮಾಡಿದರೆ ಮನೆ ಸರ್ವನಾಶವಾಗುತ್ತದೆ, ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಹಾಲಕ್ಷ್ಮಿಯು ಹೊರಟು ಹೋಗುತ್ತಾಳೆ.!
ನಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ನಾವು ಇದನ್ನು ಗೊತ್ತೋ ಗೊತ್ತಿಲ್ಲದೆಯೋ ನಿರ್ಲಕ್ಷಿಸಿ ಕ’ಷ್ಟ ಅನುಭವಿಸುತ್ತಿರುತ್ತೇವೆ. ಇನ್ನು ಮುಂದೆ ಆದರೂ ಈ ಆರು ಬದಲಾವಣೆಗಳನ್ನು ಮಾಡಿ ನೋಡಿ ನಿಮ್ಮ ಬದುಕು ಬದಲಾಗುತ್ತಿದೆ.
* ಮನೆಯನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಯಾವಾಗಲೋ ಒಮ್ಮೆ ಕ್ಲೀನ್ ಮಾಡುವುದರ ಬದಲು ಪ್ರತಿದಿನವೂ ಕೂಡ ಅಚ್ಚುಕಟ್ಟಾಗಿ ಮನೆ ಇಟ್ಟುಕೊಳ್ಳುವುದರಿಂದ ತಾಯಿ ಮಹಾಲಕ್ಷ್ಮಿ.ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾರೆ. ಅದರಲ್ಲೂ ಅಡಿಗೆ ಮನೆ ವಿಚಾರವಾಗಿ ಹೆಣ್ಣು ಮಕ್ಕಳು ಬಹಳ ನೀಟಾಗಿ ಇರಬೇಕು ಮನೆಮಾತ್ರವಲ್ಲ ಮನೆ ಹೊರಗೆ ಸುತ್ತಲೂ ಕೂಡ ಕ್ಲೀನ್ ಮಾಡಿಕೊಂಡು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಅಂತಹ ಮನೆಗಳಲ್ಲಿ ತಾಯಿ ಮಹಾಲಕ್ಷ್ಮಿಗೆ ನೆಲೆಸಲು ಇಷ್ಟಪಡುತ್ತಾರೆ.
* ಮನೆಯಲ್ಲಿ ಜೇಡ ಕಟ್ಟದಂತೆ ಕ್ಲೀನ್ ಮಾಡಿಕೊಳ್ಳುತ್ತಿರಬೇಕು, ಮಲಗಲು ಬಳಸುವ ಹಾಸಿಗೆ ಬೆಡ್ ಶೀಟ್ ಗಳನ್ನು ಪ್ರತಿನಿತ್ಯವೂ ಕೂಡ ಮಡಚಿ ಇಡಬೇಕು, ಮನೆಯ ಎಲ್ಲಾ ವಸ್ತುಗಳನ್ನು ವ್ಯವಸ್ಥಿತವಾಗಿ ಜೋಡಿಸಬೇಕು, ಬೀರುವಿನಲ್ಲಿ ಕೂಡ ಬಟ್ಟೆಗಳು ಮತ್ತು ಎಲ್ಲಾ ವಸ್ತುಗಳನ್ನು ನೀಟ್ ಆಗಿ ಜೋಡಿಸಬೇಕು ಮತ್ತು ಅದೇ ರೀತಿ ನೋಡಿಕೊಳ್ಳಬೇಕು ಈ ರೀತಿ ಇದ್ದಾಗ ತಾಯಿ ಮಹಾಲಕ್ಷ್ಮಿಗೆ ಆ ಜಾಗಗಳಲ್ಲಿ ನೆಲೆಸಲು ಇಷ್ಟವಾಗುತ್ತದೆ.
ಈ ಸುದ್ದಿ ಓದಿ:- ರೈತರಿಗೆ 80% ಸಹಾಯಧನದಲ್ಲಿ ಸೌರ ಪಂಪ್ಸೆಟ್ ಅಳವಡಿಸಿಕೊಳ್ಳಲು ಅರ್ಜಿ ಆಹ್ವಾನ, ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತಾ.?
* ಅಡುಗೆ ಮನೆಯಲ್ಲಿ ಅಥವಾ ಮನೆ ಕ್ಲೀನ್ ಮಾಡಲು ಕೆಲವರು ಮಕ್ಕಳ ಬಟ್ಟೆಗಳನ್ನು ಬಳಸುತ್ತಾರೆ. ಈ ರೀತಿ ಮಾಡುವುದು ತಪ್ಪು. ಹೀಗೆ ಮಾಡುವುದರಿಂದ ದಾರಿದ್ರ್ಯ ಬರುತ್ತದೆ ಮತ್ತು ಆ ಮಕ್ಕಳಿಗೂ ದೋಷ ಉಂಟಾಗುತ್ತದೆ. ಒಂದು ವೇಳೆ ಅಡಿಗೆ ಮಾಡುವಾಗ ಈ ಬಟ್ಟೆಗಳು ಸುಟ್ಟು ಹೋದರೆ ಆ ಮಕ್ಕಳಿಗೆ ಕಷ್ಟಗಳು ಹೆಚ್ಚಾಗುತ್ತವೆ ಹಾಗಾಗಿ ಈ ತಪ್ಪು ಮಾಡಬೇಡಿ ಹಾಗೆ ಕೆಲವು ಮನೆಗಳಲ್ಲಿ ಮನೆ ಕ್ಲೀನ್ ಮಾಡಲು ಒಳ ಉಡುಪುಗಳನ್ನು ಬಳಸುತ್ತಾರೆ ಅದು ಕೂಡ ಬಹಳ ದೊಡ್ಡ ತಪ್ಪು. ಸಾಧ್ಯವಾದರೆ ಅನುಕೂಲತೆ ಇದ್ದರೆ ಮನೆ ಒರೆಸಲು ಬೇರೆ ಬಟ್ಟೆಗಳನ್ನು ಕೊಂಡುಕೊಳ್ಳುವುದು ಒಳ್ಳೆಯದು.
* ಮನೆಯ ಹೊಸ್ತಿಲು ಕೂಡ ತಾಯಿ ಮಹಾಲಕ್ಷ್ಮಿ ನೆಲೆಸುವ ಜಾಗ ಎಂದು ಹೇಳುತ್ತಾರೆ ಹಾಗಾಗಿ ಈ ಜಾಗವನ್ನು ಪೂಜ್ಯ ಭಾವದಲ್ಲಿ ಕಾಣಬೇಕು. ಚಪ್ಪಲಿ ಹಾಕಿಕೊಂಡು ಹೊಸ್ತಿಲು ದಾಟುವುದು, ಹೊಸ್ತಿಲಿನ ಮೇಲೆ ನಿಲ್ಲುವುದು ಕೂರುವುದು ಹೀಗೆ ಮಾಡಬಾರದು. ಪೊರಕೆಯಿಂದ ಹೊಸ್ತಿಲು ಗುಡಿಸಬಾರದು ಬಟ್ಟೆ ಸಹಾಯದಿಂದ ಕ್ಲೀನ್ ಮಾಡಿ ನೀರು ಹಾಕಿ ರಂಗೋಲಿ ಇಟ್ಟು ಅರಿಶಿನ ಕುಂಕುಮ ಹಚ್ಚಿ ಹೂವಿನಲ್ಲಿ ಅಲಂಕರಿಸಿ ಪೂಜೆ ಮಾಡಬೇಕು. ಪ್ರತಿನಿತ್ಯವೂ ಕೂಡ ಬೆಳಗ್ಗೆ ಎದ್ದ ಕೂಡಲೇ ಈ ಕೆಲಸ ಮಾಡಬೇಕು.
ಈ ಸುದ್ದಿ ಓದಿ:- ಸಿವಿಲ್ ಇಂಜಿನಿಯರ್ ಕೆಲಸ ಬಿಟ್ಟು ಈಗ ಮನೆಯಲ್ಲಿ ತಿಂಗಳಿಗೆ ಒಂದು ಲಕ್ಷ ದುಡಿಯುತ್ತಿರುವ ಮಹಿಳೆ.!
* ಮನೆ ಹೊಸ್ತಿಲ ನೇರಕ್ಕೆ ಚಪ್ಪಲಿಗಳನ್ನು ಬಿಡುವುದು, ಪೊರಕೆಗಳನ್ನು ಇಡುವುದು, ಕಸದ ಡಬ್ಬ ಇಡುವುದು ಇಂತಹ ತಪ್ಪುಗಳನ್ನು ಕೂಡ ಮಾಡಬಾರದು ಇದರಿಂದಲೂ ತಾಯಿ ಮಹಾಲಕ್ಷ್ಮಿಗೆ ಕೋಪ ಬಂದು ಅಲ್ಲಿಂದ ಹೊರಟು ಹೋಗುತ್ತಾರೆ
* ಮನೆ ಮುಂದೆ ಇರುವ ತುಳಸಿ ಗಿಡದಲ್ಲೂ ಕೂಡ ತಾಯಿ ಮಹಾಲಕ್ಷ್ಮಿ ನೆಲೆಸುತ್ತಾರೆ. ಹಾಗಾಗಿ ತುಳಸಿ ಕಟ್ಟೆಯನ್ನು ದೇವರ ಮನೆಯಂತೆ ಕಾಣಬೇಕು, ತುಳಸಿ ಕಟ್ಟೆಯಲ್ಲಿ ಕಸ ಬೀಳದಂತೆ ಜೋಪಾನ ಮಾಡಬೇಕು. ಪ್ರತಿನಿತ್ಯ ಸುತ್ತಲೂ ಗುಡಿಸಿ ಸಾರಿಸಿ ರಂಗೋಲಿ ಹೂವು ಅರಶಿನ ಕುಂಕುಮ ಇಟ್ಟು ಭಕ್ತಿಯಿಂದ ಆರಾಧನೆ ಮಾಡಬೇಕು, ತುಳಸಿ ಗಿಡಕ್ಕೆ ಶುದ್ಧವಾದ ನೀರು ಹಾಕಬೇಕು ಮತ್ತು ಮುಖ್ಯವಾಗಿ ಬೆಳಗ್ಗೆ ಮತ್ತು ಸಂಜೆ ತುಳಸಿ ಗಿಡದ ಬಳಿ ದೀಪ ಹಚ್ಚಬೇಕು.