● ರಾತ್ರಿ ವೇಳೆಯಲ್ಲಿ ಎಣ್ಣೆಯಲ್ಲಿ ಕರಿದಿರುವ ಹೆಚ್ಚು ಮಸಾಲೆ ಇರುವ ಮತ್ತು ಹೆಚ್ಚು ಕೊಬ್ಬಿನಂಶದಿಂದ ಕೂಡಿರುವ ಆಹಾರ ಪದಾರ್ಥಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
● ನಾವು ಸೇವಿಸುವ ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿರಬೇಕು ದ್ವಿದಳ ಧಾನ್ಯಗಳು ಹಾಗೂ ಬೆಳೆ ಕಾಳುಗಳಲ್ಲಿ ಪ್ರೊಟೀನ್ ಯಥೇಚ್ಛವಾಗಿರುವುದರಿಂದ ಆಹಾರದಲ್ಲಿ ಅವುಗಳು ಇರಬೇಕು.
● ತಂಪು ಪಾನೀಯಗಳಿಂದ ದೇಹಕ್ಕೆ ಯಾವ ರೀತಿಯ ಪೋಷಕಾಂಶಗಳು ಹಾಗೂ ಕ್ಯಾಲೋರಿ ಕೂಡ ಸಿಗುವುದಿಲ್ಲ ದೇಹದ ತೂಕ ಹೆಚ್ಚಾಗಲು ಅದು ಕಾರಣವಾಗುತ್ತದೆ ಅಷ್ಟೇ. ಆರೋಗ್ಯದ ದೃಷ್ಟಿಯಿಂದ ರಾಸಾಯನಿಕಯುಕ್ತ ತಂಪು ಪಾನೀಯಗಳ ಸೇವನೆ ಬಿಟ್ಟರೆ ಒಳ್ಳೆಯದು.
● ಆಹಾರ ಸೇವಿಸುವಾಗ ಮನಸ್ಸು ಬಹಳ ಪ್ರಶಾಂತವಾಗಿರಬೇಕು. ಆಗಿದ್ದಾಗ ಮಾತ್ರ ನಾವು ತಿಂದ ಆಹಾರದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮಗೊಳ್ಳುವುದು.
ಈ ಐದು ನಕ್ಷತ್ರಗಳಲ್ಲಿ ಹುಟ್ಟಿದವರು ಬಹಳ ಪುಣ್ಯವಂತರು.!
● ಆಲ್ಕೋಹಾಲ್ ಅಭ್ಯಾಸ ಒಳ್ಳೆಯದಲ್ಲ. ಯಾಕೆಂದರೆ ಇದು ನೇರವಾಗಿ ದೇಹದ ಜೀರ್ಣಾಂಗ ಕ್ರಿಯೆ ಮೇಲೆ ದುಷ್ಪರಿಣಾಮ ಬೀರುತ್ತದೆ ಅದರ ಮೂಲಕ ದೇಹದ ಎಲ್ಲಾ ಅಂಗಗಳು ಕೂಡ ಡ್ಯಾಮೇಜ್ ಆಗುತ್ತದೆ.
● ಹುಳಿ ರುಚಿ ಹೊಂದಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು.
● ಆಹಾರದಲ್ಲಿ ಹಸಿರು ತರಕಾರಿ, ಸೊಪ್ಪು, ಹಣ್ಣುಗಳು ಸಹ ಇರಬೇಕು.
● ಮಾನಸಿಕ ಒತ್ತಡ ಕಡಿಮೆ ಮಾಡುವ ಹಾಗೂ ನಿದ್ರಾಹೀನತೆ ಸಲುವಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ ಅದನ್ನು ನಿಲ್ಲಿಸಿ ನೈಸರ್ಗಿಕವಾಗಿ ಇದಕ್ಕೆ ಪರಿಹಾರ ಮಾರ್ಗ ಹುಡುಕಿಕೊಳ್ಳಿ.
● ಮಲಗುವ ಕೋಣೆಯಲ್ಲಿ ಯಥೇಚ್ಛವಾಗಿ ಗಾಳಿ ಬೆಳಕು ಬರುವಂತಿರಬೇಕು
● ಕೋಪ ತಾಪಗಳನ್ನು ದೂರ ಮಾಡಿ ಯಾವಾಗಲೂ ಮನಸ್ಸನ್ನು ಶಾಂತಿಯಾಗಿ ಇಟ್ಟುಕೊಳ್ಳಬೇಕು ಮತ್ತು ಎಲ್ಲರ ಜೊತೆ ನಗುನಗುತ್ತ ಸಮಯ ಕಳೆಯಬೇಕು.
● ಪ್ರತಿನಿತ್ಯ ಕೂಡ ಹಲ್ಲು, ವಸಡು, ನಾಲಿಗೆ ಇವುಗಳನ್ನು ಸರಿಯಾದ ವಿಧಾನದಲ್ಲಿ ಸ್ವಚ್ಛ ಮಾಡಿಕೊಳ್ಳಬೇಕು.
● ಉಸಿರನ್ನು ದೀರ್ಘವಾಗಿ ಎಳೆದು ಕೆಲವು ಸೆಕೆಂಡ್ ಗಳ ಕಾಲ ಅದನ್ನು ಹಾಗೆ ಹಿಡಿದುಕೊಂಡು ನಂತರ ನಿಧಾನವಾಗಿ ಉಸಿರನ್ನು ಬಿಡುವುದರಿಂದ ಆಗುತ್ತದೆ ಅನೇಕ ದೈಹಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
● ನಮ್ಮಿಂದ ಎಷ್ಟು ಸಾಧ್ಯ ಅಷ್ಟು ಮಾತ್ರ ಕೆಲಸವನ್ನು ಒಪ್ಪಿಕೊಳ್ಳಬೇಕು ಎಲ್ಲವನ್ನು ಮಾಡಲು ಹೊರಟರೆ ದೈಹಿಕ ಆಲಸ್ಯದ ಜೊತೆಗೆ ಮಾನಸಿಕ ಒತ್ತಡ ಕೂಡ ಹೆಚ್ಚಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಹಾಗಾಗಿ ಒಪ್ಪಿಕೊಳ್ಳುವ ಮುನ್ನ ಎರಡೆರಡು ಬಾರಿ ಯೋಚಿಸಿ.
● ದಿನವೂ ಕನಿಷ್ಠ ಆರರಿಂದ ಎಂಟು ಗಂಟೆ ನಿದ್ದೆ ಮಾಡಲೇಬೇಕು
● ದೇಹ ವಿಶ್ರಾಂತಿ ಕೇಳಿದಾಗ ಬಹಳ ಆಯಾಸವಾಗಿದ್ದಾಗ ರೆಸ್ಟ್ ಮಾಡುವುದು ಬಹಳ ಮುಖ್ಯ.
● ಬೆನ್ನಿನ ಮೂಳೆಯಲ್ಲಿರುವ ಸ್ಪೈನಲ್ ಕಾರ್ಡ್ ಯಾವಾಗಲೂ ನೇರ ಬಂಗಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ನಡೆಯುವಾಗ ಕುಳಿತುಕೊಳ್ಳುವಾಗ ಓಡಾಡುವಾಗ ಕೂಡ ಇದು ನೇರವಾಗಿರಬೇಕು.
● ಆಹಾರವನ್ನು ಚೆನ್ನಾಗಿ ಆಗಿದ್ದು ನುಂಗಬೇಕು, ಯಾವುದೇ ಆಹಾರವನ್ನು ಅತಿಯಾಗಿ ಸೇವನೆ ಮಾಡಬಾರದು.
ಕೈ ಕಾಲು ಜೋಮು ಹಿಡಿಯುತ್ತಿದ್ದರೆ ಈ ಮನೆ ಮದ್ದನ್ನು ಟ್ರೈ ಮಾಡಿ.!
● ಪ್ರತಿ ದಿನವೂ ಕ್ರಮವಾಗಿ ಮಲವಿಸರ್ಜನೆ ಆಗುವಂತೆ ನೋಡಿಕೊಳ್ಳಬೇಕು
● ದಿನದಲ್ಲಿ ಯಾವುದೇ ಒಂದು ಹೊತ್ತಾದರೂ ಕೆಲ ಸಮಯ ಹೊರಗಡೆ ಹೋಗಿ ಶುದ್ಧವಾದ ಗಾಳಿಯಲ್ಲಿ ಮಲಗಿ ವಿಶ್ರಾಂತಿ ಪಡೆಯಬೇಕು.
● ಬ್ರಹ್ಮಚರ್ಯ ವ್ರತವನ್ನು ಪಾಲನೆ ಮಾಡಲೇಬೇಕು.
● ಶ್ರೀಗಂಧ, ಕರ್ಪೂರ, ತುಳಸಿ, ಧೂಪ ಇವುಗಳ ಹೊಗೆಯನ್ನು ಮನೆಯಲ್ಲಿ ಹಾಕಿ ಮನೆ ವಾತಾವರಣ ಶುದ್ಧಿಯಾಗಿ ಇರುವಂತೆ ನೋಡಿಕೊಳ್ಳಬೇಕು.
● ಮನೆ ಸುತ್ತ ಹಸುವಿನ ಸಗಣಿಯಿಂದ ಸಾರಿಸಿ ವಾತಾವರಣವನ್ನು ನೈರ್ಮಲ್ಯವಾಗಿ ಇಟ್ಟುಕೊಳ್ಳಬೇಕು.
● ತಂಬಾಕು, ಗುಟ್ಕಾ, ಮದ್ಯಪಾನ, ಧೂಮಪಾನ ಮುಂತಾದ ಯಾವುದೇ ದುರಭ್ಯಾಸಗಳ ದಾಸರಾಗಬಾರದು. ಈಗಾಗಲೇ ಅಭ್ಯಾಸ ಇದ್ದರೆ ಅದರ ಪ್ರಮಾಣ ಕಡಿಮೆ ಮಾಡಿಕೊಂಡು ಬಿಟ್ಟುಬಿಡಬೇಕು. ಇದೇ ರೀತಿ ಇನ್ನಷ್ಟು ಟಿಪ್ ಗಳನ್ನು ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.