ತಾಯಿ ಮಹಾಲಕ್ಷ್ಮಿ ಮನೆಗೆ ಬಂದರೆ ನಮ್ಮ ಆ ಜನ್ಮದ ಎಲ್ಲಾ ಸಂಕಷ್ಟಗಳು ಮುಗಿದಂತೆ ಯಾವ ಮನೆಯಲ್ಲಿ ತಾಯಿ ಮಹಾಲಕ್ಷ್ಮಿ ಇರುತ್ತಾರೆ, ಎಲ್ಲಾ ದೇವತೆಗಳು ಕೂಡ ಅಲ್ಲಿಗೆ ಬರುತ್ತಾರೆ. ಆ ಬಳಿಕ ಕುಟುಂಬದ ಆರ್ಥಿಕ ಸಮಸ್ಯೆಯಾಗಲಿ, ಆರೋಗ್ಯ ಸಮಸ್ಯೆಗಳೇ ಆಗಲಿ, ಕೌಟುಂಬಿಕ ಸಮಸ್ಯೆ ಆಗಲಿ ಪರಿಹಾರ ಆಗುತ್ತದೆ.
ಆದರೆ ತಾಯಿಯ ಅನುಗ್ರಹ ಆಗುವುದು ಅಷ್ಟು ಸುಲಭವಲ್ಲ, ತಾಯಿ ಮಹಾಲಕ್ಷ್ಮಿಯನ್ನು ಒಲಿಸಿಕೊಳ್ಳಲು ಭಕ್ತಿಯಿಂದ ಪೂಜೆ ಮಾಡಬೇಕು, ಇದರ ಜೊತೆಗೆ ಕೆಲವೊಂದು ನೀತಿ ನಿಯಮಗಳು ಇವೆ. ಈ ರೀತಿ ನಡೆದುಕೊಳ್ಳುವ ಮನೆಗೆ ತಾಯಿ ಮಹಾಲಕ್ಷ್ಮಿ ಬಂದೇ ಬರುತ್ತಾರೆ. ಹಾಗಾದರೆ ತಾಯಿ ಮಹಾಲಕ್ಷ್ಮಿ ಕೃಪ ಕಟಾಕ್ಷ ಸಿಗಬೇಕು ಎಂದರೆ ಮನೆ ಹೇಗಿರಬೇಕು ಎನ್ನುವ ಕೆಲವು ಅಂಶಗಳನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
* ಯಾವ ಮನೆ ಮುಂದೆ ಬೆಳಗ್ಗೆ ಸೂರ್ಯೋದಯಕ್ಕೂ ಮುಂಚೆ ಅಂಗಳವನ್ನು ಸಾಧಿಸಿ ರಂಗೋಲಿ ಇಡುತ್ತಾರೆ, ಹೊಸಿಲಿಗೆ ರಂಗೋಲಿ ಇಟ್ಟು ಅರಿಶಿನ ಕುಂಕುಮ ಹಚ್ಚಿ ಹೂ ಇಟ್ಟು ಪೂಜೆ ಮಾಡಿರುತ್ತಾರೆ ಆ ಮನೆಗೆ ತಾಯಿ ಲಕ್ಷ್ಮಿ ದೇವಿ ಬರುತ್ತಾರೆ
* ಲಕ್ಷ್ಮಿ ದೇವಿಯು ನಮ್ಮ ಮನೆಯಲ್ಲಿ ಶಾಶ್ವತವಾಗಿರಬೇಕು ಎಂದರೆ ಮನೆ ತುಂಬಾ ಶುದ್ಧವಾಗಿರಬೇಕು. ಮಡಿಯಿಂದ ಇರುವ ಮನೆ ಮಾತ್ರ ಮಹಾಲಕ್ಷ್ಮಿಗೆ ಇಷ್ಟವಾಗುತ್ತದ.ೆ ಹಾಗಾಗಿ ಮನೆಯಲ್ಲಿ ಎಲ್ಲಂದರೆ ವಸ್ತುಗಳು ಬಿಸಾಕಿರುವುದು, ಜೇಡರ ಬಲೆ ಕಟ್ಟಿರುವುದು, ಈ ರೀತಿಯೆಲ್ಲಾ ಇದ್ದರೆ ಲಕ್ಷ್ಮಿ ದೇವಿಯು ಕೋ’ಪಗೊಳ್ಳುವುದರಿಂದ ಕ’ಷ್ಟಗಳು ಹೆಚ್ಚಾಗುತ್ತದೆ.
* ಹಬ್ಬ ಹುಣ್ಣಿಮೆ ಬಂದಾಗ ಮನೆ ಕ್ಲೀನ್ ಮಾಡುವುದರ ಬದಲು ಪ್ರತಿದಿನವೂ ಏಳುತ್ತಿದ್ದಂತೆ ಹಾಸಿಗೆಯನ್ನು ವ್ಯವಸ್ಥಿತವಾಗಿ ಜೋಡಿಸಿ ಇಡುವುದು, ಮನೆಯಲ್ಲಿ ಕಸ ಇರದಂತೆ ನೋಡಿಕೊಳ್ಳುವುದು, ಯಾವ ವಸ್ತು ಎಲ್ಲಿರಬೇಕು ಅಲ್ಲೇ ಇಡುವುದು, ಚಪ್ಪಲಿಗಳನ್ನು ಒಂದರ ಪಕ್ಕ ಒಂದು ಜೋಡಿಸುವುದು ಈ ರೀತಿ ಪ್ರತಿಯೊಂದರಲ್ಲೂ ಅಚ್ಚುಕಟ್ಟಾಗಿ ಇದ್ದಷ್ಟು ನಿಮಗೆ ಶುಭಫಲಗಳು ಸಿಗುತ್ತವೆ
* ಯಾರ ಮನೆಯಲ್ಲಿ ಆಹಾರಕ್ಕೆ ಬೆಲೆ ಕೊಡುತ್ತಾರೆ ಅನ್ನವನ್ನು ವೇಸ್ಟ್ ಮಾಡುವುದಿಲ್ಲ ಅಂತಹ ಮನೆಗಳಿಗೆ ತಾಯಿ ಆಶೀರ್ವಾದ ಮಾಡುತ್ತಾರೆ. ಅವರಿಗೆ ದೇವಿ ಅನ್ನಪೂರ್ಣೇಶ್ವರಿ ಆಶಿರ್ವಾದ ಜೊತೆ ಮಹಾಲಕ್ಷ್ಮಿ ಆಶೀರ್ವಾದ ಸಿಗುತ್ತದೆ ಮತ್ತು ಮನೆಗೆ ಬಂದ ಅತಿಥಿಗಳನ್ನು ಸತ್ಕರಿಸುವುದು ಮತ್ತು ಬಿಕ್ಷುಕರಿಗೆ ಕೈಲಾದಷ್ಟು ಸಹಾಯ ಮಾಡಿ ಅವರ ಹಸಿವು ನೀಗಿಸುವುದು ಇಂತಹ ಗುಣಗಳಿರುವವರಿಗೆ ಮುಕ್ಕೋಟಿ ದೇವರುಗಳ ಆಶೀರ್ವಾದ ಇದ್ದೇ ಇರುತ್ತದೆ.
* ಮನೆಯಲ್ಲಿ ಮಹಾಲಕ್ಷ್ಮಿ ಶಾಶ್ವತವಾಗಿ ನೆಲೆಸಬೇಕು ಎಂದರೆ ಆ ಮನೆಯಲ್ಲಿ ತಂದೆ ಮಕ್ಕಳು ಅಥವಾ ಗಂಡ ಹೆಂಡತಿ ಯಾವಾಗಲೂ ಜ’ಗ’ಳವಾಡುತ್ತಾ ಇರಬಾರದು. ಮನೆಯಲ್ಲಿ ಕೆಟ್ಟ ಭಾಷೆಯನ್ನು ಬಳಸುವುದು, ದೊಡ್ಡವರನ್ನು ನಿಂದಿಸುವುದು, ಹೆಣ್ಣು ಮಕ್ಕಳಿಗೆ ಗೌರವ ಕೊಡದೆ ಕ’ಣ್ಣೀ’ರು ಹಾಕಿಸುವುದು ಮಾಡಿದರೆ ಲಕ್ಷ್ಮಿ ಅಲ್ಲಿರುವುದಿಲ್ಲ. ಹಿರಿಯರಿಗೆ ಗೌರವ ಹಾಗೂ ಕಿರಿಯರ ಮೇಲೆ ಪ್ರೀತಿ ಇರುವ ಕಡೆ ಎಲ್ಲಾ ದೇವರು ಇರುತ್ತಾರೆ.
* ದೇವರ ಕೋಣೆ ಅಚ್ಚುಕಟ್ಟಾಗಿರಬೇಕು. ಆದಷ್ಟು ಕಡಿಮೆ ಫೋಟೋ ಹಾಗೂ ವಿಗ್ರಹಗಳು ಇರಬೇಕು ಮತ್ತು ಪ್ರತಿನಿತ್ಯವೂ ಗೃಹಿಣಿಯು ಆ ದೇವರ ಫೋಟೋಗಳಿಗೆ ಹೂ ಇಟ್ಟು ಪೂಜೆ ಮಾಡಬೇಕು. ಸಾಧ್ಯವಾದಷ್ಟು ದೇವರಮನೆಯಲ್ಲಿ ಚಿಕ್ಕದಾದರೂ ದೀಪ ಉರಿಯುತ್ತಾ ಇರಬೇಕು ಹಾಗೂ ಪ್ರತಿನಿತ್ಯ ಮನೆ ಮುಂದೆ ತುಳಸಿ ಕಟ್ಟೆಗೆ ಪೂಜೆ ಮಾಡಿ ದೀಪ ಹಚ್ಚಿ ಪ್ರದಕ್ಷಿಣೆ ಹಾಕುವುದರಿಂದ ಅಂತಹ ಮಹಿಳೆಯರಿಗೆ ಹಾಗೂ ಆ ಕುಟುಂಬಕ್ಕೆ ತಾಯಿಯ ಆಶೀರ್ವಾದ ಸಿಗುತ್ತದೆ
* ಜೀವನದಲ್ಲಿ ಯಾವಾಗಲೂ ಒಳ್ಳೆಯದನ್ನು ಯೋಚನೆ ಮಾಡುವ, ಬೇರೆಯವರಿಗೆ ಕೆಟ್ಟದನ್ನು ಬಯಸಿದೆ ಕೈಲಾದಷ್ಟು ನೆರವಾಗುತ್ತಾ ಬದುಕುವ ಎಲ್ಲರಿಗೂ ತಾಯಿ ಮಹಾಲಕ್ಷ್ಮಿ ಸೇರಿದಂತೆ ಎಲ್ಲ ದೇವರುಗಳ ಆಶೀರ್ವಾದ ಇದ್ದೇ ಇರುತ್ತದೆ ಕಷ್ಟ ಬಂದರೂ ದೇವರ ರಕ್ಷೆಯಿಂದ ಪಾರಾಗಬಹುದು.